Karnataka logo

Karnataka Tourism
GO UP

ಕೊಪ್ಪಳ

separator
ಕೆಳಗೆ ಸ್ಕ್ರಾಲ್ ಮಾಡಿ

ಕೊಪ್ಪಳ ಉತ್ತರ ಕರ್ನಾಟಕದ ನೂತನ ಜಿಲ್ಲೆಗಳಲ್ಲಿ ಒಂದಾಗಿದ್ದು, ಐತಿಹಾಸಿಕ ಸ್ಥಳಗಳಾದ ಅನೆಗುಂಡಿ ಮತ್ತು ಇಟಗಿಗೆ ತವರೂರಾಗಿದೆ. ಕೊಪ್ಪಳವನ್ನು ಕರ್ನಾಟಕದ ಭತ್ತದ ಕಣಜ (ರೈಸ್ ಬೌಲ್) ಎಂದು ಕರೆಯಲಾಗುತ್ತದೆ.

ಕೊಪ್ಪಳದ ಇತಿಹಾಸವು ಕ್ರಿ.ಪೂ 3 ನೇ ಶತಮಾನಕ್ಕೂ ಹಿಂದಿನದು, ಏಕೆಂದರೆ ಸಾಮ್ರಾಟ್  ಅಶೋಕನ ಯುಗದ ವಿವಿಧ ಶಾಸನಗಳು ಕೊಪ್ಪಲ್ ಜಿಲ್ಲೆಯಲ್ಲಿ ಕಂಡುಬಂದಿವೆ. ಕೊಪ್ಪಳ ಕಿನಾಳದ ಮರದ ಆಟಿಕೆ, ವಿಗ್ರಹಗಳಿಗೆ,  ನೇಯ್ಗೆ ಉದ್ಯಮ, ಕುಂಬಾರಿಕೆ ಮತ್ತು ಬಾಚಣಿಗೆ ತಯಾರಿಕೆಗೆ ಹೆಸರುವಾಸಿಯಾಗಿದೆ.

 

ಗಂಗಾವತಿ ಪ್ರಾಣೇಶ್ ಕೊಪ್ಪಳ ಜಿಲ್ಲೆಯ ಕನ್ನಡದ ಜನಪ್ರಿಯ ಹಾಸ್ಯ ಭಾಷಣಗಾರರು. ಕನಕಗಿರಿಯಲ್ಲಿನ ಫಾಲ್ಗುಣ ವಾರ್ಷಿಕ ಜಾತ್ರೆ ಮತ್ತು ಅನೆಗುಂಡಿ ಉತ್ಸವವು ಕೊಪ್ಪಳ ಜಿಲ್ಲೆಯ ಎರಡು ಜನಪ್ರಿಯ ಹಬ್ಬಗಳು.

ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಕ್ಲಿಕ್ ಮಾಡಿ

ಸಾಹಸ ಮತ್ತು ಚಟುವಟಿಕೆಗಳು
  • ಕಿಷ್ಕಿಂದೆ ವಾಟರ್ ಪಾರ್ಕ್: ಅನೆಗುಂಡಿಯಲ್ಲಿ ಇರುವ ಪ್ರಸಿದ್ಧ ಜಲ ಕ್ರೀಡಾ ಕೇಂದ್ರ ಮತ್ತು ಥೀಮ್ ಪಾರ್ಕ್.
  • ಮುನಿರಾಬಾದ್ ಬಳಿ ಪಿಕ್ನಿಕ್: ಮುನಿರಾಬಾದ್‌ನ ತುಂಗಭದ್ರಾ ಜಲಾಶಯದ ಸಮೀಪ ಜಪಾನಿ ಮಾದರಿಯ ಅಲಂಕಾರಿಕ ಉದ್ಯಾನವಿದ್ದು ಕುಟುಂಬ ವಿಹಾರಕ್ಕೆ ಸೂಕ್ತವಾಗಿದೆ.
ಐತಿಹಾಸಿಕ ತಾಣಗಳು
  • ಕೊಪ್ಪಳ ಕೋಟೆ: ಕರ್ನಾಟಕದ ಪ್ರಬಲ ಕೋಟೆಗಳಲ್ಲಿ ಒಂದಾಗಿದ್ದು, 1786 ರಲ್ಲಿ ಟಿಪ್ಪು ಸುಲ್ತಾನ್ ಸ್ವಾಧೀನಪಡಿಸಿಕೊಂಡು ಇನ್ನಷ್ಟು ಭದ್ರಪಡಿಸಿದನು.
  • ಪಾಲ್ಕಿಗುಂಡು ಅಶೋಕ ಶಾಸನ: ಕೊಪ್ಪಳ ನಗರದಿಂದ 3 ಕಿ.ಮೀ ದೂರದಲ್ಲಿ ದೈತ್ಯ ಬಂಡೆಗಳ ಮೇಲೆ 2300 ವರ್ಷಗಳಷ್ಟು ಹಳೆಯದಾದ ಶಾಸನಗಳು ಕಂಡುಬಂದಿದ್ದು ಎರಡು ಬಂಡೆಗಳ ಮೇಲೆ ಸಮತಟ್ಟಾದ ಇನ್ನೊಂದು ಬಂಡೆ ಇದ್ದು ದೂರದಿಂದ ನೋಡಿದಾಗ, ಪಲ್ಲಕ್ಕಿಯನ್ನು ಹೋಲುತ್ತದೆ. ಈ ಕಾರಣದಿಂದಾಗಿ ಪಾಲ್ಕಿ ಗುಂಡು ಎಂಬ ಹೆಸರು ಬಂದಿದೆ. 
  • ಅನೆಗುಂಡಿ: ಅನೆಗುಂಡಿ ಹಂಪಿಯಲ್ಲಿ ತುಂಗಭದ್ರಾ ನದಿಯ ಇನ್ನೊಂದು ಬದಿಯಲ್ಲಿರುವ ಒಂದು ಐತಿಹಾಸಿಕ ಪಟ್ಟಣವಾಗಿದೆ, ಇದು ಹಂಪಿ ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಭಾಗವಾಗಿದೆ. ಕಿಶ್ಕಿಂದೆ ಎಂದೂ ಕರೆಯಲ್ಪಡುವ ಅನೆಗುಂಡಿ ಹಲವಾರು ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ  ಅಂಜನಾದ್ರಿ ಬೆಟ್ಟ, ಅನೆಗುಂಡಿ ಕೋಟೆ, ಗಗನ್ ಮಹಲ್, ಸನಾಪುರ ಸರೋವರ, ಪಂಪ ಸರೋವರ, ಕೃಷ್ಣದೇವರಾಯ ಸಮಾಧಿ ಇತ್ಯಾದಿಗಳು ಆನೆಗುಂಡಿಯ ಪ್ರಮುಖ ಆಕರ್ಷಣೆಗಳು. ಹಂಪಿಗೆ ಬರುವ ಹೆಚ್ಚಿನ ಪ್ರವಾಸಿಗರು ತೆಪ್ಪ ಬಳಸಿ ತುಂಗಭದ್ರಾ ನದಿಯನ್ನು ದಾಟಿ ಆಂಗೆಗುಂಡಿಗೂ ಭೇಟಿ ನೀಡುತ್ತಾರೆ.
ಧಾರ್ಮಿಕ ಸ್ಥಳಗಳು
