Karnataka logo

Karnataka Tourism
GO UP
Chalukya Utsava

ಚಾಲುಕ್ಯ ಉತ್ಸವ

separator
  /  ಚಾಲುಕ್ಯ ಉತ್ಸವ

ಚಾಲುಕ್ಯ ಉತ್ಸವ ಉತ್ತರ ಕರ್ನಾಟಕದ ಐತಿಹಾಸಿಕ ನಗರಗಳಾದ ಬಾದಾಮಿ ಮತ್ತು ಐಹೊಳೆಯಲ್ಲಿ ‌ನಡೆಯುವ ವಾರ್ಷಿಕ ಸಾಂಸ್ಕೃತಿಕ ಮತ್ತು ಪಾರಂಪರಿಕ ಉತ್ಸವವಾಗಿದೆ. ಚಾಲುಕ್ಯ ಉತ್ಸವವನ್ನು ಸಾಮಾನ್ಯವಾಗಿ ಫೆಬ್ರವರಿ ಆರಂಭದಲ್ಲಿಎರಡು ಅಥವಾ ಮೂರು ದಿನಗಳ ಕಾರ್ಯಕ್ರಮವಾಗಿ ಆಚರಿಸಲಾಗುತ್ತದೆ, 

ಪ್ರತಿ ವರ್ಷ ಕಾರ್ಯಕ್ರಮಗಳ ವಿವರ, ನಿಖರವಾದ ವೇಳಾಪಟ್ಟಿ ಬದಲಾಗುತ್ತದೆಯಾದರೂ, ಚಾಲುಕ್ಯ ಹಬ್ಬದಲ್ಲಿ ನಿರೀಕ್ಷಿಸಬಹುದಾದ ಪ್ರಮುಖ ಆಕರ್ಷಣೆಗಳನ್ನು ಕೆಳಗೆ ನೀಡಲಾಗಿದೆ. ಚಾಲುಕ್ಯ ಉತ್ಸವದ ಸಮಯ ಬಾದಾಮಿ ಮತ್ತು ಐಹೊಳೆಗೆ ಭೇಟಿ ನೀಡಲು, ಪ್ರಾಚೀನ ಗುಹೆ ದೇವಾಲಯಗಳು ಮತ್ತು ಐತಿಹಾಸಿಕ ಸ್ಥಳಗಳನ್ನು ಅನ್ವೇಷಿಸಲು ಅತ್ಯಂತ ಸೂಕ್ತ ದಿನಗಳಾಗಿವೆ. ಜೊತೆಗೆ ಪ್ರತಿಭಾವಂತ ಪ್ರದರ್ಶಕರು ನಡೆಸಿಕೊಡುವ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳನ್ನು ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ. 

ಚಾಲುಕ್ಯ ಉತ್ಸವ ಮುಖ್ಯಾಂಶಗಳು

  • ಕಲಾ ಪ್ರದರ್ಶನಗಳು
  • ಡೊಳ್ಳು ಕುಣಿತ 
  • ದೇವಾಲಯದ ಮೆರವಣಿಗೆಗಳು/ರಥೋತ್ಸವ
  • ಸಾಹಸ ಪ್ರದರ್ಶನಗಳು
  • ಕ್ರೀಡಾ ಸ್ಪರ್ಧೆಗಳು ಮತ್ತು ಆಟಗಳು
  • ಕುಸ್ತಿ ಸ್ಪರ್ಧೆ
  • ಸಂಗೀತ ಪ್ರದರ್ಶನ
  • ನೃತ್ಯ ಪ್ರದರ್ಶನ

 

ಹತ್ತಿರದಲ್ಲಿ ಇನ್ನೇನಿದೆ: ಪಟ್ಟದಕಲ್ಲು ಮತ್ತು ಮಹಕೂಟವನ್ನು ಚಾಲುಕ್ಯ ಹಬ್ಬದ ಸಮಯದಲ್ಲಿ ಬಾದಾಮಿ ಮತ್ತು ಐಹೊಳೆ ಜೊತೆಗೆ ಭೇಟಿ ಕೊಡಬಹುದಾಗಿದೆ. 

 ಸೂಚನೆ: ಈ ಪ್ರದೇಶದಲ್ಲಿ ವಿಪರೀತ ಬರಗಾಲ ಕಾಣಿಸಿಕೊಂಡ ವರ್ಷಗಳಲ್ಲಿ ಚಾಲುಕ್ಯ ಉತ್ಸವವನ್ನು ಆಚರಿಸದೇ ಇರಬಹುದು. 

 

ತಲುಪುವುದು ಹೇಗೆ: ಬಾದಾಮಿ ಬೆಂಗಳೂರಿನಿಂದ 450 ಕಿ.ಮೀ ದೂರದಲ್ಲಿದೆ. ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣವಾಗಿದೆ (ಬಾದಾಮಿಯಿಂದ 105 ಕಿ.ಮೀ). ಬಾದಾಮಿಯಲ್ಲಿ ರೈಲು ನಿಲ್ದಾಣವಿದೆ ಮತ್ತು ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಿಂದ ಉತ್ತಮ ಬಸ್ ಸೇವೆ ಮತ್ತು ರಸ್ತೆ ಸಂಪರ್ಕವಿದೆ. ಐಹೊಳೆ ಬಾದಾಮಿಯಿಂದ 35 ಕಿ.ಮೀ ದೂರದಲ್ಲಿದೆ.

ವಸತಿ: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಡೆಸುವ ಹೋಟೆಲ್ ಮಯೂರ ಮತ್ತು ಹಲವಾರು ಖಾಸಗಿ ಹೋಟೆಲ್ಗಳು ಬಾದಾಮಿ ಪಟ್ಟಣದಲ್ಲಿ ಲಭ್ಯವಿದೆ.