Karnataka logo

Karnataka Tourism
GO UP
janmashtami banner

ಜನ್ಮಾಷ್ಟಮಿ

separator
  /  ಜನ್ಮಾಷ್ಟಮಿ

ಜನ್ಮಾಷ್ಟಮಿ

ಶ್ರೀಮಾನ್ ವಿಷ್ಣುವಿನ ಎಂಟನೇ ಅವತಾರವಾಗಿ ಶ್ರಾವಣ ಮಾಸದ ಎಂಟನೇ ದಿನ ಜನಿಸಿದ ಶ್ರೀಕೃಷ್ಣನ ಜನ್ಮ ದಿನವನ್ನು ಜನ್ಮಾಷ್ಟಮಿಯಾಗಿ ಭಾರತದಾದ್ಯಂತ ಆಚರಿಸಲಾಗುತ್ತದೆ. ಇದನ್ನು . ಸಾಮಾನ್ಯವಾಗಿ ಗೋಕುಲಾಷ್ಟಮಿ ಅಥವಾ ಕೃಷ್ಣ ಜನ್ಮಾಷ್ಟಮಿ ಎಂದು ಕರೆಯುತ್ತಾರೆ. ಈ ಹಿಂದೂ ಹಬ್ಬವು ಉತ್ತರ ಭಾರತದಲ್ಲಿ ಹೆಚ್ಚು ಪ್ರಾಧ್ಯಾನ್ಯತೆಯನ್ನು ಪಡೆದಿದೆ . ಈ ಸಮಯದಲ್ಲಿ ನಂದೋತ್ಸವ ಆಚರಿಸಲಾಗುತ್ತದೆ. ಹೆಚ್ಚಿನ ಭಕ್ತರು ಈ ಹಬ್ಬದಂದು ಕಠಿಣ ಉಪವಾಸವನ್ನು ಆಚರಿಸಲು, ದಿನವೀಡಿ ಭಕ್ತಿ ಗೀತೆಗಳನ್ನು , ಪ್ರವಚನಗಳನ್ನು ಕೇಳುತ್ತಾರೆ. ನೃತ್ಯ ಮತ್ತು ನಾಟಕಗಳನ್ನು ಮಾಡಿ ಗೋವಿಂದನ ಅನುಗ್ರಹ ಪಡೆಯಲು ಇಚ್ಛಿಸುತ್ತಾರೆ ಶ್ರೀಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸಿದ್ದರಿಂದ ಮಧ್ಯರಾತ್ರಿಯಿಂದಲೇ ಹಲವು ಧಾರ್ಮಿಕ ಚಟುವಟಿಕೆಗಳು ಆರಂಭವಾಗುತ್ತವೆ. ಶ್ರೀಕೃಷ್ಣನ ವಿಗ್ರಹ ಮತ್ತು ತೊಟ್ಟಿಲುಗಳನ್ನು ಸುಂದರವಾಗಿ ಅಲಂಕರಿಸಿ ಪೂಜಿಸುತ್ತಾರೆ. ಶ್ರೀಕೃಷ್ಣನಿಗೆ ಈ ಹಬ್ಬದಂದು ಮೊಸರು,ಬೆಣ್ಣೆ ಮತ್ತು ಇತರ ಸಿಹಿತಿಂಡಿಗಳು, ಹಣ್ಣುಗಳನ್ನು ನೈವೇದ್ಯ ರೂಪದಲ್ಲಿ ನೀಡುತ್ತಾರೆ. ಮತ್ತು ಇವುಗಳನ್ನು ಪ್ರಸಾದ ರೂಪದಲ್ಲಿ ಎಲ್ಲರಿಗೂ ಹಂಚುತ್ತಾರೆ. ಈ ಜನ್ಮಾಷ್ಟಮಿ ಹಬ್ಬದಂದು ಶ್ರೀಕೃಷ್ಣನ ಬಾಲ್ಯ ಮತ್ತು ಅವನ ಜೀವನಕ್ಕೆ ಸಂಬಂಧಪಟ್ಟ ಹಲವು ಘಟನೆಗಳನ್ನು ಅವನ ಭಕ್ತರು ಮರು ನಿರ್ಮಿಸುತ್ತಾರೆ. ಇದು ಭಕ್ತರಿಗೆ ಮೋಜಿನ ಹಬ್ಬವು ಸಹವಾಗಿದ್ದು ಹಲವು ಧಾರ್ಮಿಕ ಸಂದೇಶಗಳನ್ನು ಹೊಂದಿದೆ.

