Karnataka logo

Karnataka Tourism
GO UP

ಕಲಬುರಗಿ

separator
ಕೆಳಗೆ ಸ್ಕ್ರಾಲ್ ಮಾಡಿ

ಹಿಂದೆ ಗುಲ್ಬರ್ಗಾ ಎಂದು ಕರೆಯಲಾಗುತ್ತಿದ್ದ ಕಲಬುರಗಿ ಕರ್ನಾಟಕದ ಉತ್ತರ ತುದಿಯಲ್ಲಿರುವ  ಜಿಲ್ಲೆ. ಕಲಬುರಗಿ ಬೀದರ್ ಜಿಲ್ಲೆಗಿಂತ ಸ್ವಲ್ಪ ಕೆಳಗೆ, ಬೆಂಗಳೂರಿನಿಂದ ಉತ್ತರಕ್ಕೆ 575 ಕಿ.ಮೀ. ದೂರದಲ್ಲಿದೆ. ಆಗ್ನೇಯದಲ್ಲಿ ತೆಲಂಗಾಣ, ವಾಯುವ್ಯದಲ್ಲಿ ಮಹಾರಾಷ್ಟ್ರ, ಮತ್ತು ದಕ್ಷಿಣದಲ್ಲಿ ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಿವೆ. ಕರ್ನಾಟಕದ  ಏಕೀಕರಣದ  ಮೊದಲು ಕಲಬುರಗಿ ಹೈದರಾಬಾದಿ‌ನ ಭಾಗವಾಗಿತ್ತು.

 

ಮಲಖೇಡವನ್ನು ತಮ್ಮ ರಾಜಧಾನಿಯಾಗಿ ಹೊಂದಿದ್ದ ರಾಷ್ಟ್ರಕೂಟರು ಮತ್ತು ಮೂರು ಶತಮಾನಗಳ ವರೆಗೆ ಕಲಬುರಗಿಯನ್ನು ತಮ್ಮ ರಾಜಧಾನಿಯಾಗಿ ಹೊಂದಿದ್ದ ಬಹಮನಿ ಸುಲ್ತಾನರಿಗೆ ಕಲಬುರಗಿ ನೆಲೆಯಾಗಿತ್ತು. ಕಲಬುರಗಿ ನಗರವು ಚಾಲುಕ್ಯರು, ವಾರಂಗಲ್‌ನ ಕಾಕತೀಯರು ಮತ್ತು ದೆಹಲಿಯ ಸುಲ್ತಾನರ ಆಳ್ವಿಕೆಯಲ್ಲಿತ್ತು. ಕಲಬುರಗಿ ಐತಿಹಾಸಿಕ ಕೋಟೆಗಳಿಗೆ (ಮಲಖೇಡ ಕೋಟೆ, ಕಲಬುರಗಿ ಕೋಟೆಗಳಂತಹವು) ಮತ್ತು ಪ್ರಾಚೀನ ದೇವಾಲಯಗಳಿಗೆ ಜನಪ್ರಿಯವಾಗಿದೆ.

ರಾಗಿ, ಬೇಳೆಕಾಳುಗಳು ಮತ್ತು ಹತ್ತಿ ಕಲಬುರಗಿಯ ಪ್ರಮುಖ ಕೃಷಿ ಉತ್ಪನ್ನಗಳಾಗಿವೆ. ಕಲಬುರಗಿ ನೇಯ್ಗೆ ಕೈಮಗ್ಗಗಳು, ತೈಲ ಗಾಣಗಳು ಮತ್ತು ಇತರ ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದೆ.

ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ  ಕ್ಲಿಕ್ ಮಾಡಿ

ಐತಿಹಾಸಿಕ ತಾಣಗಳು
  • ಕಲಬುರಗಿ (ಗುಲ್ಬರ್ಗಾ) ಕೋಟೆ: ಕಲಬುರಗಿ ಕೋಟೆಯು ಕಲಬುರಗಿ ಪಟ್ಟಣದ ಪ್ರಮುಖ ಆಕರ್ಷಣೆಯಾಗಿದೆ. ಕಲಬುರಗಿ ಕೋಟೆಯನ್ನು ಮೂಲತಃ ವಾರಂಗಲ್ ರಾಜ ಗುಲ್ಚಂದ್ ನಿರ್ಮಿಸಿದನು ಮತ್ತು ನಂತರ ಅದನ್ನು ಅಲಾ-ಉದ್-ದಿನ್ ಬಹಮನಿ ಇನ್ನಷ್ಟು ಭದ್ರಪಡಿಸಿದನು. ಕಲಬುರಗಿ ಕೋಟೆಯು 20 ಎಕರೆ ಪ್ರದೇಶವನ್ನುವ್ಯಾಪಿಸಿದೆ ಮತ್ತು ಕೋಟೆಯ ಹೊರಗಿನ ಗೋಡೆ 3 ಕಿ.ಮೀ ಉದ್ದವಿದೆ. 14 ಮತ್ತು 16 ನೇ ಶತಮಾನದ ನಡುವೆ ಕಲಬುರಗಿಯಲ್ಲಿ ಬಹಮನಿ ಸುಲ್ತಾನರು ಸುದೀರ್ಘ ಆಡಳಿತವನ್ನು ಹೊಂದಿದ್ದರು. ಕಾಲಾನಂತರದಲ್ಲಿ ಕಲಬುರಗಿ ಕೋಟೆ ರಾಷ್ಟ್ರಕೂಟರು, ಚಾಲುಕ್ಯರು, ಕಲ್ಯಾಣಿಯ ಕಲಚೂರಿಗಳು, ದೇವಗಿರಿಯ ಯಾದವರು, ವಿಜಯನಗರ ಸಾಮ್ರಾಜ್ಯ, ಹೊಯ್ಸಳ ಸಾಮ್ರಾಜ್ಯ ಮತ್ತು ದೆಹಲಿಯ ಸುಲ್ತಾನರ ಆಳ್ವಿಕೆಯಲ್ಲಿತ್ತು.
  • ಮಳಖೇಡ ಕೋಟೆ: ಮಲ್ಕೆಡಾವನ್ನು ಹಿಂದೆ ಮಾನ್ಯಖೇತ ಎಂದು ಕರೆಯಲಾಗುತ್ತಿತ್ತು, ಇದು ರಾಷ್ಟ್ರಕೂಟ ರಾಜವಂಶದ ರಾಜಧಾನಿಯಾಗಿತ್ತು, ರಾಷ್ಟ್ರಕೂಟರು 9 ಮತ್ತು 10 ನೇ ಶತಮಾನದಲ್ಲಿ ಡೆಕ್ಕನ್ ಪ್ರದೇಶವನ್ನು ಆಳಿದ್ದರು. ರಾಜ ಅಮೋಘ ವರ್ಷ I ರಾಜಧಾನಿಯನ್ನು ಮಯೂರ ಖಾನಿಯಿಂದ ಮಾನ್ಯಖೇತಕ್ಕೆ ಸ್ಥಳಾಂತರಿಸಿದನು. ಮಲ್ಕೆಡಾ ಕೋಟೆಯ ಪ್ರಮುಖ ಆಕರ್ಷಣೆಗಳಲ್ಲಿ ದಪ್ಪವಾದ ಹೊರಗಿನ ಗೋಡೆಗಳು (20 ಅಡಿ ಎತ್ತರ, ಶಹಾಬಾದ್ ಕಲ್ಲುಗಳು ಎಂದು ಕರೆಯಲ್ಪಡುವ ಸುಣ್ಣದ ಕಲ್ಲುಗಳಿಂದ ನಿರ್ಮಿಸಲಾದವು), ಮರದ ಬಾಗಿಲುಗಳ ಅವಶೇಷಗಳನ್ನು ಹೊಂದಿದ ಮುಖ್ಯ ದ್ವಾರ, ಕಿರಿದಾದ ಮೆಟ್ಟಿಲುಗಳ ಮೂಲಕ ತಲುಪಬೇಕಾದ ಕಾವಲು ಗೋಪುರಗಳು, ಹಳೆಯ ಹನುಮಾನ್ ದೇವಾಲಯ ಮತ್ತು ಮಲ್ಕೆಡಾ ಕೋಟೆಯೊಳಗಿನ ಎತ್ತರದ ಸ್ಥಳಗಳಿಂದ ಕಾಗಿನಿ ನದಿಯ ವಿಹಂಗಮ ನೋಟಗಳಿಗೆ ಹೆಸರುವಾಸಿಯಾಗಿದೆ.
