Karnataka logo

Karnataka Tourism
GO UP
Pattadakal Dance Festivals

ಪಟ್ಟದಕಲ್ಲು ನೃತ್ಯೋತ್ಸವ

separator
  /  ಪಟ್ಟದಕಲ್ಲು ನೃತ್ಯೋತ್ಸವ

ಪಟ್ಟದಕಲ್ಲು ನೃತ್ಯೋತ್ಸವವನ್ನು ಪ್ರತಿವರ್ಷ ಕರ್ನಾಟಕ ಸರ್ಕಾರದ ಪ್ರಾಯೋಜಕತ್ವದಲ್ಲಿ ನಡೆಸಲಾಗುತ್ತದೆ. ಆಹ್ವಾನಿತ ನರ್ತಕರು ಪಟ್ಟದಕಲ್ಲಿನ ಪ್ರಸಿದ್ಧ ದೇವಾಲಯಗಳ ಹಿನ್ನೆಲೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾರೆ. 

ಪಟ್ಟದಕಲ್ಲು ನೃತ್ಯೋತ್ಸವವನ್ನು ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ನಡೆಸಲಾಗುತ್ತದೆ. ಪ್ರತಿ ವರ್ಷ ನಿಖರವಾದ ದಿನಾಂಕಗಳು ಮತ್ತು ವೇಳಾಪಟ್ಟಿ ಬದಲಾಗಬಹುದು. 

 

ಪಟ್ಟದಕಲ್ಲು ನೃತ್ಯೋತ್ಸವದ ಮುಖ್ಯಾಂಶಗಳು

  • ಶಾಸ್ತ್ರೀಯ ನೃತ್ಯ ಪ್ರಿಯರಿಗೆ ರಸದೌತಣ: ಕರ್ನಾಟಕದ ಎಲ್ಲಾ ಭಾಗಗಳ ಪರಿಣಿತ ನರ್ತಕರು ಪಟ್ಟದಕಲ್ಲಿನ ಪ್ರಸಿದ್ಧ ದೇವಾಲಯಗಳ ಮುಂದೆ ಸಿದ್ಧಪಡಿಸಿದ ವೇದಿಕೆಯ ಮೇಲೆ ಪ್ರದರ್ಶನ ನೀಡುತ್ತಾರೆ.
  • ಅನೇಕ ನೃತ್ಯ ಪ್ರಕಾರಗಳನ್ನು ನೋಡುವ ಅವಕಾಶ: ಪಟ್ಟದಕಲ್ಲು ನೃತ್ಯೋತ್ಸವದಲ್ಲಿ ವಿವಿಧ ಪ್ರಕಾರದ ನೃತ್ಯಗಳನ್ನು ನೋಡಬಹುದಾಗಿದೆ- ಭರತನಾಟ್ಯ, ಕುಚಿಪುಡಿ, ಕಥಕಳಿ, ಯಕ್ಷಗಾನ, ಮೋಹಿನಿ ಅಟ್ಟಮ್ ಇತ್ಯಾದಿ. 
  • ನೃತ್ಯ ಮತ್ತು ರಂಗಭೂಮಿ ವೃತ್ತಿಪರರು, ಅಭಿಮಾನಿಗಳಿಗೆ ಭೇಟಿಯ ಅವಕಾಶ
  • ಕರಕುಶಲ ಮೇಳ: ಕರಕುಶಲ ವಸ್ತುಗಳು ಮತ್ತು ಉಡುಗೊರೆ ವಸ್ತುಗಳ ಪ್ರದರ್ಶನವು ಸಂದರ್ಶಕರಿಗೆ ಸ್ಥಳೀಯ ಕಲೆ ಮತ್ತು ಕರಕುಶಲತೆಯನ್ನು ಹತ್ತಿರದಿಂದ ನೋಡಲು, ಖರೀದಿಸಲು ಉತ್ತಮ ಅವಕಾಶವಾಗಿದೆ. 

 

ಹತ್ತಿರದಲ್ಲಿ ಇನ್ನೇನಿದೆ? ಪಟ್ಟದಕಲ್ಲಿಗೆ ಭೇಟಿ ನೀಡಿದಾಗ ಐಹೊಳೆ (14 ಕಿ.ಮೀ), ಮಹಾಕೂಟ (27 ಕಿ.ಮೀ) ಮತ್ತು ಬಾದಾಮಿ (ಪಟ್ಟಡಕಲ್ಲಿ‌ನಿಂದ 22 ಕಿ.ಮೀ) ಗೂ ಭೇಟಿ ಕೊಡಬಹುದಾಗಿದೆ. 

 

ತಲುಪುವುದು ಹೇಗೆ: ಪಟ್ಟದಕಲ್ಲು ಬೆಂಗಳೂರಿನಿಂದ 445 ಕಿ.ಮೀ. ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣವಾಗಿದೆ (ಪಟ್ಟದಕಲ್ಲಿ‌ನಿಂದ 130 ಕಿ.ಮೀ). ಬಾದಾಮಿ ಹತ್ತಿರದ ರೈಲು ನಿಲ್ದಾಣವಾಗಿದೆ (ಪಟ್ಟಡಕಲ್ಲುದಿಂದ 17 ಕಿ.ಮೀ). ಪಟ್ಟದಕಲ್ಲು ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಿಂದ ಉತ್ತಮ ಬಸ್ ಸೇವೆ ಮತ್ತು ರಸ್ತೆ ಸಂಪರ್ಕವನ್ನು ಹೊಂದಿದೆ.

 

ವಸತಿ: 22 ಕಿ.ಮೀ ದೂರದಲ್ಲಿರುವ ಬಾದಾಮಿ ಪಟ್ಟಣದಲ್ಲಿ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಲಭ್ಯವಿದೆ.

Screen Reader A- A A+