Karnataka logo

Karnataka Tourism
GO UP

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ

separator
ಕೆಳಗೆ ಸ್ಕ್ರಾಲ್ ಮಾಡಿ

ಇಂದು ನಾವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬಗ್ಗೆ ತಿಳಿದುಕೊಳ್ಳೋಣ.ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನವು260.51 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಈ ಉದ್ಯಾನವನದಲ್ಲಿ ಸಿಂಹ ಮತ್ತು ಹುಲಿಗಳ ಸಫಾರಿಯನ್ನು ನಡೆಸುತ್ತಾರೆ. ಅಷ್ಟೇ ಅಲ್ಲದೆ ಪ್ರಕೃತಿಯಲ್ಲಿರುವ ಸೌಂದರ್ಯವನ್ನು ಪ್ರಕೃತಿಯ ಮಡಿಲಲ್ಲಿರುವ ಪ್ರಾಣಿ-ಪಕ್ಷಿ,ಮರ-ಗಿಡಗಳು, ಗಿಡ-ಬಳ್ಳಿಗಳು ಇವುಗಳನ್ನೆಲ್ಲಾ ನೈಸರ್ಗಿಕವಾಗ ಇಲ್ಲಿ ಮರು ಸೃಷ್ಟಿಸುತ್ತಾರೆ. ಇಲ್ಲಿ ನೀವು ದೈತ್ಯ ಬೆಕ್ಕುಗಳು ವಿವಿಧ ಬಗೆಯ ಪ್ರಾಣಿಗಳನ್ನು ಹತ್ತಿರದಿಂದ ಕಾಣಬಹುದು.ಅಷ್ಟೇ ಅಲ್ಲದೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಹಾವು ಉದ್ಯಾನವನ, ಚಿಟ್ಟೆ ಉದ್ಯಾನವನ, ಮೃಗಾಲಯ ಮತ್ತು ಮಕ್ಕಳಿಗಾಗಿ ಪ್ರಕೃತಿ ಶಿಬಿರವಿದೆ. ಉದ್ಯಾನವನದ ಪಕ್ಕದಲ್ಲಿ ಬನ್ನೇರುಘಟ್ಟ ನೇಚರ್ ಕ್ಯಾಂಪ್ ಇದೆ,ಇದು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ಗಳ ಆಡಳಿತಕ್ಕೆ ಒಳಪಟ್ಟಿದೆ ,ಇದು ಗುಡಾರಗಳು, ಲಾಗ್-ಗುಡಿಸಲುಗಳು ಮತ್ತು ವಸತಿ ನಿಲಯ ಸೌಲಭ್ಯಗಳನ್ನು ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ, ಕೆಳಕಂಡ ವೆಬ್ ಸೈಟ್ ಗೆ ಬೇಟೆ ನೀಡಿ Jungle Lodges 

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿನ ವಿವಿಧ ಆಕರ್ಷಣೆಗಳು 

ಮೃಗಾಲಯ: ಬನ್ನೇರುಘಟ್ಟ ಉದ್ಯಾನವನದ ಮೃಗಾಲಯವು 12 ಹೆಕ್ಟೇರ್ ಪ್ರದೇಶವನ್ನು  ವ್ಯಾಪಿಸಿದೆ ಮತ್ತು ನಾಗರಹಾವು , ಪ್ಯಾಂಥರ್ಸ್, ಮೊಸಳೆಗಳು, ಕರಡಿಗಳು, ಜಿಂಕೆ ಮತ್ತು ಪಕ್ಷಿಗಳಂತಹ ಹಲವಾರು ಕಾಡು ಪ್ರಾಣಿಗಳನ್ನು ಇಲ್ಲಿ ಕಾಣಬಹದು.

