Karnataka logo

Karnataka Tourism
GO UP

ಕೊಕ್ಕರೆ ಬೆಳ್ಳೂರು

separator
ಕೆಳಗೆ ಸ್ಕ್ರಾಲ್ ಮಾಡಿ

ಕೊಕ್ಕರೆ ಬೆಳ್ಳೂರು ಪಕ್ಷಿಗಳ ಸಂರಕ್ಷಣೆಗೆ ಮೀಸಲಾಗಿರುವ ಗ್ರಾಮ ಮತ್ತು ತೆರೆದ ಪಕ್ಷಿಧಾಮವಾಗಿದೆ. ವಲಸೆ ಬಂದ ಕೊಕ್ಕರೆಗಳಿಂದಾಗಿ ಈ ಊರಿಗೆ ಕೊಕ್ಕರೆ ಬೆಳ್ಳೂರು ಎಂಬ ಹೆಸರು ಬಂದಿದೆ. ಕೊಕ್ಕರೆ  ಬೆಳ್ಳೂರು ಬೆಂಗಳೂರಿನ ಹೊರವಲಯದಲ್ಲಿರುವ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿರುವ ಒಂದು ಹಳ್ಳಿ. 2017 ರಲ್ಲಿ ವಿಶ್ವ ವನ್ಯ ಜೀವಿ ಫೆಡರೇಷನ್ -ಇಂಡಿಯಾ ಕೊಕ್ಕರೆ  ಬೆಳ್ಳೂರು ಬಗ್ಗೆ ತಯಾರಿಸಿದ ಸಂಕ್ಷಿಪ್ತ ಆದರೆ ಅದ್ಭುತವಾದ ಸಾಕ್ಷ್ಯಚಿತ್ರ ನೋಡಿದ ಯಾರೇ ಆದರೂ ಕೊಕ್ಕರೆ ಬೆಳ್ಳೂರಿಗೆ ಭೇಟಿ ಕೊಡಲು ಉತ್ಸಾಹ ತೋರುವುದರಲ್ಲಿ ಸಂದೇಹವಿಲ್ಲ. 

ಪಕ್ಷಿಗಳು:

ನೀರು ಹಕ್ಕಿ (ಪೆಲಿಕನ್) ಮತ್ತು ಕೊಕ್ಕರೆಗಳು ಕೊಕ್ಕರೆ ಬೆಳ್ಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಇವು ಹಳ್ಳಿಯ ಹುಣಸೆ ಮತ್ತು ಮಾವಿನ ಮರಗಳ ಮೇಲೆ ಗೂಡುಕಟ್ಟುತ್ತವೆ. ಸುಮಾರು 200 ಇತರ ಪಕ್ಷಿ ಪ್ರಭೇದಗಳನ್ನು ಕೊಕ್ಕರೆ ಬೆಳ್ಳೂರಿನಲ್ಲಿ ಗುರುತಿಸಲಾಗಿದೆ.

ಕೊಕ್ಕರೆ ಬೆಲ್ಲೂರ್‌ಗೆ ಭೇಟಿ ನೀಡಲು ಉತ್ತಮ ಸಮಯ: ಸಾವಿರಾರು ಪೆಲಿಕನ್ ಮತ್ತು  ಕೊಕ್ಕರೆಗಳನ್ನು ನೋಡಲು ನವೆಂಬರ್ ನಿಂದ ಮೇ ಅತ್ಯುತ್ತಮ ಸಮಯವಾಗಿದೆ 

ಇತರ ಮಾಹಿತಿ:

ಕೊಕ್ಕರೆ ಬೆಳ್ಳೂರು ಯಾವುದೇ ಖಚಿತವಾದ ಗಡಿ ಅಥವಾ ಪ್ರವೇಶ ದ್ವಾರಗಳನ್ನು ಹೊಂದಿಲ್ಲ. ಯಾವುದೇ ಸಮಯ ನಿರ್ಬಂಧಗಳಿಲ್ಲ. ಭೇಟಿ ನೀಡುವ ಪ್ರವಾಸಿಗರು ಹಕ್ಕಿಗಳಿರುವ ಪ್ರದೇಶಕ್ಕೆ ಹೋಗಲು ಸ್ಥಳೀಯರು ಸಂತೋಷದಿಂದ ಮಾರ್ಗದರ್ಶನ ಮಾಡುತ್ತಾರೆ. 

ಕೊಕ್ಕರೆ ಬೆಳ್ಳೂರು ತಲುಪುವುದು ಹೇಗೆ:

ಕೊಕ್ಕರೆ ಬೆಳ್ಳೂರು ಬೆಂಗಳೂರಿನಿಂದ 90 ಕಿ.ಮೀ ಮತ್ತು ಮೈಸೂರಿನಿಂದ 70 ಕಿ.ಮೀ ದೂರದಲ್ಲಿದೆ. ಮೈಸೂರು ವಿಮಾನ ನಿಲ್ದಾಣವು ಹತ್ತಿರದಲ್ಲಿದೆ (80 ಕಿ.ಮೀ). ಕೊಕ್ಕರೆ ಬೆಳ್ಳೂರು ತಲುಪಲು ಮದ್ದೂರಿನ (ಕೊಕ್ಕರೆ ಬೆಳ್ಳೂರಿನಿಂದ 15 ಕಿ.ಮೀ) ವರೆಗೆ ಬಸ್ಸುಗಳು ಲಭ್ಯವಿವೆ.

ವಸತಿ:

ಮದ್ದೂರು ಪಟ್ಟಣ (ಕೊಕ್ಕರೆ ಬೆಳ್ಳೂರಿನಿಂದ 15 ಕಿ.ಮೀ) ಬಜೆಟ್ ಹೋಟೆಲ್‌ಗಳನ್ನು ಹೊಂದಿದೆ. ಜಂಗಲ್ ಲಾಡ್ಜಸ್ & ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ ಭೀಮೇಶ್ವರಿ ಸಾಹಸ ಮತ್ತು ನೇಚರ್ ಕ್ಯಾಂಪ್ (40 ಕಿ.ಮೀ) ಪ್ರಕೃತಿಯ ಮಧ್ಯದಲ್ಲಿ ಉತ್ತಮ ವಸತಿ ಸೌಕರ್ಯವಾಗಿದೆ. ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿ ಹೆಚ್ಚಿನ ವಾಸ್ತವ್ಯದ ಆಯ್ಕೆಗಳು ಲಭ್ಯವಿದೆ.

Tour Location

Leave a Reply

Accommodation
Meals
Overall
Transport
Value for Money