Karnataka logo

Karnataka Tourism
GO UP
Mangalore fish curry

ಮಂಗಳೂರು ಮೀನು ಕರಿ

separator
  /  ಮಂಗಳೂರು ಮೀನು ಕರಿ

ಮಂಗಳೂರು ಮೀನು ಸಾರು ಕರಾವಳಿ ಕರ್ನಾಟಕದ ಜನಪ್ರಿಯ ಮಾಂಸಾಹಾರಿ ಖಾದ್ಯವಾಗಿದೆ. ಸ್ಥಳೀಯವಾಗಿ ಸಿಗುವ ಮೀನು ಮತ್ತು ಖಾರದ ಮಸಾಲೆಗಳಿಂದ ತಯಾರಿಸಿದ ಮಂಗಳೂರು ಮೀನು ಸಾರನ್ನು ಮೀನುನ್ನು ಇಷ್ಟಪಡುವವರು ಖಂಡಿತವಾಗಿ ತಿನ್ನಲೇಬೇಕು .

ಮಂಗಳೂರು ಮೀನಿನ ಸಾರನ್ನು ಹೇಗೆ ತಯಾರಿಸಲಾಗುತ್ತದೆ:

  • ಬಳಸಲಾಗುವ ಮೀನುಗಳ ಪ್ರಭೇದಗಳು: ಬಂಗುಡೆ (ಮ್ಯಾಕೆರೆಲ್), ಭೂತಾಯಿ  (ಸಾರ್ಡಿನ್) ಮತ್ತು ಕೇನ್ (ಲೇಡಿ ಫಿಶ್), ಇವುಗಳು ಅರಬ್ಬೀ ಸಮುದ್ರದಲ್ಲಿ ಕಂಡುಬರುವ ಜನಪ್ರಿಯ ಮೀನು ಪ್ರಭೇದಗಳಾಗಿವೆ. ಆದ್ದರಿಂದ ಕರಾವಳಿ ಕರ್ನಾಟಕದ ಮೀನು ಮಾರುಕಟ್ಟೆಗಳಲ್ಲಿ ಈ ತಳಿಗಳು ಲಭ್ಯವಿವೆ. ಇವು ಮಂಗಳೂರಿನ ಮೀನಿನ ಸಾರು ತಯಾರಿಸಲು ಬಳಸುವ ಜನಪ್ರಿಯ ಮೀನು ಪ್ರಭೇದಗಳು. ಕೇನ್ ರವಾ ಫ್ರೈ ಅಥವಾ ಕೇನ್ ನೇಕೆಡ್ ಫ್ರೈ ಸಾಮಾನ್ಯವಾಗಿ  ಪ್ರಸಿದ್ಧವಾಗಿದೆ ಮತ್ತು ಮಂಗಳೂರು ಕಡಲ ತೀರದಲ್ಲಿ ನಿಯಮಿತವಾಗಿ ಸೇವಿಸಲಾಗುತ್ತದೆ ಮತ್ತು ಇದು ಖಂಡಿತವಾಗಿಯೂ ಬಾಯಲ್ಲಿ ನೀರು ತರಿಸುತ್ತದೆ.
  • ಪದಾರ್ಥಗಳು: ಹುಣಸೆಹಣ್ಣು, ಮೀನು, ತೆಂಗಿನಕಾಯಿ, ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಎಣ್ಣೆ ಇತ್ಯಾದಿ.
  • ತಯಾರಿಸುವ ವಿಧಾನ : ಈರುಳ್ಳಿ, ಮೆಣಸಿನಕಾಯಿ, ಎಣ್ಣೆ ಇತ್ಯಾದಿಗಳನ್ನು ಹುಣಸೆ ನೀರು, ತೆಂಗಿನಕಾಯಿ, ಮೆಣಸಿನಕಾಯಿ, ಕೊತ್ತಂಬರಿ ಇತ್ಯಾದಿ ಪದಾರ್ಥಗಳೊಂದಿಗೆ ಬಿಸಿಮಾಡಲಾಗುತ್ತದೆ ಮತ್ತು ಹುರಿಯಲಾಗುತ್ತದೆ. ನೀರನ್ನು ಕ್ರಮೇಣ ಸೇರಿಸಲಾಗುತ್ತದೆ ಮತ್ತು ಮಸಾಲೆಯಲ್ಲಿ ನೆನೆಸಲಾದ ಮೀನಿನ ತುಂಡುಗಳನ್ನು ಬಾಂಡಲೆಯಲ್ಲಿ  ಹಾಕಲಾಗುತ್ತದೆ. ಕುದಿಸಿದ ನಂತರ ಮೀನು ಸಾರು ಬಡಿಸಲು ಸಿದ್ಧವಾಗಿದೆ. ತೆಂಗಿನ ಹಾಲು, ಉಪ್ಪು, ಕೊತ್ತಂಬರಿ ಸೊಪ್ಪು ಇತ್ಯಾದಿಗಳನ್ನು ರುಚಿಗೆ ಸೇರಿಸಲಾಗುತ್ತದೆ. ಇದಲ್ಲದೆ  ಸುಲಭವಾಗಿ ಲಭ್ಯವಿರುವ ಮೀನು ಸಾರಿನ ಮಸಾಲಾವನ್ನು ಸಹ ಬಳಸಲಾಗುತ್ತದೆ.
  • ಇದರೊಂದಿಗೆ ಬಡಿಸಲಾಗುತ್ತದೆ: ಮಂಗಳೂರು ಮೀನಿನ ಸಾರನ್ನು ಮುಖ್ಯವಾಗಿ ನೀರು ದೋಸೆ ಮತ್ತು ಅನ್ನದ ಜೊತೆಯಲ್ಲಿ ನೀಡಲಾಗುತ್ತದೆ.

ಮಂಗಳೂರು ಮೀನಿನ ಸಾರನ್ನು ಎಲ್ಲಿ ಸವೆಯಬಹುದು:

ಕರಾವಳಿ ಕರ್ನಾಟಕ- ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ‘ಮಾಂಸಾಹಾರಿ’ ಉಪಹಾರ ಗೃಹಗಳಲ್ಲಿ ಮಂಗಳೂರು ಮೀನು ಸಾರನ್ನು ನೀಡಲಾಗುತ್ತದೆ. ಬೆಂಗಳೂರು ಮತ್ತು ಸಮುದ್ರಾಹಾರದಲ್ಲಿ ಪರಿಣತಿ ಹೊಂದಿರುವ ಇತರ ನಗರಗಳಲ್ಲಿನ ಉಪಹಾರ ಗೃಹಗಳು ಹೆಚ್ಚಾಗಿ ಮಂಗಳೂರು ಮೀನು ಸಾರನ್ನು ನೀಡುತ್ತವೆ. ಮಂಗಳೂರು ಮೀನು ಸಾರನ್ನು ತಯಾರಿಸುವ ಹತ್ತಿರದ ಉಪಹಾರ ಗೃಹವನ್ನು ಕಂಡುಹಿಡಿಯಲು ನೀವು ಆನ್‌ಲೈನ್ ಆಹಾರ ವಿತರಣಾ ಆಪ್ ಗಳನ್ನು ಬಳಸಬಹುದು.