Karnataka logo

Karnataka Tourism
GO UP

ಜುಲೈ 2022

ನಮ್ಮ ಕರ್ನಾಟಕ ರಾಜ್ಯವು ತನ್ನ ಹಚ್ಚ ಹಸಿರು ಪ್ರಕೃತಿ, ಉಕ್ಕಿ ಹರಿಯುವ ಜಲಪಾತಗಳು, ಧುಮ್ಮಿಕ್ಕುವ , ಹರಿಯುವ ನದಿಗಳು, ಮಂಜು ಮುಸುಕಿದ ಬೆಟ್ಟಗಳು, ಬೀಚ್‌ಗಳು, ಕಾಡುಗಳು, ಜೀವ ವೈವಿಧ್ಯಗಳು ಮುಂತಾದವುಗಳಿಗಾಗಿ ಪ್ರಸಿದ್ಧವಾಗಿವೆ. ಮಾನ್ಸೂನ್ ಸಮಯದಲ್ಲಿ ಕರ್ನಾಟಕದಲ್ಲಿ ಕಡ್ಡಾಯವಾಗಿ ಭೇಟಿ ನೀಡಬೇಕಾದ ಸ್ಥಳಗಳಿವೆ. ಈಗ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗ ಎಲ್ಲರೂ ಪ್ರವಾಸದತ್ತ ಆಕರ್ಷಿತರಾಗುತ್ತಿದ್ದಾರೆ

ಪ್ರತಿ ವರ್ಷ ಜುಲೈ 29 ಅನ್ನು ಅಂತರರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಿಸಲಾಗುತ್ತದೆ ಮತ್ತು ಈ ಸಂದರ್ಭದಲ್ಲಿ ಹುಲಿ ಸಂಬಂಧಿತ ಸಮಸ್ಯೆಗಳಿಗೆ ವೀಡಿಯೊಗಳು, ಇನ್ಫೋಗ್ರಾಫಿಕ್ಸ್ ಮತ್ತು ಲಿಂಕ್‌ಗಳನ್ನು ಹಂಚಿಕೊಳ್ಳುವ ಮೂಲಕ ಹುಲಿ ಸರಂಕ್ಷಣೆ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರನ್ನು ತೊಡಗಿಸಿಕೊಳ್ಳುವ ಮೂಲಕ ಜಾಗೃತಿ ಮತ್ತು ಬೆಂಬಲವನ್ನು ನೀಡಲಾಗುತ್ತದೆ. 2010 ರಲ್ಲಿ

ಸಕ್ರೆಬೈಲ್ ಆನೆ ಶಿಬಿರವು ಅರಣ್ಯ ಶಿಬಿರವಾಗಿದ್ದು ಇದು ಶಿವಮೊಗ್ಗ ಕೇಂದ್ರ ಕಛೇರಿಯಿಂದ 14 ಕಿಮೀ ದೂರದಲ್ಲಿದೆ ತುಂಗಾ ನದಿಯ ದಡದಲ್ಲಿರುವ ಈ ಸಕ್ರೆಬೈಲ್ ಆನೆ ಶಿಬಿರವು ಕರ್ನಾಟಕ ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದೆ. ಈ ಶಿಬಿರವು ವನ್ಯಜೀವಿ ಉತ್ಸಾಹಿಗಳು ಮತ್ತು ಪ್ರವಾಸಿಗರನ್ನು ಮಾತ್ರವಲ್ಲದೆ ಆನೆಗಳ ಬಗ್ಗೆ ಅಧ್ಯಯನ ಮಾಡಲು ಬಯಸುವ ಉತ್ಸಾಹಿಗಳನ್ನು ಆಕರ್ಷಿಸುತ್ತದೆ.

ಕಬಿನಿ ಎಂದರೆ ಎಲ್ಲ ವಯೋಮಾನದವರ ಪ್ರೀತಿಯ ತಾಣವಾಗಿದೆ. ಕಾಡಿನ ಮೌನ, ಪಕ್ಷಿಗಳ ಚಿಲಿಪಿಲಿ, ಕಬಿನಿ ನದಿಯ ಶಾಂತತೆ, ರೋಮಾಂಚನಗೊಳಿಸುವ ಸಫಾರಿಗಳು ಮತ್ತು ವನ್ಯಜೀವಿಗಳನ್ನು ನೋಡುವ ಉತ್ಸಾಹ, ಇವೆಲ್ಲವೂ ಕಬಿನಿಗೆ ಭೇಟಿ ನೀಡಲು ಮುಖ್ಯಕಾರಣಗಳಾಗುತ್ತವೆ.

ಶಿವಮೊಗ್ಗ ಜಿಲ್ಲೆಯು ಹಲವಾರು ಪ್ರವಾಸಿ ತಾಣಗಳನ್ನು ಹೊಂದಿದೆ. ಶಿವಮೊಗ್ಗ ಎಂದರೆ ‘ಶಿವ- ಮುಖ’ ಅಥವಾ ‘ಶಿವನ ಮುಖ’ ಎಂದು ನಂಬಲಾಗಿದೆ. ಶಿವಮೊಗ್ಗ ಜಿಲ್ಲೆ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸರಿಸುಮಾರು 300 ಕಿಮೀ ದೂರದಲ್ಲಿದೆ. ತುಂಗಾ ನದಿಯ ದಡದಲ್ಲಿರುವ ಶಿವಮೊಗ್ಗವನ್ನು ಸಾಮಾನ್ಯವಾಗಿ ‘ಮಲೆನಾಡಿಗೆ ಹೆಬ್ಬಾಗಿಲು’ ಎಂದು ಕರೆಯಲಾಗುತ್ತದೆ. ಇದು ಸುಂದರವಾದ ಪ್ರಕೃತಿ ದೃಶ್ಯಗಳು ಮತ್ತು ಆಕರ್ಷಣೀಯ ಪ್ರವಾಸಿತಾಣಗಳನ್ನು