Karnataka logo

Karnataka Tourism
GO UP

ಪ್ರಕೃತಿ ಚಿಕಿತ್ಸೆ

separator
ಕೆಳಗೆ ಸ್ಕ್ರಾಲ್ ಮಾಡಿ

ಪ್ರಕೃತಿ ಚಿಕಿತ್ಸೆ ಅಥವಾ ನ್ಯಾಚುರೋಪತಿ ನೈಸರ್ಗಿಕ ಚಿಕಿತ್ಸಾ ವ್ಯವಸ್ಥೆಯಾಗಿದ್ದು ಇದರಲ್ಲಿ ಯಾವುದೇ ರಾಸಾಯನಿಕಜನ್ಯ ಔಷಧಿಗಳನ್ನು ಬಳಸಲಾಗುವುದಿಲ್ಲ. ಬದಲಾಗಿ ಈ ವಿಶಿಷ್ಟ ಭಾರತೀಯ ಚಿಕಿತ್ಸಾ ವಿಧಾನವು ದೇಹವನ್ನು ಒಳಗಿನಿಂದ ಬಲಪಡಿಸುವುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಅಗತ್ಯವಿರುವಲ್ಲಿ ಜೀವನಶೈಲಿಯ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಮತ್ತು ಆ ಮೂಲಕ ನಮ್ಮ ದೇಹವು ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಸಾಧ್ಯವಾಗುವ ಉತ್ತಮ, ಸುರಕ್ಷಿತ ಮತ್ತು ನೈಸರ್ಗಿಕ ಮಾರ್ಗವನ್ನು ನೀಡುತ್ತದೆ. “ಪ್ರಕೃತಿ ಗುಣಪಡಿಸುತ್ತದೆ, ಔಷಧಿಗಳಲ್ಲ” ಎಂಬುದು ಪ್ರಕೃತಿ ಚಿಕಿತ್ಸೆಯ ಮೂಲತತ್ವವಾಗಿದೆ. 

ಪ್ರಕೃತಿಚಿಕಿತ್ಸೆಯನ್ನು ಜಾಗತಿಕ ವೈಜ್ಞಾನಿಕ ಮತ್ತು ವೈದ್ಯಕೀಯ ಸಮೂಹವು  ಅಂಗೀಕರಿಸಿದೆ ಮತ್ತು ಸಾಂಪ್ರದಾಯಿಕ ಔಷಧ ಅಥವಾ ಶಸ್ತ್ರಚಿಕಿತ್ಸೆಗೆ ಬದಲಾಗಿ ಪ್ರತಿವರ್ಷ ಹೆಚ್ಚಿನ ಸಂಖ್ಯೆಯ ರೋಗಿಗಳು ಪ್ರಕೃತಿ ಚಿಕಿತ್ಸೆ ಕಡೆಗೆ ಮುಖ ಮಾಡುತ್ತಿದ್ದಾರೆ. 

ಭಾರತ ಸರ್ಕಾರದ  ಆಯುಷ್ ಸಚಿವಾಲಯ ಪ್ರಕೃತಿ ಚಿಕಿತ್ಸೆ ಮತ್ತು ಸಂಬಂಧಿತ ಆರೋಗ್ಯ ಸೇವೆಗಳನ್ನು ಉತ್ತೇಜಿಸುತ್ತದೆ. (https://www.ayush.gov.in/

ಕರ್ನಾಟಕದ ಕೆಲವು ಪ್ರಮುಖ ಪ್ರಕೃತಿ ಚಿಕಿತ್ಸಾ ಸಂಸ್ಥೆಗಳ ಸಂಕ್ಷಿಪ್ತ ಪರಿಚಯ ಕೆಳಗೆ ಕೊಡಲಾಗಿದೆ :

  •  ಜಿಂದಾಲ್ ನೇಚರ್ ಕ್ಯೂರ್ ಸಂಸ್ಥೆ, ಬೆಂಗಳೂರು

ಜಿಂದಾಲ್ ನೇಚರ್ ಕ್ಯೂರ್ ಸಂಸ್ಥೆ ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಜನಪ್ರಿಯ ಪ್ರಕೃತಿ ಚಿಕಿತ್ಸಾ ಕೇಂದ್ರವಾಗಿದೆ. 100 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ‌ವ್ಯಾಪಿಸಿರುವ ಮತ್ತು 1978 ರಲ್ಲಿ ಸ್ಥಾಪನೆಯಾದ ಜಿಂದಾಲ್ ನೇಚರ್ ಕ್ಯೂರ್ ಇನ್‌ಸ್ಟಿಟ್ಯೂಟ್ ಅನ್ನು ಪ್ರಸಿದ್ಧ ಕೈಗಾರಿಕೋದ್ಯಮಿ ಮತ್ತು ಸಮಾಜ ಸೇವಕರಾದ  ಡಾ.ಸೀತಾರಾಮ್ ಜಿಂದಾಲ್ ಅವರು ಸ್ಥಾಪಿಸಿದರು. ಜಿಂದಾಲ್ ನೇಚರ್ ಕ್ಯೂರ್ ಸಂಸ್ಥೆ ದೇಹದ ದೀರ್ಘಕಾಲದ ಪ್ರಕೃತಿ ಚಿಕಿತ್ಸೆ ಮತ್ತು ಜೀವನಶೈಲಿಯ ಮಾರ್ಪಾಡುಗಳ ಮೂಲಕ ಹಲವಾರು ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಗುಣಪಡಿಸಲು ಸಹಾಯ ಮಾಡುತ್ತದೆ. ಜಿಂದಾಲ್ ನೇಚರ್ ಕ್ಯೂರ್ ಇನ್ಸ್ಟಿಟ್ಯೂಟ್ ಅನ್ನು ಭಾರತದಲ್ಲಿ ಆಧುನಿಕ ಔಷಧ ರಹಿತ ಆರೋಗ್ಯ ಸೇವೆಯ ಹರಿಕಾರ ಎಂದು ಪರಿಗಣಿಸಲಾಗಿದೆ.

