Karnataka logo

Karnataka Tourism
GO UP

ನವಗ್ರಹ ಜೈನ ದೇವಾಲಯ, ಹುಬ್ಬಳ್ಳಿ

separator
ಕೆಳಗೆ ಸ್ಕ್ರಾಲ್ ಮಾಡಿ

ನವಗ್ರಹ ತೀರ್ಥ ಎಂದೂ ಕರೆಯಲ್ಪಡುವ ನವಗ್ರಹ ಜೈನ ದೇವಾಲಯವು ಉತ್ತರ ಕರ್ನಾಟಕದ ಪ್ರಮುಖ ಜೈನ ಯಾತ್ರಾ ಕೇಂದ್ರವಾಗಿದೆ. ನವಗ್ರಹ ಜೈನ ದೇವಾಲಯ ಹುಬ್ಬಳ್ಳಿ ನಗರದ ಸಮೀಪದಲ್ಲಿದೆ.

ನವಗ್ರಹ ಜೈನ ದೇವಾಲಯದಲ್ಲಿ ಜೈನ ಗುರು ಶ್ರೀ ಭಗವಾನ್ ಪಾರ್ಶ್ವನಾಥರ 18.6 ಮೀಟರ್ ಎತ್ತರದ ಪ್ರತಿಮೆ ಇದೆ. ಒಂದೇ ಕಲ್ಲಿನಿಂದ ಮಾಡಿದ ಈ ಪ್ರತಿಮೆಯೊಂದಿಗೆ 8 ಇತರ ಜೈನ ತೀರ್ಥಂಕರರ ಸಣ್ಣ ಪ್ರತಿಮೆಗಳಿವೆ. ಪ್ರತಿಯೊಂದು ಪ್ರತಿಮೆಗೆ ಗ್ರಹದ ಹೆಸರನ್ನು ನೀಡಲಾಗಿದೆ. ಪಾರ್ಶ್ವನಾಥರ ಪ್ರತಿಮೆಯು 185 ಟನ್‌ಗಳಷ್ಟು ಭಾರವನ್ನು ಹೊಂದಿದೆ ಮತ್ತು ಹೂವಿನ ದಳದ ಆಕಾರದ ಅಂಚುಗಳನ್ನು ಹೊಂದಿರುವ ಎತ್ತರದ ವೇದಿಕೆಯಲ್ಲಿ ನಿರ್ಮಿಸಲಾಗಿದೆ. ಪೀಠ ಮತ್ತು ಪ್ರತಿಮೆಯ ಒಟ್ಟು ಎತ್ತರ 33.2 ಮೀಟರ್.

ನವಗ್ರಹ ಜೈನ ದೇವಾಲಯವನ್ನು 2009 ರಲ್ಲಿ ಉದ್ಘಾಟಿಸಲಾಯಿತು.

ಹತ್ತಿರ:ಲಕ್ಕುಂಡಿ (85 ಕಿ.ಮೀ), ದಾಂಡೇಲಿ (80 ಕಿ.ಮೀ) ಮತ್ತು ಧಾರವಾಡದ ಇಸ್ಕಾನ್ ದೇವಾಲಯ  (28 ಕಿ.ಮೀ) ನವಗ್ರಹ ಜೈನ ದೇವಾಲಯದ ಜೊತೆಗೆ ಭೇಟಿ ನೀಡಬಹುದಾದ ಹತ್ತಿರದ ಕೆಲವು ಸ್ಥಳಗಳಾಗಿವೆ.

ನವಗ್ರಹ ಜೈನ ದೇವಾಲಯವನ್ನು ತಲುಪುವುದು ಹೇಗೆ? 

ನವಗ್ರಹ ಜೈನ ದೇವಾಲಯವು ವರೂರು ಎಂಬ ಹಳ್ಳಿಯಲ್ಲಿದೆ, ಹುಬ್ಬಳ್ಳಿ ನಗರದಿಂದ 17 ಕಿ.ಮೀ ಮತ್ತು ಬೆಂಗಳೂರಿನಿಂದ 394 ಕಿ.ಮೀ. ದೂರವಾಗುತ್ತದೆ.  ಹುಬ್ಬಳ್ಳಿ ನಗರವು ಹತ್ತಿರದ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣವನ್ನು ಹೊಂದಿದೆ. ನವಗ್ರಹ ಜೈನ ದೇವಸ್ಥಾನವನ್ನು ತಲುಪಲು ಹುಬ್ಬಳ್ಳಿಯಲ್ಲಿ  ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು. ಬಸ್ಸುಗಳು ಸಹ ಲಭ್ಯವಿದೆ.

ವಸತಿ: ನವಗ್ರಹ ಜೈನ ದೇವಾಲಯದಿಂದ 6 ಕಿ.ಮೀ ದೂರದಲ್ಲಿ ಯಾತ್ರಿ ನಿವಾಸ್ ಲಾಡ್ಜ್ ಲಭ್ಯವಿದೆ. ಹುಬ್ಬಳ್ಳಿ ನಗರ (17 ಕಿ.ಮೀ ದೂರದಲ್ಲಿ) ಬಜೆಟ್, ಮಧ್ಯ ಶ್ರೇಣಿಯ ಮತ್ತು ಐಷಾರಾಮಿ ಹೋಟೆಲ್‌ಗಳನ್ನು ಹೊಂದಿದೆ.

Tour Location

Leave a Reply

Accommodation
Meals
Overall
Transport
Value for Money

Screen Reader A- A A+