Karnataka logo

Karnataka Tourism
GO UP

ಸಂತ ಮೇರಿಯ ಇಗರ್ಜಿ, ಬೆಳಗಾವಿ

separator
ಕೆಳಗೆ ಸ್ಕ್ರಾಲ್ ಮಾಡಿ

1869 ರಲ್ಲಿ ನಿರ್ಮಿಸಲಾದ ಸಂತ  ಮೇರಿಯ ಇಗರ್ಜಿ (ಸೇಂಟ್ ಮೇರಿಸ್ ಚರ್ಚ್)ಯನ್ನು ಬೆಳಗಾವಿ ನಗರದ ಕಂಟೋನ್ಮೆಂಟ್ ಪ್ರದೇಶದಲ್ಲಿ ಗೋಕಾಕ್ ಗುಲಾಬಿ ಕಲ್ಲುಗಳಿಂದ ಗೋಥಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಸುಂದರವಾಗಿ ವಿನ್ಯಾಸಗೊಳಿಸಲಾದ ಸಂತ  ಮೇರಿಯ ಇಗರ್ಜಿಯನ್ನು  ಬಾಂಬೆ ಪ್ರೆಸಿಡೆನ್ಸಿಯ ಗವರ್ನರ್ ಕಟ್ಟಿಸಿದ್ದರು. 

ಬೆಳಗಾವಿ‌ಯ  ಸಂತ  ಮೇರಿಯ ಇಗರ್ಜಿಯ  ಮುಖ್ಯಾಂಶಗಳು

– ಸಂತ  ಮೇರಿಯ ಇಗರ್ಜಿ ಪಶ್ಚಿಮಕ್ಕೆ ಮುಖ ಮಾಡಿದೆ, ಸೂರ್ಯನ ಬೆಳಕು ಬೆಳಿಗ್ಗೆ ಗಾಜಿನ ಕಿಟಕಿಗಳ ಮೂಲಕ ಒಳಬಂದು ಪ್ರಾರ್ಥನೆ ಸಮಯದಲ್ಲಿ ವರ್ಣರಂಜಿತ ಚಿತ್ತಾರವನ್ನು ಮೂಡಿಸುತ್ತದೆ.  

– ತೇಗ ಮತ್ತು ಅಮೃತಶಿಲೆ ಬಳಸಿ ತಯಾರಿಸಿದ ವೇದಿಕೆ 

–  20 ಅಡಿ ಎತ್ತರ, 8 ಅಡಿ ಅಗಲದ ಇಟಲಿಯ ಗಾಜಿನ ಕಿಟಕಿ- ಇದು ವೇದಿಕೆಗೆ ಉತ್ತಮ ಹಿನ್ನೆಲೆ ನೀಡುತ್ತದೆ. 12 ಗಾಜಿನ ಚೌಕಟ್ಟುಗಳಲ್ಲಿ ಯೇಸುಕ್ರಿಸ್ತನ ಜೀವನ ಮತ್ತು ಘಟನೆಗಳನ್ನು ಚಿತ್ರಿಸಲಾಗಿದೆ.

– ಬಾಗಿದ ಕಮಾನುಗಳು, ಸುಂದರ ಕಂಬಗಳು ಮತ್ತು ಛಾವಣಿ

– ಕಲ್ಲಿನ ಗೋಡೆಗಳ ಮೇಲೆ ಬೃಹತ್ ಗುಲಾಬಿ ದಳದ ಆಕಾರದ ಕಿಟಕಿಗಳು

ಸಮಯ: ಬೆಳಗಾವಿ‌ಯ ಸಂತ  ಮೇರಿಯ ಇಗರ್ಜಿ ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ತೆರೆದಿರುತ್ತದೆ. 

ಹತ್ತಿರ: ಬೆಳಗಾವಿ ಕೋಟೆ (4 ಕಿ.ಮೀ), ದಾಂಡೇಲಿ (88 ಕಿ.ಮೀ), ಭೀಮಗಡ ವನ್ಯಜೀವಿ ಅಭಯಾರಣ್ಯ (40 ಕಿ.ಮೀ), ಗೋಕಾಕ್ ಜಲಪಾತ (60 ಕಿ.ಮೀ) ಮತ್ತು ಹಿಡ್ಕಲ್ ಜಲಾಶಯ (50 ಕಿ.ಮೀ) ಬೆಳಗಾವಿ ಸುತ್ತ ಮುತ್ತ ಭೇಟಿ ನೀಡಬಹುದಾದ ಕೆಲವು ಆಕರ್ಷಣೆಗಳು.

ತಲುಪುವುದು ಹೇಗೆ? ಸಂತ  ಮೇರಿಯ ಇಗರ್ಜಿ ಬೆಂಗಳೂರಿನಿಂದ 507 ಕಿ.ಮೀ ಮತ್ತು ಬೆಳಗಾವಿ ನಗರ ಕೇಂದ್ರದಿಂದ 3 ಕಿ.ಮೀ ದೂರದಲ್ಲಿದೆ. ಬೆಳಗಾವಿಯಲ್ಲಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಬೆಂಗಳೂರು ಹಾಗೂ ಕರ್ನಾಟಕದ ಇತರ ಭಾಗಗಳಿಂದ ಉತ್ತಮ ಬಸ್ ಸೇವೆ ಇದೆ. ಬೆಳಗಾವಿ ನಗರದ ಯಾವುದೇ ಭಾಗದಿಂದ ಸಂತ  ಮೇರಿಯ ಇಗರ್ಜಿ ತಲುಪಲು ಆಟೋವನ್ನು ಬಾಡಿಗೆಗೆ ಪಡೆಯಬಹುದು.

ವಸತಿ: ಬೆಳಗಾವಿ ನಗರವು ವಿವಿಧ ಶ್ರೇಣಿಯ ಹಲವು ವಸತಿಗೃಹಗಳನ್ನು ಹೊಂದಿದೆ.

Tour Location

Leave a Reply

Accommodation
Meals
Overall
Transport
Value for Money