Karnataka logo

Karnataka Tourism
GO UP
Vangi Bath

ವಾಂಗಿ ಬಾತ್

separator
  /  ವಾಂಗಿ ಬಾತ್

ವಾಂಗಿ ಬಾತ್ (ಬದನೆಕಾಯಿ ಅನ್ನ) ಕರ್ನಾಟಕದ ಒಂದು ವಿಶಿಷ್ಟ ಖಾದ್ಯವಾಗಿದ್ದು, ಹುರಿದ ಬದನೆಕಾಯಿಯ ಸಾರವನ್ನು ಅನ್ನದೊಂದಿಗೆ ಕಲಸಿ ತಯಾರಿಸಲಾದ ತಿನಿಸಾಗಿರುತ್ತದೆ. 

ತಯಾರಿ: ವಾಂಗಿ ಬಾತ್ ಮಾಡಲು, ಬದನೆಕಾಯಿಯನ್ನು ಮಸಾಲೆಗಳೊಂದಿಗೆ ಬೆರೆಸಿ ಇದ್ದಿಲಿನ ಮೇಲೆ ಅಥವಾ ನೇರವಾಗಿ ಜ್ವಾಲೆಯ ಮೇಲೆ ಬೇಯಿಸಲಾಗುತ್ತದೆ. ತರುವಾಯ ಇದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ವಾಂಗಿ ಬಾತ್ ಪುಡಿಯೊಂದಿಗೆ ಬೆರೆಸಲಾಗುತ್ತದೆ. ಮೆಣಸಿನಕಾಯಿ, ಕೊತ್ತಂಬರಿ, ಲವಂಗ, ಉದ್ದಿನ ಬೇಳೆ, ದಾಲ್ಚಿನ್ನಿ (ಚಕ್ಕೆ), ತೆಂಗಿನಕಾಯಿ ತುರಿ ಮುಂತಾದ ಹಲವಾರು ಪದಾರ್ಥಗಳನ್ನು ರುಬ್ಬುವ ಮೂಲಕ ವಾಂಗಿ ಬಾತ್ ಪುಡಿಯನ್ನು ತಯಾರಿಸಲಾಗುತ್ತದೆ. ನೇರವಾಗಿ ಅನ್ನದೊಂದಿಗೆ ಕಲಸಬಹುದಾದ ವಾಂಗಿ ಬಾತ್ ಮಿಶ್ರಣವನ್ನು ಅಂಗಡಿಗಳಿಂದ ಖರೀದಿಸಬಹುದಾಗಿದೆ. ಅಂತಿಮ ಹಂತದಲ್ಲಿ ಮೊದಲೇ ಬೇಯಿಸಿದ ಅನ್ನಕ್ಕೆ ವಾಂಗಿ ಬಾತ್ ಮಿಶ್ರಣದೊಂದಿಗೆ ಬದನೆಕಾಯಿ ತುಂಡುಗಳನ್ನು ಸೇರಿಸಲಾಗುತ್ತದೆ. ಹದವಾಗಿ ಬೆಂದ ನಂತರ ವಾಂಗಿ ಬಾತ್ ಸೇವಿಸಲು  ಸಿದ್ಧವಾಗುತ್ತದೆ. ಹೆಚ್ಚುವರಿ ರುಚಿಗೆ ಕಡಲೆಕಾಯಿ ಮತ್ತು ಗೋಡಂಬಿ ಸೇರಿಸಬಹುದಾಗಿದೆ. 

ವಾಂಗಿ ಬಾತನ್ನು ಸಾಮಾನ್ಯವಾಗಿ   ರಾಯಿತ/ಮೊಸರು ಬಜ್ಜಿ  (ಮೊಸರು ಮತ್ತು ತರಕಾರಿಗಳಾದ ಈರುಳ್ಳಿ, ಸೌತೆಕಾಯಿ ಅಥವಾ ಟೊಮೆಟೊಗಳ ಮಿಶ್ರಣ) ಯೊಂದಿಗೆ ಬಡಿಸಲಾಗುತ್ತದೆ. ಉಪ್ಪಿನಕಾಯಿ ಅಥವಾ ಚಟ್ನಿಯೊಂದಿಗೆ ಕೂಡ ವಾಂಗಿ ಬಾತನ್ನು ಸವಿಯಬಹುದು. 

ವಾಂಗಿ ಬಾತ್ ಎಲ್ಲಿ ಸಿಗುತ್ತದೆ? ವಾಂಗಿ ಬಾತ್ ಸಾಮಾನ್ಯವಾಗಿ ಹೆಚ್ಚಿನ ದರ್ಶಿನಿಗಳು  ಮತ್ತು ಉಪಾಹಾರ ಗೃಹ‌ಗಳಲ್ಲಿ ಲಭ್ಯವಿದೆ. ವಾಂಗಿ ಬಾತ್  ಮಿಶ್ರಣವು ಸೂಪರ್ ಮಾರ್ಕೆಟ್ ಮತ್ತು ಕಿರಾಣಿ ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಿದೆ, ಇದನ್ನು ಬಳಸಿಕೊಂಡು ಅಡುಗೆ ಸೌಲಭ್ಯಗಳು ಲಭ್ಯವಿದ್ದರೆ  ಸ್ವತಃ  ವಾಂಗಿ ಬಾತ್ ತಯಾರಿಸಲು ಸಾಧ್ಯವಿದೆ.