Karnataka logo

Karnataka Tourism
GO UP

ಗುರುದ್ವಾರ ಟ್ಯಾಪ್ ಅಸ್ತಾನ್ ಮೈ ಭಾಗೊ

separator
ಕೆಳಗೆ ಸ್ಕ್ರಾಲ್ ಮಾಡಿ

ಗುರುದ್ವಾರ ಟ್ಯಾಪ್ ಅಸ್ತಾನ್ ಮೈ ಭಾಗೊ

ಗುರುದ್ವಾರ ಟ್ಯಾಪ್ ಅಸ್ತಾನ್ ಮೈ ಭಾಗೊವನ್ನು ನಿರ್ಮಿಸಿದ ಸಿಖ್ ಸಮುದಾಯವು ಬೀದರ್‌ನ ಜಿನ್ವಾಡಾವನ್ನು ಪವಿತ್ರ ಸ್ಥಳವೆಂದು ಪರಿಗಣಿಸಿದೆ.

ಇತಿಹಾಸ: ಮುಖ್ಸರ್ ಯುದ್ಧದಲ್ಲಿ ಮೈ ಭಾಗೊ ಬದುಕುಳಿದ ನಾಯಕಿ. ಮೈ ಭಾಗೊ ಧೈರ್ಯಶಾಲಿ  ಸಿಖ್ ಯೋಧ ಮಹಿಳೆಯಾಗಿದ್ದು, ಕ್ರಿ.ಶ 1705 ರಲ್ಲಿ ಸಿಖ್ ಸೈನಿಕರನ್ನು ಮುನ್ನಡೆಸಿದ ಮತ್ತು ಮೊಘಲರ ವಿರುದ್ಧ ಹೋರಾಡಿದ ವೀರ ಮಹಿಳೆ. ಆ ಸಮಯದಲ್ಲಿ ಗುರು ಗೋಬಿಂದ್ ಸಿಂಗ್ ಸಿಖ್ ನಾಯಕರಾಗಿದ್ದರು.  ಇಸ್ಲಾಂಗೆ ಮತಾಂತರಗೊಳ್ಳಲು ಸಿಖ್ಖರು ಮೊಘಲರಿಂದ ನಿರಂತರ ಒತ್ತಡಕ್ಕೆ ಒಳಗಾಗಿದ್ದರು ಮತ್ತು ಮತಾಂತರದ ಪ್ರಯತ್ನಗಳನ್ನು ನಿರಾಕರಿಸಿದ್ದರಿಂದ ಸಿಖ್ ಸಮುದಾಯ ಮುಘಲರ ಅನೇಕ ದಾಳಿ ಮತ್ತು ಯುದ್ಧಗಳನ್ನು ಎದುರಿಸಬೇಕಾಯಿತು. ಯುದ್ಧದ ನಂತರ 1708ರಲ್ಲಿ ಗುರು ಗೋಬಿಂದ್ ಸಿಂಗ್ ಅವರ ಮರಣದ ನಂತರ, ಮೈ ಭಾಗೊ ದಕ್ಷಿಣ ಭಾರತಕ್ಕೆ ತೆರಳಿ ತಮ್ಮ ಉಳಿದ ಜೀವನವನ್ನು ಜಿನ್ವಾಡಾದಲ್ಲಿ ಕಳೆದರು. ಮಾಯಿ ಭಾಗೊ ಅವರು ಗುರು ಗೋಬಿಂದ್ ಸಿಂಗ್ ಪ್ರತಿಪಾದಿಸಿದಂತೆ ‘ಗುರುಮಠ’ ಜೀವನ ವಿಧಾನವನ್ನು ಧ್ಯಾನ ಮತ್ತು ಬೋಧನೆ ಮೂಲಕ ಪ್ರಚುರಪಡಿಸಿದರು. 

ಜಿನ್ವಾಡಾದಲ್ಲಿ ಮೈ ಭಾಗೊ ತಂಗಿದ್ದ ಮನೆಯನ್ನು ಮೈ ಭಾಗೊ ಅವರ ಸಿಖ್ ಅನುಯಾಯಿಗಳು ಖರೀದಿಸಿ ಗುರುದ್ವಾರವಾಗಿ ಪರಿವರ್ತಿಸಿದ್ದಾರೆ.

ತಲುಪುವುದು ಹೇಗೆ ಗುರುದ್ವಾರ ಟ್ಯಾಪ್ ಅಸ್ತಾನ್ ಮೈ ಭಾಗೊ: ಜಿನ್ವಾಡಾ ಬೆಂಗಳೂರಿನಿಂದ 700 ಕಿ.ಮೀ ಮತ್ತು ಜಿಲ್ಲಾ ರಾಜಧಾನಿ ಬೀದರ್ ನಿಂದ 11 ಕಿ.ಮೀ ದೂರದಲ್ಲಿದೆ. ಬೀದರ್ ಹತ್ತಿರದ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣವಾಗಿದೆ (16 ಕಿ.ಮೀ ದೂರದಲ್ಲಿದೆ). ಜಿನ್ವಾಡಾ ತಲುಪಲು ಬೀದರ್‌ನಲ್ಲಿ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು.

ವಸತಿ: ಜಿನ್ವಾಡಾಕ್ಕೆ ಭೇಟಿ ನೀಡುವಾಗ ಬೀದರ್ ನಗರ (11 ಕಿ.ಮೀ ದೂರ) ಉಳಿಯಲು ಸೂಕ್ತ ಸ್ಥಳವಾಗಿದೆ.

  Tour Location

  Leave a Reply

  Accommodation
  Meals
  Overall
  Transport
  Value for Money

  Screen Reader A- A A+