  • ಸನ್ನತಿ: 1986ರಲ್ಲಿ ಹಲವಾರು ಪ್ರಾಚೀನ ಲಿಪಿಗಳ ಉತ್ಕ್ಷೇತನದೊಂದಿಗೆ ಸನ್ನತಿ ಬೆಳಕಿಗೆ ಬಂದಿತು. ಕೆಲವು ಶಾಸನಗಳು, ಬರಹಗಳು 2000 ವರ್ಷ ಹಿಂದಿನವು. ಸನ್ನತಿ ಗುಲ್ಬರ್ಗ (ಕಲಬುರಗಿ) ಜಿಲ್ಲೆಯ ಚಿತಾಪುರ ತಾಲ್ಲೂಕಿನ ಭೀಮಾ ನದಿಯ ದಡದಲ್ಲಿದೆ. ಸನ್ನತಿ ಚಂದ್ರಲ ಪರಮೇಶ್ವರಿ ದೇವಸ್ಥಾನಕ್ಕೂ ಹೆಸರುವಾಸಿಯಾಗಿದೆ. ಅಶೋಕ ಚಕ್ರವರ್ತಿಯೊಂದಿಗಿನ ಸಂಪರ್ಕವು ಸನ್ನತಿಯನ್ನು ಪ್ರಮುಖ ಬೌದ್ಧ ಧರ್ಮ ತಾಣವನ್ನಾಗಿ ರೂಪಿಸಿತ್ತು.
ಧಾರ್ಮಿಕ ಸ್ಥಳಗಳು
  • ಶರಣ ಬಸವೇಶ್ವರ ದೇವಸ್ಥಾನ: ಶರಣ ಬಸವೇಶ್ವರ ದೇವಸ್ಥಾನವು ಕಲಬುರಗಿ ನಗರದೊಳಗಿನ ಒಂದು ಪ್ರಮುಖ ದೇವಾಲಯವಾಗಿದೆ. ಈ ದೇವಾಲಯವನ್ನು ಪ್ರಖ್ಯಾತ ಹಿಂದೂ ಧಾರ್ಮಿಕ ಗುರು ಮತ್ತು ತತ್ವಜ್ಞಾನಿ ಶ್ರೀ ಶರಣ ಬಸವೇಶ್ವರರ ಸ್ಮರಣಾರ್ಥ ಸ್ಥಾಪಿಸಲಾಗಿದೆ.
  • ಕನಗನಹಳ್ಳಿ: ಭೀಮಾ ನದಿಯ ದಡದಲ್ಲಿರುವ ಸನ್ನತಿಯಿಂದ 3 ಕಿ.ಮೀ ದೂರದಲ್ಲಿರುವ ಕನಗನಹಳ್ಳಿ ಪ್ರಸಿದ್ಧ ಬೌದ್ಧ ಕೇಂದ್ರವಾಗಿದೆ.
  • ಸೇಡಂ: ಸೇಡಂ ಕಲಬುರಗಿ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಒಂದು. ಕಾಗಿನಾ ನದಿಯ ದಂಡೆಯಲ್ಲಿರುವ ಸೇಡಂ ಐತಿಹಾಸಿಕ ಸ್ಮಾರಕಗಳು, ಜೈನ ದೇವಾಲಯಗಳು ಮತ್ತು ಮಸೀದಿಗಳ ಶ್ರೀಮಂತ ಪರಂಪರೆಗೆ ಹೆಸರುವಾಸಿಯಾಗಿದೆ. ಸೇಡಂನ ಹೆಚ್ಚಿನ ದೇವಾಲಯಗಳನ್ನು ಕ್ರಿ.ಶ 10 ಮತ್ತು 12 ನೇ ಶತಮಾನದ ನಡುವೆ ಕಲ್ಯಾಣ ಚಾಲುಕ್ಯರ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ. ಪಂಚಲಿಂಗೇಶ್ವರ ದೇವಸ್ಥಾನ ಸಂಕೀರ್ಣ, ಮಣಿಕೇಶ್ವರ ದೇವಸ್ಥಾನ ಮತ್ತು ಮಾರುಲಿಂಗ ದೇವಸ್ಥಾನ ಸೇಡಂನ ಅತ್ಯಂತ ಗಮನಾರ್ಹ ದೇವಾಲಯಗಳಾಗಿವೆ.
