Karnataka logo

Karnataka Tourism
GO UP

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

separator
ಕೆಳಗೆ ಸ್ಕ್ರಾಲ್ ಮಾಡಿ

ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಹರಡಿರುವ 643 ಚದರ ಕಿ.ಮೀ ವಿಸ್ತಾರವಾದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಕರ್ನಾಟಕದ ಪ್ರಮುಖ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶವಾಗಿದೆ. 

ವನ್ಯಜೀವಿಗಳು:

ಅರಣ್ಯ ಸಫಾರಿ ವೇಳೆ ಬಂಗಾಳ ಹುಲಿಗಳು ಮತ್ತು ಏಷ್ಯಾಟಿಕ್ ಆನೆಗಳನ್ನು ತಮ್ಮ ನೈಸರ್ಗಿಕ ವಾಸಸ್ಥಾನಗಳಲ್ಲಿ ಗುರುತಿಸಬಹುದಾದ ಸಾಧ್ಯತೆಯಿಂದಾಗಿ ವನ್ಯಜೀವಿ ಉತ್ಸಾಹಿಗಳು ಮತ್ತು ಛಾಯಾಗ್ರಾಹಕರಿಗೆ ನಾಗರಹೊಳೆ ಪ್ರಿಯವಾದ ರಾಷ್ಟ್ರೀಯ ಉದ್ಯಾನವನವಾಗಿದೆ. 

ನಾಗರಹೊಳೆ ರಾಷ್ಟ್ರೀಯ ಉದ್ಯಾನವು ಹೆಚ್ಚಿನ ಸಂಖ್ಯೆಯ ಕಾಡು ನಾಯಿಗಳು, ಚಿರತೆಗಳು ಮತ್ತು ಕರಡಿಗಳಿಗೆ ನೆಲೆಯಾಗಿದೆ. ಸಸ್ಯಹಾರಿ ಪ್ರಾಣಿಗಳಲ್ಲಿ  ಜಿಂಕೆ,ಕಾಡೆಮ್ಮೆ, ಕಾಡುಹಂದಿ, ಸಾಂಬಾರ್, ಮತ್ತು ಹಲವಾರು ಜಾತಿಯ ಪಕ್ಷಿಗಳು ಕಾಣಸಿಗುತ್ತವೆ. ನಾಗರಹೋಲ್ ರಾಷ್ಟ್ರೀಯ ಉದ್ಯಾನವು ತೇಗ ಮತ್ತು ಬೀಟೆ  ಮರಗಳಿಂದ ಸಮೃದ್ಧವಾಗಿದೆ. 

ನಾಗರಹೊಳೆ ಅರಣ್ಯ ಸಫಾರಿ:

ಅರಣ್ಯ ಇಲಾಖೆಯಿಂದ ಪ್ರತಿದಿನ ಎರಡು ಬಾರಿ (ಬೆಳಿಗ್ಗೆ 6 ರಿಂದ 8 ಗಂಟೆಯವರೆಗೆ ಮತ್ತು ಸಂಜೆ 3 ರಿಂದ 5 ರವರೆಗೆ) ಅರಣ್ಯ ಸಫಾರಿ ನಡೆಸಲಾಗುತ್ತದೆ, . ಸೀಮಿತ ಸಂಖ್ಯೆಯ ಆಸನಗಳು ಲಭ್ಯವಿರುವುದರಿಂದ ಮುಂಗಡ ಕಾದಿರಿಸುವಿಕೆ ಉತ್ತಮ ಆಯ್ಕೆಯಾಗಿರಲಿದೆ. ಸಫಾರಿ ದರಗಳು ಮತ್ತು ಸಂಪರ್ಕ ಮಾಹಿತಿಗಾಗಿ ಈ ಪುಟಕ್ಕೆ ಭೇಟಿ ನೀಡಿ. 

ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲು ಉತ್ತಮ ಸಮಯ: ವರ್ಷದುದ್ದಕ್ಕೂ ನಾಗರಹೊಳೆಗೆ ಭೇಟಿನೀಡಬಹುದಾಗಿದೆ. ಆದಾಗ್ಯೂ, ಮುಂಗಾರು ನಂತರದ ಅಕ್ಟೋಬರ್-ಫೆಬ್ರವರಿ ತಿಂಗಳುಗಳು ನಾಗರಹೊಳೆಗೆ  ಭೇಟಿ ನೀಡಲು ಅತ್ಯುತ್ತಮ ಸಮಯವಾಗಿದೆ. 

ನಾಗರಹೊಳೆ  ತಲುಪುವುದು ಹೇಗೆ:

ರಸ್ತೆಯ ಮೂಲಕ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಬೆಂಗಳೂರಿನಿಂದ 220 ಕಿ.ಮೀ ದೂರದಲ್ಲಿದೆ. ಮೈಸೂರಿನಿಂದ ನಾಗರಹೊಳೆ ತಲುಪಲು ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ.

ವಿಮಾನದ ಮೂಲಕ:  ಮೈಸೂರು ಹತ್ತಿರದ ವಿಮಾನ ನಿಲ್ದಾಣವಾಗಿದೆ.

ರೈಲಿನ ಮೂಲಕ:

ಮೈಸೂರು ನಗರವು ಹತ್ತಿರದ ರೈಲು ನಿಲ್ದಾಣವಾಗಿದೆ (ನಾಗರಹೊಳೆಯಿಂದ 90 ಕಿ.ಮೀ). 

ಮುಂಜಾನೆ ಸಫಾರಿ ಬಹಳ ಬೇಗ ಪ್ರಾರಂಭವಾಗುವುದರಿಂದ ಒಂದು ದಿನದ ಪ್ರವಾಸದ ಬದಲು ನಾಗರಹೊಳೆ ಬಳಿಯೇ ತಂಗುವುದು ಉತ್ತಮ ಆಯ್ಕೆಯಾಗಿರಲಿದೆ. 

ನಾಗರಹೊಳೆ ಹತ್ತಿರ ಎಲ್ಲಿ ತಂಗಬಹುದು:

ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್  ಸುಸಜ್ಜಿತ ಮತ್ತು ಅತ್ಯಂತ ಜನಪ್ರಿಯ ಕಬಿನಿ ರಿವರ್ ಲಾಡ್ಜ್‌  ಎಂಬ  ರೆಸಾರ್ಟ್ ಅನ್ನು ನಡೆಸುತ್ತಿದೆ. ಈ ಪ್ರದೇಶದಲ್ಲಿ ಹಲವಾರು ಖಾಸಗಿ ಐಷಾರಾಮಿ ರೆಸಾರ್ಟ್‌ಗಳೂ ಇದ್ದು ಅಂತರ್ಜಾಲದಲ್ಲಿ ‌ಕಾಯ್ದಿರಿಸಬಹುದು. ನಿಮ್ಮ ಆತಿಥೇಯರು ಅರಣ್ಯ ಸಫಾರಿಗಳಿಗೆ ವ್ಯವಸ್ಥೆ ಮಾಡುತ್ತಾರೆ. 

ತ್ವರಿತ ಲಿಂಕ್‌ಗಳು

Experience Karnataka

  Tour Location

  Leave a Reply

  Accommodation
  Meals
  Overall
  Transport
  Value for Money

  Screen Reader A- A A+