ಸಿಂಹದ ಸಫಾರಿ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ 19 ಸಿಂಹಗಳನ್ನು 5 ಹೆಕ್ಟೇರು  ಪ್ರದೇಶದಲ್ಲಿ ಸಾಕಲಾಗಿದೆ ಹಾಗೂ ಸಿಂಹದ ಸಫಾರಿಯ ಸಮಯದಲ್ಲಿ ನಾವು ಸಿಂಹಗಳನ್ನು ಹತ್ತಿರದಿಂದಲೇ ನೋಡಬಹುದು.

ಹುಲಿಯ ಸಫಾರಿ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಕೇವಲ ಕರಡಿ ಹಾಗೂ ಸಿಂಹ ಇಷ್ಟೇ ಅಲ್ಲದೆ ಹುಲಿಗಳನ್ನು ಸಹ ಸಾಕಲಾಗುತ್ತದೆ ಅದರಲ್ಲೂ ಕೂಡ ಈ ಮೃಗಾಲಯದಲ್ಲಿ 7 ಬಿಳಿ ಹುಲಿಗಳಿವೆ ಹಾಗೂ 33 ಸಾಮಾನ್ಯ ಹುಲಿಗಳಿವೆ. ಇವುಗಳನ್ನು ಪ್ರವಾಸಿಗರ ಮುಂದೆ ಪ್ರದರ್ಶಿಸುವುದು ವಿಭಿನ್ನವಾಗಿದೆ ಅದು ಹೇಗೆಂದರೆ ಅಲ್ಲಿರುವ ಹುಲಿಗಳನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸುತ್ತಾರೆ ಅದರಲ್ಲಿ ಎರಡು ಗುಂಪುಗಳ ಹುಲಿಯು ಆವರಣದಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದರೆ ಇನ್ನು ಮೂರನೇ ಗುಂಪಿನ ಹುಲಿಯು ಪ್ರವಾಸಿಗರ ವೀಕ್ಷಣೆಗಾಗಿ ಮೀಸಲಿರಿಸಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿರುತ್ತಾರೆ.

ಚಿಟ್ಟೆಗಳ  ಪಾರ್ಕ್: ಈ ಮೃಗಾಲಯವು ಕೇವಲ ಭಯಂಕರವಾದ ಪ್ರಾಣಿಗಳಿಗೆ ಮಾತ್ರ ಮೀಸಲಲ್ಲ ಇಲ್ಲಿ ಹಲವಾರು ರೀತಿಯ ಬಣ್ಣ ಬಣ್ಣದ ಚಿಟ್ಟೆಗಳನ್ನು ಹೊಂದಿರುವ ಚಿಟ್ಟೆಗಳ ಪಾರ್ಕ್ ಇದೆ.  ಇದು 7.5 ಎಕರೆ ವಿಸ್ತಾರದಲ್ಲಿ ವಿಶಿಷ್ಟ ಜಾತಿಯ ಚಿಟ್ಟೆಗಳಿಗಾಗಿ ಮೀಸಲಾಗಿರುತ್ತದೆ, ಚಿಟ್ಟೆ ಸಂರಕ್ಷಣಾಲಯ, ವಸ್ತುಸಂಗ್ರಹಾಲಯ, ಸಂಶೋಧನಾ ಪ್ರಯೋಗಾಲಯ ಮತ್ತು ಕ್ಯೂರಿಯೊ ಅಂಗಡಿಯನ್ನು ಹೊಂದಿದೆ. ಚಿಟ್ಟೆ ಉದ್ಯಾನವನದಲ್ಲಿ 48 ಜಾತಿಯ ಚಿಟ್ಟೆಗಳು ಇವೆ ಗುರುತಿಸಲಾಗಿದೆ.ಚಿಕ್ಕ ಮಕ್ಕಳಿಗೆ ಈ ಉದ್ಯಾನವನವು ಹೆಚ್ಚು ಖುಷಿಯನ್ನು ಕೊಡುತ್ತದೆ.