  • ಛಾಯಾಭಗವತಿ: ಸುರುಪುರದ ನೈರುತ್ಯಕ್ಕೆ 65 ಕಿ.ಮೀ ದೂರದಲ್ಲಿರುವ ಛಾಯಾಭಗವತಿ 100ಕ್ಕೂ ಹೆಚ್ಚು ಪುಷ್ಕರಿಣಿಗಳನ್ನು ಹೊಂದಿರುವ ಯಾತ್ರಾ ಕೇಂದ್ರವಾಗಿದೆ ಮತ್ತು ಛಾಯಾಭಗವತಿ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಛಾಯಾಭಗವತಿ ಕೃಷ್ಣ ನದಿಯ ದಡದಲ್ಲಿರುವ ಒಂದು ಸುಂದರವಾದ ಸ್ಥಳವಾಗಿದೆ.
  • ಗಣಗಪುರ: ಗಣಗಪುರ ಭಗವಾನ್ ದತ್ತಾತ್ರೇಯ ದೇವಸ್ಥಾನಕ್ಕೆ ಜನಪ್ರಿಯವಾಗಿದೆ. ಗಣಗಪುರ ಕಲಬುರಗಿಯಿಂದ 38ಕಿ.ಮೀ ದೂರದಲ್ಲಿದೆ.
  • ಅಲಂದ: ಅಲಂದ ಕಲಬುರಗಿಯಿಂದ 45ಕಿ.ಮೀ ದೂರದಲ್ಲಿರುವ ಪಟ್ಟಣವಾಗಿದ್ದು, ಇದು ಹಿಂಗುಲ್ ಅಂಬಿಕಾ ದೇವಸ್ಥಾನ, ಶ್ರೀ ಭಾಗ್ಯವಂತಿ ದೇವಸ್ಥಾನ, ಶ್ರೀ ಸಿದ್ದರಾಮೇಶ್ವರ ಮಹಸ್ವಾಮಿಜಿ ಮಠ, ಹಜರತ್ ಖ್ವಾಜಾ ಶೇಖ್ ಮಖ್ದಮ್ ಅಲ್ಲಾವುದ್ದೀನ್ ಅನ್ಸಾರಿ, ಶ್ರೀ ಆಂಜನೇಯ ದೇವಸ್ಥಾನ, ದಾವಲ್ ಮಲಿಕ್ ದರ್ಗಾ ಮತ್ತು ಶ್ರೀ ರೇವಣ ಸಿದ್ಧೇಶ್ವರ ದೇವಸ್ಥಾನಗಳಿಗೆ ಹೆಸರುವಾಸಿಯಾಗಿದೆ.
  • ಜೇವರ್ಗಿ: ಕಲಬುರಗಿಯಿಂದ 42 ಕಿ.ಮೀ ದೂರದಲ್ಲಿರುವ ಜೇವರ್ಗಿ ಎಂಬ ಪಟ್ಟಣ ಬಿಲಾಲ್ ಮಸೀದಿ , ಶ್ರೀದೇವಿ ದೇವಸ್ಥಾನ ಮತ್ತು ಆಂಜನೇಯ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.
  • ಕಲ್ಗಿ: ಕಲಬುರಗಿಯ ಕಲ್ಗಿ ಗ್ರಾಮವು ನರಸಿಂಹ ದೇವಸ್ಥಾನ, ಸಿದ್ಧೇಶ್ವರ ದೇವಸ್ಥಾನ ಮತ್ತು ಜಾಮಿಯಾ ಮಸೀದಿಗೆ ಹೆಸರುವಾಸಿಯಾಗಿದೆ.
  • ಗುರುದ್ವಾರ ಶ್ರೀ ಗುರುನಾನಕ್ ಮಠ: ಕಲಬುರಗಿ ನಗರದೊಳಗೆ ಅಪ್ಪನ ಕೆರೆಯ ತೀರದಲ್ಲಿರುವ ಗುರುದ್ವಾರ ಶ್ರೀ ಗುರುನಾನಕ್ ಮಠವು ಕಲಬುರಗಿಯ ಜನಪ್ರಿಯ ಸಿಖ್ಖರ ಧಾರ್ಮಿಕ ಮತ್ತು ಸಮುದಾಯ ಕೇಂದ್ರವಾಗಿದೆ.
