Karnataka logo

Karnataka Tourism
GO UP
karnataka bhavan

KSTDC ಕರ್ನಾಟಕ ಭವನವನ್ನು ವಹಿಸಿಕೊಂಡಿದೆ

separator
  /  KSTDC ಕರ್ನಾಟಕ ಭವನವನ್ನು ವಹಿಸಿಕೊಂಡಿದೆ

 ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ತನ್ನ ಸ್ಥಳೀಯ ರಾಜ್ಯವಾದ ಕರ್ನಾಟಕದ ಹೊರಗೆ ಸರ್ಕಾರದ ಸ್ವಯಂ ಆಸ್ತಿಯನ್ನು ನಿರ್ವಹಿಸುವಲ್ಲಿ ತನ್ನ ಮೊದಲ ಗೆಲುವನ್ನು ಕಂಡಿದೆ. ಡೆಲ್ಲಿಯಲ್ಲಿರುವ ಸೌತ್-ಎಕ್ಸ್ ನಲ್ಲಿ ಕರ್ನಾಟಕ ಭವನ-3  ಅನ್ನು ನಿರ್ವಹಿಸಲು ಮತ್ತು ನಿಭಾಯಿಸಲು ಇದು ಜವಾಬ್ದಾರಿಯನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ಈ ಹಿಂದೆ ಪ್ರಯೋಗಿಕ ಯೋಜನೆಯಾಗಿ, KSTDC ಪ್ರವಾಸೋದ್ಯಮಕ್ಕಾಗಿ ಸರ್ಕಾರದ ಆಡಳಿತದಲ್ಲಿರುವ ಆಸ್ತಿಯನ್ನು ಮತ್ತು ಬೆಂಗಳೂರಿನಲ್ಲಿರುವ ಸರ್ಕಾರಿ ಅತಿಥಿಗಳನ್ನು ನಿರ್ವಹಿಸುವ KKGH ಅನ್ನೂ ಸಹ  ನಿರ್ವಹಿಸಿದೆ. ಇದರ ಕಾರ್ಯ ಮತ್ತು ನಿಷ್ಠೆಯ ಆಧಾರದ ಮೇಲೆ ಸರ್ಕಾರ ಮತ್ತು ಸಿಬ್ಬಂದಿ ಮತ್ತು ಆಡಳಿತ ಸೇವೆಗಳ ಇಲಾಖೆ(DPAR) ದೆಹಲಿಯಲ್ಲಿರುವ ಕರ್ನಾಟಕ ಭವನ-3 ಅನ್ನು  KSTDC ಗೆ ನಿರ್ವಹಿಸಲು ಅವಕಾಶ ನೀಡಿದೆ.

KSTDC ಯ ವ್ಯವಸ್ಥಾಪಕ ನಿರ್ದೇಶಕರಾದ ಕುಮಾರ್ ಪುಷ್ಕರ್ ಅವರುTNIE ನೀಡಿದ ಸಂದರ್ಶನವೊಂದರಲ್ಲಿ ಅನೇಕ ಸಭೆಗಳು ಮತ್ತು ಚರ್ಚೆಗಳು ನಡೆದವು ಮತ್ತು  KKGH ನ ಕೆಲಸದ ಪ್ರಗತಿಯನ್ನು ಮಾಪನಮಾಡಲಾಯಿತು  ಎಂದು ಅವರೇ ಹೇಳಿದ್ದಾರೆ. ಇವುಗಳ ಆಧಾರದ ಮೇಲೆ ಮತ್ತು ರಾಜ್ಯ ಸರ್ಕಾರದ ಪ್ರಮುಖ ಕಾರ್ಯದರ್ಶಿಗಳ  ಶಿಫಾರಸ್ಸಿನ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ವರ್ಗವು (DPAR) ಕಟ್ಟಡವನ್ನು KSTDC ಗೆ ವರ್ಗಾಯಿಸಲು ಒಪ್ಪಿಕೊಂಡಿತು .