ಜಾಲತಾಣ: https://jindalnaturecure.in/

  • ಶ್ರೀ ಧರ್ಮಸ್ಥಳ  ಮಂಜುನಾಥೇಶ್ವರ ಯೋಗ ಮತ್ತು ಪ್ರಾಕೃತಿಕ ಚಿಕಿತ್ಸಾ ಆಸ್ಪತ್ರೆ

ಎಸ್‌ಡಿಎಂ ನೇಚರ್ ಕ್ಯೂರ್ ಆಸ್ಪತ್ರೆ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಶ್ರೀ ಧರ್ಮಸ್ಥಳ  ಮಂಜುನಾಥೇಶ್ವರ ಯೋಗ ಮತ್ತು ಪ್ರಾಕೃತಿಕ ಚಿಕಿತ್ಸಾ ಆಸ್ಪತ್ರೆ ಕರ್ನಾಟಕದ ಪ್ರಮುಖ ಪ್ರಕೃತಿ ಚಿಕಿತ್ಸಾ ಕೇಂದ್ರಗಳಲ್ಲಿ ಒಂದಾಗಿದೆ, ಇದು ದಕ್ಷಿಣ ಕನ್ನಡದ ದೇವಾಲಯ ಪಟ್ಟಣ ಧರ್ಮಸ್ಥಳದಲ್ಲಿದೆ. ಸಾಂಪ್ರದಾಯಿಕ ಪ್ರಾಕೃತಿಕ ಚಿಕಿತ್ಸಾ ಪದ್ದತಿಯನ್ನು ಬೆಳಕಿಗೆ ತರುವ ಉದ್ದೇಶದಿಂದ ಶಾಂತಿವನ ಟ್ರಸ್ಟ್ ಈ ಆಸ್ಪತ್ರೆಯನ್ನು ನಿರ್ವಹಿಸುತ್ತದೆ. ಜಾಲತಾಣ: https://www.naturecure.org.in/

  • ತೋನ್ಸೆ ಪ್ರಕೃತಿ ಚಿಕಿತ್ಸೆ ಆಸ್ಪತ್ರೆ, ಉಡುಪಿ

ಉಡುಪಿಯಿಂದ 13 ಕಿ.ಮೀ ದೂರದಲ್ಲಿರುವ ಸುಂದರವಾದ ಕಡಲತೀರದ ಹಳ್ಳಿ ತೋನ್ಸೆ. ಇಲ್ಲಿರುವ ಪ್ರಸಿದ್ಧ ತೋನ್ಸೆ ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರ. ವ್ಯಾಯಾಮ, ಪಥ್ಯ, ಮಸಾಜ್, ಚಿಕಿತ್ಸೆ ಮತ್ತಿತರ ಸೇವೆಯಿದ್ದು ವಸತಿ ವ್ಯವಸ್ಥೆಯಿದೆ. 

ಜಾಲತಾಣ: http://thonsehealth.com/

  •  ಎಸ್‌ಡಿಎಂ ಆಯುರ್ವೇದ ಆಸ್ಪತ್ರೆ, ಉಡುಪಿ

ಉಡುಪಿಯ ಹೊರವಲಯದಲ್ಲಿರುವ ಮತ್ತೊಂದು ಪ್ರಸಿದ್ಧ ಆಯುರ್ವೇದ ಆಸ್ಪತ್ರೆ, 1958 ರಲ್ಲಿ ಸ್ಥಾಪನೆಯಾಯಿತು ಮತ್ತು ಶ್ರೀ ಧರ್ಮಸ್ಥಳ  ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಸಹಯೋಗದೊಂದಿಗೆ ಕೆಲಸ ಮಾಡುತ್ತದೆ. ಕರ್ನಾಟಕದ ವಿವಿಧ ನಗರಗಳಲ್ಲಿ ಎಸ್‌ಡಿಎಂ ಮಾರ್ಗದರ್ಶನದಲ್ಲಿ ಹಲವಾರು ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರಗಳಿವೆ.