  • ಲ್ಯಾಡಲ್ ಮಾಶಕ್ ದರ್ಗಾ: ಅಲಂದ ಲ್ಯಾಡಲ್ ಮಾಶಕ್ ದರ್ಗಾ ಎಂಬುದು ಅಲಂದ , ಕಲಬುರಗಿಯಲ್ಲಿರುವ ಧಾರ್ಮಿಕ ಸ್ಥಳವಾಗಿದ್ದು, ಅಲ್ಲಾವುದ್ದೀನ್ ಎಂಬ ವ್ಯಕ್ತಿ ಸ್ಥಾಪಿಸಿದ ಸ್ಥಾಪಿಸಿದ, ಈ ದರ್ಗಾವನ್ನು ಲ್ಯಾಡ್ಲ್ ಮಶೈಕ್ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ
  • ಕಲಬುರಗಿ ನಗರದ ದೇವಾಲಯಗಳು: ಶರಣ ಬಸವೇಶ್ವರ ದೇವಸ್ಥಾನ, ಸಾಯಿ ಮಂದಿರ ಮತ್ತು ರಾಮ ಮಂದಿರ.
  • ಬುದ್ಧ ವಿಹಾರ: ಗುಲ್ಬರ್ಗಾ ವಿಶ್ವವಿದ್ಯಾಲಯದ ಬಳಿಯ ಸೇಡಂ ರಸ್ತೆಯಲ್ಲಿರುವ ಬುದ್ಧ ವಿಹಾರ ಕಲಬುರಗಿಯಿಂದ 6 ಕಿ.ಮೀ ದೂರದಲ್ಲಿದೆ, ಇದು 18 ಎಕರೆ ಪ್ರದೇಶದಲ್ಲಿದೆ. ಬುದ್ಧ ವಿಹಾರದಲ್ಲಿ ಮುಖ್ಯ ಕಟ್ಟಡ, ಧ್ಯಾನ ಕೇಂದ್ರ ಮತ್ತು ಭಗವಾನ ಬುದ್ಧನ ದೇವಾಲಯವಿದೆ. ಸಾಂಪ್ರದಾಯಿಕ ಬೌದ್ಧ ವಾಸ್ತುಶಿಲ್ಪದಲ್ಲಿ ಅಮೃತಶಿಲೆಯ ಕಲ್ಲಿನಿಂದ ನಿರ್ಮಿಸಲಾದ ಬುದ್ಧ ವಿಹಾರದ ಗುಮ್ಮಟವು 70 ಅಡಿ ಎತ್ತರ ಮತ್ತು 59 ಅಡಿ ವ್ಯಾಸವನ್ನು ಹೊಂದಿದೆ. ಗುಮ್ಮಟವು ಪಂಚ ಲೋಹದಿಂದ ಮಾಡಿದ ಅಲಂಕಾರಿಕ ಕಳಶವನ್ನು ಹೊಂದಿದೆ. ಬುದ್ಧ ವಿಹಾರದ ನಾಲ್ಕು ಮೂಲೆಗೆಳಲ್ಲಿ ಸಾಮ್ರಾಟ್ ಅಶೋಕನ ಗೌರವಾರ್ಥ ನಾಲ್ಕು 48 ಅಡಿ ಎತ್ತರದ ಅಶೋಕ ಸ್ತಂಭಗಳನ್ನು ಸ್ಥಾಪಿಸಲಾಗಿದೆ.
