Karnataka logo

Karnataka Tourism
GO UP
Image Alt

ಶಿವಮೊಗ್ಗದಲ್ಲಿ ನೋಡಬಹುದಾದ ಸ್ಥಳಗಳು

separator
  /  ಬ್ಲಾಗ್   /  ಶಿವಮೊಗ್ಗದಲ್ಲಿ ನೋಡಬಹುದಾದ ಸ್ಥಳಗಳು

ಶಿವಮೊಗ್ಗದಲ್ಲಿ ನೋಡಬಹುದಾದ ಸ್ಥಳಗಳು

ಶಿವಮೊಗ್ಗ ಜಿಲ್ಲೆಯು ಹಲವಾರು ಪ್ರವಾಸಿ ತಾಣಗಳನ್ನು ಹೊಂದಿದೆ. ಶಿವಮೊಗ್ಗ ಎಂದರೆ ‘ಶಿವ- ಮುಖ’ ಅಥವಾ ‘ಶಿವನ ಮುಖ’ ಎಂದು ನಂಬಲಾಗಿದೆ. ಶಿವಮೊಗ್ಗ ಜಿಲ್ಲೆ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸರಿಸುಮಾರು 300 ಕಿಮೀ ದೂರದಲ್ಲಿದೆ. ತುಂಗಾ ನದಿಯ ದಡದಲ್ಲಿರುವ ಶಿವಮೊಗ್ಗವನ್ನು ಸಾಮಾನ್ಯವಾಗಿ ‘ಮಲೆನಾಡಿಗೆ ಹೆಬ್ಬಾಗಿಲು’ ಎಂದು ಕರೆಯಲಾಗುತ್ತದೆ. ಇದು ಸುಂದರವಾದ ಪ್ರಕೃತಿ ದೃಶ್ಯಗಳು ಮತ್ತು ಆಕರ್ಷಣೀಯ ಪ್ರವಾಸಿತಾಣಗಳನ್ನು ಹೊಂದಿದ್ದು ತನ್ನ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಗೆ ಹೆಸರಾಗಿದೆ. ಇದು ಚಾಲುಕ್ಯರು, ಕದಂಬರು, ಗಂಗರು ಮತ್ತು ಹೊಯ್ಸಳರಂತಹ ವಿವಿಧ ರಾಜವಂಶಗಳಿಂದ ಆಳಲ್ಪಟ್ಟಿದೆ. ನೀವು ಶಿವಮೊಗ್ಗಕ್ಕೆ ಭೇಟಿ ನೀಡಿದಾಗ ಇಲ್ಲಿನ ಹಲವು ಪ್ರದೇಶಗಳಿಗೆ ಭೇಟಿ ನೀಡಲೇಬೇಕು.

