Karnataka logo

Karnataka Tourism
GO UP
honeymoon karnataka

ಬೆಂಗಳೂರಿನಿಂದ ವಾರಾಂತ್ಯದ ಪ್ರವಾಸಿ ತಾಣಗಳು

separator
  /  ಬೆಂಗಳೂರಿನಿಂದ ವಾರಾಂತ್ಯದ ಪ್ರವಾಸಿ ತಾಣಗಳು

ಬೆಂಗಳೂರಿನಿಂದ ತ್ವರಿತ ವಾರಾಂತ್ಯದ ರಜೆಗಾಗಿ ನೀವು ಆಯ್ಕೆ ಮಾಡಬಹುದಾದ ಅಸಂಖ್ಯಾತ ತಾಣಗಳಿವೆ. ಹಚ್ಚ ಹಸಿರಿನಿಂದ ಕೂಡಿದ ಬೆಟ್ಟಗಳಿಂದ ಹಿಡಿದು ಸುಂದರವಾದ ಕಡಲತೀರಗಳವರೆಗೆ, ಇವೆಲ್ಲವೂ ಜಾಸ್ತಿ ದೂರವೇನಿಲ್ಲ. ಆದ್ದರಿಂದ, ನಿಮ್ಮ ಬ್ಯಾಗ್ ಗಳನ್ನು ಪ್ಯಾಕ್ ಮಾಡಿ ಮತ್ತು ಅತ್ಯಾಕರ್ಷಕ ಸಾಹಸಕ್ಕೆ ಸಿದ್ಧರಾಗಿ.

ನೀವು ತಪ್ಪಿಸಿಕೊಳ್ಳಲಾಗದ ವಾರಾಂತ್ಯದ ಪ್ರವಾಸಗಳು ಇಲ್ಲಿವೆ;

mysore palace Honeymoon Destinations
ಮೈಸೂರು

160 ಕಿಲೋಮೀಟರ್ ದೂರದಲ್ಲಿರುವ ರಾಯಲ್ ಸಿಟಿ ಮೈಸೂರು ದಕ್ಷಿಣ ಭಾರತದ ಅತ್ಯಂತ ಸೊಗಸಾದ ನಗರಗಳಲ್ಲಿ ಒಂದಾಗಿದೆ. ಈ ಪಟ್ಟಣಕ್ಕೆ ಭೇಟಿ ನೀಡುವುದಕ್ಕೆ ಸಾಕಷ್ಟು ಕಾರಣಗಳಿವೆ ಅವು ವ್ಯಾಪಕವಾದ ರೇಷ್ಮೆ ಸೀರೆಗಳು ಮತ್ತು ರುಚಿಯಾದ ತಿಂಡಿತಿನಿಸುಗಳು. ಬಾಯಲ್ಲಿ ನೀರೂರಿಸುವ ಮೈಸೂರು ಪಾಕ್ ಅಥವಾ ಸಮರ್ಪಕವಾದ ದಕ್ಷಿಣ ಭಾರತದ ಥಾಲಿಗಳಿಗೆ ಹೆಸರುವಾಸಿಯಾಗಿರುವ ಇದು ಪ್ರತಿ ಫೂಡೀಗಳಿಗೆ ಸ್ವರ್ಗವಾಗಿದೆ.

ವಾಸ್ತುಶಿಲ್ಪದಲ್ಲಿ ಭವ್ಯತೆಯನ್ನು ಸಾರುವ ಮೈಸೂರು ಅರಮನೆಯು ಅತ್ಯಂತ ಜನಪ್ರಿಯ ತಾಣವಾಗಿದ್ದರೆ, ಇತರ ಗಮನಾರ್ಹ ತಾಣಗಳು ಚಾಮುಂಡಿ ಬೆಟ್ಟಗಳು ಮತ್ತು ದೇವರಾಜ ಮಾರುಕಟ್ಟೆಗಳು.