  • ಖ್ವಾಜಾ ಬಂಡಾ ನವಾಜ್ ದರ್ಗಾ: ಹಜರತ್ ಖ್ವಾಜಾ ಬಂಡಾ ನವಾಜ್ ಗೆಸು ದರಜ್ ಎಂದು ಕೂಡ ಕರೆಯಲ್ಪಡುವ ಸೈಯದ್ ಮುಹಮ್ಮದ್ ಹುಸೇನಿ ಅವರು ಭಾರತದ ಪ್ರಸಿದ್ಧ ಸೂಫಿ ಸಂತರಾಗಿದ್ದರು, ಅವರು ವಿವಿಧ ಧಾರ್ಮಿಕ ಗುಂಪುಗಳ ನಡುವೆ ಸಹಬಾಳ್ವೆ, ಶಾಂತಿ, ಸಹನೆ ಮತ್ತು ಸಾಮರಸ್ಯವನ್ನು ಪ್ರತಿಪಾದಿಸಿದ್ದರು. ಬಹಮನಿ ರಾಜ ಫಿರುಜ್ ಶಹಾ ಬಹಮನಿಯ ಆಹ್ವಾನದ ಮೇರೆಗೆ ಸೂಫಿ ಸಂತರು ಕಲಬುರಗಿಯಲ್ಲಿ ನೆಲೆಸಿದರು. ಮುಂದಿನ 22 ವರ್ಷಗಳವರೆಗೆ ಖ್ವಾಜಾ ಕಲಬುರಗಿಯನ್ನು ತಮ್ಮ ನೆಲೆಯಾಗಿ ಮಾಡಿಕೊಂಡು ಇಲ್ಲಿಂದ ಸಾರ್ವತ್ರಿಕ ಭ್ರಾತೃತ್ವದ ಸಂದೇಶವನ್ನು ಹರಡಿದರು. ಖ್ವಾಜಾ ಬಂಡಾ ನವಾಜ್ ದರ್ಗಾ ಒಂದು ಭವ್ಯವಾದ ಕಟ್ಟಡವಾಗಿದ್ದು, ಇದನ್ನು ಇಂಡೋ-ಸಾರಾಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ ಮತ್ತು ಈ ಎರಡು ಸಂಸ್ಕೃತಿಗಳ ವಿಭಿನ್ನ ಶೈಲಿಗಳನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತದೆ. ಕಮಾನುಗಳು ಬಹಮನಿ ವಾಸ್ತುಶಿಲ್ಪದ ವಿಶೇಷವಾದರೆ, ಗೋಡೆಗಳು ಮತ್ತು ಗುಮ್ಮಟಗಳ ಮೇಲಿನ ವರ್ಣಚಿತ್ರಗಳು ಟರ್ಕಿ ಮತ್ತು ಇರಾನಿನ ಶೈಲಿಯಲ್ಲಿವೆ. ದರ್ಗಾ ಗ್ರಂಥಾಲಯವು ಇತಿಹಾಸ, ಸಾಹಿತ್ಯ ಮತ್ತಿತರ ಹಲವು ವಿಷಯಗಳ ಕುರಿತು ಉರ್ದು, ಪರ್ಷಿಯನ್ ಮತ್ತು ಅರೇಬಿಕ್ ಭಾಷೆಗಳಲ್ಲಿ 10000 ಪುಸ್ತಕಗಳನ್ನು ಸಂಗ್ರಹಿಸಿದೆ.
  • ಮರ್ಥೂರು : ಕಾಶಿ ವಿಶೇಶ್ವರ ದೇವಸ್ಥಾನ ಮತ್ತು ಇತರ ಪ್ರಾಚೀನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ
  • ಮನ್ನೂರು : ಕೇಶವ ದೇವಸ್ಥಾನಕ್ಕೆ ಜನಪ್ರಿಯವಾಗಿದೆ
  • ಅಫ್ಜಲ್‌ಪುರ: 12 ನೇ ಶತಮಾನದ ಮಲ್ಲಿಕಾರ್ಜುನ ದೇವಸ್ಥಾನ, ಮಹಲ್ ಮಸೀದಿ ಮತ್ತು ಪಂಚ ಮಹಲ್ (ಆದಿಲ್‌ಶಾಹಿ ಕಾಲದಿಂದ ಅಫ್ಜಲ್ಖಾನ್ ಮಹಲ್ ಎಂದೂ ಕರೆಯುತ್ತಾರೆ) ಗೆ ಹೆಸರುವಾಸಿಯಾಗಿದೆ, ಈಗ ಪಾಳು ಬಿದ್ದಿದೆ.
