Karnataka logo

Karnataka Tourism
GO UP

ರಾಯಚೂರು

separator
ಕೆಳಗೆ ಸ್ಕ್ರಾಲ್ ಮಾಡಿ

ರಾಯಚೂರು ಬೆಂಗಳೂರಿನ ಉತ್ತರಕ್ಕೆ 412 ಕಿ.ಮೀ ದೂರದಲ್ಲಿರುವ ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ, ಕೈಗಾರಿಕಾ ಮತ್ತು ಶಿಕ್ಷಣ ಕೇಂದ್ರವಾಗಿದೆ. ಹಟ್ಟಿ, ಭಾರತದ ಏಕೈಕ ಸಕ್ರಿಯ ಚಿನ್ನದ ಗಣಿ ರಾಯಚೂರು ಜಿಲ್ಲೆಯಲ್ಲಿದೆ.  ರಾಯಚೂರಿನಲ್ಲಿ ಇರುವ ಉಷ್ಣ ವಿದ್ಯುತ್ ಸ್ಥಾವರ ಕರ್ನಾಟಕ ಮತ್ತು ರಾಷ್ಟ್ರೀಯ ಗ್ರಿಡ್‌ಗೆ ವಿದ್ಯುತ್ ಒದಗಿಸುತ್ತದೆ.

ಜಿಲ್ಲೆಯು ಮೌರ್ಯರ ಕಾಲದಿಂದ ಮುಸ್ಲಿಂ ರಾಜರ ಅವಧಿ ಅಂತ್ಯದವರೆಗಿನ ನೂರಾರು ಶಾಸನಗಳನ್ನು ಹೊಂದಿದೆ.  ಸಂಸ್ಕೃತ, ಪ್ರಾಕೃತ, ಕನ್ನಡ, ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳ ಶಾಸನಗಳು ಡೆಕ್ಕನ್ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ ವಿವಿಧ ರಾಜವಂಶಗಳಿಗೆ ಸೇರಿದೆ ಎಂಬುದಕ್ಕೆ ಪುರಾವೆ ಇದೆ. ಜಿಲ್ಲೆಯ  ಪ್ರಮುಖವಾದ ಪ್ರವಾಸಿ ಸ್ಥಳಗಳು ಮಸ್ಕಿ, ಮುಡಗಲ್ ಮತ್ತು ರಾಯಚೂರು.

