Karnataka logo

Karnataka Tourism
GO UP

ದುರ್ಗಾಪರಮೇಶ್ವರಿ ದೇವಸ್ಥಾನ

separator
ಕೆಳಗೆ ಸ್ಕ್ರಾಲ್ ಮಾಡಿ

ದುರ್ಗಾಪರಮೇಶ್ವರಿ ದೇವಸ್ಥಾನ

ನಂದಿನಿ ನದಿಯ ದಡದಲ್ಲಿರುವ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನವು ದಕ್ಷಿಣ ಭಾರತದ ಹಿಂದೂಗಳ ಪವಿತ್ರ ದೇವಾಲಯಗಳಲ್ಲಿ ಒಂದಾಗಿದೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನವು ಮಂಗಳೂರಿನಿಂದ ೨೫ ಕಿ ಮೀ ದೂರ ನಂದಿನಿ ನದಿಯ ದಡದಲ್ಲಿದೆ. ನಂದಿನಿ ನದಿ ಕನಕಗಿರಿಯಲ್ಲಿ ಉಗಮಗೊಂಡು ಪಾವಂಜೆಯಲ್ಲಿ ಅರಬ್ಬೀ ಸಮುದ್ರದಲ್ಲಿ ವಿಲೀನಗೊಳ್ಳುತ್ತದೆ. ಈ ಮಾರ್ಗದ ಅರ್ಧ ದೂರದಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಇದೆ. 

ಇತಿಹಾಸ: ರಾಕ್ಷಸ ಅರುಣಾಸುರನು ಘೋರ ತಪಸ್ಸು ಮಾಡಿ ತನಗೆ ಯಾವುದೇ ಎರಡು ಅಥವಾ ನಾಲ್ಕು ಕಾಲಿನ ಜೀವಿಗಳಿಂದ ಸಾವು ಬರದಂತೆ ಬ್ರಹ್ಮ ದೇವರಿಂದ ವರವನ್ನು ಪಡೆದುಕೊಳ್ಳುತ್ತಾನೆ. ಈ ವರದಿಂದ ತನಗೆ ಯಾರಿಂದಲೂ ಸಾವು ಬರದು ಎಂದು ಭ್ರಮಿಸಿ ಅರುಣಾಸುರ ಭೂಮಿಯ ಮೇಲೆ ತನ್ನ ಅಟ್ಟಹಾಸ ಮೆರೆಯುತ್ತಾನೆ. ಅರುಣಾಸುರನನ್ನು ಎದುರಿಸಲು ದುರ್ಗಾ ದೇವಿಯು ಧರೆಗಿಳಿದು ಅರುಣಾಸುರನನ್ನು ಬೆನ್ನಟ್ಟುತ್ತಾಳೆ. ಅರುಣಾಸುರ ದುರ್ಗೆಯ ಸನಿಹ ಬಂದಾಗ ದುರ್ಗೆ ಒಂದು ಬಂಡೆಯಾಗಿ ರೂಪಾಂತರಗೊಳ್ಳುತ್ತಾಳೆ. ಅರುಣಾಸುರನು ಕೋಪಗೊಂಡು ಬಂಡೆಯನ್ನು ಪುಡಿಮಾಡಲು ಪ್ರಯತ್ನಿಸುತ್ತಾನೆ. ಈ ಸಮಯದಲ್ಲಿ ಜೇನುನೊಣಗಳ ಸೈನ್ಯವು ಹೊರಬಂದು  ಅರುಣಾಸುರನನ್ನು ಸಾಯಿಸುತ್ತವೆ. (ಜೇನುನೊಣಗಳು ಎರಡು ಅಥವಾ ನಾಲ್ಕು ಕಾಲಿನ ಜೀವಿ ಆಗಿರದೆ ಇದ್ದುದರಿಂದ ಅರುಣಾಸುರನ ವರವು ಆತನ ಉಪಯೋಗಕ್ಕೆ ಬರುವುದಿಲ್ಲ ). ಈ ವಿಜಯವನ್ನು ಆಚರಿಸಲು ಭೂಮಿಯ ಮೇಲಿನ ಋಷಿಮುನಿಗಳು ಮತ್ತು ಸಂತರು ವಿಶೇಷ ಪೂಜೆಗಳನ್ನು ಮಾಡಿದರು ಮತ್ತು ಕಟೇಲಿನಲ್ಲಿ ದುರ್ಗಾ ಪರಮೇಶ್ವರಿ ದೇವಾಲಯವನ್ನು ಸ್ಥಾಪಿಸಿದರು.

ಕಟೀಲು  ದುರ್ಗಪರಮೇಶ್ವರಿ ದೇವಸ್ಥಾನದ ವಾರ್ಷಿಕ ಹಬ್ಬ ಬ್ರಹ್ಮಕಲಶೋತ್ಸವ. ಈ ಆಚರಣೆಯು ಸಾಮಾನ್ಯವಾಗಿ ಜನವರಿ-ಫೆಬ್ರವರಿ ತಿಂಗಳುಗಳಲ್ಲಿ ಬರುತ್ತದೆ.

ಹತ್ತಿರ: ಸಸಿಹಿತ್ಲು ಕಡಲತೀರ  (17 ಕಿ.ಮೀ), ಉಡುಪಿ ಶ್ರೀಕೃಷ್ಣ ದೇವಸ್ಥಾನ (40 ಕಿ.ಮೀ), ಮಲ್ಪೆ ಕಡಲತೀರ (47 ಕಿ.ಮೀ) ಮತ್ತು ಕಾಪು ಕಡಲತೀರ  (30 ಕಿ.ಮೀ) ಹತ್ತಿರದ ಆಕರ್ಷಣೆಗಳು.

ತಲುಪುವುದು ಹೇಗೆ: ಕಟೀಲು  ಮಂಗಳೂರಿನಿಂದ 25 ಕಿ.ಮೀ ಮತ್ತು ಬೆಂಗಳೂರಿನಿಂದ 370 ಕಿ.ಮೀ. ದೂರದಲ್ಲಿದೆ. ಮಂಗಳೂರು ಹತ್ತಿರದ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣವಾಗಿದೆ. ಕಟೇಲು ತಲುಪಲು ಮಂಗಳೂರಿನಿಂದ ನಿಯಮಿತ ಬಸ್ಸುಗಳು ಲಭ್ಯವಿದೆ.

ವಸತಿ: ಕಟೀಲು  ಪಟ್ಟಣದಲ್ಲಿ ವಸತಿ ಸೌಲಭ್ಯಗಳಿವೆ. ಹೆಚ್ಚಿನ ವಾಸ್ತವ್ಯದ ಆಯ್ಕೆಗಳು ಮಂಗಳೂರು ನಗರದಲ್ಲಿ ಲಭ್ಯವಿದೆ (25 ಕಿ.ಮೀ ದೂರದಲ್ಲಿ)

ಅಧಿಕೃತ ವೆಬ್‌ಸೈಟ್ http://www.kateeldevi.in/

ತ್ವರಿತ ಲಿಂಕ್‌ಗಳು

Udupi Paryaya Utsava
Kapu beach

Tour Location

Leave a Reply

Accommodation
Meals
Overall
Transport
Value for Money