Karnataka logo

Karnataka Tourism
GO UP
Bengaluru Karaga

ಬೆಂಗಳೂರು ಕರಗ

separator
  /  ಬೆಂಗಳೂರು ಕರಗ

ಬೆಂಗಳೂರು ಕರಗ

9 ದಿನಗಳ ಕರಗವನ್ನು ಅನ್ವೇಷಿಸಿ, ತಿಗಳರು ಎಂಬ ತಮಿಳು ಮಾತನಾಡುವ ತೋಟಗಾರರ  ಸಮುದಾಯವು ಪ್ರಾರಂಭಿಸಿದ ಮತ್ತು ಉಳಿಸಿಕೊಂಡ ಸಂಪ್ರದಾಯ. ಕರಗ ಉತ್ಸವವನ್ನು ಬೆಂಗಳೂರಿನ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ನಡೆಸಲಾಗುತ್ತದೆ. ಮಾರ್ಚ್ ಮತ್ತು ಏಪ್ರಿಲ್ ನಡುವಿನ ಕರಗದ ದಿನದಂದು ಮುಸ್ಸಂಜೆಯ ನಂತರ, ಸ್ತ್ರೀ ಉಡುಪನ್ನು ಧರಿಸಿದ ಪೂಜಾರಿಯೊಬ್ಬರು ಹಲವಾರು ಧೋತಿಯುಟ್ಟ, ಬರಿಯ ಎದೆಯ ತಿಗಳರುಗಳಿಂದ ಬೆರಗುಗೊಳಿಸುವ ಕತ್ತಿ ಆಟದ ಪಕ್ಕವಾದ್ಯದಲ್ಲಿ ಅದ್ಭುತ ಮೆರವಣಿಗೆಯನ್ನು ಮುನ್ನಡೆಸುತ್ತಾರೆ. ಅವರ ತಲೆಯ ಮೇಲೆ, ಹೂವಿನಿಂದ  ಅಲಂಕರಿಸಿದ  ಪಿರಮಿಡ್ ರೀತಿಯದನ್ನು ಇಟ್ಟುಕೊಂಡು  ಹೋಗುತ್ತಾರೆ . ಕರಗದ ಒಂದು ವಿಶಿಷ್ಟ ಲಕ್ಷಣವೆಂದರೆ 18 ನೇ ಶತಮಾನದ ಮುಸ್ಲಿಂ ಸಂತನ ಸಮಾಧಿಗೆ ಭೇಟಿ ನೀಡುವ ಮುರಿಯಲಾಗದ ಸಂಪ್ರದಾಯ

ಪ್ರತಿ ವರ್ಷ – ಈ ಪದ್ಧತಿ ಹಿಂದೂ-ಮುಸ್ಲಿಂ ಐಕ್ಯತೆಯ ಸಂಕೇತವಾಗಿದೆ.

ಇತಿಹಾಸ: ಮಹಾಭಾರತದ ಸಮಯದಲ್ಲಿ, ಪಂಚ ಪಾಂಡವರ ಪತ್ನಿ ದ್ರೌಪದಿ ಕಿರು ಸೈನ್ಯವನ್ನು ರಚಿಸಲು ಮತ್ತು ರಾಕ್ಷಸ ತಿಮಿರಾಸುರನನ್ನು ಸೋಲಿಸಲು ಹಲವಾರು ವೀರ ಕುಮಾರರನ್ನು (ಕೆಚ್ಚೆದೆಯ ಪುತ್ರರನ್ನು) ಸೃಷ್ಟಿಸಿದಳು. ಆಕೆಯ ಸಾವಿನ ಸಮಯದಲ್ಲಿ, ಈ ವೀರ ಕುಮಾರರು ದ್ರೌಪದಿಗೆ  ಅವರನ್ನು ಬಿಟ್ಟು ಹೋಗದಂತೆ ಬೇಡಿಕೊಂಡರು. ದ್ರೌಪದಿ ಬದಲಿಗೆ ಪ್ರತಿ ವರ್ಷ ಚೈತ್ರ ಮಾಸ (ತಿಂಗಳು) ಹುಣ್ಣಿಮೆಯ ದಿನದಂದು ಹಿಂದಿರುಗುವ ಭರವಸೆ ನೀಡಿದಳು. ಆದಿಶಕ್ತಿ ರೂಪದಲ್ಲಿ ದ್ರೌಪದಿ ಮರಳಿದ್ದನ್ನು ಗುರುತಿಸಲು ಪ್ರತಿ ವರ್ಷ ಕರಗ ಹಬ್ಬವನ್ನು ಆಚರಿಸಲಾಗುತ್ತದೆ.

