Karnataka logo

Karnataka Tourism
GO UP

ನಗರ ಕೋಟೆ

separator
ಕೆಳಗೆ ಸ್ಕ್ರಾಲ್ ಮಾಡಿ

ನಗರ ಶಿವಮೊಗ್ಗ ಜಿಲ್ಲೆಯ ಐತಿಹಾಸಿಕ ಪ್ರಾಮುಖ್ಯತೆಯ ಹಳ್ಳಿಯಾಗಿದ್ದು, ಕೆಳದಿ ಸಾಮ್ರಾಜ್ಯದ ಶಿವಪ್ಪ ನಾಯಕ್ ನಿರ್ಮಿಸಿದ ಕೋಟೆಗೆ ಜನಪ್ರಿಯವಾಗಿದೆ.

ಕೆಳದಿ ರಾಜವಂಶದ ವೀರಭದ್ರ ನಾಯಕ ಕೆಳದಿಯ ಮೂಲ ರಾಜಧಾನಿ ಇಕ್ಕೇರಿಯನ್ನು ಬಿಜಾಪುರದ ಸುಲ್ತಾನರಿಗೆ ಯುದ್ಧದಲ್ಲಿ ಕಳೆದುಕೊಂಡಾಗ 1640 ರಲ್ಲಿ ನಗರ ಕೋಟೆಯನ್ನು ನಿರ್ಮಿಸಿದನು. 

ವೀರಭದ್ರ ನಾಯಕನ ನಂತರ ಶಿವಪ್ಪ ನಾಯಕನು ಕೆಳದಿ ರಾಜವಂಶವನ್ನು ಉತ್ತುಂಗಕ್ಕೆ ಕೊಂಡೊಯ್ದು ಕೋಟೆಯನ್ನು ಅಭಿವೃದ್ಧಿ ಪಡಿಸಿದ ಕೀರ್ತಿಗೆ ಪಾತ್ರನಾಗಿದ್ದಾನೆ. ಮರಾಠದ ಶಿವಾಜಿ ಮಹಾರಾಜ್ ಅವರ ಪುತ್ರ ರಾಜಾ ರಾಮ್ ನಗರ ಕೋಟೆಯಲ್ಲಿ ಆಶ್ರಯ ಪಡೆದಿದ್ದರು ಎನ್ನಲಾಗಿದೆ. ಕೆಳದಿಯ ನಾಯಕರಾದ ಶಿವಪ್ಪ ನಾಯಕ ಮತ್ತು ರಾಣಿ ಕೆಳದಿ ಚೆನ್ನಮ್ಮ ಶಕ್ತಿಶಾಲಿ ಶತ್ರುಗಳ ವಿರುದ್ಧ ತಮ್ಮ ಭೂಮಿಯನ್ನು ಯಶಸ್ವಿಯಾಗಿ ರಕ್ಷಿಸಿಕೊಂಡರು. ನಾಗರ ಕೋಟೆ ನಂತರ 1763 ರಲ್ಲಿ ಹೈದರ್ ಅಲಿಯ  ವಶವಾಯಿತು. 

ನಗರ ಕೋಟೆಯಲ್ಲಿ ಪ್ರವಾಸಿಗರು ಅರಮನೆಯ ಅವಶೇಷಗಳು, ಕಾವಲು ಕೊಠಡಿಗಳು, ಬಾವಿಗಳು, ಶೇಖರಣಾ ಸೌಲಭ್ಯಗಳು, ವೀಕ್ಷಣಾ ಗೋಪುರ ಮತ್ತು ತುಪಾಕಿಗಳನ್ನು ನೋಡಬಹುದು. ನಗರ ಕೋಟೆಯನ್ನು ಸರೋವರದ ಪಕ್ಕದಲ್ಲಿ ನಿರ್ಮಿಸಲಾಗಿದೆ. ನೀರಿನ ತೊಂದರೆಯಾಗದಂತೆ ಕೋಟೆಯ ಒಳಗೆ ಬಾವಿಯಿದೆ. ನಗರ ಕೋಟೆಯ ಒಳಗಿದ್ದ ಕಟ್ಟಡಗಳು ಪಾಳುಬಿದ್ದಿದ್ದರೂ ಮುಖ್ಯ ದ್ವಾರ, ಹೊರಗಿನ ಗೋಡೆಗಳು ಸುಸ್ಥಿತಿಯಲ್ಲಿವೆ. 

ಹತ್ತಿರ: ಕವಲೆದುರ್ಗ (27 ಕಿ.ಮೀ), ಕೊಡಚಾದ್ರಿ ಬೆಟ್ಟ (30 ಕಿ.ಮೀ), ಕೊಲ್ಲೂರು (46 ಕಿ.ಮೀ), ಜೋಗ್ ಫಾಲ್ಸ್ (90 ಕಿ.ಮೀ), ಸಿಗಂದೂರು ದೇವಸ್ಥಾನ (60 ಕಿ.ಮೀ) ಮತ್ತು ಅಗುಂಬೆ (60 ಕಿ.ಮೀ) ನಗರ ಕೋಟೆಯೊಂದಿಗೆ ಭೇಟಿ ನೀಡಬಹುದಾದ ಹತ್ತಿರದ ಆಕರ್ಷಣೆಗಳು.

ತಲುಪುವುದು ಹೇಗೆ?

ನಗರ ಕೋಟೆ ಬೆಂಗಳೂರಿನಿಂದ 384 ಕಿ.ಮೀ ಮತ್ತು ಮಂಗಳೂರಿನಿಂದ (ಹತ್ತಿರದ ವಿಮಾನ ನಿಲ್ದಾಣ) 142 ಕಿ.ಮೀ ದೂರದಲ್ಲಿದೆ. ಸಾಗರ ನಗರವು ಹತ್ತಿರದ ರೈಲು ನಿಲ್ದಾಣವಾಗಿದೆ (57 ಕಿ.ಮೀ). ಕರಾವಳಿ ಕರ್ನಾಟಕ ಮತ್ತು ಮಲೆನಾಡು ಪ್ರದೇಶದ (ಪಶ್ಚಿಮ ಘಟ್ಟಗಳು) ತೀರ್ಥಹಳ್ಳಿ, ಸಾಗರ, ಕುಂದಾಪುರ, ಉಡುಪಿ ಅಥವಾ ಕೊಲ್ಲೂರಿನ ವಿವಿಧ ನಗರಗಳಿಂದ ನಗರ ಕೋಟೆಯನ್ನು ತಲುಪಬಹುದು. ನಗರ ತಲುಪಲು ಈ ನಗರಗಳಿಂದ ಬಸ್ಸುಗಳು ಲಭ್ಯವಿದೆ ಅಥವಾ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಹುದು.

ವಸತಿ: ತೀರ್ಥಹಳ್ಳಿ (36 ಕಿ.ಮೀ), ಕೊಲ್ಲೂರು (45 ಕಿ.ಮೀ) ಅಥವಾ ಸಾಗರ (57 ಕಿ.ಮೀ) ಪಟ್ಟಣಗಳಲ್ಲಿ ಹೋಟೆಲ್‌ಗಳು ಲಭ್ಯವಿದೆ.

   

  Tour Location

   

  Leave a Reply

  Accommodation
  Meals
  Overall
  Transport
  Value for Money

  Screen Reader A- A A+