Karnataka logo

Karnataka Tourism
GO UP
Bhoota Kola Bhootha Aradhane - Pride of Tulu Nadu

ಭೂತದ ಕೋಲ

separator
  /  ಭೂತದ ಕೋಲ

ಭೂತದ ಕೋಲ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಆಧ್ಯಾತ್ಮಿಕ ನೃತ್ಯ ಮತ್ತು ಪೂಜಾ ವಿಧಾನವಾಗಿದೆ. ಭೂತದ ಕೋಲ ಸಾವಿರಾರು ವರ್ಷಗಳಿಂದ ಆಚರಣೆಯಲ್ಲಿದೆ ಎಂದು ಹೇಳಲಾಗುತ್ತದೆ.

ಪಾದ್ರಿ: ಭೂತದ ಕೋಲವನ್ನು ‘ಪಾದ್ರಿ’ ಎಂದು ಕರೆಯಲಾಗುವ ವ್ಯಕ್ತಿ ನಡೆಸಿಕೊಡುತ್ತಾನೆ. ಸಾಮಾನ್ಯವಾಗಿ ಸ್ಥಳೀಯ ಪೂಜಾರಿಗಳು ಈ ಜವಾಬ್ದಾರಿ ನಿರ್ವಹಿಸುತ್ತಾರೆ. ಭೂತದ ಕೋಲದ ವೇಳೆ ಮೈಮೇಲೆ ದೇವರು ಬಂದಂತೆ ವರ್ತಿಸುವ ಪಾದ್ರಿ ಉಗ್ರ ನರ್ತನ ಮಾಡುತ್ತಾ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಡುತ್ತಾರೆ. ಭಕ್ತರ ಸಂದೇಹ ಪರಿಹರಿಸುತ್ತಾರೆ. ಜನರು ಸಕಲ ಭಯ ಭಕ್ತಿಯೊಡನೆ ಭೂತಾರಾಧನೆ ಮಾಡುತ್ತಾರೆ. ಡೊಳ್ಳು ಮತ್ತು ಸಂಗೀತವು ನೃತ್ಯ ಮತ್ತು ಪೂಜಾ ವಿಧಿಗಳಿಗೆ ಸಾಥ್ ನೀಡುತ್ತದೆ. ಭೂತದ ಕೋಲದ ಸಮಯ ಸಮುದಾಯದ ಜನರೆಲ್ಲ ಒಟ್ಟಾಗಿ ಸೇರಿ ಆಚರಣೆಗಳಲ್ಲಿ ಪಾಲ್ಗೊಂಡು ಪರಸ್ಪರ ಸುಖ ದುಃಖ ವಿಚಾರಿಸಿ ದೇವರ ಆಶೀರ್ವಾದ ಪಡೆಯುತ್ತಾರೆ.

 ಜನಪ್ರಿಯ ಭೂತಗಳು: ಪಂಜುರ್ಲಿ, ಬೊಬ್ಬರ್ಯ, ಪಿಲಿಪೂಟಾ, ಕಲ್ಕುಡ, ಕಲ್ಬುರ್ತಿ, ಪಿಲಿಚಾಮುಂಡಿ, ಕೋಟಿ ಚೆನ್ನಯ ಇವು ಭೂತದ ಕೋಲದ ಭಾಗವಾಗಿ ಪೂಜಿಸಲ್ಪಡುವ ಕೆಲವು ಜನಪ್ರಿಯ ದೇವರುಗಳು (ಭೂತಗಳು).

ಕರಾವಳಿ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯ ಮತ್ತು ವ್ಯಾಪಕವಾಗಿ ಪ್ರದರ್ಶಿಸಲಾದ ಜಾನಪದ ನೃತ್ಯವಾದ ಯಕ್ಷಗಾನದಿಂದ ಭೂತದ ಕೋಲ ಸ್ವಲ್ಪ ಪ್ರಭಾವಿತಗೊಂಡಿದೆ ಎಂದು ಹೇಳಲಾಗುತ್ತದೆ. ಕೆಲವು ಭೂತದ ಕೋಲ ಆಚರಣೆಗಳು ಕೆಂಡದ ಮೇಲೆ ನಡೆಯುವುದನ್ನು ಸಹ ಒಳಗೊಂಡಿರುತ್ತವೆ.

ಭೂತದ ಕೋಲ ಎಲ್ಲಿ ನೋಡಬಹುದು?

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗ್ರಾಮೀಣ ಭಾಗಗಳಲ್ಲಿ ಸಣ್ಣ ಸ್ಥಳೀಯ ಸಮುದಾಯಗಳಲ್ಲಿ ಭೂತದ ಕೋಲವನ್ನು ನಡೆಸಲಾಗುತ್ತದೆ. ಭೂತದ ಕೋಲ ಪ್ರವಾಸಿ ಕಾರ್ಯಕ್ರಮವಲ್ಲ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಸಾಮಾನ್ಯವಾಗಿ ಮುಂಗಡ ಪ್ರಚಾರ ನೀಡಲಾಗುವುದಿಲ್ಲ. ಆದಾಗ್ಯೂ ಭೂತದ ಕೋಲ ನಡೆಯುವಾಗ ಯಾರು ನೋಡಬಹುದು ಎಂಬುದಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಉಡುಪಿ ಅಥವಾ ಮಂಗಳೂರು ಜಿಲ್ಲೆಯಲ್ಲಿ ಉಳಿದುಕೊಂಡಿರುವಾಗ ನಿಮ್ಮ ಸ್ಥಳೀಯ ಆತಿಥೇಯರ ಸಹಾಯ ಪಡೆದು ಹತ್ತಿರದಲ್ಲಿ ನಡೆಯಲಿರುವ ಭೂತದ ಕೋಲದ ಮಾಹಿತಿ ಪಡೆಯಲು ಯತ್ನಿಸಬಹುದು. 

Screen Reader A- A A+