Nandi Hills
ನಂದಿ ಬೆಟ್ಟ

ಬೆಂಗಳೂರಿನಿಂದ ಕೇವಲ 61 ಕಿಲೋಮೀಟರ್ ದೂರದಲ್ಲಿರುವ ನಂದಿ ಬೆಟ್ಟವು,  ಇದರ ವಿಹಂಗಮ ನೋಟಕ್ಕೆ ಹೆಸರುವಾಸಿಯಾಗಿದೆ. ಸುಂದರವಾದ ಭೂದೃಶ್ಯಗಳು ಮತ್ತು ಗಮನಾರ್ಹ ಐತಿಹಾಸಿಕ ಸ್ಮಾರಕಗಳನ್ನು ಆನಂದಿಸಬಹುದು ಮತ್ತು ಮೆಚ್ಚಬಹುದು

Weekend Getaways From Bangalore
ಭೀಮೇಶ್ವರಿ

ಬೆಂಗಳೂರಿನಿಂದ ಕೇವಲ 61 ಕಿಲೋಮೀಟರ್ ದೂರದಲ್ಲಿರುವ ನಂದಿ ಬೆಟ್ಟವು,  ಇದರ ವಿಹಂಗಮ ನೋಟಕ್ಕೆ ಹೆಸರುವಾಸಿಯಾಗಿದೆ. ಇದು ಬೈಕಿಂಗ್‌ಗೆ ಜನಪ್ರಿಯ ತಾಣವಾಗಿದೆ ಮತ್ತು ಇದು ಕಿರಿದಾದ, ತಿರುಚುವ ರಸ್ತೆಗಳನ್ನು ಹೊಂದಿದ್ದು ನಿಮ್ಮ ಪ್ರಯಾಣವನ್ನು ಸಾಹಸಮಯವಾಗಿಸುತ್ತದೆ.

Kabini national park
ಕಬಿನಿ ರಾಷ್ಟ್ರೀಯ ಉದ್ಯಾನ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಜಂಗಲ್ ಸಫಾರಿಯಿಂದ ಹಿಡಿದು ಕಬಿನಿ ನದಿಯಲ್ಲಿ ಸಾಹಸಮಯ ಜಲ ಕ್ರೀಡೆಗಳು ಅಥವಾ ದಡಗಳಲ್ಲಿ ಕ್ಯಾಂಪಿಂಗ್ ಮಾಡುವವರೆಗೆ, 170 ಕಿಲೋಮೀಟರ್ ದೂರದಲ್ಲಿರುವ ಕಬಿನಿ ತನ್ನ ಪ್ರವಾಸಿಗರಿಗೆ ಸಾಕಷ್ಟು ಕೊಡುಗೆಗಳನ್ನು ಹೊಂದಿದೆ. ಎಲ್ಲ ಪ್ರಕೃತಿ ಪ್ರಿಯರಿಗೆ ಇದು ಸೂಕ್ತವಾದ ರಜೆಯ ತಾಣವಾಗಿದೆ.

Weekend Getaways hogenakkal falls
ಹೊಗೆನಕಲ್ ಜಲಪಾತ

ಭಾರತದ ನಯಾಗರ ಜಲಪಾತ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಹೊಗೆನಕಲ್ ಜಲಪಾತವು ಬೆಂಗಳೂರಿನಿಂದ 126 ಕಿಲೋಮೀಟರ್ ದೂರದಲ್ಲಿದ್ದು ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿದೆ. ಭೋರ್ಗರೆಯುವ ನೀರು ಕಡುಗಪ್ಪು ಕಾರ್ಬೊನೈಟ್ ಕಲ್ಲುಗಳ ಮೇಲೆ ಹರಿಯುತ್ತದೆ, ಅದು ಮೋಡಿಮಾಡುವ ದೃಶ್ಯವನ್ನು ನೀಡುತ್ತದೆ.

