Karnataka logo

Karnataka Tourism
GO UP
Hampi Utsav

ಹಂಪಿ ಉತ್ಸವ

separator
  /  ಹಂಪಿ ಉತ್ಸವ

ಹಂಪಿ ಕರ್ನಾಟಕದ ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿದ್ದು, ಹಿಂದಿನ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸಾರುತ್ತದೆ. ಪ್ರತಿ ವರ್ಷ ಹಂಪಿ ಉತ್ಸವವನ್ನು ಹಿಂದಿನ ಯುಗದ ವೈಭವವನ್ನು ನೆನಪಿಸಲು 2 ರಿಂದ 3 ದಿನಗಳ ಅವಧಿಯಲ್ಲಿ ಆಚರಿಸಲಾಗುತ್ತದೆ. ಹಂಪಿ ಉತ್ಸವವು ವಿಶ್ವದ ಎಲ್ಲಾ ಭಾಗಗಳಿಂದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ ಮತ್ತು ಇದು ಕರ್ನಾಟಕದ ಅತ್ಯಂತ ಜನಪ್ರಿಯ ಉತ್ಸವಗಳಲ್ಲಿ ಒಂದಾಗಿದೆ.

ಹಂಪಿ ಉತ್ಸವದಲ್ಲಿ ಏನನ್ನು ನಿರೀಕ್ಷಿಸಬಹುದು?

ಲಕ್ಷಾಂತರ ಪ್ರವಾಸಿಗರಿಗೆ ಸಾಂಸ್ಕೃತಿಕ ರಸದೌತಣ ಬಡಿಸಲು ಹಂಪಿ ಉತ್ಸವವು ಕಲೆ, ಸಂಗೀತ ಮತ್ತು ನೃತ್ಯ ವೇದಿಕೆಯಡಿಯಲ್ಲಿ ಸಾವಿರಾರು ಅತ್ಯುತ್ತಮ ಕಲಾಕಾರರನ್ನು ಒಟ್ಟುಗೂಡಿಸುತ್ತದೆ. ಪ್ರತಿ ವರ್ಷ ನಿಖರವಾದ ಕಾರ್ಯಕ್ರಮಗಳ ವೇಳಾಪಟ್ಟಿ ಮತ್ತು ಪ್ರದರ್ಶನಗಳು ಬದಲಾಗಬಹುದಾದರೂ, ಹಂಪಿ ಉತ್ಸವದ ಸಮಯದಲ್ಲಿ ಕೆಳಗಿನ ಕಾರ್ಯಕ್ರಮಗಳನ್ನು ನಿರೀಕ್ಷಿಸಬಹುದಾಗಿದೆ:

  • ಸ್ಪರ್ಧೆಗಳು: ಹಂಪಿ ಉತ್ಸವದ ಅಂಗವಾಗಿ ಛಾಯಾಗ್ರಹಣ ಸ್ಪರ್ಧೆ, ರಂಗೋಲಿ ಮತ್ತು ಮೆಹಂದಿ ಸ್ಪರ್ಧೆ, ಜಲ ಸಾಹಸ ಕ್ರೀಡೆಗಳಂತಹ ಹಲವಾರು ಸ್ಪರ್ಧೆಗಳು ನಡೆಯುತ್ತವೆ.
  • ಸಾಂಸ್ಕೃತಿಕ ಪ್ರದರ್ಶನಗಳು: ಬೊಂಬೆ ಪ್ರದರ್ಶನಗಳು, ಸಂಗೀತ ಪ್ರದರ್ಶನಗಳು, ನೃತ್ಯ ಪ್ರದರ್ಶನಗಳು, ನಾಟಕ, ಬೀದಿ ನಾಟಕಗಳು ಇತ್ಯಾದಿ. 
  • ಪಟಾಕಿ: ಹಂಪಿ ಉತ್ಸವದಲ್ಲಿ ಆಚರಣೆಯನ್ನು ಅದ್ಭುತ ಪಟಾಕಿ (ಸಿಡಿ ಮದ್ದು) ಪ್ರದರ್ಶನ ಇರುತ್ತದೆ. 
  • ಪ್ರದರ್ಶನಗಳು: ಕಲ್ಲಿನ ಶಿಲ್ಪಗಳು, ವರ್ಣಚಿತ್ರಗಳು, ಪುಸ್ತಕಗಳು ಮತ್ತು ಇತರ ಪ್ರದರ್ಶನಗಳು
  • ಹೆಲಿಕಾಪ್ಟರ್ ಸವಾರಿಗಳು: ಹಂಪಿ ಉತ್ಸವ್ 2020ಕ್ಕೆ ಭೇಟಿ ನೀಡುವವರು ಹಂಪಿಯ ವಿಶ್ವ ಪರಂಪರೆಯ ತಾಣದಲ್ಲಿ ಹೆಲಿಕಾಪ್ಟರ್ ಸವಾರಿಗಳನ್ನು ಆನಂದಿಸಬಹುದಾಗಿತ್ತು. 
  • ತಾರೆಯರ ಭೇಟಿಗಳು: ಚಲನಚಿತ್ರೋದ್ಯಮದ ಕೆಲವು ಪ್ರಮುಖ ವ್ಯಕ್ತಿಗಳು ಹಂಪಿ ಉತ್ಸವದಲ್ಲಿ ಭೇಟಿ ನೀಡುತ್ತಾರೆ, ನೃತ್ಯ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಾರೆ ಮತ್ತು ಅಭಿಮಾನಿಗಳನ್ನು ಖುಷಿಗೊಳಿಸುತ್ತಾರೆ. 