ಪಶ್ಚಿಮ ಘಟ್ಟದ ವಿಭಾಗದಲ್ಲಿರುವ ಶಿವಮೊಗ್ಗವು ಪ್ರಕೃತಿ ಪ್ರಿಯರಿಗೆ, ಛಾಯಾಗ್ರಾಹಕರಿಗೆ, ಪಾದಯಾತ್ರಿಗಳಿಗೆ, ವನ್ಯಜೀವಿ ಉತ್ಸಾಹಿಗಳಿಗೆ ಮತ್ತು ವೀಕ್ಷಣಾ ಸ್ಥಳಗಳನ್ನು ಅನ್ವೇಷಿಸಲು ಇಷ್ಟಪಡುವ ಎಲ್ಲರಿಗೂ ಸಾಕಷ್ಟು ಅವಕಾಶಗಳನ್ನು ನೀಡುತ್ತದೆ. ಇಲ್ಲಿ ನಿಮಗೆ ಜಲಪಾತಗಳು, ಟ್ರೆಕ್ಕಿಂಗ್ ಹಾದಿಗಳು, ಪರ್ವತಗಳು, ಗಿರಿಧಾಮಗಳು ವನ್ಯಜೀವಿಗಳು, ಪಕ್ಷಿಗಳು ಮತ್ತು ಚಿಟ್ಟೆಗಳು, ಸರೀಸೃಪಗಳು ಸೇರಿದಂತೆ ಎಲ್ಲವನ್ನೂ ಕಾಣಲು ನಿಮಗೆ ಅವಕಾಶವಿದೆ. ಶಿವಮೊಗ್ಗವು ಭಾರತದಲ್ಲಿ ಅಡಿಕೆ ಬೀಜಗಳನ್ನು ಅತಿ ಹೆಚ್ಚು ಬೆಳೆಯುವ ಪ್ರದೇಶವಾಗಿದೆ. ಅಡಿಕೆ ಮರವನ್ನು ಹತ್ತುವ ಕಲೆ ಮತ್ತು ಮುಂದಿನ ಸಂಸ್ಕರಣೆಗಾಗಿ ವಿಂಗಡಿಸುವ ಮತ್ತು ಪ್ಯಾಕೇಜಿಂಗ್ ಮಾಡುವ ಪ್ರಕ್ರಿಯೆ ಹೇಗೆ ಎಂದು ತಿಳಿಯಲು ನಿಮಗೆ ಆಸಕ್ತಿ ಇದ್ದರೆ ಅಡಿಕೆ ತೋಟಕ್ಕೆ ಭೇಟಿ ನೀಡಬಹುದು. ರೈತರು ಮರಗಳನ್ನು ಹತ್ತುವುದನ್ನು ನೋಡುವುದೇ ಒಂದು ಚಂದದ ದೃಶ್ಯವಾಗಿದೆ.

ನೀವು ಶಿವಮೊಗ್ಗದಲ್ಲಿ ನೋಡಬಹುದಾದ ಅತ್ಯುತ್ತಮ ಸ್ಥಳಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ. ಓದಿ ಆನಂದಿಸಿ.

ಜೋಗ್ ಫಾಲ್ಸ್ ಎಂಬ ಅದ್ಭುತ ಲೋಕ

ಜೋಗ್ ಫಾಲ್ಸ್

ನೀವು ಶಿವಮೊಗ್ಗಕ್ಕೆ ಭೇಟಿ ನೀಡಿದ ಸಮಯದಲ್ಲಿ ಅದರಲ್ಲೂ ವಿಶೇಷವಾಗಿ ಮಳೆಗಾಲದ ನಂತರ ನೀವು ಭೇಟಿ ನೀಡಿದರೇ ಆಗ ಕರ್ನಾಟಕದ ಹೆಮ್ಮೆಯ ಭವ್ಯವಾದ ಮತ್ತು ವೈಭವಯುತವಾದ ಜೋಗ್ ಫಾಲ್ಸಗೆ ಭೇಟಿ ನೀಡಲೇಬೇಕು. ಜೋಗದ ಗುಂಡಿ ಅಥವಾ ಗೇರಸೊಪ್ಪೆ ಜಲಪಾತ ಎಂದೂ ಕರೆಯಲ್ಪಡುವ ಜೋಗ್ ಜಲಪಾತವು ಶರಾವತಿ ನದಿಯ ಸೃಷ್ಟಿಯಾಗಿದ್ದು ಇದು ಸುಮಾರು 253 ಮೀಟರ್ ಎತ್ತರದಲ್ಲಿ ಹರಿಯುತ್ತದೆ. ರಾಜಾ, ರಾಣಿ, ರಾಕೆಟ್ ಮತ್ತು ರೋರರ್ ಎಂದೂ ಕರೆಯಲ್ಪಡುವ ಜೋಗ್ ಫಾಲ್ಸ್ ನ ಅದ್ಭುತ ನೋಟಗಳು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತವೆ.ಇದು ಭಾರತದ ಎರಡನೆಯ ಅತಿ ಎತ್ತರದ ಜಲಪಾತವಾಗಿದೆ. ಇದು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದಟ್ಟವಾದ ಕಾಡು ಹಾಗು ಗುಡ್ಡಗಳಿಂದ ಆವೃತ್ತವಾದ ಸ್ಥಳದಲ್ಲಿದೆ.

