Karnataka logo

Karnataka Tourism
GO UP

ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್

separator
ಕೆಳಗೆ ಸ್ಕ್ರಾಲ್ ಮಾಡಿ

ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್ ಮೈಸೂರು ನಗರದ ಜನಪ್ರಿಯ ಮನೋರಂಜನಾ ಉದ್ಯಾನವನವಾಗಿದ್ದು, ರೈಡ್‌ಗಳು, ಕುಟುಂಬ ರೈಡ್‌ಗಳು, ಆಟಗಳು ಮತ್ತು ಮನರಂಜನಾ ಆಯ್ಕೆಗಳನ್ನೊಳಗೊಂಡ ವ್ಯಾಪಕ ಶ್ರೇಣಿಯ ರೋಮಾಂಚನವನ್ನು ಉಂಟುಮಾಡುತ್ತವೆ.

ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್‌ನಲ್ಲಿ ಏನೆಲ್ಲಾ ನೋಡಬಹುದು:

  • ಥ್ರಿಲ್ ರೈಡ್‌ಗಳು: ಆಕ್ವಾ ರೇಸರ್, ಆಕ್ವಾ ಟೊರಾಂಡೊ, ಪೆಂಡುಲಮ್ ಸ್ಲೈಡ್, ಕ್ರೇಜಿ ಕ್ರೂಸ್, ಅಮೆಜೋನಿಯಾ, ಕೊಲಂಬಿಯಾ, ಮ್ಯೂಸಿಕ್ ಬಾಬ್ ಮತ್ತು ಡ್ರಾಗನ್ಸ್ ಡೆನ್ ಜಿರ್‌ಎಸ್ ಫ್ಯಾಂಟಸಿ ಪಾರ್ಕ್‌ನಲ್ಲಿರುವ ತೀವ್ರವಾದ, ರೋಮಾಂಚಕ ಪಂಪಿಂಗ್ ಸವಾರಿಗಳಾಗಿವೆ.
  • ಕುಟುಂಬ ರೈಡ್‌ಗಳು: ಸ್ನೊ ಸ್ಲೆಡ್ಜ್, ಸ್ವಿಂಗ್ ಚೇರ್, ಡ್ಯಾಶಿಂಗ್ ಕಾರ್, ಫ್ಲಾಟ್ ಸ್ಲೈಡ್‌ಗಳು, ರೆಡ್ ಇಂಡಿಯನ್ ಫಾಲ್ಸ್, ವೇವ್ ಫೂಲ್, ಆಕ್ವಾ ಡ್ಯಾನ್ಸ್ ಫ್ಲೋರ್ ಮತ್ತು ಹವಾಯಿನ್ ಪ್ಯಾರಡೈಸ್ ಎಲ್ಲಾ ಕುಟುಂಬ ಸದಸ್ಯರಿಗೆ ತುಲನಾತ್ಮಕವಾಗಿ ನಿಧಾನಗತಿಯ, ವಿನೋದ ತುಂಬಿದ ಸವಾರಿಗಳಾಗಿವೆ
  • ಕಿಡ್ ರೈಡರ್‌ಗಳು: ಆಕ್ವಾ ಟ್ರೈಲ್, ಬೇಬಿ ಟ್ರೈನ್ಸ್, ಆಟವಾಡುವ ಸ್ಥಳ, ಮಕ್ಕಳ ಪೂಲ್ ಇತ್ಯಾದಿ
  • ಸೌಲಭ್ಯಗಳು: ಚೇಂಜಿಂಗ್ ಕೊಠಡಿ, ರೆಸ್ಟಾರೆಂಟ್‌ಗಳು, ಲಾಕರ್ ರೂಮ್‌ಗಳು, ಗಿಫ್ಟ್ ಅಂಗಡಿ, ಕಾನ್ಫರೆನ್ಸ್ ಕೊಠಡಿಗಳು ಇತ್ಯಾದಿ

ಜಿಆರ್‌ಎಸ್ ಫ್ಯಾಂಟಸ್ ಪಾರ್ಕ್‌ಗೆ ಭೇಟಿ ನೀಡುವ ಸಮಯಗಳು: ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 10.30 ರಿಂದ ಸಂಜೆ 6 ಗಂಟೆಯವರೆಗೆ ತೆರೆದಿರುತ್ತದೆ ಮತ್ತು ಆದಿತ್ಯವಾರ ಹಾಗೂ ರಾಷ್ಟ್ರೀಯ ರಜಾದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 7.30 ರವರೆಗೆ ತೆರಿದಿರುತ್ತದೆ. ಜಿಆರ್‌ಎಸ್ ಫ್ಯಾಂಟ ಸಿ ಪಾರ್ಕ್‌ನಲ್ಲಿ ಪೂರ್ತಿ ದಿನವನ್ನು ಕಳೆಯಬಹುದೆಂದು ಶಿಫಾರಸು ಮಾಡಲಾಗಿದೆ.

ಜಿಆರ್‌ಎಸ್ ಫ್ಯಾಂಟ ಸಿ ಪಾರ್ಕ್ ಅನ್ನು ತಲುಪುವುದು ಹೇಗೆ:  ಫ್ಯಾಂಟಸಿ ಪಾರ್ಕ್ ಮೈಸೂರು ನಗರದ ಹೊರವಲಯದಲ್ಲಿದೆ (7 ಕಿ.ಮೀ ದೂರದಲ್ಲಿದೆ). ಮೈಸೂರು ಬೆಂಗಳೂರಿನಿಂದ (150 ಕಿ.ಮೀ ದೂರದಲ್ಲಿ) ವಿಮಾನ ಯಾನ, ರಸ್ತೆ ಮತ್ತು ರೈಲು ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದೆ. ಮೈಸೂರು ನಗರದಿಂದ ಜಿಆ‌ರ್‌ಎಸ್  ಪಾರ್ಕ್ ಅನ್ನು ಟ್ಯಾಕ್ಸಿ ಬಳಸಿ ತಲುಪಬಹುದು.

ಜಿಆರ್‌ಎಸ್ ಫ್ಯಾಂಟ ಸಿ ಪಾರ್ಕ್ ಬಳಿ ತಂಗಲು ಸ್ಥಳಗಳು: ಎಲ್ಲ ಬಜೆಟ್ ಶ್ರೇಣಿಗಳಿಗೆ ಸರಿಹೊಂದುವ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳನ್ನು ಮೈಸೂರು ನಗರ ಹೊಂದಿದೆ.

ಅಧಿಕೃತ ವೆಬ್‌ಸೈಟ್: http://www.grsfantasypark.com/

Tour Location

Leave a Reply

Accommodation
Meals
Overall
Transport
Value for Money