ಜನ್ಮಾಷ್ಟಮಿಯನ್ನು ದೇಶಾದ್ಯಂತ ಅಸಂಖ್ಯಾತ ರೀತಿಯಲ್ಲಿ ಆಚರಿಸಲಾಗುತ್ತದೆ. ಕೃಷ್ಣ ತನ್ನ ಜೀವನದ ಬಹುಭಾಗವನ್ನು ಉತ್ತರ ಭಾರತದಲ್ಲಿ ಕಳೆದಿದ್ದರೂ, ಸಹ ಈ ನೀಲಿ ಮೈ ಬಣ್ಣವುಳ್ಳ ಈ ಗೋವಿಂದನು ದಕ್ಷಿಣ ಭಾರತದ ಜನರ ಪ್ರೀತಿಗೆ ಪಾತ್ರನಾಗಿದ್ದಾನೆ. ಇಲ್ಲಿನ ಗೋಪಾಲನ ಭಕ್ತರು ಗೋಪಾಲನ ಆರಾಧನೆಯಲ್ಲಿ ತಮ್ಮ ತನುಮನಗಳನ್ನು ಮರೆಯುತ್ತಾರೆ. ಜನ್ಮಾಷ್ಟಮಿಯಂದು ಎಲ್ಲಾ ಸಮಯದಲ್ಲೂ ಭಕ್ತಿಗೀತೆಗಳನ್ನು ಹಾಡಲಾಗುತ್ತದೆ ಮತ್ತು ಈ ದಿನದಂದು ಭಕ್ತರು ದಿನವಿಡೀ ಕಠಿಣ ಉಪವಾಸವನ್ನು ಆಚರಿಸುತ್ತಾರೆ. ಕೃಷ್ಣನಿಗೆ ಪೂಜೆ ಪುನಸ್ಕಾರಗಳನ್ನು ಮಾಡಿ ಭಕ್ತರಿಗೆ ಸಿಹಿತಿಂಡಿಗಳು ಮತ್ತು ಹಣ್ಣುಗಳನ್ನು ನೀಡಲಾಗುತ್ತದೆ. ಕರ್ನಾಟಕದಲ್ಲಿ ವಿಠಲ್ ಪಿಂಡಿ ಎಂದು ಪ್ರಸಿದ್ಧಿ ಆಗಿರುವ ರಾಸ್ ಲೀಲಾವನ್ನು ರೂಪಿಸುವ ಸಂಪ್ರದಾಯವು ಉತ್ಸವದ ಅತ್ಯಂತ ಜನಪ್ರಿಯ ಮತ್ತು ಮಹತ್ವದ ಭಾಗವಾಗಿದೆ. ಈ ಸಮಯದಲ್ಲಿ ಭಕ್ತರು ಸಾಂಪ್ರದಾಯಿಕ ವೇಷಭೂಷಣಗಳನ್ನು ತೊಟ್ಟು ಶ್ರೀಕೃಷ್ಣನು ರಾಧೇ ಮತ್ತು ವೃಂದಾವನದ ಗೋಪಿಯರೊಂದಿಗೆ ಹೇಗೆ ನೃತ್ಯವನ್ನು ಮಾಡಿದ್ದನೋ ಹಾಗೇ ದೈವಿಕ ನಾಟಕವನ್ನು ಪ್ರದರ್ಶಿಸುತ್ತಾರೆ. ಅದೇ ರೀತಿ ಈ ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಲು, ಹುಲಿ ವೇಷ ನೃತ್ಯಗಾರರು ಆಕರ್ಷಕವಾದ ನೃತ್ಯಗಳನ್ನು ಪ್ರದರ್ಶಿಸುತ್ತಾರೆ. ಈ ಸಂದರ್ಭದಲ್ಲಿ ಸ್ಥಳೀಯ ಹುಡುಗರು ಒಂದು ರೀತಿಯ ಮಾನವ ಗೋಪುರ ಅಥವಾ ಪಿರಮಿಡ್ ಅನ್ನು ರೂಪಿಸುತ್ತಾರೆ. ಇಲ್ಲಿ ಒಬ್ಬ ವ್ಯಕ್ತಿಯು ಪಿರಾಮಿಡ್ ತರಹದ ಮಾನವ ಗೋಪುರವನ್ನು ಏರಿ ಅಲ್ಲಿ ನೇತು ಹಾಕಿರುವ ಮೊಸರು ತುಂಬಿದ ಮಣ್ಣಿನ ಮಡಕೆಯನ್ನು ಒಡೆಯುತ್ತಾರೆ. ಇದು ನೋಡಲು ತುಂಬಾ ಮಜವಾಗಿರತ್ತದೆ.