Karnataka logo

Karnataka Tourism
GO UP

ಚತುರ್ಮುಖ ಬಸದಿ

separator
ಕೆಳಗೆ ಸ್ಕ್ರಾಲ್ ಮಾಡಿ

ಚತುರ್ಮುಖ ಬಸದಿ ಕಾರ್ಕಳದ 16 ನೇ ಶತಮಾನದ ಜನಪ್ರಿಯ ಜೈನ ದೇವಾಲಯವಾಗಿದ್ದು, ಭತ್ತದ ಗದ್ದೆಗಳ ಮಧ್ಯದಲ್ಲಿ ಎತ್ತರದ ಮೈದಾನದಲ್ಲಿದೆ. ಕಾರ್ಕಳ ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ ಒಂದು ತಾಲ್ಲೂಕು ಪ್ರಧಾನ ಕಚೇರಿ ಮತ್ತು ಪಟ್ಟಣವಾಗಿದೆ.

ಚತುರ್ಮುಖ ಬಸದಿ ಎಲ್ಲಾ ನಾಲ್ಕು ಕಡೆಗಳಲ್ಲಿ ತೆರೆದಿರುತ್ತದೆ.  ನಾಲ್ಕು ಬಾಗಿಲುಗಳು ಒಳಗಿನ ಒಂದೇ ಗರ್ಭಗೃಹಕ್ಕೆ ದಾರಿಯಾಗಿದೆ. ಚತುರ್ಮುಖ ಬಸದಿಯ ದ್ವಾರಗಳಲ್ಲಿ ವಿವಿಧ ಜೈನ ತೀರ್ಥಂಕರರು ಮತ್ತು ಹಿಂದೂ ದೇವರುಗಳು ಮತ್ತು ದೇವತೆಗಳಿವೆ.

ಚತುರ್ಮುಖ ಬಸದಿ  108 ಅಮೃತ ಶಿಲೆಯಿಂದ ಮಾಡಿದ ಕಂಬಗಳಿವೆ. 

ಸಮಯ: ಚತುರ್ಮುಖ ಬಸದಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಮತ್ತು ಸಂಜೆ 4 ರಿಂದ 5.30 ರವರೆಗೆ ತೆರೆದಿರುತ್ತದೆ.

ಹತ್ತಿರ: ಕಾರ್ಕಳದ ಮತ್ತೊಂದು ಜನಪ್ರಿಯ ಸ್ಮಾರಕ ಗೋಮಟೇಶ್ವರ ಪ್ರತಿಮೆ ಚತುರ್ಮುಖ ಬಸದಿಯಿಂದ ಕೇವಲ 1.4 ಕಿ.ಮೀ ದೂರದಲ್ಲಿದೆ. ಒಂದು ಸುಂದರವಾದ ಕೊಳದ ಮಧ್ಯದಲ್ಲಿರುವ ವರಂಗ ಕಾರ್ಕಳದಿಂದ 27 ಕಿ.ಮೀ ದೂರದಲ್ಲಿರುವ ಇನ್ನೊಂದು ಸುಂದರ ಜೈನ ಬಸದಿಯಾಗಿದೆ. 

ತಲುಪುವುದು ಹೇಗೆ? ಕಾರ್ಕಳ ಬೆಂಗಳೂರಿನಿಂದ 361 ಕಿ.ಮೀ ಮತ್ತು ಮಂಗಳೂರಿನಿಂದ 51 ಕಿ.ಮೀ ದೂರದಲ್ಲಿದೆ. ಮಂಗಳೂರು ಹತ್ತಿರದ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣವಾಗಿದೆ. ಉಡುಪಿ ಮತ್ತು ಮಂಗಳೂರಿನಿಂದ ಕಾರ್ಕಳಕ್ಕೆ ಬಸ್ ಸೇವೆಯಿದೆ.  ಚತುರ್ಮುಖ ಬಸದಿ ಕಾರ್ಕಳ ನಗರ ಕೇಂದ್ರದಿಂದ 1.3 ಕಿ.ಮೀ ದೂರದಲ್ಲಿದೆ ಮತ್ತು ಕಾಲ್ನಡಿಗೆಯಲ್ಲಿ ಅಥವಾ ಆಟೋವನ್ನು ಬಾಡಿಗೆಗೆ ಪಡೆದು ತಲುಪಬಹುದಾಗಿದೆ. 

ವಸತಿ: ಕಾರ್ಕಳ ನಗರದಲ್ಲಿ ಅನೇಕ ವಸತಿಗೃಹಗಳಿವೆ.

  Tour Location

  Leave a Reply

  Accommodation
  Meals
  Overall
  Transport
  Value for Money

  Screen Reader A- A A+