Karnataka logo

Karnataka Tourism
GO UP
Kambala Festival

ಕಂಬಳ

separator
  /  ಕಂಬಳ

ಕಂಬಳವು ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಜನಪ್ರಿಯವಾಗಿರುವ ಕೋಣಗಳ ಓಟದ ಸ್ಪರ್ಧೆಯಾಗಿದೆ. ಕಂಬಳ ಗ್ರಾಮಸ್ಥರಿಗೆ ಅದ್ಭುತ ಕ್ರೀಡಾ ಮತ್ತು ಮನರಂಜನಾ ಕಾರ್ಯಕ್ರಮವಾಗಿದ್ದು ಪ್ರವಾಸಿಗರು ಮತ್ತು ಛಾಯಾಗ್ರಾಹಕರೂ ಉತ್ಸಾಹದಿಂದ ಕಂಬಳಕ್ಕೆ ಸಾಕ್ಷಿಯಾಗುತ್ತಾರೆ.

ಕಂಬಳದ ವಿವರಗಳು:

  • ಎಮ್ಮೆಗಳು: ಈ ಪ್ರದೇಶದ ಎಮ್ಮೆ ಮಾಲೀಕರು ಮತ್ತು ರೈತರು ತಮ್ಮ ಕೋಣಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ ಮತ್ತು ಅವುಗಳಲ್ಲಿ ಕೆಲವನ್ನು ಕಂಬಳಕ್ಕಾಗಿಯೇ ವಿಶೇಷವಾಗಿ ಸಲಹಿ ಉತ್ತಮ ಆಹಾರ, ಎಣ್ಣೆಯ ಮಾಲಿಶ್ ಮಾಡಿ ಪೋಷಿಸಲಾಗುತ್ತದೆ. ಕಂಬಳ ಓಟದ ಸಮಯದಲ್ಲಿ ಸಾಮಾನ್ಯವಾಗಿ ಕೋಣಗಳನ್ನು ಜೋಡಿಯಾಗಿ ಓಡಿಸಲಾಗುತ್ತದೆ, ಇವನ್ನು ನೇಗಿಲು ಮತ್ತು ಹಗ್ಗ ಬಳಸಿ ನಿಯಂತ್ರಿಸಲಾಗುತ್ತದೆ  ಜೋಡಿಸಲಾಗುತ್ತದೆ. ಅತ್ತ್ಯುತ್ತಮ ಕಂಬಳದ ಕೋಣಗಳು 140 ಮೀಟರ್ ಓಟವನ್ನು 12 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಕ್ರಮಿಸಬಲ್ಲವು. ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ಕಂಬಳ ಕೋಣಗಳಿಗೆ ಹಾನಿಯಾಗದಂತೆ, ಚಿತ್ರಹಿಂಸೆ ನೀಡದೆ ಅಥವಾ ಇನ್ನಾವುದೇ ತೊಂದರೆ ಕೊಡದಂತೆ ನೋಡಿಕೊಳ್ಳಲು ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ. ಕಂಬಳದ ಸಮಯ ಈ ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತದೆ. 
  • ರೇಸ್ ಟ್ರ್ಯಾಕ್: ಭತ್ತದ ಗದ್ದೆಯೊಂದನ್ನು ಕಂಬಳದ ಓಟಕ್ಕೆ ಸಿದ್ಧಪಡಿಸಲಾಗುತ್ತದೆ. ಕಂಬಳವನ್ನು ಎರಡು ಸಮಾನಾಂತರ ರೇಸ್ ಟ್ರ್ಯಾಕ್‌ಗಳಲ್ಲಿ ನಡೆಸಲಾಗುತ್ತದೆ, ಇದು ಕೆಸರಿನಿಂದ  ತುಂಬಿರುತ್ತದೆ.
  • ಸವಾರ: ಕಂಬಳದ ಕೋಣವನ್ನು ಕಟ್ಟುಮಸ್ತಾದ ಆಳೊಬ್ಬನು ನಿಯಂತ್ರಿಸುತ್ತಾನೆ. ಈ ಓಟಗಾರನು ಮರದ ಹಲಗೆಯ ಮೇಲೆ ನಿಂತು ನೇಗಿಲನ್ನು ಮತ್ತು ಕೋಣಗಳನ್ನು ಚಾಟಿಯಿಂದ ಓಟದ ಸಮಯ ಕೆಸರು ನೀರನ್ನು ಎಷ್ಟು ಸಾಧ್ಯವೋ ಅಷ್ಟು ಮೇಲಕ್ಕೆ ಚಿಮ್ಮಿಸುತ್ತಾನೆ. 
  • ಓಟ: ಎರಡು ಸಮಾನಾಂತರ ರೇಸ್ ಟ್ರ್ಯಾಕ್‌ಗಳಲ್ಲಿ ಎಮ್ಮೆಗಳ ಎರಡು ತಂಡಗಳು ಮತ್ತು ಅವರ ಜಾಕಿಗಳು (ನಿಯಂತ್ರಕ/ಆಳು) ಗುರಿಯತ್ತ ಓಡುತ್ತವೆ. ಓಟದ ಪಂದ್ಯ ಇಡೀ ದಿನ ನಡೆಯುತ್ತದೆ. ವಿಜೇತರು ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತಾರೆ. ಗುರಿ ತಲುಪುವುದರ ಜೊತೆಗೆ, ಮೇಲೆ ಕಟ್ಟಿದ ಕೋಲಿನ ತನಕ ನೀರನ್ನು ಚಿಮ್ಮಿಸಿದವರಿಗೆ ಬಹುಮಾನಗಳನ್ನು ನೀಡಲಾಗುತ್ತದೆ.