ಜಾಲತಾಣ: http://sdmayurvedahospitaludupi.in/

  • ಮಹಿಷಿ ಟ್ರಸ್ಟ್ ಯೋಗ ಮತ್ತು ನ್ಯಾಚುರೋಪತಿ ಆಸ್ಪತ್ರೆ ಧಾರವಾಡ

ಧಾರವಾಡದ ಮಹಿಷಿ ಟ್ರಸ್ಟ್ ಯೋಗ ಮತ್ತು ನ್ಯಾಚುರೋಪತಿ ಆಸ್ಪತ್ರೆ 11+ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, 35 ವಿಭಿನ್ನ ಚಿಕಿತ್ಸೆಯನ್ನು ಒದಗಿಸುತ್ತಿದೆ ಮತ್ತು ಇಲ್ಲಿಯವರೆಗೆ 10000+ ರೋಗಿಗಳಿಗೆ ಸಹಾಯ ಮಾಡಿದೆ.

ಜಾಲತಾಣ: https://www.mahishitrustnaturopathy.in/

  •  ಆನಂದಮಯ ಸ್ವಾಸ್ಥ್ಯ ಕೇಂದ್ರ, ಬೆಂಗಳೂರು

ಡಾ. ಗುರುದತ್ತ ಅವರು 2007 ರಲ್ಲಿ ಸ್ಥಾಪಿಸಿದ ಆನಂದಮಯ ಸ್ವಾಸ್ಥ್ಯ ಕೇಂದ್ರವು ವ್ಯಕ್ತಿಗತ ಗಮನ ಮತ್ತು ವಿವಿಧ ರೀತಿಯ ಸಂಯೋಜಿತ ಚಿಕಿತ್ಸಾ ವಿಧಾನಕ್ಕೆ ಹೆಸರುವಾಸಿಯಾಗಿದೆ, ಇಲ್ಲಿ ಆಯುರ್ವೇದ, ಯೋಗ, ಸಾಂಪ್ರದಾಯಿಕ ಚೀನೀ ಔಷಧಿ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಅತ್ಯುತ್ತಮವಾಗಿ ನೀಡಲಾಗುತ್ತದೆ. 

ಜಾಲತಾಣ: http://www.anandamayawellness.com/

  •  ಜೆಜಿಸಿಎಚ್ ನ್ಯಾಚುರೋಪತಿ ಮತ್ತು ಯೋಗ ಕೇಂದ್ರ, ಬೆಳಗಾವಿ

ಶ್ರೀ ಜೆ ಜಿ ಕೋಆಪರೇಟಿವ್ ಹಾಸ್ಪಿಟಲ್ ಸೊಸೈಟಿಯ ಪ್ರಕೃತಿ ಚಿಕಿತ್ಸಾ ಕೇಂದ್ರವು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಜನಪ್ರಿಯ ಪ್ರಕೃತಿ ಚಿಕಿತ್ಸಾ ಕೇಂದ್ರವಾಗಿದೆ. ಶ್ರೀ ಜೆ ಜಿ ಕೋ ಸಹಕಾರಿ ಸಂಘ ಆಸ್ಪತ್ರೆ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು 1951 ರಲ್ಲಿ ಕಡಿಮೆ ವೆಚ್ಚ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. 

ಜಾಲತಾಣ: http://www.jgchnaturopathy.org/

  •  ಅಪೊಲೊ ನ್ಯಾಚುರೋಪತಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು

ಅಪೊಲೊ ನ್ಯಾಚುರೋಪತಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಬೆಂಗಳೂರಿನ ಕೆಂಗೇರಿಯಲ್ಲಿರುವ ಜನಪ್ರಿಯ ಪ್ರಕೃತಿ ಚಿಕಿತ್ಸಾ ಕೇಂದ್ರವಾಗಿದೆ.

  • ನೇಚರ್ ಕ್ಯೂರ್ ಆಸ್ಪತ್ರೆ, ಬೆಂಗಳೂರು

ಬೆಂಗಳೂರಿನ ಜಯನಗರದಲ್ಲಿರುವ ನೇಚರ್ ಕ್ಯೂರ್ ಆಸ್ಪತ್ರೆ 1966 ರಲ್ಲಿ ಸ್ಥಾಪನೆಯಾದ ಕರ್ನಾಟಕದ ಅತ್ಯಂತ ಪ್ರಕೃತಿ ಚಿಕಿತ್ಸೆ ಕೇಂದ್ರವಾಗಿದೆ.  ಜಯಗರದ ನೇಚರ್ ಕ್ಯೂರ್ ಆಸ್ಪತ್ರೆಯನ್ನು ಕರ್ನಾಟಕ ಪ್ರಕೃತಿ ಚಿಕಿತ್ಸಾ ಪ್ರಚಾರ ಟ್ರಸ್ಟ್ ಸಂಸ್ಥೆ ನಿರ್ವಹಿಸುತ್ತದೆ.

ಜಾಲತಾಣ: http://www.jayanagarnaturecure.in/

Tour Location

Leave a Reply

Accommodation
Meals
Overall
Transport
Value for Money