ಕೆಳದಿ ದೇವಾಲಯ

ಕೆಳದಿ ದೇವಸ್ಥಾನ

ಸಾಗರ ಜಿಲ್ಲೆಯ ಮುಖ್ಯ ಪಟ್ಟಣದಿಂದ ಕೇವಲ 80 ಕಿಮೀ ದೂರದಲ್ಲಿ ಈ ಅದ್ಭುತವಾದ ಸುಂದರವಾದ ಕೆಳದಿ ರಾಮೇಶ್ವರ ದೇವಾಲಯವಿದೆ. ಈ ದೇವಾಲಯವನ್ನು ಕೆಳದಿ ನಾಯಕರು ಕ್ರಿ.ಶ. 1500 ರಲ್ಲಿ ನಿರ್ಮಿಸಿದರು. ಈ ದೇವಾಲಯವು ಇತಿಹಾಸ, ಪರಂಪರೆ ಮತ್ತು ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಯಾಗಿದೆ. ವಿಜಯನಗರ ಸಾಮ್ರಾಜ್ಯದ ಭಾಗವಾಗಿದ್ದ ಕೆಳದಿಯಲ್ಲಿ ಈ ದೇವಾಲಯವನ್ನು ಹೊಯ್ಸಳ-ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಆಧರಿಸಿ ನಿರ್ಮಿಸಲಾಗಿದೆ. ಗೋಡೆಗಳು, ಛಾವಣಿಗಳು, ಕಂಬಗಳು ಮತ್ತು ದ್ವಾರಗಳ ಮೇಲೆ ಸೊಗಸಾದ ಮತ್ತು ಸಂಕೀರ್ಣವಾದ ಕೆತ್ತಿದ ಕೆತ್ತನೆಗಳು ತುಂಬಾ ಆಕರ್ಷಕವಾಗಿವೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಸ್ತಂಭದಲ್ಲಿ ಗಣೇಶನಿಗೆ ಗೌರವ ಸಲ್ಲಿಸುತ್ತಿರುವ ಮಹಿಳೆ ರೂಪದ ಕೆತ್ತನೆ. ಇದು 24 ಅಡಿ ಎತ್ತರದ ಸ್ತಂಭವಾಗಿದ್ದು, ಸುಲ್ತಾನ್ ಔರಂಗಜೇಬನೊಂದಿಗೆ ಧೈರ್ಯದಿಂದ ಹೋರಾಡಿದ ರಾಣಿ ಚೆನ್ನಮ್ಮನದು ಎಂದು ನಂಬಲಾಗಿದೆ.

