Script Your Adventure
Discover the world of a thousand hidden memories!
ಬಣ್ಣ, ಸುವಾಸನೆ ಮತ್ತು ಸಮಯರಹಿತತೆ
ನಿಮ್ಮ ಅವಿಸ್ಮರಣೀಯ ಪ್ರವಾಸಕ್ಕಾಗಿ ಅತ್ಯುತ್ತಮ ಸ್ಥಳಗಳನ್ನು ಆರಿಸಿ
ಕರ್ನಾಟಕ ರಾಜ್ಯದಲ್ಲಿ ಭೇಟಿ ನೀಡಲು ಅತ್ಯುತ್ತಮ ಪ್ರವಾಸಿ ಸ್ಥಳಗಳನ್ನು ಆರಿಸಿ - ಪ್ರಯಾಣ ಮಾರ್ಗದರ್ಶಿ,
ದಿನದ ಕಾರ್ಯಕ್ರಮದೊಂದಿಗೆ ಆಕರ್ಷಣೀಯ ಸ್ಥಳಗಳ ಸುತ್ತಾಟ, ಪ್ರವಾಸದ ಅವಧಿ, ಹವಾಮಾನ, ಮತ್ತು ಮಾರ್ಗ ನಕ್ಷೆ

ಕಲಬುರಗಿ
ಹಿಂದೆ ಗುಲ್ಬರ್ಗಾ ಎಂದು ಕರೆಯಲಾಗುತ್ತಿದ್ದ ಕಲಬುರಗಿ ಕರ್ನಾಟಕದ ಉತ್ತರ ತುದಿಯಲ್ಲಿರುವ ಜಿಲ್ಲೆ. ಕಲಬುರಗಿ ಬೀದರ್ ಜಿಲ್ಲೆಗಿಂತ ಸ್ವಲ್ಪ ಕೆಳಗೆ, ಬೆಂಗಳೂರಿನಿಂದ ಉತ್ತರಕ್ಕೆ 575 ಕಿ.ಮೀ. ದೂರದಲ್ಲಿದೆ. ಆಗ್ನೇಯದಲ್ಲಿ ತೆಲಂಗಾಣ, ವಾಯುವ್ಯದಲ್ಲಿ ಮಹಾರಾಷ್ಟ್ರ, ಮತ್ತು ದಕ್ಷಿಣದಲ್ಲಿ ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಿವೆ. ಕರ್ನಾಟಕದ ಏಕೀಕರಣದ ಮೊದಲು ಕಲಬುರಗಿ ಹೈದರಾಬಾದಿನ ಭಾಗವಾಗಿತ್ತು.

ಕೊಡಗು
ಕೊಡಗನ್ನು ಭಾರತದ ಸ್ಕಾಟ್ಲೆಂಡ್ ಎಂದು ಕರೆಯಲಾಗುತ್ತದೆ. ಇಂಗ್ಲೆಂಡಿನ ಸ್ಕಾಟ್ಲೆಂಡಿನಂತೆ ಕೊಡಗು ಕೂಡ ವರ್ಷವಿಡೀ ಆಹ್ಲಾದಕರ ಹವಾಮಾನ ಮತ್ತು ಸದಾ ಹಸಿರಾಗಿರುವ ನೈಸರ್ಗಿಕ ಸೌಂದರ್ಯದಿಂದ ತುಂಬಿರುತ್ತದೆ, ಭಾರತದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ಜಿಲ್ಲೆಯಾಗಿದೆ. ಸ್ಥಳೀಯರನ್ನು ಕೊಡವರು ಎಂದು ಕರೆಯಲಾಗುತ್ತದೆ, ಕೊಡವ ಜನರು ನೈಸರ್ಗಿಕವಾಗಿ ವೀರಯೋಧರಾಗಿದ್ದು ಅನೇಕರು ಭಾರತದ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ ಹಿರಿಮೆ ಹೊಂದಿದ್ದಾರೆ. ಕೊಡವ ಜನರು ಕರ್ನಾಟಕದ ಉಳಿದ ಭಾಗಗಳಿಗಿಂತ ವಿಭಿನ್ನವಾದ ವೇಷ ಭೂಷಣಗಳನ್ನು ಧರಿಸುತ್ತಾರೆ. ಸ್ಥಳೀಯರು ಕೊಡವ ಭಾಷೆ ಎಂಬ ಉಪಭಾಷೆಯನ್ನು ಮಾತನಾಡುತ್ತಾರೆ. ದಕ್ಷಿಣ ಕರ್ನಾಟಕದ ಜೀವನಾಡಿಯಾದ ಕಾವೇರಿ ನದಿ ಕೊಡಗು ಜಿಲ್ಲೆಯಲ್ಲಿ ಉಗಮಿಸುತ್ತದೆ.

