Karnataka logo

Karnataka Tourism
GO UP
Chitranna

ಚಿತ್ರಾನ್ನ

separator
  /  ಚಿತ್ರಾನ್ನ

ಚಿತ್ರಾನ್ನ ಕರ್ನಾಟಕದ ಜನಪ್ರಿಯ ಖಾದ್ಯ. ಚಿತ್ರಾನ್ನ ತಯಾರಿಸಲು ಸುಲಭ ಮತ್ತು ಅತ್ಯಂತ ಕಡಿಮೆ ಖರ್ಚಿನಲ್ಲಿ ತಯಾರಿಸಬಹುದಾದುದರಿಂದ ಚಿತ್ರಾನ್ನದ ಬಳಕೆ ಹೆಚ್ಚು. 

ಚಿತ್ರಾನ್ನವನ್ನು ಹೇಗೆ ತಯಾರಿಸಲಾಗುತ್ತದೆ?

ಚಿತ್ರಾನ್ನವನ್ನು ಬೇಯಿಸಿದ ಅನ್ನದಿಂದ ತಯಾರಿಸಲಾಗುತ್ತದೆ. ಮುಖ್ಯ ಪದಾರ್ಥಗಳಾದ ತೆಂಗಿನ ಎಣ್ಣೆ, ನಿಂಬೆ ರಸ , ನೆಲಗಡಲೆ  ಬೀಜಗಳು, ಈರುಳ್ಳಿ, ಸಾಸಿವೆ ಮತ್ತು ಹಸಿರು / ಕೆಂಪು ಮೆಣಸಿನಕಾಯಿಗಳನ್ನು ಕೆಲವು ನಿಮಿಷಗಳ ಕಾಲ ಬಾಣಲೆಯಲ್ಲಿ ಹುರಿದು ನಂತರ ಮೊದಲೇ ಬೇಯಿಸಿದ ಅನ್ನವನ್ನು ಸೇರಿಸಿ ಕಲಸಲಾಗುತ್ತದೆ. ಪರಿಮಳಕ್ಕಾಗಿ ಕೊತ್ತಂಬರಿ ಸೊಪ್ಪನ್ನು ಹಾಕಲಾಗುತ್ತದೆ.  ಹೆಚ್ಚಿನ ರುಚಿಗಾಗಿ ಕೆಲವು ಗೋಡಂಬಿ ತುಂಡುಗಳನ್ನೂ ಸಹ ಸೇರಿಸಬಹುದಾಗಿದೆ. 

ಕರ್ನಾಟಕದ ಕೆಲವು ಮನೆಗಳಲ್ಲಿ ಚಿತ್ರಾನ್ನವನ್ನು ಹಿಂದಿನ ದಿನದ  ಉಳಿದಿರುವ ಅನ್ನದಿಂದ  ತಯಾರಿಸುತ್ತಾರೆ. ಇದರಿಂದ ಅನ್ನ ವ್ಯರ್ಥವಾಗುವುದನ್ನು ತಪ್ಪಿಸಲು ಮತ್ತು ಕುಟುಂಬ ಸದಸ್ಯರಿಗೆ ಕಡಿಮೆ ಖರ್ಚಿನಲ್ಲಿ ರುಚಿಕರ ಖಾದ್ಯವನ್ನು ತಯಾರಿಸಲು ಸಾಧ್ಯವಾಗುತ್ತದೆ. 

ಯಾವುದೇ ಸಹ ಭಕ್ಷ್ಯಗಳಿಲ್ಲದೆ ಚಿತ್ರಾನ್ನವನ್ನು ತಿನ್ನಬಹುದಾಗಿದೆ.  ತೆಂಗಿನಕಾಯಿ ಚಟ್ನಿ ಇದ್ದರೆ ಚಿತ್ರಾನ್ನ ಇನ್ನೂ ರುಚಿಕರವಾಗುತ್ತದೆ. ತಯಾರಾದ ತಕ್ಷಣ ಚಿತ್ರಾನ್ನವನ್ನು ತಿನ್ನುವುದು ಉತ್ತಮ. 

ಇತರ ಜನಪ್ರಿಯ ಖಾದ್ಯಗಳು: ವಾಂಗಿ ಬಾತ್, ಟೊಮೆಟೊ ರೈಸ್, ಬಿಸಿ ಬೇಳೆ ಬಾತ್ ಮತ್ತು  ಪುಳಿಯೊಗರೆ ಕರ್ನಾಟಕದಲ್ಲಿ ರುಚಿ ನೋಡಬಹುದಾದ ಇತರ ಜನಪ್ರಿಯ ಅನ್ನವನ್ನು ಆಧರಿಸಿದ ಭಕ್ಷ್ಯಗಳಾಗಿವೆ.

ಚಿತ್ರಾನ್ನ ಎಲ್ಲಿ ಸಿಗುತ್ತದೆ?

ಚಿತ್ರಾನ್ನ ಕರ್ನಾಟಕ ರಾಜ್ಯದಾದ್ಯಂತ ದರ್ಶಿನಿ  ಮತ್ತು ವಿವಿಧ ಉಪಾಹಾರ ಗೃಹ‌ಗಳಲ್ಲಿ ಸಿಗುತ್ತದೆ.  ಹೆಚ್ಚಿನ ಐಷಾರಾಮಿ ಉಪಾಹಾರ ಗೃಹ‌ಗಳಲ್ಲಿ ಚಿತ್ರಾನ್ನ ಉಪಹಾರದ ಮೆನುವಿನಲ್ಲಿ ಇಲ್ಲದಿದ್ದರೂ ವಿನಂತಿಯ ಮೇರೆಗೆ ತಯಾರಿಸಿ ಕೊಡುವ ಸಾಧ್ಯತೆ ಇದೆ.