ಋತು: ಭತ್ತದ ಸುಗ್ಗಿಯ ನಂತರ ಕಂಬಳ ಘಟನೆಗಳು ಪ್ರಾರಂಭವಾಗುತ್ತವೆ, ಇದು ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಲ್ಲಿ ನಡೆಯುತ್ತದೆ. ಕಂಬಳ ಕಾರ್ಯಕ್ರಮಗಳನ್ನು ತುಳುನಾಡಿನ ವಿವಿಧ ಭಾಗಗಳಲ್ಲಿ (ದಕ್ಷಿಣ ಕನ್ನಡ ಜಿಲ್ಲೆಯ ತುಳು ಮಾತನಾಡುವ ಪ್ರದೇಶಗಳು) ನವೆಂಬರ್ ಮತ್ತು ಮಾರ್ಚ್ ನಡುವೆ ನಡೆಸಲಾಗುತ್ತದೆ.

ಪ್ರಮುಖ ಕಂಬಳಗಳು: ಕರಾವಳಿ ಕರ್ನಾಟಕದ 45 ಕ್ಕೂ ಹೆಚ್ಚು ವಿವಿಧ ಗ್ರಾಮಗಳು ಪ್ರತಿವರ್ಷ ಕಂಬಳ ಓಟವನ್ನು ಆಚರಿಸುತ್ತವೆ. ಕೆಲವು ಜನಪ್ರಿಯ ಸ್ಥಳಗಳು:

  • ಕದ್ರಿ & ಪಿಲಿಕುಲ, ಮಂಗಳೂರು
  • ಮೂಡುಬಿದಿರೆ ಮತ್ತು ಪುತ್ತೂರು
  • ಕಕ್ಕೆ ಪಡವು
  • ಕುಲೂರು ಮತ್ತು ಸುರತ್ಕಲ್
  • ಉಪ್ಪಿನಂಗಡಿ
  • ವೇಣೂರು

ಕಂಬಳವನ್ನು ಎಲ್ಲಿ ನೋಡಬಹುದು?

ಸ್ಥಳೀಯ ಮಾಧ್ಯಮಗಳು ಮತ್ತು ಕೆಲವು ಖಾಸಗಿ ವೆಬ್‌ಸೈಟ್‌ಗಳಲ್ಲಿ ಕಂಬಳ ವೇಳಾಪಟ್ಟಿ ಲಭ್ಯವಿರುತ್ತದೆ. ಚಳಿಗಾಲ ಮತ್ತು ಬೇಸಿಗೆಯ ತಿಂಗಳುಗಳಲ್ಲಿ ನೀವು ಕರಾವಳಿ ಕರ್ನಾಟಕ ಪಟ್ಟಣಗಳಾದ ಮಂಗಳೂರು, ಉಡುಪಿ, ಮೂಡಬಿದ್ರಿ‌ಗೆ ಭೇಟಿ ನೀಡಿದಾಗ ನಿಮ್ಮ ಸ್ಥಳೀಯ ಆತಿಥೇಯರು / ಹೋಟೆಲ್ ಸಿಬ್ಬಂದಿ ನೀವು ಭೇಟಿ ನೀಡಬಹುದಾದ ಹತ್ತಿರದ ಅಥವಾ ಮುಂದಿನ ಕಂಬಳದ ವಿವರ ಕಂಡುಹಿಡಿಯಲು ಸಹಾಯ ಮಾಡುತ್ತಾರೆ. ಹೆಚ್ಚಿನ ಕಂಬಳ ಸ್ಪರ್ಧೆಗಳು ಹಲವಾರು ಗಂಟೆಗಳ ಕಾಲ / ರಾತ್ರಿಯಿಡೀ ನಡೆಯುತ್ತವೆ ಮತ್ತು ಉಚಿತ ಪ್ರವೇಶ ನೀಡುತ್ತವೆ.