ಕೋಲಾರ
ಇದು ಕುವಲಾಲಾ, ಕೋಲಾ ಮತ್ತು ಕೋಲಾಹಲಪುರ ಎಂದು ಕರೆಯಲ್ಪಡುವ ಪ್ರಾಚೀನ ಶಾಸನಗಳಲ್ಲಿತ್ತು. 4 ನೇ ಶತಮಾನದಿಂದ ಕೋಲಾರ ಅಸ್ತಿತ್ವದಲ್ಲಿತ್ತು ಎಂದು ಐತಿಹಾಸಿಕ ಪುರಾವೆಗಳು ಹೇಳುತ್ತವೆ. ಗಂಗಾ ರಾಜವಂಶವು ಮೂಲತಃ ಕೋಲಾರದಿಂದ ಬಂದಿದ್ದು, ಇದು ಆರಂಭಿಕ ರಾಜಧಾನಿಯಾಗಿತ್ತು. ಇದಲ್ಲದೆ, ಕೋಲಾರ ಚೋಳರು, ಹೊಯ್ಸಳರು ಮತ್ತು ವಿಜಯನಗರ ಸೇರಿದಂತೆ ಅನೇಕ ರಾಜವಂಶಗಳ ಭಾಗವಾಗಿತ್ತು. ಇದಲ್ಲದೇ, ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳಲ್ಲಿಯೂ ಇದನ್ನು ಉಲ್ಲೇಖಿಸಲಾಗಿದೆ.

ಗದಗ
1997 ರಲ್ಲಿ ಧಾರವಾಡ ಜಿಲ್ಲೆಯಿಂದ ಬೇರ್ಪಡಿಸಿ ಗದಗ ಜಿಲ್ಲೆಯನ್ನು ರಚಿಸಲಾಯಿತು. ಗದಗವು ದಕ್ಷಿಣದಲ್ಲಿ ಹಾವೇರಿ, ಪಶ್ಚಿಮದಲ್ಲಿ ಧಾರವಾಡ, ವಾಯುವ್ಯದಲ್ಲಿ ಬೆಳಗಾವಿ, ಉತ್ತರದಲ್ಲಿ ಬಾಗಲಕೋಟೆ, ಪೂರ್ವದಲ್ಲಿ ಕೊಪ್ಪಳ ಮತ್ತು ಆಗ್ನೇಯದಲ್ಲಿ ಬಳ್ಳಾರಿಯಿಂದ ಸುತ್ತುವರೆದಿದೆ. ದಂತಕಥೆಗಳ ಪ್ರಕಾರ, ಗದಗವು ಜನಮೇಜಯ ಸ್ಥಾಪಿಸಿದ ಮಹಾ ಅಗ್ರಹಾರಗಳಲ್ಲಿ ಒಂದಾಗಿದೆ ಮತ್ತು 72 ಮಹಾಜನಗಳೊಂದಿಗೆ ಉನ್ನತ ಶಿಕ್ಷಣದ ಪ್ರಸಿದ್ಧ ಸ್ಥಾನವಾಗಿತ್ತು. ಗದಗವು ಮುದ್ರಣಾಲಯಗಳು ಮತ್ತು ಕೈಮಗ್ಗಗಳಿಗೆ ಹೆಸರುವಾಸಿಯಾಗಿದೆ.