ಮೇಲಿನ ಸ್ಥಳಗಳನ್ನು ಹೊರತುಪಡಿಸಿ, ಕರ್ನಾಟಕದಲ್ಲಿ ಬೈಕಿಂಗ್‌ಗಾಗಿ ನೀವು ಆರಿಸಬಹುದಾದ ಕೊಡಗು, ಅವಳ ಬೆಟ್ಟ, ಸ್ಕಂದಗಿರಿ, ಮಂಚನಬೆಲೆ ಅಣೆಕಟ್ಟು, ಬನ್ನರ್‌ಘಟ್ಟ ರಾಷ್ಟ್ರೀಯ ಉದ್ಯಾನ, ಮುಂತಾದ ಇತರ ತಾಣಗಳಿವೆ.

ranganathittu bird sanctuary

ರಂಗನಾತಿಟ್ಟು ಪಕ್ಷಿಧಾಮ:

 

ಪಕ್ಷಿ ವೀಕ್ಷಕರು ಮತ್ತು ಪ್ರಕೃತಿ ಪ್ರಿಯರಿಗೆ ಕರ್ನಾಟಕದ ಅತ್ಯಂತ ಜನಪ್ರಿಯ ತಾಣವೆಂದರೆ ರಂಗನಾತಿಟ್ಟು. ಇದು ಬೆಂಗಳೂರಿನಿಂದ 131 ಕಿಲೋಮೀಟರ್ ದೂರದಲ್ಲಿದೆ ಮತ್ತು ವಾರಾಂತ್ಯದ ಪ್ರವಾಸಕ್ಕೆ ಸೂಕ್ತವಾಗಿದೆ. ಈ ಅಭಯಾರಣ್ಯದಲ್ಲಿ ಸುಮಾರು 170 ವಿವಿಧ ಜಾತಿಯ ಪಕ್ಷಿಗಳಿವೆ.

sangam river point
ಸಂಗಮ್ ರಿವರ್ ಪಾಯಿಂಟ್

ಕಾಫಿ ಪ್ರಿಯರಿಗೆ ಅಗ್ರ ಸ್ಥಾನವಾದ ಚಿಕ್ಕಮಂಗಳೂರನ್ನು ಕರ್ನಾಟಕದ ಕಾಫಿ ಜಿಲ್ಲೆ ಎಂದು ಕರೆಯಲಾಗುತ್ತದೆ. ಬೆರಗುಗೊಳಿಸುವ ಬೆಟ್ಟಗಳು ಮತ್ತು ಕಣಿವೆಗಳಿಂದ ತುಂಬಿರುವ ಈ ಪ್ರಶಾಂತ ಪಟ್ಟಣವು ಪ್ರಕೃತಿಯ ಮಧ್ಯೆ ಉತ್ತಮ ವಾಸ್ತವ್ಯವನ್ನು ಪ್ರೀತಿಸುವ ಯಾರಾದರೂ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಮುಳ್ಳಯ್ಯನಗಿರಿಗೆ ಚಾರಣದಿಂದ ಹಿಡಿದು ಭದ್ರಾ ನದಿಯಲ್ಲಿ ರಿವರ್ ರಾಫ್ಟಿಂಗ್ ವರೆಗೆ ಇಲ್ಲಿ ಸಾಕಷ್ಟು ಚಟುವಟಿಕೆಗಳನ್ನು ಮಾಡಬಹುದು, ನಗರದ ಜೀವನದ ಗಡಿಬಿಡಿ ಗದ್ದಲದಿಂದ ತಪ್ಪಿಸಿಕೊಂಡು ವಾರಾಂತ್ಯದಲ್ಲಿ ಹೊರಹೋಗಲು ಚಿಕ್ಕಮಂಗಳೂರು ಅದ್ಭುತ ಸ್ಥಳವಾಗಿದೆ ಮತ್ತು ಇದರ ಪತ್ತೆಯಾಗದ ಜಾಗಗಳಿಂದಾಗಿ ಇದು ನಿಮ್ಮನ್ನು ಚೈತನ್ಯಗೊಳಿಸುತ್ತದೆ