ಇಕ್ಕೇರಿ ದೇವಸ್ಥಾನ

ಇಕ್ಕೇರಿ ದೇವಸ್ಥಾನ

ಈ ದೇವಸ್ಥಾನವನ್ನು ಕೆಳದಿ ದೇವಸ್ಥಾನದ ಅವಳಿ ದೇವಸ್ಥಾನ ಎಂದೂ ಕರೆಯುತ್ತಾರೆ. ಇಕ್ಕೇರಿ ಅಘೋರೇಶ್ವರ ದೇವರ ದೇವಸ್ಥಾನವಾಗಿದೆ. ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಇಕ್ಕೇರಿ ದೇವಸ್ಥಾನವನ್ನು 16-17 ನೇ ಶತಮಾನದಲ್ಲಿ ಕೆಳದಿ ನಾಯಕರು ನಿರ್ಮಿಸಿದರು. ಇಕ್ಕೇರಿ ಎಂದರೆ ಎರಡು ಬೀದಿಗಳು ಎಂದರ್ಥ. ಇದು ಸಾಗರದಿಂದ ಕೇವಲ 6 ಕಿಮೀ ದೂರದಲ್ಲಿರುವ ಈ ದೇವಾಲಯವು ವಿಜಯನಗರ ಮತ್ತು ದ್ರಾವಿಡ ಶೈಲಿಗಳ ವಿಶಿಷ್ಟ ಮಿಶ್ರಣವಾಗಿದೆ. ಈ ದೇವಾಲಯವು ಪಾರ್ವತಿ ದೇವಿ, ಶಿವ ಅಥವಾ ಅಘೋರೇಶ್ವರ ಮತ್ತು ಅವನ ವಾಹನ ನಂದಿ – ಈ ಮೂರು ದೇವಾಲಯಗಳಿಗೆ ನೆಲೆಯಾಗಿದೆ. ದೇವಾಲಯದ ಪ್ರಮುಖ ಆಕರ್ಷಣೆಯೆಂದರೆ ಶಿವನ ಮುಂಭಾಗದಲ್ಲಿರುವ 32 ಸ್ತ್ರೀ ಆಕೃತಿಯ ಪ್ರತಿಮೆಗಳು. ಈ ಪ್ರತಿಮೆಗಳು ಶಕ್ತಿ ಪೀಠಗಳನ್ನು ಪ್ರತಿನಿಧಿಸುತ್ತವೆ. ಇವು ದುರ್ಗಾ ದೇವಿಯ ರೂಪಗಳು ಎಂದು ನಂಬಲಾಗಿದೆ. ಈ ದೇವಾಲಯದಲ್ಲಿರುವ ಶಿವಲಿಂಗವು ಸ್ವಯಂಉದ್ಭವ ಎಂದು ನಂಬಲಾಗಿದೆ.

ಸಕ್ರೆಬೈಲ್ ಆನೆ ಶಿಬಿರ

ಶಿವಮೊಗ್ಗದ ಸಕ್ರೆಬೈಲ್ ಕ್ಯಾಂಪ್‌ನಲ್ಲಿರುವ ಆನೆಗಳು

ನೀವು ಶಿವಮೊಗ್ಗದಲ್ಲಿರುವಾಗ ಸಕ್ರೆಬೈಲ್ ಆನೆ ಶಿಬಿರಕ್ಕೆ ಭೇಟಿ ನೀಡುವುದು ಅತ್ಯಗತ್ಯವಾಗಿದೆ. ತುಂಗಾ ನದಿಯ ದಡದಲ್ಲಿರುವ ಈ ಶಿಬಿರದಲ್ಲಿ ಆನೆಗಳನ್ನು ರಕ್ಷಿಸಲಾಗುತ್ತದೆ. ಇದು ಆನೆಗಳ ಆವಾಸಸ್ಥಾನವಾಗಿದೆ. ಇದು ಮುಖ್ಯ ಪಟ್ಟಣದಿಂದ ಕೇವಲ 14 ಕಿಮೀ ದೂರದಲ್ಲಿದೆ.