 

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಮಯ:

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಮಂಗಳವಾರ ವನ್ನು ಬಿಟ್ಟು ಮಿಕ್ಕ ಎಲ್ಲಾ ದಿನವೂ ತೆರೆದಿರುತ್ತದೆ ,ಮಂಗಳವಾರ ವೀಕ್ಷಣೆಗೆ ಅವಕಾಶವಿಲ್ಲಾ ಮತ್ತು ಅದು ರಜೆಯ ದಿನವಾಗಿರುತ್ತದೆ ಹಾಗೂ ಪ್ರವಾಸಿಗರು  ಪ್ರಾಣಿ ಪ್ರಿಯರಾಗಿದ್ದರೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಾಣಿಗಳನ್ನು ದತ್ತು ಪಡೆಯಲು ಅವಕಾಶವಿದೆ. ವಿವರಗಳಿಗಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಹೆಚ್ಚಿನ ಮಾಹಿತಿ ಪಡೆಯಿರಿ. Banner Ghatta Biological Park

 

ಸಫಾರಿ ಸಮಯ ಮತ್ತು ವೆಚ್ಚ:

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಮಾಡುವುದೆಂದರೆ ಒಂದು ಕುತೂಹಲದ ಸಂಗತಿ ಜೀಪ್ ಸಫಾರಿಗೆ 3500ರೂ (ಇದು ಮೃಗಾಲಯ + ಸಫಾರಿ + ಬಟರ್‌ಫ್ಲೈ ಪಾರ್ಕ್ + ಕ್ಯಾಮೆರಾವನ್ನು ಒಳಗೊಂಡಿರುತ್ತದೆ), ಎಸಿ ಬಸ್ ಸಫಾರಿಯ ಬೆಲೆ  ವಯಸ್ಕರಿಗೆ 500  ಮತ್ತು ಮಕ್ಕಳಿಗೆ 300 ರೂಪಾಯಿಗಳಾಗಿದ್ದರೆ , ಎಸಿ ಅಲ್ಲದ ಬಸ್ ಸಫಾರಿಯ ಬೆಲೆ ವಯಸ್ಕರಿಗೆ 280 ರೂ ಮತ್ತು 140 ರೂ ಮಕ್ಕಳಿಗೆ  ರೂಪಾಯಿಗಳಾಗಿರುತ್ತದೆ (ಇದು ಮೃಗಾಲಯ ಮತ್ತು ಸಫಾರಿಗಳನ್ನು ಒಳಗೊಂಡಿರುತ್ತದೆ ).

ಬೆಳಿಗ್ಗೆ 9:30 ರಿಂದ ಸಂಜೆ 5 ರವರೆಗೆ ಉದ್ಯಾನವನ ತೆರೆದಿರುತ್ತದೆ. ಸಫಾರಿ ಸಮಯಗಳು ಬೆಳಿಗ್ಗೆ 10 ರಿಂದ 4: 30 ರವರೆಗೆ. ದೋಣಿ ವಿಹಾರಕ್ಕೆ ಪ್ರತಿ ವ್ಯಕ್ತಿಗೆ 60ರೂ  ಖರ್ಚಾಗುತ್ತದೆ, ಅದು ಸ್ವತಃ ಉಲ್ಲೇಖಿಸಿರುವ ನಿಯಮಿತ ಸಫಾರಿ ಸಮಯಗಳಲ್ಲಿ ಸುಮಾರು 30 ನಿಮಿಷಗಳ ಕಾಲ ಹೋಗುತ್ತದೆ. ಕ್ಯಾಮರಾಕ್ಕೆ  25 ರೂ ಮತ್ತು ವೀಡಿಯೊ ಬೆಲೆ 200 ರೂ ಗಳನ್ನೂ ಪಾವತಿಸಬೇಕಾಗುತ್ತದೆ.