ರಾಯಚೂರಿನಲ್ಲಿ ಅನೇಕ ಆಸಕ್ತಿದಾಯಕ ಪ್ರವಾಸಿ ಆಕರ್ಷಣೆಗಳು ಮತ್ತು ಧಾರ್ಮಿಕ ಕೇಂದ್ರಗಳಿವೆ. ರಾಯಚೂರು ಜಿಲ್ಲೆಯು ಕಡ್ಲೂರ್ ಕಡ್ಲುರಾಯ ಜಾತ್ರೆ, ನಾರದಗದ್ದೆ ವಾರ್ಷಿಕ ಜಾತ್ರೆ, ಮಾನ್ವಿ ಕರೆಮ್ಮ ಜಾತ್ರೆ  ಇತ್ಯಾದಿ ಹಲವಾರು ವಾರ್ಷಿಕ ಮೇಳಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಐತಿಹಾಸಿಕ ತಾಣಗಳು
  • ರಾಯಚೂರು ಕೋಟೆ: ಕಲ್ಯಾಣ ಚಾಲುಕ್ಯ ಕಾಲದಲ್ಲಿ ನಿರ್ಮಿಸಲ್ಪಟ್ಟ ಮತ್ತು ಕಾಕತೀಯ ರುದ್ರಮ್ಮ ದೇವಿಯಿಂದ ವಿಸ್ತರಿಸಲ್ಪಟ್ಟ ರಾಯಚೂರು ಕೋಟೆ ಮಲಿಕ್ ಕಾಫೂರ್, ವಿಜಯನಗರ ಸಾಮ್ರಾಜ್ಯ, ಬಹಮನಿಗಳು, ಮೊಘಲರು, ಬಿಜಾಪುರ ಆಡಳಿತಗಾರರು ಮತ್ತು ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿತ್ತು. ರಾಯಚೂರು ಕೋಟೆ ವ್ಯಾಪ್ತಿಯಲ್ಲಿ ಅನೇಕ ಮಸೀದಿಗಳಿವೆ, ಹಲವಾರು ಭವ್ಯ ಪ್ರವೇಶದ್ವಾರಗಳುಮತ್ತು ಇತರ ಅವಶೇಷಗಳನ್ನು ರಾಯಚೂರು ಕೋಟೆಯಲ್ಲಿ ನೋಡಬಹುದಾಗಿದೆ. .
  • ಮುಡಗಲ್ ಮಸ್ಕಿ: ಮುಡಗಲ್ ಮಸ್ಕಿ ಎಂಬ ಊರು ಮಸ್ಕಿ ನದಿಯ ದಡದಲ್ಲಿರುವ ಪುರಾತನ ಸ್ಥಳವಾಗಿದ್ದು, ರಾಯಚೂರಿನಿಂದ 87 ಕಿ.ಮೀ ದೂರದಲ್ಲಿದೆ. ಅಶೋಕ ಚಕ್ರವರ್ತಿಯ ಸಣ್ಣ ಶಿಲಾ ಶಾಸನಗಳು ಮಾಸ್ಕಿಯಲ್ಲಿ ಸಿಕ್ಕಿವೆ.
  • ಮಲ್ಲಿಯಾಬಾದ್: ಮಲ್ಲಿಯಾಬಾದ್ ರಾಯಚೂರು ನಗರದಿಂದ 5 ಕಿ.ಮೀ ದೂರದಲ್ಲಿರುವ ಒಂದು ಪಟ್ಟಣವಾಗಿದ್ದು, ಐತಿಹಾಸಿಕವಾಗಿ ಮಹತ್ವದ ಕೋಟೆ, ವಿಷ್ಣು ದೇವಸ್ಥಾನ, ಬಿಳಿ ಗ್ರಾನೈಟ್ ಕೆತ್ತಿದ ಎರಡು ಸಜೀವ ಗಾತ್ರದ ಆನೆಗಳು ಮತ್ತು ಇತರ ಸ್ಮಾರಕಗಳಿಗಾಗಿ ಪ್ರಸಿದ್ಧವಾಗಿದೆ.
  • ಕಲ್ಲೂರು: ಕಲ್ಲೂರು ಗ್ರಾನೈಟ್ ಬೆಟ್ಟಗಳಿಂದ ಮೂರು ಕಡೆಗಳಲ್ಲಿ ಸುತ್ತುವರೆದಿರುವ ಹಳ್ಳಿ. ಕಲ್ಲೂರು ತನ್ನ ರಮಣೀಯ ನೋಟ ಮತ್ತು ಹಳ್ಳಿಯ ಹೊರಗಿನ ಗೋಡೆಗಳು ಮತ್ತು ದ್ವಾರಗಳು, • ಎಮ್ಮೆ ಗುಡ್ಡ (ಐತಿಹಾಸಿಕ ಪೂರ್ವದ ರೇಖಾಚಿತ್ರಗಳನ್ನು ಹೊಂದಿದೆ), ದೊಡ್ಡ ತೆರೆದ ಬಾವಿಗಳು ಮತ್ತು ಮಹಾಲಕ್ಷ್ಮಿ ದೇವಾಲಯ ಸೇರಿದಂತೆ ಹಲವಾರು ದೇವಾಲಯಗಳಂತಹ ಐತಿಹಾಸಿಕ ಕಲಾಕೃತಿಗಳಿಂದಾಗಿ ಪ್ರಸಿದ್ದಿ ಪಡೆದಿದೆ.
  • ಗಬ್ಬೂರು: ರಾಯಚೂರಿನ ಗಬ್ಬೂರು ಗ್ರಾಮದಲ್ಲಿ ಕಲ್ಯಾಣಿ ಚಾಲುಕ್ಯರ ಅವಧಿಯಲ್ಲಿ ನಿರ್ಮಿಸಲಾದ ಸುಮಾರು 30 ದೇವಾಲಯಗಳು ಮತ್ತು ಶಿಲಾ ಶಾಸನಗಳಿವೆ.
  • ಜಲದುರ್ಗ: ಕೃಷ್ಣ ನದಿಯ ದ್ವೀಪದಲ್ಲಿ ನಿರ್ಮಿಸಲಾದ ಕೋಟೆಗಳಿಗೆ ಹೆಸರುವಾಸಿಯಾಗಿರುವ ಜಲದುರ್ಗವನ್ನು ಹಿಂದೆ ಮನುವೆ ಎಂದು ಕರೆಯಲಾಗುತ್ತಿತ್ತು.