ಚಿಕ್ಕಮಗಳೂರು
ಚಿಕ್ಕಮಗಳೂರಿನಲ್ಲಿ ನೆಲೆಗೊಂಡಿರುವ ಬಾಬಾಬುಡನ್ ಗಿರಿ ಬೆಟ್ಟವು ಕಣಿವೆ ತೊರೆ ಮತ್ತು ಕಾಫಿ ತೋಟಗಳನ್ನು ಒಳಗೊಂಡಿರುವ ಶಾಂತಿ ಹಾಗೂ ಪ್ರಶಾಂತವಾದ ಪಟ್ಟಣವಾಗಿದೆ. ಸಕ್ರೆ ಪಟ್ಟಣ ಸಾಮ್ರಾಜ್ಯದ ಮುಖ್ಯಸ್ಥ ರುಕ್ಮಾಂಗದ ಅವರ ಕಿರಿಯ ಮಗಳಿಗೆ ಚಿಕ್ಕಮಗಳೂರನ್ನು ವರದಕ್ಷಿಣೆಯಾಗಿ ನೀಡಲಾಗಿದೆ ಎಂದು ನಂಬಲಾಗಿದೆ. ಚಿಕ್ಕಮಗಳೂರು ಎಂಬ ಹೆಸರು ಚಿಕ್ಕ ಮಗಳ ಊರು ಎಂಬ ಹೆಸರಿನಿಂದ ಬಂದಿದೆ ಇದರ ಅರ್ಥ ಏನೆಂದರೆ “ಕಿರಿಯ ಮಗಳ ಗ್ರಾಮ” .ಪಟ್ಟಣದ ಮತ್ತೊಂದು ಭಾಗವನ್ನು ಹಿರಿಯ ಮಗಳ ವರದಕ್ಷಿಣೆ ಹಿರೆಮಗಲೂರು ಎಂದು ನೀಡಲಾಯಿತು, ಇದು ಹಿರೇ-ಮಗಳ-ಊರು “ಹಿರಿಯ ಮಗಳ ಗ್ರಾಮ” ಎಂದು ಅನುವಾದಿಸುತ್ತದೆ.

ತುಮಕೂರು
ಕರ್ನಾಟಕದ ಎರಡನೇ ಅತಿದೊಡ್ಡ ಜಿಲ್ಲೆ ತುಮಕೂರು ಹಾಗೂ ಈ ಜಿಲ್ಲೆಯು ಬೆಂಗಳೂರಿನಿಂದ ಕೇವಲ 65 ಕಿಲೋಮೀಟರ್ ದೂರದಲ್ಲಿದೆ.ತುಮಕೂರು ಜಿಲ್ಲೆಯು ತನ್ನ ಗಡಿಯನ್ನು ರಾಜ್ಯದ 8 ಜಿಲ್ಲೆಗಳೊಂದಿಗೆ ಹಂಚಿಕೊಂಡಿದೆ, ಇದು ರಾಜ್ಯದ ಅತಿ ಹೆಚ್ಚು ಜಿಲ್ಲೆಗಳೊಂದಿಗೆ ಗಡಿ ಹಂಚಿಕೊಂಡ ಜಿಲ್ಲೆಯಾಗಿದೆ; ಉತ್ತರಕ್ಕೆ ಚಿತ್ರದುರ್ಗ, ಪಶ್ಚಿಮಕ್ಕೆ ಹಾಸನ ಮತ್ತು ಚಿಕ್ಕಮಂಗಳೂರು, ನೈಋತ್ಯ ದಿಕ್ಕಿನಲ್ಲಿ ಮಂಡ್ಯ, ದಕ್ಷಿಣಕ್ಕೆ ರಾಮನಗರ ಮತ್ತು ಬೆಂಗಳೂರು ಗ್ರಾಮೀಣ, ಪೂರ್ವಕ್ಕೆ ಚಿಕ್ಕಬಳ್ಳಾಪುರ ಮತ್ತು ಈಶಾನ್ಯಕ್ಕೆ ಅನಂತಪುರಂ (ಆಂಧ್ರಪ್ರದೇಶ) ದಿಂದ ಆವೃತವಾಗಿದೆ .

