Karnataka logo

Karnataka Tourism
GO UP
Gombe Habba

ಗೊಂಬೆ ಹಬ್ಬ

separator
  /  ಗೊಂಬೆ ಹಬ್ಬ

ಗೊಂಬೆ ಹಬ್ಬವನ್ನು ಪ್ರತಿವರ್ಷ ದಸರಾ / ನವರಾತ್ರಿಯ ಸಮಯದಲ್ಲಿ ಉತ್ಸಾಹಿ ವ್ಯಕ್ತಿಗಳು ಆಚರಿಸುತ್ತಾರೆ. ಗೊಂಬೆಗಳ ಉತ್ಸವವು ತಮ್ಮ ಪರಿಕಲ್ಪನೆ, ಆಸಕ್ತಿಗೆ ಅನುಗುಣವಾಗಿ ವಿವಿಧ ಮಾದರಿಯ  ಗೊಂಬೆಗಳನ್ನು ಸಂಗ್ರಹಿಸುವುದು, ಅವುಗಳನ್ನು ಒಪ್ಪವಾಗಿ ಜೋಡಿಸಿ ಬೆಳಕು ಮತ್ತಿತರ ಶೃಂಗಾರದೊಂದಿಗೆ ಪ್ರದರ್ಶನಕ್ಕಿಡುವುದು  ಮತ್ತು ಸ್ನೇಹಿತರನ್ನು ಮನೆಗೆ ಕರೆದು ಗೊಂಬೆಗಳನ್ನು ತೋರಿಸಿ ಸುಖ ದುಃಖ ಹಂಚಿಕೊಳ್ಳುವುದನ್ನು ಒಳಗೊಂಡಿದೆ.

ಗೊಂಬೆ ಹಬ್ಬದ ಪ್ರಮುಖ ಅಂಶಗಳು

ಪರಿಕಲ್ಪನೆ: ಗೊಂಬೆ ಹಬ್ಬವನ್ನು ಆಚರಿಸುವ ಪ್ರತಿಯೊಬ್ಬ ವ್ಯಕ್ತಿ / ಕುಟುಂಬವು ಸಾಮಾನ್ಯವಾಗಿ ಗೊಂಬೆಗಳನ್ನು ಯಾವುದಾದರೊಂದು ಥೀಮ್ ಅಥವಾ ಪೌರಾಣಿಕ ಕಥಾವಸ್ತುವನ್ನು ಆಧರಿಸಿ ಸಂಗ್ರಹಿಸುತ್ತಾರೆ.  ಉದಾಹರಣೆಗೆ, ರಾಮಾಯಣ, ಮಹಾಭಾರತ ಅಥವಾ ಇತರ ಹಿಂದೂ ಪುರಾಣಗಳ ಉಪ ಕಥೆಗಳು. 

ಪಟ್ಟದ ಗೊಂಬೆ: ಕಥೆ/ಪರಿಕಲ್ಪನೆಯ ಅತಿ ಮುಖ್ಯ ಪಾತ್ರಧಾರಿ ಗೊಂಬೆಗಳನ್ನು ಪಟ್ಟದ ಗೊಂಬೆ ಎನ್ನಲಾಗುತ್ತದೆ. ದೇವರು ಮತ್ತು ದೇವತೆಗಳಾದ ಶ್ರೀ ಕೃಷ್ಣ ಮತ್ತು ರಾಧಾ, ಶಿವ-ಪಾರ್ವತಿ, ರಾಮ-ಸೀತೆ ಸಾಮಾನ್ಯವಾಗಿ ಕಾಣಸಿಗುವ ಪಟ್ಟದ ಗೊಂಬೆಗಳಾಗಿವೆ. ಪಟ್ಟದ ಗೊಂಬೆಗಳಿಗೆ ಉಳಿದ ಗೊಂಬೆಗಳಿಗಿಂತ  ಹೆಚ್ಚಿನ ಮರ್ಯಾದೆ, ಅಲಂಕಾರ ಮತ್ತು ಪ್ರಾಮುಖ್ಯತೆ ಸಿಗುತ್ತದೆ.  ಗೊಂಬೆಗಳನ್ನು ಸಾಮಾನ್ಯವಾಗಿ ಮರದಿಂದ ತಯಾರಿಸಲಾಗುತ್ತದೆ. ಲೋಹ, ಪ್ಲಾಸ್ಟಿಕ್ ಅಥವಾ ಜೇಡಿಮಣ್ಣಿನಿಂದ ತಯಾರಿಸಿದ ಗೊಂಬೆಗಳನ್ನು ಸಹ ಬಳಸಬಹುದು.

