Karnataka logo

Karnataka Tourism
GO UP

ಜಾಮಿಯಾ ಮಸೀದಿ,ಕಲಬುರಗಿ

separator
ಕೆಳಗೆ ಸ್ಕ್ರಾಲ್ ಮಾಡಿ

ಜಾಮಿಯಾ ಮಸೀದಿ ಕಲಬುರಗಿ: ಕಲಬುರಗಿಯ ಜಾಮಿಯಾ ಮಸೀದಿ ವಿಶಿಷ್ಟ ಸ್ಪ್ಯಾನಿಷ್ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಜಾಮಿಯಾ ಮಸೀದಿ, ಕಲಬುರಗಿಯ ವಿನ್ಯಾಸವು ಸ್ಪೇನ್‌ನ ಕಾರ್ಡೊಬಾದ ಮಸೀದಿಯನ್ನು ಹೋಲುತ್ತದೆ ಎಂದು ಹೇಳಲಾಗುತ್ತದೆ.

ಹದಿನಾಲ್ಕನೆಯ ಶತಮಾನದ ಜಾಮಿಯಾ ಮಸೀದಿ ಕಲಬುರಗಿ ಯ ಕೋಟೆ ಸಂಕೀರ್ಣದ ಭಾಗವಾಗಿದೆ. ಪ್ರಾರ್ಥನಾ ಉದ್ದೇಶಗಳಿಗಾಗಿ 5000 ಭಕ್ತರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಜಾಮಿಯಾ ಮಸೀದಿಗೆ ಇದೆ.

ಜಾಮಿಯಾ ಮಸೀದಿ, ಕಲಬುರಗಿಯ ಬಗ್ಗೆ ಆಸಕ್ತಿದಾಯಕ ಮುಖ್ಯಾಂಶಗಳು

  • ಕ್ರಿ.ಶ 1367 ರಲ್ಲಿ ನಿರ್ಮಿಸಲಾಗಿದ ಜಾಮಿಯಾ ಮಸೀದಿಯನ್ನು ಪರ್ಷಿಯನ್ ವಾಸ್ತುಶಿಲ್ಪಿ ರಫಿ ವಿನ್ಯಾಸಗೊಳಿಸಿದ್ದಾರೆ
  • ಪ್ರಾರ್ಥನೆಗೆ ಮುಂಚಿತವಾಗಿ ಸಂದರ್ಶಕರು ಕೈ ಕಾಲು ತೊಳೆದುಕೊಳ್ಳಲು ಎರಡು ದೊಡ್ಡ ಕಪ್ಪು ಕಲ್ಲಿನ ನೀರಿನ ತೊಟ್ಟಿಗಳು ಪ್ರವೇಶದ್ವಾರದ ಬಳಿಯಿದೆ.
  • 50 ಅಡಿ ಎತ್ತರದ ಮುಖ್ಯ ದ್ವಾರ ಮತ್ತು ಮಸೀದಿಗೆ ಅಡ್ಡಲಾಗಿ 250 ಕಮಾನುಗಳು
  • ಕೇಂದ್ರದಲ್ಲಿ ಒಂದು ದೊಡ್ಡ ಗುಮ್ಮಟ, ಪ್ರತಿ ಮೂಲೆಯಲ್ಲಿ ನಾಲ್ಕು ಮಧ್ಯಮ ಗಾತ್ರದ ಗುಮ್ಮಟಗಳು ಮತ್ತು 107 ಸಣ್ಣ ಗುಮ್ಮಟಗಳನ್ನು ಒಳಗೊಂಡಿರುವ ಮೇಲ್ ಛಾವಣಿ

ಸಮಯ: ಕಲಬುರಗಿಯ ಜಾಮಿಯಾ ಮಸೀದಿಯನ್ನು ಶನಿವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಪ್ರವೇಶಿಸಬಹುದು.

ಹತ್ತಿರದಲ್ಲಿ: ಕಲಬುರಗಿಯೊಂದಿಗೆ ಯಾದಗಿರಿ ಕೋಟೆ (85 ಕಿ.ಮೀ), ಬಸವಕಲ್ಯಾಣಕ್ಕೆ (82 ಕಿ.ಮೀ) ಭೇಟಿ ನೀಡಬಹುದಾಗಿದೆ. 

ಕಲಬುರಗಿ ತಲುಪುವುದು ಹೇಗೆ? ಕಲಬುರಗಿ ಬೆಂಗಳೂರಿನಿಂದ 575 ಕಿ.ಮೀ ದೂರದಲ್ಲಿದೆ. ಕಲಬುರಗಿಯಲ್ಲಿ ವಿಮಾನ ನಿಲ್ದಾಣವಿದೆ, ನಗರ ಕೇಂದ್ರದಿಂದ 15 ಕಿ.ಮೀ ದೂರದಲ್ಲಿದೆ, ವಾರದಲ್ಲಿ 3 ಬಾರಿ ಬೆಂಗಳೂರಿನಿಂದ ವಿಮಾನ ಹಾರಾಟವಿದೆ. ಬೀದರ್ ಕಲಬುರಗಿಯಿಂದ 110 ಕಿ.ಮೀ ದೂರದಲ್ಲಿರುವ ಮತ್ತೊಂದು ವಿಮಾನ ನಿಲ್ದಾಣವಾಗಿದೆ. ಕಲಬುರಗಿಯಲ್ಲಿ ರೈಲ್ವೆ ನಿಲ್ದಾಣವಿದೆ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಉತ್ತಮ ಬಸ್ ಸಂಪರ್ಕವಿದೆ.

ವಸತಿ: ಕಲಬುರಗಿ ಪಟ್ಟಣದಲ್ಲಿ ಬಜೆಟ್ ಮತ್ತು ಮಧ್ಯ ಶ್ರೇಣಿಯ ಹೋಟೆಲ್‌ಗಳಿವೆ.

Tour Location

Leave a Reply

Accommodation
Meals
Overall
Transport
Value for Money