ಧಾರ್ಮಿಕ ಸ್ಥಳಗಳು
  • ಮಾನ್ವಿ: ಮಾನ್ವಿ ರಾಯ್‌ಚೂರ್ ಜಿಲ್ಲೆಯ ಜಗನ್ನಾಥದಾಸ ದೇವಸ್ಥಾನಕ್ಕೆ ಜನಪ್ರಿಯವಾಗಿದೆ. ಮಾನ್ವಿ ಈ ಪ್ರದೇಶದ ಜನಪ್ರಿಯ ಯಾತ್ರಾ ಕೇಂದ್ರವಾಗಿದ್ದು, ಯಲ್ಲಮ್ಮ ಜಾತ್ರೆ, ಮಹಾ ಮಳೇಶ್ವರಪ್ಪ ಜಾತ್ರೆ, ಸಂಜೀವರಾಯ ಜಾತ್ರೆ ಮುಂತಾದ ಜಾತ್ರೆಗಳು ಮತ್ತು ಉತ್ಸವಗಳಿಗೆ ಜನಪ್ರಿಯವಾಗಿದೆ. ಮಾನ್ವಿ ಒಂದು ಪಾಳುಬಿದ್ದ ಕೋಟೆಯನ್ನು ಕೂಡ ಹೊಂದಿದೆ.
  • ಶ್ರೀ ಸುಗುರೇಶ್ವರ ದೇವಸ್ಥಾನ: ರಾಯಚೂರಿನಿಂದ 18 ಕಿ.ಮೀ ದೂರದಲ್ಲಿರುವ ದಿಯೋಸುಗುರ್ ನಲ್ಲಿ ಕೃಷ್ಣ ನದಿಯ ದಡದಲ್ಲಿ ಪ್ರಸಿದ್ಧ ಶ್ರೀ ಸುಗುರೇಶ್ವರ ದೇವಸ್ಥಾನವಿದೆ.
  • ಅಂಬಾದೇವಿ ಮಠ : ಅಂಬಾದೇವಿ ಮಠ ಮತ್ತು ಅಂಬಾದೇವಿ ದೇವಾಲಯವು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸೋಮನಾಥಪುರ ಗ್ರಾಮದಲ್ಲಿರುವ ಪ್ರಸಿದ್ಧ ಪೂಜಾ ಸ್ಥಳಗಳಾಗಿವೆ. ಅಂಬಾದೇವಿ ಮಠದ  ವಾರ್ಷಿಕ ಉತ್ಸವವು  9 ದಿನಗಳ ಕಾಲ ನಡೆಯುತ್ತದೆ ಸುತ್ತ ಮುತ್ತಲಿನಿಂದ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ.
  • ಛಾಯಾ ಭಗವತಿ: ಜಲದುರ್ಗದಿಂದ 4 ಕಿ.ಮೀ. ದೂರದಲ್ಲಿ ಕೃಷ್ಣನ ದಂಡೆಯಲ್ಲಿರುವ ದೇವಾಲಯ, ಸೂರ್ಯ ದೇವರ ಪತ್ನಿ ಛಾಯಾ ಭಗವತಿಗಾಗಿ ಸಮರ್ಪಿವಾಗಿದೆ
  • ಕವಿಥಾಲ: ತ್ರಯಂಬಕೇಶ್ವರ ದೇವಸ್ಥಾನಕ್ಕೆ ಜನಪ್ರಿಯವಾಗಿದೆ
  • ಪಂಚಮುಖಿ: ರಾಯಚೂರಿನಿಂದ 35 ಕಿ.ಮೀ ದೂರದಲ್ಲಿರುವ ಗಣಡಲು ಗ್ರಾಮದಲ್ಲಿ ಒಂದು ಕುಗ್ರಾಮ, ಅಂಜನೇಯ ದೇವರ ಶಿಲ್ಪ ಇರುವ  ಪಂಚಮುಖಿ ದೇವಸ್ಥಾನಕ್ಕೆ ಜನಪ್ರಿಯವಾಗಿದೆ. ಮಂತ್ರಾಲಯದಿಂದಲೂ ಪಂಚಮುಖಿ ಪ್ರವೇಶಿಸಬಹುದು
ಇತರ ಆಕರ್ಷಣೆಗಳು
  • ಹಟ್ಟಿ: ಭಾರತದಲ್ಲಿ ಇನ್ನೂ ಕಾರ್ಯನಿರ್ವಹಿಸುತ್ತಿರುವ ಏಕೈಕ ಚಿನ್ನದ ಗಣಿ.
  • ನಾರದಗಡ್ಡೆ: ನಾರದಗಡ್ಡೆ ರಾಯಚೂರು ಜಿಲ್ಲೆಯ ಕೃಷ್ಣ ನದಿಯಲ್ಲಿರುವ ದ್ವೀಪವಾಗಿದ್ದು, ಇದನ್ನು ತೆಪ್ಪದ  ಮೂಲಕ ತಲುಪಬಹುದು.
  • ರಾಮಗಡ್ಡೆ: ರಾಯಚೂರಿನ ಉತ್ತರಕ್ಕೆ 20 ಕಿ.ಮೀ ದೂರದಲ್ಲಿರುವ ಕೃಷ್ಣ ನದಿಯಲ್ಲಿರುವ ಮತ್ತೊಂದು ಪ್ರಶಾಂತ ಮತ್ತು ಮೋಡಿಮಾಡುವ ದ್ವೀಪ.
  • ಧನೀಶ್ ಕೋಟಿ ಜಲಪಾತ: ಛಾಯಾ ಭಗವತಿ ದೇವಸ್ಥಾನದ ಬಳಿ, ಕೃಷ್ಣ ನದಿಯಲ್ಲಿ ಕಂಡುಬರುವ  400 ಅಡಿ ಆಳದ ಜಲಪಾತ. 
  • ರಾಜಲಬಂಧ: ಮಾನ್ವಿಯಿಂದ 25 ಕಿ.ಮೀ ದೂರದಲ್ಲಿರುವ ಪಿಕ್ನಿಕ್ ತಾಣ
  • ಶಕ್ತಿನಗರ: ಉಷ್ಣ ವಿದ್ಯುತ್ ಸ್ಥಾವರದ ಸ್ಥಳ, ರಾಯಚೂರಿನಿಂದ 18 ಕಿ.ಮೀ.