ತ್ವರಿತ ಲಿಂಕ್‌ಗಳು

ಅವಲೋಕನ ಮಾರ್ಗದರ್ಶಿ

ವೀಕ್ಷಣೆಗೆ ಸರಿಯಾದ ಸಮಯ

ಅಕ್ಟೋಬರ್ - ಜೂನ್

ಯಾವ ಕಾರಣಕ್ಕಾಗಿ ಪ್ರಸಿದ್ಧವಾಗಿದೆ:

ಈ ಉದ್ಯಾನವನವು ಹೆಚ್ಚು ಜನಪ್ರಿಯವಾಗಲು ಕಾರಣವೇನೆಂದರೆ ಇಲ್ಲಿ ಸಿಂಹ ಹಾಗೂ ಹುಲಿಗಳಷ್ಟೇ ಸ್ನೇಕ್ ಪಾರ್ಕ್ ಬಟರ್ಫ್ಲೈ ಪಾರ್ಕ್ ಮೃಗಾಲಯ ಮತ್ತು ನೇಚರ್ ಕ್ಯಾಂಪ್ ಅಂತಹ ವಿವಿಧ ರೀತಿಯ ಪಾರ್ಕ್ ಗಳನ್ನು ಹಾಗೂ ಕ್ಯಾಂಪ್ ಗಳನ್ನು ನಾವು ಇಲ್ಲಿ ಕಾಣಬಹುದು ಆದ್ದರಿಂದ ಇದು ಹೆಚ್ಚು ಪ್ರಸಿದ್ಧಿ ಹೊಂದಿದೆ.

ಉಳಿಯಲು ಅನುಕೂಲಕರವಾದ ಸ್ಥಳಗಳು

ಜಂಗಲ್ ಲಾಡ್ಜಸ್ & ರೆಸಾರ್ಟ್ಸ್ ಲಿಮಿಟೆಡ್ ವತಿಯಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದೊಳಗೆ ವಸತಿಯನ್ನು ಒದಗಿಸಲಾಗುತ್ತದೆ

ಉದ್ಯಾನವನ್ನು ಹೇಗೆ ತಲುಪಬಹುದು

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (BLR) ಹತ್ತಿರದ ವಿಮಾನ ನಿಲ್ದಾಣವಾಗಿರುತ್ತದೆ (70 Kms )

ಬೆಂಗಳೂರು ರೈಲ್ವೆ ನಿಲ್ದಾಣವು ಹತ್ತಿರದ ರೈಲ್ವೆ ನಿಲ್ದಾಣವಾಗಿರುತ್ತದೆ (22 Kms)

ಬೆಂಗಳೂರಿನಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ವಂತ ವಾಹನಗಳಲ್ಲಿ ಸವರಿ ಮಾಡಬಹುದು, ಕೇವಲ 22kms ದೂರವನ್ನು ಕ್ರಮಿಸಬೇಕು.

ಹತ್ತಿರದ ಸ್ಥಳಗಳು

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಹತ್ತಿರದಲ್ಲಿ ವೀಕ್ಷಣೆ ಮಾಡಬಹುದಾದ ಆಕರ್ಷಣೀಯ ಸ್ಥಳಗಳು ಯಾವುವೆಂದೆರೆ ಬೆಂಗಳೂರು ಅರಮನೆ (25 ಕಿ.ಮೀ), ಸೇಂಟ್ ಮಾರ್ಕ್ಸ್ ಕ್ಯಾಥೆಡ್ರಲ್ (20 ಕಿ.ಮೀ), ಇಸ್ಕಾನ್ ದೇವಸ್ಥಾನ (37 ಕಿ.ಮೀ), ಲಾಲ್ಬಾಗ್ ಬಟಾನಿಕಲ್ ಗಾರ್ಡನ್ (18 ಕಿ.ಮೀ), ವಿಧಾನ ಸೌಧ (23 ಕಿ.ಮೀ,ಇದರೊಂದಿಗೆ ನಾಗರಹೊಳೆ ರಾಷ್ಟೀಯ ಉದ್ಯಾನವನವನ್ನು ವೀಕ್ಷಿಸಬಹುದು.

Tour Location

Leave a Reply

Accommodation
Meals
Overall
Transport
Value for Money