  • ಕುಕ್ನೂರ್: ಕುಕ್ನೂರ್ ಇಟಗಿಯಿಂದ 6 ಕಿ.ಮೀ ಉತ್ತರಕ್ಕೆ ಇರುವ ಹಳ್ಳಿಯಾಗಿದ್ದು, ನವಲಿಂಗ ದೇವಸ್ಥಾನಕ್ಕೆ ಜನಪ್ರಿಯವಾಗಿದೆ. ನವಲಿಂಗ ದೇವಾಲಯ ಸಂಕೀರ್ಣವನ್ನು 9 ನೇ ಶತಮಾನದಲ್ಲಿ ರಾಷ್ಟ್ರಕೂಟ ರಾಜವಂಶದ ರಾಜ ಅಮೋಘವರ್ಷನ ಕಾಲದಲ್ಲಿ ನಿರ್ಮಿಸಲಾಗಿತ್ತು.
  • ಇಟಗಿ: ಇಟಗಿ ಕೊಪ್ಪಳ ಜಿಲ್ಲೆಯ ಜನಪ್ರಿಯ ಹಳ್ಳಿಯಾಗಿದ್ದು, ಮಹಾದೇವ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಇಟಗಿಯ ಮಹಾದೇವ ದೇವಾಲಯವು 12 ನೇ ಶತಮಾನದ ಅದ್ಭುತ ವಿನ್ಯಾಸ ಹೊಂದಿದೆ ಮತ್ತು ಚಾಲುಕ್ಯ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದೆ. 12ನೇ ಶತಮಾನದಲ್ಲಿ ದೊರೆತ ಶಾಸನಗಳಲ್ಲಿ ಇಟಗಿ ಮಹಾದೇವ ದೇವಸ್ಥಾನವನ್ನು "ದೇವಾಲಯಗಳ ಚಕ್ರವರ್ತಿ" ಎಂದು ಹೆಸರಿಸಲಾಗಿದೆ.
  • ಕನಕಗಿರಿ: ಕೊಪ್ಪಳ ಜಿಲ್ಲೆಯ ಕನಕಗಿರಿ 16 ನೇ ಶತಮಾನದ ವಿಷ್ಣುವಿಗೆ ಅರ್ಪಿತವಾದ ಕನಕ ಚಲಪತಿ ದೇವಸ್ಥಾನಕ್ಕೆ ಜನಪ್ರಿಯವಾಗಿದೆ. ಕನಕಗಿರಿಯನ್ನು ಹಿಂದೆ ಸುವರ್ಣಗಿರಿ ಎಂದು ಕರೆಯಲಾಗುತ್ತಿತ್ತು. ಕನಕಗಿರಿ ಕ್ರಿ.ಪೂ 4 ಮತ್ತು 2 ನೇ ಶತಮಾನದ ನಡುವೆ ಭಾರತೀಯ ಉಪಖಂಡವನ್ನು ಆಳಿದ ಮೌರ್ಯ ಸಾಮ್ರಾಜ್ಯದ ದಕ್ಷಿಣ ಭಾಗದ ರಾಜಧಾನಿ. ಕನಕಗಿರಿ ನಗರದ ಹೊರವಲಯದಲ್ಲಿರುವ ರಾಜ ಮನೆತನದ ಸ್ನಾನಗೃಹ  ಇನ್ನೊಂದು ಪ್ರಮುಖ ಆಕರ್ಷಣೆಯಾಗಿದೆ. 
  • ಹುಲಿಗೆಮ್ಮ ದೇವಸ್ಥಾನ: ತುಂಗಭದ್ರಾ ನದಿಯ ದಡದಲ್ಲಿರುವ ಕೊಪ್ಪಳ ನಗರದಿಂದ 24 ಕಿ.ಮೀ ದೂರದಲ್ಲಿರುವ 13ನೇ ಶತಮಾನದ ದೇವಾಲಯ.
  • ಗವಿಮಠ ದೇಗುಲ: ಕೊಪ್ಪಳ ನಗರದೊಳಗೆ ಇರುವ  ಪ್ರಮುಖ ದೇವಸ್ಥಾನ. ಅಶೋಕನ ಅವಧಿಯ ಇನ್ನೊಂದು ಶಿಲಾ ಶಾಸನ ಇಲ್ಲಿ ದೊರೆತಿದೆ.
ಇತರ ಆಕರ್ಷಣೆಗಳು
  • ನವ ಬೃಂದಾವನ: ತುಂಗಭದ್ರಾ ನದಿಯಲ್ಲಿರುವ ಸಣ್ಣ ದ್ವೀಪ, 9 ಸಂತರ ಸಮಾಧಿಗಳನ್ನು ಹೊಂದಿದೆ.
  • ಗಂಗಾವತಿ: ಕೃಷಿ ಸಂಶೋಧನಾ ಸಂಸ್ಥೆ ಮತ್ತು ವಿರೂಪಾಕ್ಷ ದೇವಾಲಯಗಳಿವೆ.
  • ಕಿನಾಳ: ಮರದ ವಿಗ್ರಹಗಳು, ಆಟಿಕೆಗಳು ಮತ್ತು ನಾಟಕೀಯ ಸಲಕರಣೆಗಳ ತಯಾರಿಕೆಗೆ ಹೆಸರುವಾಸಿಯಾದ ಕೊಪ್ಪಳದಿಂದ 13 ಕಿ.ಮೀ ದೂರದಲ್ಲಿರುವ ಒಂದು ಪಟ್ಟಣ.

