Karnataka logo

Karnataka Tourism
GO UP
Raagi Ambali

ರಾಗಿ ಅಂಬಲಿ

separator
  /  ರಾಗಿ ಅಂಬಲಿ

ರಾಗಿ ಅಂಬಲಿ ( ರಾಗಿ ಮಾಲ್ಟ್) ಕರ್ನಾಟಕದ ಹಲವಾರು ಭಾಗಗಳಲ್ಲಿ, ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಜನಪ್ರಿಯ ಪಾನೀಯವಾಗಿದೆ. ಕರ್ನಾಟಕ ರಾಗಿ ಉತ್ಪಾದಿಸುವ ಪ್ರಮುಖ ರಾಜ್ಯವಾಗಿದ್ದು ರಾಗಿ ಅಂಬಲಿ ರಾಜ್ಯಾದ್ಯಂತ ಸುಲಭವಾಗಿ ಲಭ್ಯವಿದೆ.

ರಾಗಿ ಅಂಬಲಿಯ ಆರೋಗ್ಯ ಪ್ರಯೋಜನಗಳು:

  • ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ
  • ದೇಹದ ಶಾಖವನ್ನು ಕಡಿಮೆ ಮಾಡುತ್ತದೆ
  • ಬಾಯಿ ಹುಣ್ಣು ನಿಯಂತ್ರಿಸಲು ಸಹಾಯ ಮಾಡುತ್ತದೆ
  • ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
  • ಆಯಾಸಗೊಂಡಾಗ ದೇಹದ ನೀರಿನಾಂಶ ಹೆಚ್ಚಿಸಿ ಸುಧಾರಿಸಿಕೊಳ್ಳಲು ಸಹಾಯಮಾಡುತ್ತದೆ. 

ರಾಗಿ ಅಂಬಲಿಯನ್ನು  ಹೇಗೆ ತಯಾರಿಸಲಾಗುತ್ತದೆ?

ರಾಗಿ ಅಂಬಲಿ ತಯಾರಿಸಲು ಸರಳವಾದ ಪಾನೀಯವಾಗಿದೆ. ರಾಗಿ ಪುಡಿಯನ್ನು ನೀರಿಗೆ ಸೇರಿಸಿ ಹಲವಾರು ನಿಮಿಷಗಳ ಕಾಲ ಕುದಿಸಲಾಗುತ್ತದೆ. ಇದು ರಾಗಿ ಅಂಬಲಿಯ ತಿರುಳನ್ನು ರೂಪಿಸುತ್ತದೆ. ಮೊಸರು ಅಥವಾ ಮಜ್ಜಿಗೆ, ಉಪ್ಪು, ಜೀರಿಗೆ, ಇಂಗು ಮುಂತಾದ ಹೆಚ್ಚುವರಿ ಪದಾರ್ಥಗಳನ್ನು ಮಿಶ್ರಣಕ್ಕೆ ಸೇರಿಸಿ ಬೆರೆಸಿ ನಂತರ ಕತ್ತರಿಸಿದ ಈರುಳ್ಳಿ ತುಂಡುಗಳು, ಕೊತ್ತಂಬರಿ ಸೊಪ್ಪು ಇತ್ಯಾದಿಗಳನ್ನೂ ಅಂತಿಮ ಹಂತದಲ್ಲಿ ಸೇರಿಸಲಾಗುತ್ತದೆ. ಶುಂಠಿ, ಕರಿಮೆಣಸು, ಹಸಿ ಮೆಣಸಿನಕಾಯಿ ಇತ್ಯಾದಿಗಳನ್ನು ಸೇರಿಸುವ ಮೂಲಕ ರಾಗಿ ಅಂಬಲಿಯ ರುಚಿಯಲ್ಲಿ ಕೆಲವು ವಿಧಗಳನ್ನು ಪಡೆಯಬಹುದಾಗಿದೆ. 

ರಾಗಿ ಅಂಬಲಿಯನ್ನು ಎಲ್ಲಿ ಸಿಗುತ್ತದೆ?

ರಾಗಿ ಅಂಬಲಿ ಕರ್ನಾಟಕದಾದ್ಯಂತ ಹಲವು ಬೇಕರಿ, ಉಪಹಾರ ಗೃಹಗಳಲ್ಲಿ ಲಭ್ಯವಿದೆ. ರಾಗಿ ಅಂಬಲಿ ಮಾರುವ ನಿಮ್ಮ ಹತ್ತಿರವಿರುವ ಉಪಹಾರ ಗೃಹ ಕಂಡುಹಿಡಿಯಲು ಆನ್‌ಲೈನ್ ಆಹಾರ ವಿತರಣಾ ಅಪ್ಲಿಕೇಶನ್‌ಗಳನ್ನು ಪರಿಶೀಲಿಸಿ. ರಾಗಿ ಮಾಲ್ಟ್ ಮಿಶ್ರಣವು ವಿವಿಧ ಸೂಪರ್ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಬಿಸಿನೀರನ್ನು ಸೇರಿಸುವ ಮೂಲಕ ಈ ಮಿಶ್ರಣಗಳನ್ನು ಬಳಸಿಕೊಂಡು ರಾಗಿ ಮಾಲ್ಟ್ ಸ್ವತಃ ತಯಾರಿಸಲು ಸಾಧ್ಯವಿದೆ.