ಪ್ರವಾಸಿ ಆಕರ್ಷಣೆಗಳು
  • ಚಿಂಚೋಳಿ ವನ್ಯಜೀವಿ ಅಭಯಾರಣ್ಯ: ಚಿಂಚೋಳಿ ವನ್ಯಜೀವಿ ಅಭಯಾರಣ್ಯವು ದಕ್ಷಿಣ ಭಾರತದ ಮೊದಲ ಒಣಭೂಮಿ ವನ್ಯಜೀವಿ ಅಭಯಾರಣ್ಯವಾಗಿದೆ. 135 ಚದರ ಕಿ.ಮೀ ವಿಸ್ತೀರ್ಣದಲ್ಲಿರುವ ಚಿಂಚೋಳಿ ಅರಣ್ಯವನ್ನು 2011ರಲ್ಲಿ ವನ್ಯಜೀವಿ ಅಭಯಾರಣ್ಯವೆಂದು ಘೋಷಿಸಲಾಯಿತು. ತೋಳಗಳು ಮತ್ತು ಹೈನಾಗಳು ಚಿಂಚೋಳಿ ವನ್ಯಜೀವಿ ಅಭಯಾರಣ್ಯದ ಪ್ರಮುಖ ಜೀವಿಗಳಾಗಿವೆ. ಪಶ್ಚಿಮ ಘಟ್ಟದಲ್ಲಿ ಇರುವ ಕಾಡುಗಳ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಹೈದರಾಬಾದ್-ಕರ್ನಾಟಕ ಪ್ರದೇಶದ ಏಕೈಕ ಪ್ರದೇಶ ಚಿಂಚೋಳಿ ವನ್ಯಜೀವಿ ಅಭಯಾರಣ್ಯ.
  • ಚಂದ್ರಮಪಳ್ಳಿ ಅಣೆಕಟ್ಟು: ಚಂದ್ರಮಪಳ್ಳಿ ಕಲಬುರಗಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ನೀರಾವರಿ ಉದ್ದೇಶಗಳಿಗಾಗಿ ಚಂದ್ರಮಪಳ್ಳಿ ಅಣೆಕಟ್ಟನ್ನು ಸರಳಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ದೋಣಿ ವಿಹಾರವು ಚಂದ್ರಮಪಳ್ಳಿ ಅಣೆಕಟ್ಟು ಪ್ರದೇಶದಲ್ಲಿ ಪ್ರವಾಸಿಗರ ನೆಚ್ಚಿನ ಚಟುವಟಿಕೆಯಾಗಿದೆ.
  • ಕೆಸರಟಗಿ ಉದ್ಯಾನ: ಕಲಬುರಗಿ ನಗರದ ಜನಪ್ರಿಯ ಉದ್ಯಾನವನವಾದ ಕೆಸರಟಗಿ ಉದ್ಯಾನವು ಸುಂದರವಾದ ಹುಲ್ಲುಹಾಸುಗಳು ಮತ್ತು ಹೂವಿನ ಗಿಡಗಳಿರುವ ಉದ್ಯಾನಗಳು ಮತ್ತು ಮಕ್ಕಳ ಆಟದ ಪ್ರದೇಶವನ್ನು ಹೊಂದಿದೆ.
  • ಗೊಟ್ಟಮ್ ಗುಟ್ಟಾ ಅಥವಾ ಗೊಟ್ಟಮ್‌ಗೋಟ ಅರಣ್ಯ: ಗೊಟ್ಟಮ್ ಗುಟ್ಟಾ ತೆಲಂಗಾಣ-ಕರ್ನಾಟಕ ಗಡಿಯಲ್ಲಿ ಚಂದ್ರಮಪಳ್ಳಿಯಿಂದ 7 ಕಿ.ಮೀ ದೂರದಲ್ಲಿದೆ. ಸಾಹಸ ಪ್ರಿಯರಿಗೆ ಮತ್ತು ಚಾರಣಿಗರಿಗೆ ಉತ್ತಮ ತಾಣವಾಗಿದೆ. ಈ ಗ್ರಾಮದಲ್ಲಿ ದುರ್ಗಾ ದೇವಿ, ಸಂತ ಬಕ್ಕಪ್ರಭು ಮತ್ತು ಹನುಮಂತನಿಗೆ ಮೀಸಲಾಗಿರುವ ಮೂರು ದೇವಾಲಯಗಳಿವೆ. ಪರಿಸರ-ಪ್ರವಾಸೋದ್ಯಮ ಯೋಜನೆಯು ಇಲ್ಲಿ ಪ್ರಗತಿಯಲ್ಲಿದೆ.