ಧಾರವಾಡ
ಧಾರವಾಡ ಕರ್ನಾಟಕದ ಉತ್ತರ ಭಾಗದಲ್ಲಿದೆ. ಭೌಗೋಳಿಕವಾಗಿ, ಧಾರವಾಡವನ್ನು ಪೂರ್ವದಲ್ಲಿ ಗದಗ, ಉತ್ತರದಲ್ಲಿ ಬೆಳಗಾವಿ , ನೈರುತ್ಯದಲ್ಲಿ ಉತ್ತರ ಕನ್ನಡ, ದಕ್ಷಿಣದಲ್ಲಿ ಹಾವೇರಿ ಸುತ್ತುವರಿದಿದೆ. ಧಾರವಾಡ ಚಾಲುಕ್ಯರು, ಬಹಮನಿ ಸುಲ್ತಾನ, ವಿಜಯನಗರ ಸಾಮ್ರಾಜ್ಯ, ಆದಿಲ್ ಶಾಹಿ, ಮೊಘಲರು, ಶಿವಾಜಿ ಮಹಾರಾಜ್, ಪೇಶ್ವಾ ಬಾಲಾಜಿ ಬಾಜಿ ರಾವ್, ಹೈದರ್ ಅಲಿ, ಟಿಪ್ಪು ಸುಲ್ತಾನ್ ಮತ್ತು ಅಂತಿಮವಾಗಿ ಬ್ರಿಟಿಷ್ ಈಸ್ಟ್ […]

ಬಳ್ಳಾರಿ
ಬಳ್ಳಾರಿ ಕರ್ನಾಟಕದ ಪೂರ್ವ ಭಾಗದಲ್ಲಿದೆ. ಉತ್ತರದಲ್ಲಿ ರಾಯಚೂರು ಮತ್ತು ಕೊಪ್ಪಳ ಜಿಲ್ಲೆ, ಪಶ್ಚಿಮದಲ್ಲಿ ವಿಜಯನಗರ, ಹಾವೇರಿ ಮತ್ತು ಗದಗ, ದಕ್ಷಿಣದಲ್ಲಿ ಚಿತ್ರದುರ್ಗ ಮತ್ತು ದಾವಣಗೆರೆ ಮತ್ತು ಪೂರ್ವದಲ್ಲಿ ಅನಂತಪುರ ಮತ್ತು ಕರ್ನೂಲ್ (ಆಂಧ್ರ ಪ್ರದೇಶ) ಇವೆ. ಬಳ್ಳಾರಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ಜನರಿಗೆ ಸುಲಭವಾಗಿ ಭೇಟಿಯಾಗುವ ಸ್ಥಳವಾಗಿದೆ. ಆದ್ದರಿಂದ ಇಲ್ಲಿ ಎರಡು ರಾಜ್ಯಗಳ ಸಂಸ್ಕೃತಿ ಮತ್ತು ಸಂಪ್ರದಾಯಗಳ ಮಿಶ್ರಣವನ್ನು ನೋಡಬಹುದು.

ಬೆಂಗಳೂರು ನಗರ
ಬೆಂಗಳೂರು ಹಳೆಯ ಮತ್ತು ಹೊಸದಾದ ವೇಗದ ಗತಿಯ ಮಿಶ್ರಣವಾಗಿದೆ. ಇದು ದಕ್ಷಿಣ ಭಾರತದಲ್ಲಿ ಸಮುದ್ರ ಮಟ್ಟದಿಂದ 949 ಮೀಟರ್ ಎತ್ತರದಲ್ಲಿದೆ, ಕಾಸ್ಮೋಪಾಲಿಟನ್ ನಗರದ ಸಂವೇದನೆಗಳೊಂದಿಗೆ ಬೆರೆತು, ಆಕರ್ಷಕ ದೃಶ್ಯಗಳನ್ನು ಹೊಂದಿರುವ ರೋಮಾಂಚಕಾರಿ ತಾಣವಾಗಿದೆ. ಬೆಂಗಳೂರು ಕೇವಲ ನಗರವಲ್ಲ ಅದಕ್ಕಿಂತ ಹೆಚ್ಚಾಗಿದೆ; ಇದು ಭೂತ, ವರ್ತಮಾನ ಮತ್ತು ಭವಿಷ್ಯದ ಒಂದು ರೋಮಾಂಚಕ ತಾಣವಾಗಿದೆ, ಇದು ಇತರರಿಗಿಂತ ಭಿನ್ನವಾದ ಅನುಭವಗಳ ಮಿಶ್ರಣವಾಗಿದೆ! ಅದರ ಕಾಸ್ಮೋಪಾಲಿಟನ್ ಸ್ವಭಾವದೊಂದಿಗೆ, ಬೆಂಗಳೂರು ನಿಮ್ಮನ್ನು ಅದರ ಮಡಿಲಿಗೆ ಸ್ವಾಗತಿಸುತ್ತದೆ.