ಯಾವಾಗ:

2020ರ ಹಂಪಿ ಉತ್ಸವವನ್ನು ಈ ವರ್ಷ ಜನವರಿ 10 ಮತ್ತು 11 ರಂದು ನಡೆಸಲಾಯಿತು. ಪ್ರತಿ ವರ್ಷದ ದಿನಾಂಕಗಳು ಬದಲಾಗಬಹುದು. ಮುಂದಿನ ಆವೃತ್ತಿಯ ದಿನಾಂಕಗಳನ್ನು ತಿಳಿಯಲು ಕರ್ನಾಟಕ ಪ್ರವಾಸೋದ್ಯಮದ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಪುಟಗಳನ್ನು ನೋಡಿರಿ.

ಹಂಪಿಯನ್ನು ತಲುಪುವುದು:

ಹಂಪಿಯು ಬೆಂಗಳೂರಿನಿಂದ 350 ಕಿ.ಮೀ ದೂರದಲ್ಲಿದೆ ಮತ್ತು ರಸ್ತೆ, ರೈಲು ಮತ್ತು ವಿಮಾನದ ಮೂಲಕ ತಲುಪಬಹುದು. ವಿದ್ಯಾನಗರ ವಿಮಾನ ನಿಲ್ದಾಣ ಹಂಪಿಗೆ (40 ಕಿ.ಮೀ) ಹತ್ತಿರದ ವಿಮಾನ ನಿಲ್ದಾಣವಾಗಿದೆ ಮತ್ತು ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಪ್ರತಿದಿನ ವಿಮಾನಯಾನ  ಸೇವೆ ಹೊಂದಿದೆ.

ಹೊಸಪೇಟೆ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ (ಹಂಪಿಯಿಂದ 15 ಕಿ.ಮೀ). ಹಂಪಿಯನ್ನು ತಲುಪಲು ಬೆಂಗಳೂರಿನಿಂದ ಬಸ್ಸುಗಳು ಲಭ್ಯವಿದೆ.

ವಸತಿ:

ಹಂಪಿ ಮತ್ತು ಹತ್ತಿರದ ಹೊಸಪೇಟೆಯಲ್ಲಿ ಎಲ್ಲಾ ಬಜೆಟ್‌ಗಳಿಗೆ ಸೂಕ್ತವಾದ ವಸತಿ ಆಯ್ಕೆಗಳಿವೆ. ಎವೊಲ್ವ್ ಬ್ಯಾಕ್ ಹಂಪಿ ಮತ್ತು ಹಯಾಟ್ ಪ್ಲೇಸ್ ಹಂಪಿಯು ಹಂಪಿಯಲ್ಲಿ ಲಭ್ಯವಿರುವ ಅತ್ಯಂತ ಐಷಾರಾಮಿ ರೆಸಾರ್ಟ್ ಗಳು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹೋಟೆಲುಗಳು ಹಂಪಿ ಮತ್ತು ಹೊಸಪೇಟೆಯಲ್ಲಿ ಲಭ್ಯವಿದೆ

Screen Reader A- A A+