Tour Location

ಕೊಪ್ಪಳ ಬೆಂಗಳೂರಿನಿಂದ 361 ಕಿ.ಮೀ ಮತ್ತು ಹುಬ್ಬಳ್ಳಿಯಿಂದ 120 ಕಿ.ಮೀ ದೂರದಲ್ಲಿದೆ.
ಬಳ್ಳಾರಿ ಸಮೀಪ ಇರುವ ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣವು ಕೊಪ್ಪಳಕ್ಕೆಹತ್ತಿರದ ವಿಮಾನ ನಿಲ್ದಾಣವಾಗಿದೆ.  (70 ಕಿ.ಮೀ)
ಕೊಪ್ಪಳ ರೈಲ್ವೆ ನಿಲ್ದಾಣವನ್ನು ಹೊಂದಿದೆ ಮತ್ತು ಉತ್ತಮ ರೈಲು ಸಂಪರ್ಕ ಹೊಂದಿದೆ.
ಕೊಪ್ಪಳಕ್ಕೆ  ಬೆಂಗಳೂರು ಮತ್ತು ಕರ್ನಾಟಕದ ಇತರ ಪ್ರಮುಖ ನಗರಗಳಿಂದ ಕೆಎಸ್‌ಆರ್‌ಟಿಸಿ  (ಕ.ರಾ.ರ.ಸಾ.ಸಂ) ಮತ್ತು ಖಾಸಗಿ ಬಸ್ ಸಂಪರ್ಕವಿದೆ.
ಸ್ಥಳೀಯ ಪ್ರಯಾಣಕ್ಕೆ ಆಟೊಗಳು ಹೆಚ್ಚು ಸೂಕ್ತವಾಗಿವೆ. ಜಿಲ್ಲೆಯ ವಿವಿಧ ಆಕರ್ಷಣೆಯನ್ನು ತಲುಪಲು ಪ್ರಮುಖ ಪಟ್ಟಣಗಳಾದ ಕೊಪ್ಪಳ, ಅನೆಗುಂಡಿ, ಗಂಗಾವತಿ, ಕುಷ್ಟಗಿ ನಗರಗಳಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು. ಅನೆಗುಂಡಿಯನ್ನು ಹಂಪಿಯಿಂದ ತೆಪ್ಪದ ಮೂಲಕ ಪ್ರವೇಶಿಸಬಹುದು.
ಪರಿಸರ ಸ್ನೇಹಿ ವಸತಿ ಆಯ್ಕೆಗಳು: ಐಷಾರಾಮಿ ವಸತಿಗಳು: ಮಯೂರ ಭುವನೇಶ್ವರಿ ಕಮಲಾಪುರ ಕಿಷ್ಕಿಂದ ಹೆರಿಟೇಜ್ ರೆಸಾರ್ಟ್ ಮಧ್ಯಮ ಶ್ರೇಣಿಯ ವಸತಿ ಆಯ್ಕೆಗಳು: ಕಡಿಮೆ ಖರ್ಚಿನ ವಸತಿ (ಬಜೆಟ್) ಆಯ್ಕೆಗಳು: ಹೋಟೆಲ್ ಶಿಲ್ಪಾ ಗ್ರಾಂಡ್   ಗ್ರಾಂಡ್ ಪ್ಯಾಲೇಸ್ ರೆಸಿಡೆನ್ಸಿ