  • ಯೇತಿ ಪೋಟಾ ಜಲಪಾತ: ಯೇತಿ ಪೊಟಾ ನಾಲೆ ಮತ್ತು ನಜರಾಪುರ ಜಲಪಾತವು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕೊಂಚವರಂ ವನ್ಯಜೀವಿ ಅಭಯಾರಣ್ಯದಲ್ಲಿದೆ. ಮೂರು ಪ್ರತ್ಯೇಕ ಸ್ಥಳಗಳಲ್ಲಿ ಬಂಡೆಗಳ ಮೇಲಿಂದ ಹರಿದು ಬರುವ ನದಿ ಮೂರು ಪ್ರತ್ಯೇಕ ಜಲಪಾತಗಳಂತೆ ಕಂಡು ಬರುತ್ತದೆ. ಜಲಪಾತದ ಸುತ್ತಲಿನ ಬಂಡೆಗಳು ಸೌಂದರ್ಯವನ್ನು ಹೆಚ್ಚಿಸುತ್ತವೆ.

Tour Location

ಕಲಬುರಗಿಗೆ ಕರ್ನಾಟಕದ ಎಲ್ಲೆಡೆಯಿಂದ ವಾಯು, ರೈಲು ಮತ್ತು ರಸ್ತೆ ಮೂಲಕ ಉತ್ತಮ ಸಂಪರ್ಕವಿದೆ. ಕಲಬುರಗಿ ಬೆಂಗಳೂರಿನ ಉತ್ತರಕ್ಕೆ 575 ಕಿ.ಮೀ ದೂರದಲ್ಲಿದೆ.

ಕಲಾಬುರಗಿ ತನ್ನದೇ ಆದ ವಿಮಾನ ನಿಲ್ದಾಣವನ್ನು ಹೊಂದಿದೆ (ನಗರದಿಂದ 13 ಕಿ.ಮೀ) ಆದರೆ ವಿಮಾನ ಸೇವೆಗಳ ಸಂಖ್ಯೆ ಬಹಳ ಕಡಿಮೆ. 200 ಕಿ.ಮೀ ದೂರದಲ್ಲಿರುವ ಹೈದರಾಬಾದ್ ವಿಮಾನ ನಿಲ್ದಾಣವು ಕಲಬುರಗಿಯನ್ನು ತಲುಪಲು ಇನ್ನೊಂದು ಅನುಕೂಲಕರ ವಿಮಾನ ನಿಲ್ದಾಣವಾಗಿದೆ.
ಕಲಬುರಗಿಯಲ್ಲಿ ರೈಲ್ವೆ ನಿಲ್ದಾಣವಿದೆ. ವಾಡಿ ಜಂಕ್ಷನ್ ಕಲಬುರಗಿಯಿಂದ 40 ಕಿ.ಮೀ ದೂರದಲ್ಲಿರುವ ಮತ್ತೊಂದು ಪ್ರಮುಖ ಜಂಕ್ಷನ್ ಆಗಿದೆ
ಕಲಬುರಗಿ ಕರ್ನಾಟಕದ ಪ್ರಮುಖ ನಗರಗಳಿಂದ ಉತ್ತಮ ಬಸ್ ಸಂಪರ್ಕವನ್ನು ಹೊಂದಿದೆ. ಕ.ರಾ.ರ.ಸಾ.ಸಂ ಮತ್ತು ಖಾಸಗಿ ಬಸ್‌ಗಳು ಕಲಬುರಗಿಗೆ ಬಸ್  ಸೇವೆ ಒದಗಿಸುತ್ತವೆ.
ಸ್ಥಳೀಯ ಪ್ರಯಾಣಕ್ಕೆ ಆಟೊಗಳು ಹೆಚ್ಚು ಸೂಕ್ತವಾಗಿವೆ. ಕಲಾಬುರಗಿ, ಅಲಂದ  ಮತ್ತು ಇತರ ಪ್ರಮುಖ ಪಟ್ಟಣಗಳಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು.
ಪರಿಸರ ಸ್ನೇಹಿ ವಸತಿ ಆಯ್ಕೆಗಳು: ಐಷಾರಾಮಿ ವಸತಿ ಆಯ್ಕೆಗಳು: ಸಿಟ್ರಸ್ ಹೋಟೆಲ್  ಮಧ್ಯಮ ಶ್ರೇಣಿಯ ವಸತಿ ಆಯ್ಕೆಗಳು: ಕ್ರಿಸ್ಟಲ್ ಪಾಲ್ಮ್ಸ್ ಹೈವೇ ರೆಸಾರ್ಟ್ ಕಡಿಮೆ ಖರ್ಚಿನ ವಸತಿ (ಬಜೆಟ್) ಆಯ್ಕೆಗಳು: