Karnataka logo

Karnataka Tourism
GO UP

ಮಸೀದಿ ಜೀನಾಥ್ ಬಕ್ಷ್

separator
ಕೆಳಗೆ ಸ್ಕ್ರಾಲ್ ಮಾಡಿ

ಕ್ರಿ.ಶ 644 ರಲ್ಲಿ ನಿರ್ಮಿಸಲಾದ ಮಸೀದಿ ಜೀನಾಥ್ ಬಕ್ಷ್ ಕರ್ನಾಟಕದ ಅತ್ಯಂತ ಹಳೆಯ ಮಸೀದಿ ಮತ್ತು ಸಂಪೂರ್ಣ ಭಾರತದಲ್ಲಿ 3 ನೇ ಹಳೆಯ ಮಸೀದಿಯಾಗಿದೆ. ಪ್ರವಾದಿ ಮೊಹಮ್ಮದ್ ಅವರೊಂದಿಗಿನ ಸಂಪರ್ಕದಿಂದಾಗಿ, ಮಸೀದಿ ಜೀನಾಥ್ ಬಕ್ಷ್ ಅಪಾರ ಮಹತ್ವವನ್ನು ಹೊಂದಿದೆ.

ಇತಿಹಾಸ: ವ್ಯಾಪಾರ ಉದ್ದೇಶಗಳಿಗಾಗಿ ಅರೇಬಿಯನ್ ಕರಾವಳಿಗೆ ಭೇಟಿ ನೀಡಿದ ಅರಬ್ ವ್ಯಾಪಾರಿಗಳ ಯುಗದಲ್ಲಿ ಮಸೀದಿ  ಜೀನಾಥ್ ಬಕ್ಷ್ ನಿರ್ಮಿಸಲಾಯಿತು. ಸ್ಥಳೀಯ ದೊರೆಗಳಾದ ಮಲಬಾರ್‌ನ ರಾಜಾ ಚೆರುಮನ್ ಪೆರುಮಾಲ್ ಅವರು ವಿದೇಶಿ ವ್ಯಾಪಾರಿಗಳೊಂದಿಗೆ ಸೌಹಾರ್ದಯುತ ಸಂಬಂಧವನ್ನು ಉಳಿಸಿಕೊಂಡರು. ಪ್ರವಾದಿ ಮೊಹಮ್ಮದ್ ಅವರ ಸಂಬಂಧಿಗಳಾಗಿದ್ದ ಅರಬ್ ಮುಸ್ಲಿಂ ವ್ಯಾಪಾರಿಗಳು ತಮ್ಮ ಸಮುದಾಯದ ಧಾರ್ಮಿಕ ಚಟುವಟಿಕೆಗಳಿಗಾಗಿ ಮಸೀದಿಯನ್ನು ನಿರ್ಮಿಸಿದರು.

ಮಸೀದಿ ಜೀನಾಥ್ ಬಕ್ಷ್ ದ ಮುಖ್ಯಾಂಶಗಳು:

  • ಮೊಹಮ್ಮದ್ ಪ್ರವಾದಿಯವರ ಜೀವನ ಕಥೆಗಳನ್ನು ಮಸೀದಿಯೊಳಗೆ ಚಿತ್ರಿಸಲಾಗಿದೆ.
  • 16 ತೇಗದ ಕಂಬಗಳೊಂದಿಗೆ ಮರದ ಒಳ ಗರ್ಭಗುಡಿ, ವಿವಿಧ ಕಲಾತ್ಮಕ ಚಿಹ್ನೆಗಳು, ಹೂಗಳು, ಘಂಟೆಗಳು ಮತ್ತಿತರ ವಿನ್ಯಾಸಗಳಿಂದ ಅಲಂಕರಿಸಲಾಗಿದೆ.
  • ಟಿಪ್ಪು ಸುಲ್ತಾನ್ ಪ್ರಭಾವ: ಮೈಸೂರು ದೊರೆ ಟಿಪ್ಪು ಸುಲ್ತಾನ್ 17 ನೇ ಶತಮಾನದಲ್ಲಿ ಮಸೀದಿಯನ್ನು ನವೀಕರಿಸಿದನು ಮತ್ತು ಅದಕ್ಕೆ ತನ್ನ ಸ್ವಂತ ಮಗಳು ಜೀನಾಥ್ ಳ  ಹೆಸರಿಟ್ಟನು.
  • ರೋಸ್‌ವುಡ್ ಕೆತ್ತಿದ ವಿನ್ಯಾಸಗಳು: ಮಸೀದಿ ಜೀನಾಥ್  ಬಕ್ಷ್ ಬೀಟೆ ಮತ್ತು ತೇಗದ ಮರದ ವಿನ್ಯಾಸಗಳಿಂದ ಅಲಂಕರಿಸಲ್ಪಟ್ಟ ಆಕರ್ಷಕ ಗೋಡೆಗಳು, ಬಾಗಿಲುಗಳು ಮತ್ತು ಮಹಡಿಗಳನ್ನು ಒಳಗೊಂಡಿದೆ.

ತಲುಪುವುದು ಹೇಗೆ: ಮಸೀದಿ ಜೀನಾಥ್ ಬಕ್ಷ್ ಬೆಂಗಳೂರಿನಿಂದ 344 ಕಿ.ಮೀ ಮತ್ತು ಮಂಗಳೂರಿನಿಂದ 14 ಕಿ.ಮೀ. ದೂರದಲ್ಲಿದೆ. ಮಂಗಳೂರು ಹತ್ತಿರದ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣವಾಗಿದೆ. ಬುಂದೆರ್ ಪ್ರದೇಶದಲ್ಲಿ ನೆಲೆಗೊಂಡಿರುವ ಮಸೀದಿ ಜೀನಾಥ್  ಬಕ್ಷ್ ತಲುಪಲು ಮಂಗಳೂರಿನಿಂದ ಆಟೋ ಅಥವಾ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು.

ವಸತಿ: ಮಂಗಳೂರು ನಗರದಲ್ಲಿ ಬಜೆಟ್, ಮಧ್ಯಮ ಶ್ರೇಣಿ ಮತ್ತು ಐಷಾರಾಮಿ ಹೋಟೆಲ್‌ಗಳಿವೆ.

Tour Location

Leave a Reply

Accommodation
Meals
Overall
Transport
Value for Money