ಬೆಳಗಾವಿ
ಐತಿಹಾಸಿಕ ದಾಖಲೆಗಳ ಪ್ರಕಾರ ಬೆಳಗಾವಿಯನ್ನು ಮೂಲತಃ ವೇಲುಗ್ರಾಮ ಅಥವಾ ವೇಣುಗ್ರಾಮ ಎಂದು ಕರೆಯಲಾಗುತ್ತಿತ್ತು ಮತ್ತು ಇದರ ಅರ್ಥ ಅಕ್ಷರಶಃ “ಬಿದಿರಿನ ಗ್ರಾಮ”. ವೇಣು ಎಂದರೆ ಈ ಪ್ರದೇಶಗಳಲ್ಲಿ ಹೇರಳವಾಗಿ ಕಂಡುಬರುವಒಂದು ವಿಧದ ಬಿದಿರು . ಬೆಳಗಾವಿಯನ್ನು ದಕ್ಷಿಣದಲ್ಲಿ ಉತ್ತರ ಕನ್ನಡ ಮತ್ತು ಧಾರವಾಡ, ಪೂರ್ವದಲ್ಲಿ ಬಾಗಲಕೋಟೆ ಮತ್ತು ಗದಗ, ಉತ್ತರದಲ್ಲಿ ಮಹಾರಾಷ್ಟ್ರ ರಾಜ್ಯ ಮತ್ತು ಪಶ್ಚಿಮದಲ್ಲಿ ಗೋವಾ ರಾಜ್ಯವಿದೆ. ಕರ್ನಾಟಕದ ಅತ್ಯಂತ ಹಳೆಯ ನಗರಗಳಲ್ಲಿ ಬೆಳಗಾವಿಯು ಸಹ ಒಂದು ಮತ್ತು ಇದರ ವಿಸ್ತೀರ್ಣವು ಸಹ ದೊಡ್ಡದಾಗಿದೆ

ಮಂಡ್ಯ
ಮಂಡ್ಯವು ಕರ್ನಾಟಕದ ಸಕ್ಕರೆ ನಗರವಾಗಿದ್ದು, ಮೈಸೂರಿಗೆ ಹೋಗುವ ದಾರಿಯಲ್ಲಿ ಬೆಂಗಳೂರಿನಿಂದ ನೈರುತ್ಯಕ್ಕೆ 100 ಕಿ.ಮೀ ದೂರದಲ್ಲಿದೆ. ಕೃಷ್ಣರಾಜ ಸಾಗರ ಅಣೆಕಟ್ಟು, ಬೃಂದಾವನ ಗಾರ್ಡನ್ಸ್, ಶ್ರೀರಂಗಪಟ್ಟಣ, ರಂಗನತಿಟ್ಟು ಮತ್ತು ಕೊಕ್ಕರೆ ಬೆಳ್ಳೂರು ಪಕ್ಷಿಧಾಮಗಳು, ಮೇಲುಕೋಟೆ ದೇವಸ್ಥಾನ ಮತ್ತು ಶಿವನಸಮುದ್ರ ಜಲಪಾತ ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿ ಆಕರ್ಷಣೆಗಳು.

ಯಾದಗಿರಿ
ತೊಗರಿ ಬೇಳೆ ಮತ್ತು ಜೋಳದ ಬೆಳೆಗಳ ಬಂಪರ್ ಉತ್ಪಾದನೆಯಿಂದಾಗಿ ಯಾದಗಿರಿಯನ್ನು ಕರ್ನಾಟಕದ ದಾಲ್ ಬೌಲ್ (ಧಾನ್ಯಗಳ ಬುಟ್ಟಿ) ಎಂದು ಕರೆಯಲಾಗುತ್ತದೆ. ಯಾದಗಿರಿ ಕೋಟೆ ಕರ್ನಾಟಕದ ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ಯಾದಗಿರಿ ಒಂದು ಕಾಲದಲ್ಲಿ ದಕ್ಷಿಣ ಭಾರತದ ಪ್ರಥಮ ಮುಸ್ಲಿಂ ಸಾಮ್ರಾಜ್ಯವಾದ ಯಾದವ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಸ್ಥಳೀಯರು ಜಿಲ್ಲೆಯನ್ನು “ಯಾದವಗಿರಿ” ಎಂದು ಕರೆಯುತ್ತಾರೆ. ಕಾಲಾನಂತರದಲ್ಲಿ ಯಾದಗಿರಿ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಆದಿಲ್ ಶಾಹಿಗಳು ಮತ್ತು ನಿಜಾಮರ ಆಳ್ವಿಕೆಯಲ್ಲಿತ್ತು

