Karnataka logo

Karnataka Tourism
GO UP

ಬಳ್ಳಾರಿ ಕೋಟೆ

separator
ಕೆಳಗೆ ಸ್ಕ್ರಾಲ್ ಮಾಡಿ

ಬಳ್ಳಾರಿ ಕೋಟೆ ವಿಜಯನಗರ ಯುಗದ(14 ನೇ ಶತಮಾನ) ಕೋಟೆಯಾಗಿದ್ದು, ಬಳ್ಳಾರಿ ನಗರದಲ್ಲಿನ  “ಬಳ್ಳಾರಿ ಗುಡ್ಡ” ಎಂಬ ಬೆಟ್ಟದ ಮೇಲೆ ಇದೆ.

ಇತಿಹಾಸ: ಬಳ್ಳಾರಿ ಕೋಟೆಯನ್ನು ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಹಳಮಪ್ಪ ನಾಯಕ ಎಂಬ ಪಾಳೆಯಗಾರ ನಿರ್ಮಿಸಿದ. ಹೈದರ್ ಅಲಿ 18 ನೇ ಶತಮಾನದಲ್ಲಿ ಈ ಪ್ರದೇಶವನ್ನು ವಶಪಡಿಸಿಕೊಂಡು ಇನ್ನೊಂದು ಸುತ್ತು ಕೋಟೆಯನ್ನು (ಕೆಳ ಕೋಟೆ) ನಿರ್ಮಿಸುವ ಮೂಲಕ ಕೋಟೆಯ ಪ್ರದೇಶವನ್ನು ವಿಸ್ತರಿಸಿದರು. ಜೊತೆಗೆ ಮೂಲ ಬಳ್ಳಾರಿ ಕೋಟೆಯನ್ನು ನವೀಕರಿಸಲು / ಬಲಪಡಿಸಲು (ಮೇಲಿನ ಕೋಟೆ ಎಂದು ಕರೆಯಲಾಗುತ್ತದೆ) ಫ್ರೆಂಚ್ ಎಂಜಿನಿಯರ್‌ಗಳನ್ನು ನಿಯೋಜಿಸಲಾಗಿತ್ತು ಎಂದು ನಂಬಲಾಗಿದೆ. 

ಮೇಲಿನ ಕೋಟೆ: ಬಳ್ಳಾರಿ ಬೆಟ್ಟದ ಮೇಲಿನ ಕೋಟೆಯಲ್ಲಿ ಇಗರ್ಜಿ, ದೇವಾಲಯ, ಸೈನಿಕರಿಗೆ ಬೇಕಾದ ಬ್ಯಾರಕ್‌ಗಳು, ನೀರಿನ ಸಂಗ್ರಹಕ್ಕಾಗಿ ಆಳವಾದ ಬಾವಿಗಳು ಇವೆ.

ಕೆಳಗಿನ ಕೋಟೆ: ಕೆಳಗಿನ ಕೋಟೆಯಲ್ಲಿ ಎರಡು ಪ್ರವೇಶ ದ್ವಾರಗಳಿವೆ, ಪಶ್ಚಿಮ ಮತ್ತು ಪೂರ್ವ ಭಾಗದಲ್ಲಿ ತಲಾ ಒಂದು. ಕೆಳಗಿನ ಕೋಟೆಯನ್ನು ಹಲವಾರು ಬುರುಜುಗಳಿಂದ ಭದ್ರಪಡಿಸಲಾಗಿದೆ, ಅಲ್ಲದೆ ಸುತ್ತಲೂ ಆಳವಾದ ಹೊಂಡಗಳಿಂದ ( ನೀರಿನಿಂದ ತುಂಬಿರುತ್ತವೆ ಮತ್ತು ಮೊಸಳೆಗಳುರುತ್ತವೆ) ಇನ್ನಷ್ಟು ಅಭೇದ್ಯಗೊಳಿಸಲಾಗಿದೆ.  ಕೋಟೆ ಅಂಜನೇಯ ದೇವಸ್ಥಾನವನ್ನು (ಹನುಮಾನ್ ದೇವಸ್ಥಾನ) ಕೆಳ ಕೋಟೆಯಲ್ಲಿ ಕಾಣಬಹುದು. ಕೆಳಗಿನ ಕೋಟೆಯಲ್ಲಿ ಯುದ್ಧದ ಸಂದರ್ಭದಲ್ಲಿ ನಿರಾಶ್ರಿತರು ಅಥವಾ ಗ್ರಾಮಸ್ಥರಿಗೆ ಸ್ಥಳಾವಕಾಶವಿದೆ.

ಹತ್ತಿರ: ಬಳ್ಳಾರಿ ಕೋಟೆಯೊಂದಿಗೆ ಹಂಪಿ (60 ಕಿ.ಮೀ), ದಾರೋಜಿ ಕರಡಿ ಅಭಯಾರಣ್ಯ (43 ಕಿ.ಮೀ) ಮತ್ತು ಟಿಬಿ ಅಣೆಕಟ್ಟು (66 ಕಿ.ಮೀ)ಗಳಿಗೆ ಭೇಟಿ ನೀಡಬಹುದು.

ತಲುಪುವುದು ಹೇಗೆ: ಬೆಂಗಳೂರಿನಿಂದ 309 ಕಿ.ಮೀ ಮತ್ತು ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣದಿಂದ 35 ಕಿ.ಮೀ ದೂರದಲ್ಲಿದೆ. ಬಳ್ಳಾರಿ ಜಂಕ್ಷನ್ ರೈಲ್ವೆ ನಿಲ್ದಾಣವು ಬಳ್ಳಾರಿ ಕೋಟೆಯಿಂದ ಕೇವಲ 2 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ರೈಲು ಮತ್ತು ರಸ್ತೆಯ ಮೂಲಕ ಬಳ್ಳಾರಿಗೆ ಉತ್ತಮ ಸಂಪರ್ಕವಿದೆ. ಬಳ್ಳಾರಿ ನಗರದಿಂದ ಕೋಟೆಯನ್ನು ತಲುಪಲು ಆಟೋವನ್ನು ಬಾಡಿಗೆಗೆ ಪಡೆಯಬಹುದು.

ವಸತಿ: ಬಳ್ಳಾರಿ ನಗರವು ಪ್ರತಿ ಬಜೆಟ್ ವರ್ಗಕ್ಕೆ ತಕ್ಕಂತೆ ಸಾಕಷ್ಟು ಹೋಟೆಲ್ ಆಯ್ಕೆಗಳನ್ನು ಹೊಂದಿದೆ.

 

Tour Location

 

Leave a Reply

Accommodation
Meals
Overall
Transport
Value for Money