ಸರ್ಕಾರಿ ಸ್ವಾಮ್ಯದ ವಸತಿಗೃಹಗಳು ಅಥವಾ ಹೋಟೆಲ್ ಗಳಿಗೆ ಹೋಲಿಸಿದರೆ ಈ  ಭವನದಲ್ಲಿ ಉಳಿಯುವ ದರಗಳು ತುಂಬಾ ಅಗ್ಗವಾಗಿದೆ. ಇದರ ದರವು ಪ್ರತಿ ವ್ಯಕ್ತಿಗೆ 1000 ಮತ್ತು ಕರ್ನಾಟಕದ ಅತ್ಯುತ್ತಮವಾದ ಸಿಬ್ಬಂದಿಯನ್ನು KSTDC ಭವನದಲ್ಲಿ ನೇಮಕ ಮಾಡಲಾಗಿದೆ, ಅಲ್ಲದೆ ಈ ಕಟ್ಟಡವು ಸಾಂಪ್ರದಾಯಕವಾದ ‘ಕನ್ನಡಿಗ’ ಮನೋಭಾವವನ್ನು ನೀಡುತ್ತದೆ. ಸದ್ಯಕ್ಕೆ ಇದರ ಬುಕಿಂಗ್ ಅನ್ನು DPAR ಪೋರ್ಟಲ್ ನಲ್ಲಿ ಮಾಡಲಾಗುತ್ತಿದೆ, ಆದರೆ KSTDC ಯು ಅದರ ಬುಕ್ಕಿಂಗ್ ಅನ್ನು ಮಾಡಲು ಅದರದೇ ಆದ ಲಿಂಕನ್ನು, ಅದರ ಪೋರ್ಟಲ್ ಮುಖಾಂತರ ಮಾಡಲು ಪ್ರಯತ್ನಿಸುತ್ತಿದೆ ಇದರಿಂದ ಬುಕಿಂಗ್  ಮಾಡಲು ಸುಲಭವಾಗುತ್ತದೆ.

ಅವರು ಕರ್ನಾಟಕ ಭವನದ ಆಡಳಿತದ ಬಗ್ಗೆ ಮಾತನಾಡುತ್ತಾ ಇದು KKGH ಆಡಳಿತದ ರೀತಿಯಂತೆ ಇರುತ್ತದೆ ಎಂದು ಹೇಳಿದ್ದಾರೆ. KSTDC ಯು DPAR ನೊಂದಿಗೆ ಒಂದು ವರ್ಷದ ಒಪ್ಪಂದವನ್ನು ಹೊಂದಿದೆ, ಅದರ ಪ್ರಕಾರ, ಅತಿಥಿಗೃಹದಿಂದ ಬರುವ ಆದಾಯವು DPAR  ಗೆ ಹೋಗುತ್ತದೆ ಮತ್ತು KSTDC ಭರಿಸುತ್ತಿರುವ ವೆಚ್ಚವನ್ನು ರಾಜ್ಯ ಸರ್ಕಾರ ಮರುಪಾವತಿ ಮಾಡುತ್ತದೆ .ಇಷ್ಟೇ ಅಲ್ಲದೆ ಕರ್ನಾಟಕ ಭವನವು ಸಾರ್ವಜನಿಕರಿಗಾಗಿ ಒಂದು ರೆಸ್ಟೋರೆಂಟ್ ಅನ್ನು ಹೊಂದಲಿದೆ  ಮತ್ತು ಇಲ್ಲಿ ಸಾರ್ವಜನಿಕರಿಗೆ ಅಗತ್ಯವಾಗಿರುವ  ಕರ್ನಾಟಕದ ಮೂಲ ಆಹಾರವನ್ನು ಒದಗಿಸಲಾಗುತ್ತದೆ.  KSTDC ಯು DPAR ನೊಂದಿಗೆ ಮಾತನಾಡಿ ದೆಹಲಿಯಲ್ಲಿರುವ ಇನ್ನೂ ಎರಡು ಕರ್ನಾಟಕ ಭವನವನ್ನು ವಹಿಸಿಕೊಳ್ಳುವುದಾಗಿ ವಿಚಾರ ಮಾಡಿದೆ ಆದರೆ ಇದು KSTDC ಕರ್ನಾಟಕ ಭವನ-3 ರ ಆಡಳಿತದ ನಿರ್ವಹಣೆಯ ಆಧಾರದ ಮೇಲೆ ತೀರ್ಮಾನವಾಗುತ್ತದೆ .

ಈ ಹಿಂದೆ,  KKGH ನಲ್ಲಿ 180 ಕೊಠಡಿಗಳಿದ್ದು ಅದರಲ್ಲಿ ಸಣ್ಣ ಭಾಗವಷ್ಟೇ ಪ್ರವಾಸಿಗರಿಗೆ ಮೀಸಲಾಗಿತ್ತು ಮಿಕ್ಕ ಎಲ್ಲಾ ಕೊಠಡಿಗಳು ವಿಐಪಿಗಳು ಇಂತಹ ಪ್ರಮುಖ ಅತಿಥಿಗಳಿಗೆ  ಮೀಸಲಾಗಿತ್ತು,  ಆದರೆ ಈಗ ಕೇವಲ ಮೂರು ಕೊಠಡಿಗಳು ಮಾತ್ರ ರಾಜ್ಯದ ಅತಿಥಿಗಳಿಗಾಗಿ ಮೀಸಲಾಗಿದ್ದು ಮಿಕ್ಕ ಎಲ್ಲಾ ಕೊಠಡಿಗಳು ಸಾರ್ವಜನಿಕ ಬುಕ್ಕಿಂಗ್ಗೆ ಮುಕ್ತವಾಗಿದೆ.