ರಾಮನಗರ
ರಾಮನಗರ ಕರ್ನಾಟಕದ ರೇಷ್ಮೆ ನಗರವಾಗಿದೆ. ಬೆಂಗಳೂರಿನ ಪಕ್ಕದಲ್ಲಿಯೇ ಇರುವ ರಾಮನಗರ ಬಂಡೆ ಏರುವ ಸಾಹಸಕ್ಕೆ ಜನಪ್ರಿಯವಾಗಿದೆ, ಸಾವನದುರ್ಗದಲ್ಲಿರುವ ಏಷ್ಯಾದ ಅತಿದೊಡ್ಡ ಏಕಶಿಲೆಯ ಬೆಟ್ಟ, ಖಾಸಗಿ ರೆಸಾರ್ಟ್ನಲ್ಲಿ ದಕ್ಷಿಣ ಭಾರತದ ಅತಿ ಉದ್ದದ ಜಿಪ್-ಲೈನಿಂಗ್, ಚನ್ನಪಟ್ಟಣದ ಗೊಂಬೆಗಳು, ಮೇಕೆಡಾಟುವಿನಂತಹ ಸುಂದರವಾದ ಸ್ಥಳಗಳು ಮತ್ತು ಹಲವಾರು ದೇವಾಲಯಗಳು ರಾಮನಗರ ಜಿಲ್ಲೆಯಲ್ಲಿವೆ.

ವಿಜಯಪುರ
ವಿಜಯಪುರ ಉತ್ತರ ಕರ್ನಾಟಕದಿಂದ ಮಧ್ಯ ಭಾರತಕ್ಕೆ ವಿಸ್ತರಿಸಿದ ಡೆಕ್ಕನ್ ಸುಲ್ತಾನರ ದ್ವಾರವಾಗಿತ್ತು. ಐತಿಹಾಸಿಕವಾಗಿ ಶ್ರೀಮಂತ ಡೆಕ್ಕನ್ನಲ್ಲಿ ನೆಲೆಗೊಂಡಿರುವ ಈ ನಗರವನ್ನು 10 ರಿಂದ 11 ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರು ಸ್ಥಾಪಿಸಿದರು ಮತ್ತು ಈ ಪ್ರದೇಶದ ಮೇಲೆ ಹೆಚ್ಚಿನ ಪ್ರಭಾವ ಬೀರಿದ ಆದಿಲ್ ಶಾಹಿ ರಾಜರು ಸೇರಿದಂತೆ ವಿವಿಧ ರಾಜವಂಶಗಳು ಇದನ್ನು ಆಳುತ್ತಿದ್ದವು

ಹಾವೇರಿ
ಹಾವೇರಿ ಜಿಲ್ಲೆಯು ಬಹುತೇಕ ಕರ್ನಾಟಕದ ಮಧ್ಯಭಾಗದಲ್ಲಿದೆ, ಉತ್ತರದ ಬೀದರ್ನಿಂದ ಮತ್ತು ದಕ್ಷಿಣದ ಚಾಮರಾಜನಗರದಿಂದ ಸಮಾನ ಅಂತರದಲ್ಲಿದೆ. ಇದರ ಸುತ್ತಲೂ ಉತ್ತರದಲ್ಲಿ ಧಾರವಾಡ ಮತ್ತು ಗದಗ, ಪೂರ್ವದಲ್ಲಿ ಬಳ್ಳಾರಿ ಮತ್ತು ದಾವಣಗರೆ, ದಕ್ಷಿಣದಲ್ಲಿ ಶಿವಮೊಗ್ಗ ಮತ್ತು ಪಶ್ಚಿಮದಲ್ಲಿ ಉತ್ತರ ಕನ್ನಡ ಇವೆ. ಹಾವೇರಿ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಗೆ ಹೆಸರುವಾಸಿಯಾಗಿದೆ ಮತ್ತು ಇದನ್ನು ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಪರಿಗಣಿಸಲಾಗಿದೆ.