ಪ್ರದರ್ಶನ: ಗೊಂಬೆಗಳನ್ನು ಅನೇಕ ಹಂತ (ಮೆಟ್ಟಿಲು/ಸಾಲು)ಗಳಿರುವ ವೇದಿಕೆಯ ಮೇಲೆ ಸ್ಥಾಪಿಸಿ ಪ್ರದರ್ಶಿಸಲಾಗುತ್ತದೆ. ಸಾಮಾನ್ಯವಾಗಿ ಸುಮಾರು 9 ಸಾಲುಗಳಿದ್ದು , ಇದು ನವರಾತ್ರಿಯ 9 ದಿನಗಳನ್ನು ಪ್ರತಿನಿಧಿಸುತ್ತದೆ. ಪಟ್ಟದ ಗೊಂಬೆಗಳನ್ನು ಸಾಮಾನ್ಯವಾಗಿ ಮೇಲಿನ ಸಾಲಿನಲ್ಲಿ ಅಥವಾ ಮಧ್ಯ ಭಾಗದಲ್ಲಿ ಇರಿಸಲಾಗುತ್ತದೆ, ಇತರ ಕಿರಿಯ ಗೊಂಬೆ / ಬೆಂಬಲ ಪಾತ್ರಗಳನ್ನು ಪ್ರತಿನಿಧಿಸುವ ಸಣ್ಣ ಗೊಂಬೆಗಳನ್ನು ಕೆಳಭಾಗದಲ್ಲಿ ಇರಿಸಲಾಗುತ್ತದೆ. ಗೊಂಬೆ ಹಬ್ಬ ಆಚರಣೆಗಳ ದೃಶ್ಯ ವೈಭವವನ್ನು ಹೆಚ್ಚಿಸಲು ಬೆಳಕಿನ ಅಲಂಕಾರಗಳು, ಹೂಮಾಲೆಗಳು ಮತ್ತು ಇತರ ಅಲಂಕಾರಗಳನ್ನು ಮಾಡಲಾಗುತ್ತದೆ.

ಗೊಂಬೆ ಸಂಗ್ರಹಗಳನ್ನು ವೀಕ್ಷಿಸಲು ಮತ್ತು ಪ್ರಶಂಸಿಸಲು ಪರಸ್ಪರರ ಮನೆಗೆ ಭೇಟಿ ನೀಡುವುದು, ಸಿಹಿತಿಂಡಿಗಳು ಮತ್ತು ಶುಭಾಶಯಗಳನ್ನು ಹಂಚಿಕೊಳ್ಳುವುದು ಗೊಂಬೆ ಹಬ್ಬದ ಅವಿಭಾಜ್ಯ ಅಂಗವಾಗಿದೆ. ಸರಸ್ವತಿ ಪೂಜೆಯನ್ನು ನವರಾತ್ರಿಯ 9 ನೇ ದಿನ ಮಾಡಲಾಗುತ್ತದೆ. ನವರಾತ್ರಿಯ 10 ನೇ ದಿನದಂದು ಗೊಂಬೆಗಳನ್ನು ವ್ಯವಸ್ಥಿತವಾಗಿ ಪ್ಯಾಕ್ ಮಾಡಿ ಮುಂದಿನ ವರ್ಷದವರೆಗೆ ವಿಶ್ರಾಂತಿ ನೀಡಲಾಗುತ್ತದೆ.

ಗೊಂಬೆ ಹಬ್ಬ ಎಲ್ಲಿ ಕಾಣಸಿಗುತ್ತದೆ?

ಗೊಂಬೆಗಳ ಪ್ರದರ್ಶನ ಸಾಮಾನ್ಯವಾಗಿ ನವರಾತ್ರಿ ಹಬ್ಬದ ಸಮಯದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮಗಳ ಒಂದು ಭಾಗವಾಗಿದೆ.

ಮೈಸೂರಿನಲ್ಲಿರುವ ಬಾಂಬೆ ಮನೆ ಗೊಂಬೆಗಳ ಜನಪ್ರಿಯ ಪ್ರದರ್ಶನ ಸ್ಥಳವಾಗಿದೆ.

ಬಿಂಬಾ ಆರ್ಟ್ ಹಟ್, ಬಸವನಗುಡಿ: ಪುಟಾಣಿ ಗೊಂಬೆಗಳ ಕಲೆಗಳನ್ನು 10 ದಿನಗಳ ಸುದೀರ್ಘ ಕಾರ್ಯಕ್ರಮಗಳೊಂದಿಗೆ ಆಚರಿಸುತ್ತದೆ, ಗೊಂಬೆಗಳು ಹೆಚ್ಚಿನ ಕಾರ್ಯಕ್ರಮಗಳ ಅವಿಭಾಜ್ಯ ಅಂಗವಾಗಿದೆ. http://www.indian-heritage.org/artcraft/bimba.html

ಖಾಸಗಿ ಕಂಪನಿ, ಬೆಂಗಳೂರು ಬೈ ಫೂಟ್ ಬೆಂಗಳೂರಿನ ಬಸವನಗುಡಿ ಪ್ರದೇಶದಲ್ಲಿ ದಸರಾ ಗೊಂಬೆಗಳ ವಾಕಿಂಗ್ ಪ್ರವಾಸಗಳನ್ನು ಆಯೋಜಿಸುತ್ತದೆ. ಪರಿಶೀಲಿಸಿ: http://www.bengalurubyfoot.com/month-s-walks.html

ನವರಾತ್ರಿಯ ಸಮಯದಲ್ಲಿ ನೀವು ಭೇಟಿ ನೀಡಬಹುದಾದ ಹತ್ತಿರದ ಗೊಂಬೆ ಹಬ್ಬ ಆಚರಣೆಯನ್ನು ಕಂಡುಹಿಡಿಯಲು ನಿಮ್ಮ ಅಥಿತೇಯರು / ಹೋಟೆಲ್ ಸಿಬ್ಬಂದಿ ನಿಮಗೆ ಸಹಾಯ ಮಾಡಬಹುದು (ಅಕ್ಟೋಬರ್ ತಿಂಗಳಲ್ಲಿ ಬರುತ್ತದೆ)

Screen Reader A- A A+