ಕೊಡಚಾದ್ರಿ ಬೆಟ್ಟಗಳಲ್ಲಿ ಆಫ್-ರೋಡಿಂಗ್

ಕೊಡಚಾದ್ರಿ ಬೆಟ್ಟಗಳು

ನೀವು ಶಿವಮೊಗ್ಗದಲ್ಲಿದ್ದರೇ ಕರ್ನಾಟಕದ 10 ನೇ ಅತಿ ಎತ್ತರದ ಶಿಖರವಾದ ಕೊಡಚಾದ್ರಿ ಬೆಟ್ಟಗಳಿಗೆ ಚಾರಣವನ್ನು ಮಾಡಿ. ಇದು ನಿಮಗೆ ಅದ್ಭುತ ಅನುಭವವನ್ನು ನೀಡುತ್ತದೆ. ವೈವಿಧ್ಯಮಯ ಪ್ರಾಣಿಗಳು ಮತ್ತು ಸಸ್ಯಗಳನ್ನು ಹೊಂದಿರುವ ದಟ್ಟವಾದ ಹಚ್ಚ ಹಸಿರಿನ ಕಾಡಿನ ನೋಟಗಳು ಮತ್ತು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮ್ಮೋಹನಗೊಳಿಸುವ ನೋಟಗಳು, ಸಮುದ್ರ ಮಟ್ಟದಿಂದ 1343 ಮೀಟರ್ ಎತ್ತರದಲ್ಲಿ ನಿಂತಿರುವ ಈ ಬೆಟ್ಟವು ನಿಮಗೆ 4 ಕಿಮೀ ಮಾರ್ಗದ ಚಾರಣ ಮಾಡಲು ನಿಮ್ಮನ್ನು ಪ್ರೇರೆಪಿಸುತ್ತದೆ. ಆದಾಗ್ಯೂ, ನೀವು ಟ್ರೆಕ್ ಮಾಡಲು ಬಯಸದಿದ್ದರೆ ಅಥವಾ ಟ್ರೆಕ್ ಮಾಡಲು ಸಾಧ್ಯವಿಲ್ಲ ಎಂದಾದರೆ ಆಗ ನೀವು 4×4 ಜೀಪ್ ಆಫ್-ರೋಡಿಂಗ್ ಡ್ರೈವ್‌ನ ರೋಮಾಂಚನಕಾರಿ ಅನುಭವವನ್ನು ಪಡೆಯಿರಿ. ಜೀಪ್ ಸವಾರಿಯ ಸಾಹಸಮಯ ಮತ್ತು ರೋಮಾಂಚಕ ಅನುಭವವನ್ನು ನೀಡುತ್ತದೆ. ಇದು ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ.

ಮಾಲ್ಗುಡಿ ಡೇಸ್ ಮ್ಯೂಸಿಯಂ

ಮಾಲ್ಗುಡಿ ಡೇಸ್ ಮ್ಯೂಸಿಯಂ, ಶಿವಮೊಗ್ಗ

80 ಮತ್ತು 90 ರ ದಶಕದ ಮಕ್ಕಳಿಗೆ ಮಾಲ್ಗುಡಿ ಅಂದರೆ ಸಾಕು ಕಣ್ಣುಗಳು ಅರಳುತ್ತವೆ. ಮಾಲ್ಗುಡಿ ಡೇಸ್ ಎಂಬ ಧಾರಾವಾಹಿ ಅಂದಿನ ಮಕ್ಕಳ ದಿನಗಳನ್ನು ಸ್ಮರಣೀಯವಾಗಿಸಿತು. 1980 ರ ದಶಕದಲ್ಲಿ ಬಂದ ಈ ಜನಪ್ರಿಯ ಟಿವಿ ಸರಣಿಯು ಆರ್ ಕೆ ನಾರಾಯಣ್ ಅವರ;ಮಾಲ್ಗುಡಿ ಡೇಸ್ ಪುಸ್ತಕವನ್ನು ಆಧರಿಸಿದೆ. ಮಾಲ್ಗುಡಿ ಡೇಸ್ ಬಹುತೇಕ ಚಿತ್ರೀಕರಣವು ಈ ಅರಸಲು ನಿಲ್ದಾಣದ ಅಕ್ಕಪಕ್ಕದಲ್ಲಿಯೇ ಆಗಿದೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಆಗುಂಬೆ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ಸಹ ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಚಿತ್ರೀಕರಿಸಲಾಗಿದೆ. ಪ್ರಸಿದ್ಧ ಬರಹಗಾರ ಆರ್ ಕೆ ನಾರಾಯಣರಿಗೆ ಗೌರವ ಸಲ್ಲಿಸಲು, ಮೈಸೂರು ರೈಲ್ವೆ ವಿಭಾಗವು ಈ ನಿಲ್ದಾಣವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ನಿರ್ಧರಿಸಿತು. ಇದು ಆರ್ ಕೆ ನಾರಾಯಣ ಅವರ ಕಥೆಗಳಿಂದ ಪ್ರೇರಿತವಾದ ಕಲಾಕೃತಿಗಳು, ಛಾಯಾಚಿತ್ರಗಳು ಮತ್ತು ಹಸ್ತಪ್ರತಿಗಳಂತಹ ವಿವಿಧ ವಸ್ತುಗಳನ್ನು ಒಳಗೊಂಡಿದೆ.

