Karnataka logo

Karnataka Tourism
GO UP

ಜಯಲಕ್ಷ್ಮಿ ವಿಲಾಸ ಅರಮನೆ

separator
ಕೆಳಗೆ ಸ್ಕ್ರಾಲ್ ಮಾಡಿ

ಮಾನಸ ಗಂಗೋತ್ರಿ (ಮೈಸೂರು ವಿಶ್ವವಿದ್ಯಾಲಯ) ದ ಹಚ್ಚ ಹಸಿರಿನ ಆವರಣದಲ್ಲಿರುವ ಜಯಲಕ್ಷ್ಮಿ ವಿಲಾಸ ಅರಮನೆ ಒಂದು ಪಾರಂಪರಿಕ ಕಟ್ಟಡವಾಗಿದ್ದು, ಇದನ್ನು ಈಗ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ಸ್ಥಳೀಯ ಜಾನಪದ ಪ್ರದರ್ಶನ ಕಲೆಗಳು, ಉಪಕರಣಗಳು ಮತ್ತು ವಿವಿಧ ಕುಶಲಕರ್ಮಿಗಳ ಪ್ರಾಚೀನ ವಸ್ತುಗಳು ಮತ್ತು ಇತರ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳಿಗೆ ಸಂಬಂಧಿಸಿದ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

ಇತಿಹಾಸ: ಜಯಲಕ್ಷ್ಮಿ ವಿಲಾಸ ಅರಮನೆಯನ್ನು 1905ರಲ್ಲಿ ಮೈಸೂರು ಮಹಾರಾಜ ಶ್ರೀ ಕೃಷ್ಣರಾಜ ವೊಡೆಯಾರ್ 4 ಅವರು ರಾಜಕುಮಾರಿ ಜಯಲಕ್ಷ್ಮಿ ಅಮ್ಮಣ್ಣಿ ಅವರ ನಿವಾಸಕ್ಕಾಗಿ ನಿರ್ಮಿಸಿದರು. ರಾಜಕುಮಾರಿ ಜಯಲಕ್ಷ್ಮಿ 1897 ರಲ್ಲಿ ಕಾಂತರಾಜ್ ಅರಸ್  ಅವರನ್ನು ವಿವಾಹವಾದರು ಮತ್ತು  ಕಾಂತರಾಜ್ ಅರಸ್ ನಂತರ ಮೈಸೂರಿನ ದಿವಾನರಾಗಿ  ನೇಮಕ ಗೊಂಡರು. ಜಯಲಕ್ಷ್ಮಿ ವಿಲಾಸ್ ಅರಮನೆ ವಿವಾಹಿತ ದಂಪತಿಗೆ ಉಡುಗೊರೆಯಾಗಿತ್ತು.

ಪ್ರಸ್ತುತ ಸ್ಥಿತಿ: ಜಯಲಕ್ಷ್ಮಿ ವಿಲಾಸ್ ಅರಮನೆಯನ್ನು ಮೈಸೂರು ವಿಶ್ವವಿದ್ಯಾಲಯದ  ವಶಕ್ಕೆ ನೀಡಲಾಯಿತು ಮತ್ತು ಇದನ್ನು 2002 – 2006 ರ ನಡುವೆ ನವೀಕರಿಸಲಾಯಿತು.

ವಸ್ತು ಸಂಗ್ರಹಾಲಯಗಳು: ಜಯಲಕ್ಷ್ಮಿ ವಿಲಾಸ್ ಅರಮನೆಯಲ್ಲಿ ಪ್ರಸ್ತುತ ಜಾನಪದ ವಸ್ತು ಸಂಗ್ರಹಾಲಯ, ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಸಾಮಾನ್ಯ (ಜನರಲ್) ವಸ್ತುಸಂಗ್ರಹಾಲಯವಿದೆ. 

ಜಾನಪದ ವಸ್ತು ಸಂಗ್ರಹಾಲಯ: 6500 ಕ್ಕೂ ಹೆಚ್ಚು ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿರುವ  ಜಾನಪದ ವಸ್ತು ಸಂಗ್ರಹಾಲಯವನ್ನು ಏಷ್ಯಾದ ಅತಿದೊಡ್ಡ ಜಾನಪದ ಕಲಾ ಸಂಗ್ರಹವೆಂದು ಪರಿಗಣಿಸಲಾಗಿದೆ. ಜಾನಪದ ವಸ್ತು ಸಂಗ್ರಹಾಲಯವು ಹಳ್ಳಿಯ ಜೀವನ, ಸಾಂಪ್ರದಾಯಿಕ ಕರಕುಶಲತೆ ಮತ್ತು ಮೈಸೂರು ಸುತ್ತಮುತ್ತಲಿನ ಜನರ ಜೀವನ ಕ್ರಮದ ಉತ್ತಮ ಪ್ರಾತ್ಯಕ್ಷಿಕೆಯನ್ನು ನೀಡುತ್ತದೆ. ಶಿರಸ್ತ್ರಾಣಗಳು, ವೇಷಭೂಷಣಗಳು, ಬೊಂಬೆಗಳು, ಮನೆಗಳು ಮತ್ತು ದೇವಾಲಯಗಳ ಸಣ್ಣ ಪ್ರಮಾಣದ ಪ್ರತಿಕೃತಿ, ಗ್ರಾಮೀಣ ಆಭರಣಗಳು, ಲೋಹದ ಸಾಮಾನುಗಳು ಮತ್ತು ಗೃಹೋಪಯೋಗಿ ವಸ್ತುಗಳು ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿವೆ. 

ಸಾಮಾನ್ಯ ವಸ್ತು ಸಂಗ್ರಹಾಲಯದಲ್ಲಿ ರಾಜ ಮನೆತನ ಬಳಸುವ ವಿವಿಧ ಕಲಾಕೃತಿಗಳನ್ನು ನೋಡಬಹುದಾಗಿದೆ. 

ಪುರಾತತ್ವ ಶಾಸ್ತ್ರ ವಸ್ತು ಸಂಗ್ರಹಾಲಯವು ಕಲ್ಲಿನ ಶಿಲ್ಪಗಳು, ವರ್ಣಚಿತ್ರಗಳು, ಹುಲಿಯ ಜೀವ ಗಾತ್ರದ ಪ್ರತಿಕೃತಿ, ಆನೆಯ ದಂತ  ಮತ್ತು ಇತರ ಆಸಕ್ತಿದಾಯಕ  ವಸ್ತುಗಳನ್ನು ಪ್ರದರ್ಶಿಸುತ್ತದೆ.

ಸಂದರ್ಶಕರ ಸಮಯ: ಸೋಮವಾರದಿಂದ ಶನಿವಾರದವರೆಗೆ: ಬೆಳಿಗ್ಗೆ 10 ಗಂಟೆಯಿಂದ 1 ಗಂಟೆ ವರೆಗೆ ಮತ್ತು ಸಂಜೆ  3 ರಿಂದ 5 ರವರೆಗೆ, ಭಾನುವಾರ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಮುಚ್ಚಲಾಗಿರುತ್ತದೆ. 

Tour Location

Leave a Reply

Accommodation
Meals
Overall
Transport
Value for Money