Tour Location

ರಾಯಚೂರು  ರೈಲು, ರಸ್ತೆ ಮತ್ತು ವಾಯು ಮಾರ್ಗದ  ಮೂಲಕ ಉತ್ತಮ ಸಂಪರ್ಕ ಹೊಂದಿದೆ. ರಾಯಚೂರು ಬೆಂಗಳೂರಿನಿಂದ 412 ಕಿ.ಮೀ ದೂರದಲ್ಲಿದೆ.
ಕಲಬುರಗಿ ವಿಮಾನ ನಿಲ್ದಾಣವು ರಾಯಚೂರಿನಿಂದ 157 ಕಿ.ಮೀ ದೂರದಲ್ಲಿದ್ದರೆ, ಬಳ್ಳಾರಿಯ ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣವು 172 ಕಿ.ಮೀ ದೂರದಲ್ಲಿದೆ. ಇವು ರಾಯಚೂರಿಗೆ ಹತ್ತಿರದ ಎರಡು ವಿಮಾನ ನಿಲ್ದಾಣಗಳಾಗಿವೆ.
ರಾಯಚೂರಿನಲ್ಲಿ ರೈಲ್ವೆ ನಿಲ್ದಾಣ ಇದೆ ಮತ್ತು ಉತ್ತಮ ರೈಲು ಸಂಪರ್ಕ ಹೊಂದಿದೆ. 
ಬಸ್: ರಾಯಚೂರು ಬೆಂಗಳೂರು ಮತ್ತು ಕರ್ನಾಟಕದ ಇತರ ಪ್ರಮುಖ ನಗರಗಳಿಂದ ಕೆಎಸ್‌ಆರ್‌ಟಿಸಿ (ಕ.ರಾ.ರ.ಸಾ.ಸಂ) ಮತ್ತು ಖಾಸಗಿ ಬಸ್ ಸಂಪರ್ಕವನ್ನು ಹೊಂದಿದೆ.
 ಸ್ಥಳೀಯ ಪ್ರಯಾಣಕ್ಕೆ ಆಟೊಗಳು ಹೆಚ್ಚು ಸೂಕ್ತವಾಗಿವೆ. ಜಿಲ್ಲೆಯ ವಿವಿಧ ಆಕರ್ಷಣೆಯನ್ನು ತಲುಪಲು ಪ್ರಮುಖ ಪಟ್ಟಣಗಳಾದ ರಾಯಚೂರು, ಲಿಂಗಸಗೂರು, ಮಡಗಲ್, ಸಿಂಧನೂರು  ಮತ್ತು ಮಾನ್ವಿಗಳಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು.
ಪರಿಸರ ಸ್ನೇಹಿ ವಸತಿ ಆಯ್ಕೆಗಳು: ಐಷಾರಾಮಿ ವಸತಿಗಳು: ಮಧ್ಯಮ ಶ್ರೇಣಿಯ ವಸತಿ ಆಯ್ಕೆಗಳು: ಕಡಿಮೆ ಖರ್ಚಿನ ವಸತಿ (ಬಜೆಟ್) ಆಯ್ಕೆಗಳು: ಹೋಟೆಲ್ ಕರಾವಳಿ ರೆಸಿಡೆನ್ಸಿ  ಹೋಟೆಲ್ SAK