Karnataka logo

Karnataka Tourism
GO UP

ಧರ್ಮಸ್ಥಳ

separator
ಕೆಳಗೆ ಸ್ಕ್ರಾಲ್ ಮಾಡಿ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ನೇತ್ರಾವತಿ ನದಿಯ ದಡದಲ್ಲಿರುವ ಧರ್ಮಸ್ಥಳವು ಒಂದು ಜನಪ್ರಿಯ ದೇವಾಲಯ ಪಟ್ಟಣವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ದೇವಸ್ಥಾನವು ನಾಡಿನ ಮೂಲೆ ಮೂಲೆಗಳಿಂದ ಭಕ್ತಾದಿಗಳನ್ನು ಸೆಳೆಯುತ್ತದೆ. 

ಇತಿಹಾಸ: ಧರ್ಮಸ್ಥಳ ದೇವಾಲಯವು 8 ಶತಮಾನಗಳ ಹಿಂದೆ ಹುಟ್ಟಿಕೊಂಡಿತು, ದೈವಾಜ್ಞೆ ಪಡೆದ ಸ್ಥಳೀಯ ಮುಖ್ಯಸ್ಥ ಬಿರ್ಮಣ್ಣ ಪೆರ್ಗಡೆ ಅವರನ್ನು ಧರ್ಮಕ್ಕಾಗಿ ತಮ್ಮ ಜೀವನವನ್ನು ಅರ್ಪಿಸಲು ಪ್ರೇರೇಪಿಸಿದಾಗ. ಪೆರ್ಗಡೆ ಕುಟುಂಬವು ಬೇರೆ ಮನೆಗೆ ಸ್ಥಳಾಂತರಗೊಂಡು ತಮ್ಮ ಮೂಲ ಮನೆ-ನೆಲ್ಯಾಡಿ ಬೀಡನ್ನು ದೇವರುಗ ಪೂಜೆಗೆ ಸಮರ್ಪಿಸಿತು. ಪುರೋಹಿತರ ಸಲಹೆಯ ಮೇರೆಗೆ ಮಂಗಳೂರು ಬಳಿಯ ಕದ್ರಿಯಿಂದ ಶಿವಲಿಂಗವನ್ನುತರಲಾಯಿತು ಮತ್ತು ಅದರ ಸುತ್ತಲೂ ಮಂಜುನಾಥಸ್ವಾಮಿ ದೇವಾಲಯವನ್ನು ನಿರ್ಮಿಸಲಾಯಿತು. ಪೆರ್ಗಡೆ ಕುಟುಂಬದ ವಂಶಸ್ಥರು ಇಲ್ಲಿಯವರೆಗೆ ದೇವಾಲಯ ನಿರ್ವಹಣೆಯನ್ನು ನಡೆಸುತ್ತಿದ್ದಾರೆ, ಡಾ.ವೀರೇಂದ್ರ ಹೆಗ್ಗಡೆ ಅವರು ಪ್ರಸ್ತುತ ಧರ್ಮಧಿಕಾರಿಯಾಗಿದ್ದಾರೆ.

ಧರ್ಮಸ್ಥಳದ ವಿಶೇಷತೆಗಳು:

  • ಮಂಜುನಾಥ ದೇವಸ್ಥಾನ: ಮಂಜುನಾಥನ ದರ್ಶನ ಮತ್ತು ಆಶೀರ್ವಾದ ಪಡೆಯುವುದು ಧರ್ಮಸ್ಥಳಕ್ಕೆ ತಲುಪಿದೊಡನೆ ಮೊದಲು ಮಾಡುವ ಕಾರ್ಯವಾಗಿದೆ. 
  • ತುಲಾಭಾರ ಸೇವೆ: ಧರ್ಮಸ್ಥಳದಲ್ಲಿ ನಡೆಸಿಕೊಡಲಾಗುವ ವಿವಿಧ ಪೂಜಾಕಾರ್ಯಗಳಲ್ಲಿ ತುಲಾಭಾರ ಸೇವೆ ಪ್ರಸಿದ್ಧವಾಗಿದೆ. ಭಕ್ತಾದಿಗಳು ತಕ್ಕಡಿಯ ಒಂದು ಭಾಗದಲ್ಲಿ ಕುಳಿತು ಇನ್ನೊಂದು ಭಾಗದಲ್ಲಿ ಸಮಾನ ತೂಕದ ವಸ್ತುಗಳನ್ನು ಇಡಲಾಗುತ್ತದೆ. ಭತ್ತ, ತೆಂಗಿನಕಾಯಿ ಇತ್ಯಾದಿಗಳು ತುಲಾಭಾರಕ್ಕೆ ಸಾಮಾನ್ಯವಾಗಿ ಬಳಸುವ ವಸ್ತುವಾಗಿದೆ.  
  • ಕೇಶ ಮುಂಡನ: ಧರ್ಮಸ್ಥಳ ದೇವಾಲಯಕ್ಕೆ ಬರುವ ಹಲವು ಭಕ್ತರು ತಮ್ಮ ತಲೆ ಬೋಳಿಸಿಕೊಂಡು ಕೂದಲನ್ನು ದೇವರಿಗೆ ಸಮರ್ಪಿಸುತ್ತಾರೆ. ತಿರುಪತಿಯ ನಂತರ ಕೇಶ ಮುಂಡನಕ್ಕೆ ಪ್ರಸಿದ್ದಿಯಾದ ತಾಣ ಧರ್ಮಸ್ಥಳವಾಗಿದೆ. ಹೀಗೆ ಮಾಡುವುದರಿಂದ ಮುಂದೆ ಒಳ್ಳೆಯದಾಗುತ್ತದೆ ಎಂದು ಭಕ್ತರು ನಂಬುತ್ತಾರೆ. 
  • ನೇತ್ರಾವತಿ ನದಿ: ಧರ್ಮಸ್ಥಳ ನೇತ್ರಾವತಿ ನದಿಯ ದಂಡೆಯಲ್ಲಿದೆ. ನದಿಯಲ್ಲಿ ಸ್ನಾನ ಮಾಡುವುದು, ಪ್ರಾಕೃತಿಕ ಸೌಂದರ್ಯವನ್ನು ಆಸ್ವಾದಿಸುವುದು ಧರ್ಮಸ್ಥಳಕ್ಕೆ ಭೇಟಿ ನೀಡುವವರ ನೆಚ್ಚಿನ ಆಯ್ಕೆಯಾಗಿದೆ. 
  • ಸಾಮೂಹಿಕ ವಿವಾಹಗಳು: ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ಯುವ ಜೋಡಿಗಳಿಗೆ ನೆರವಾಗಲು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾಲಕಾಲಕ್ಕೆ ಉಚಿತ ಸಾಮೂಹಿಕ ವಿವಾಹವನ್ನು ನಡೆಸಲಾಗುತ್ತದೆ.  .
  • ವಸ್ತು ಸಂಗ್ರಹಾಲಯ: ಡಾ.ವೀರೇಂದ್ರ ಹೆಗ್ಗಡೆ ಅವರ ಒಡೆತನದ ಹಲವು ಪುರಾತನ ಕಾಲದ ಕಾರುಗಳು, ಕ್ಯಾಮೆರಾಗಳು ಮತ್ತಿತರ ವಸ್ತುಗಳನ್ನು ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ನೋಡಬಹುದಾಗಿದೆ.

ಹತ್ತಿರ: ಧರ್ಮಸ್ಥಳ ಜೊತೆಗೆ ಕುಕ್ಕೆ ಸುಬ್ರಮಣ್ಯ (55 ಕಿ.ಮೀ), ಮೂಡುಬಿದ್ರಿ  (51 ಕಿ.ಮೀ) ಮತ್ತು ಮಂಗಳೂರು (75 ಕಿ.ಮೀ) ಗಳಿಗೆ ಭೇಟಿ ನೀಡಬಹುದು.

ತಲುಪುವುದು ಹೇಗೆ?

ಧರ್ಮಸ್ಥಳ ಬೆಂಗಳೂರಿನಿಂದ 311 ಕಿ.ಮೀ ಮತ್ತು ಮಂಗಳೂರಿನಿಂದ 75 ಕಿ.ಮೀ ದೂರದಲ್ಲಿದೆ. ಮಂಗಳೂರು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಪುತ್ತೂರು ರೈಲು ನಿಲ್ದಾಣವು ಹತ್ತಿರದಲ್ಲಿದೆ (49 ಕಿ.ಮೀ). ಧರ್ಮಸ್ಥಳವು ಮಂಗಳೂರು ನಗರದಿಂದ ಉತ್ತಮ ಬಸ್ ಸೇವೆಯನ್ನು ಹೊಂದಿದೆ.

ಉಳಿಯಿರಿ: ಧರ್ಮಸ್ಥಳ ದೇವಾಲಯ ಆಡಳಿತ ಮಂಡಳಿ ಅತಿಥಿ ಗೃಹವನ್ನು ನಡೆಸುತ್ತಿದ್ದು, ಅದನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಬಹುದಾಗಿದೆ. ದೇವಾಲಯದ ಬಳಿ ಖಾಸಗಿ ವಸತಿಗೃಹಗಳು ಮತ್ತು ಹೋಟೆಲ್‌ಗಳು ಲಭ್ಯವಿದೆ.

Tour Location

Leave a Reply

Accommodation
Meals
Overall
Transport
Value for Money