7.ವಾಟರ್ ಸ್ಪೋರ್ಟ್ಸ್ (ಜಲ ಕ್ರೀಡೆಗಳು)

ಶಿವಮೊಗ್ಗದಲ್ಲಿ ಜೆಟ್ಸ್ಕಿ

ಲವ್ ಆಕ್ಷನ್ ಮತ್ತು ಥ್ರಿಲ್? ನೀವು ಶಿವಮೊಗ್ಗದ ಹಲವು ಕಡೆಗಳಲ್ಲಿ ರೋಮಾಂಚಕ ಮತ್ತು ಉತ್ತೇಜಕ ಜಲಕ್ರೀಡೆ ಚಟುವಟಿಕೆಗಳನ್ನು ಕಾಣಬಹುದು. ನೀವು ಈ ಚಟುವಟಿಕೆಗಳಿಗಾಗಿ ಸಾಹಸ ಶಿಬಿರ, ಜಂಗಲ್ ಲಾಡ್ಜ್‌ಗಳು ಮತ್ತು ರೆಸಾರ್ಟ್‌ಗಳನ್ನು ಪರಿಶೀಲಿಸಬಹುದು. ಪ್ರಕೃತಿಯ ಮಡಿಲಲ್ಲಿ ಜೆಟ್ ಸ್ಕೀಯಿಂಗ್, ಕಯಾಕಿಂಗ್, ಕೊರಾಕಲ್ ಬೋಟ್ ರೈಡ್, ಪೆಡಲ್ ಬೋಟಿಂಗ್, ಸ್ಪೀಡ್ ಬೋಟ್ ರೈಡ್, ವಾಟರ್ ಟ್ರ್ಯಾಂಪೊಲೈನ್, ಹೈಕಿಂಗ್ ಮುಂತಾದ ಸಾಹಸಮಯ ಚಟುವಟಿಕೆಗಳನ್ನು ಮಾಡುವುದೆಂದರೆ ಒಂದು ಅಮೋಘ ಅನುಭವವೇ ಸರಿ. ಶರಾವತಿ ಸಾಹಸ ಶಿಬಿರವು ಸರೋವರದ ದಡದಲ್ಲಿದೆ ಮತ್ತು ಇದು ಜಂಗಲ್ ಲಾಡ್ಜ್‌ಗಳು ಮತ್ತು ರೆಸಾರ್ಟ್‌ಗಳ ಒಂದು ಭಾಗವಾಗಿದೆ. ನೀವು ಈ ಚಟುವಟಿಕೆಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು.

ಶಿವಮೊಗ್ಗವು ಕರ್ನಾಟಕದ ಪ್ರಸಿದ್ಧ ನಗರಗಳಲ್ಲಿ ಒಂದಾಗಿದೆ. ನೀವು ಇಲ್ಲಿಗೆ ಬಂದಾಗ ಹೊನ್ನೆಮರಡು, ಮತ್ತು , ಕವಲೇದುರ್ಗ ಕೋಟೆ, , ನಾಗರ ಕೋಟೆ ಇನ್ನೂ ಹೆಚ್ಚಿನ ಸ್ಥಳಗಳನ್ನು ನೋಡಬಹುದು.