ಕರಗ ಮೆರವಣಿಗೆ: ಕರಗ ಆಚರಣೆಯ ಅಂಗವಾಗಿ ಭಕ್ತರು ತಲೆಯ ಮೇಲೆ ಮಣ್ಣಿನ ಮಡಕೆಗಳನ್ನು ಹೊತ್ತುಕೊಂಡು ದೊಡ್ಡ ಮೆರವಣಿಗೆಯನ್ನು ನಡೆಸುತ್ತಾರೆ

ಬೆಂಗಳೂರು ಕರಗ ಯಾವಾಗ:

ಬೆಂಗಳೂರು ಕರಗದ 2020 ರ ಆವೃತ್ತಿಯು  2020 ರ ಏಪ್ರಿಲ್ 8 ರಂದು ಪ್ರಾರಂಭವಾಗಲಿದೆ. ಹಿಂದೂ ಪ೦ಚಾ೦ಗದ  ಪ್ರಕಾರ ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಕರಗ ಪ್ರಾರಂಭವಾಗುತ್ತದೆ. ನಿಖರವಾದ ದಿನಾಂಕವು ಹಿಂದೂ ಪ೦ಚಾ೦ಗವನ್ನು ಆಧರಿಸಿ ಪ್ರತಿ ವರ್ಷ ಬದಲಾಗುತ್ತದೆ ಆದರೆ ಸಾಮಾನ್ಯವಾಗಿ ಮಾರ್ಚ್/ಏಪ್ರಿಲ್‌ನಲ್ಲಿ ಬರುತ್ತದೆ.

ಬೆಂಗಳೂರು ಕರಗ ಎಲ್ಲಿಂದ ಪ್ರಾರಂಭವಾಗುತ್ತದೆ:

ಬೆಂಗಳೂರಿನ ನಗರ್ತಪೇಟೆಯಲ್ಲಿರುವ ಶ್ರೀ ಧರ್ಮರಾಯ ಸ್ವಾಮಿ ದೇವಾಲಯವು ಕರಗ ಮೆರವಣಿಗೆಯ ಆರಂಭಿಕ ಸ್ಥಳವಾಗಿದೆ ಮತ್ತು ಕರಗ ಉತ್ಸವಕ್ಕೆ ಸಂಬಂಧಿಸಿದ ಮುಖ್ಯ ದೇವಾಲಯವಾಗಿದೆ. ನಗರ್ತಪೇಟೆ ಬೆಂಗಳೂರು ವಿಮಾನ ನಿಲ್ದಾಣದಿಂದ 37 ಕಿ.ಮೀ ಮತ್ತು ನಗರ ಕೇಂದ್ರದಿಂದ(ಮೆಜೆಸ್ಟಿಕ್) 5 ಕಿ.ಮೀ ದೂರದಲ್ಲಿದೆ.

ವಾಸ್ತವ್ಯ: ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಬಹಳ ಹತ್ತಿರದಲ್ಲಿರುವ ಬೆಂಗಳೂರಿನ ಕೆ.ಆರ್ ಮಾರುಕಟ್ಟೆ ಮತ್ತು ಗಾಂಧಿ ನಗರ ಪ್ರದೇಶದಲ್ಲಿ ಸಾಕಷ್ಟು ವಾಸ್ತವ್ಯದ ಆಯ್ಕೆಗಳು ಲಭ್ಯವಿದೆ