Karnataka logo

Karnataka Tourism
GO UP
best waterfalls in Karnataka

ಕರ್ನಾಟಕದಲ್ಲಿ ಭೇಟಿ ಮಾಡಲೇಬೆಕಾದ ಜಲಪಾತಗಳು

separator
  /  ಬ್ಲಾಗ್   /  ಕರ್ನಾಟಕದಲ್ಲಿ ಭೇಟಿ ಮಾಡಲೇಬೆಕಾದ ಜಲಪಾತಗಳು
ಕರ್ನಾಟಕದಲ್ಲಿ ಭೇಟಿ ಮಾಡಲೇಬೆಕಾದ ಜಲಪಾತಗಳು

ಕರ್ನಾಟಕದ ಜಲಪಾತಗಳು, ಕರ್ನಾಟಕವು ಪಾರಂಪರಿಕ ತಾಣಗಳು, ಗಿರಿಧಾಮಗಳು ಮತ್ತು ಭವ್ಯವಾದ ಜಲಪಾತಗಳಿಗೆ ಹೆಸರುವಾಸಿಯಾಗಿದೆ. ಇದು ಪ್ರಸಿದ್ಧ ಮೈಸೂರಿನ ರೇಷ್ಮೆ ಮತ್ತು ಶ್ರೀಗಂಧದ ಮರಗಳಾಗಿರಬಹುದು ಅಥವಾ ಹಂಪಿಯ ಅವಶೇಷಗಳನ್ನು ಅರಿತು ಕೊಳ್ಳುವುದಾಗಿರಬಹುದು ಅಥವಾ ಸುಂದರವಾದ ಜಲಪಾತಗಳಿರಬಹುದು. ಹೀಗೆ ಇದು ಅದ್ಭುತವಾದ ಸ್ಥಳಗಳಿಂದ ತುಂಬಿದ ರಾಜ್ಯವಾಗಿದೆ. ಇದು ನಿಮಗೆ ಪ್ರಕೃತಿಯನ್ನು ಮತ್ತು ಅದರ ಸೌಂದರ್ಯವನ್ನು ಹೆಚ್ಚು ಮೆಚ್ಚುವಂತೆ ಮಾಡುತ್ತದೆ.

 ನಾವು ಕರ್ನಾಟಕದಲ್ಲಿ  ಭೇಟಿ ನೀಡಲೇಬೇಕಾದ ಕೆಲವು ಜಲಪಾತಗಳನ್ನು ಪರಿಶೀಲಿಸೋಣ:

 

ಜೋಗ ಜಲಪಾತ

ಸ್ಥಳೀಯವಾಗಿ ಗೆರ್ಸೊಪ್ಪಾ ಜಲಪಾತ ಎಂದು ಕರೆಯಲ್ಪಡುವ ಜೋಗ ಜಲಪಾತಕ್ಕೆ  ‘ನಯಾಗರಾ ಆಫ್ ಇಂಡಿಯಾ’ ಎಂಬ ಬಿರುದನ್ನು ನೀಡಲಾಗಿದೆ, ಏಕೆಂದರೆ ಇದು ದೇಶದ ಎರಡನೇ ಅತಿ ಎತ್ತರದ ಮತ್ತು ಸುಂದರವಾದ ಜಲಪಾತವಾಗಿದೆ. ಶಿವಮೊಗ್ಗ  ಮತ್ತು ಉತ್ತರ ಕನ್ನಡ ಜಿಲ್ಲೆಯ ಗಡಿಯಲ್ಲಿರುವ ಇದು ಬಂಡೆಗಳ  ನಡುವಿಂದ  253 ಮೀಟರ್ ಎತ್ತರದಿಂದ ಕೆಳಗೆ ಬರುತ್ತದೆ. ಈ ಜಲಪಾತವು ಶರಾವತಿ ನದಿಯಿಂದ ರೂಪುಗೊಂಡಿದೆ ಮತ್ತು ರಾಜಾ, ರಾಣಿ, ರಾಕೆಟ್ ಮತ್ತು ರೋರರ್ ಎಂಬ ನಾಲ್ಕು ಕಿರು ಜಲಪಾತಗಳಾಗಿ ಬಂಡೆಗಳ ಮೇಲಿಂದ ಧುಮುಕುತ್ತದೆ. ನೀವು ಜಲಪಾತದ ತುದಿಯನ್ನು ತಲುಪಿದಾಗ ಮತ್ತು ದೃಶ್ಯವನ್ನು ನೋಡಿದಾಗ, ನೀವು ಪ್ರಕೃತಿಯ ಸೌಂದರ್ಯಕ್ಕೆ ಮರುಳಾಗುತ್ತೀರಿ .

ಇರ್ಪು ಜಲಪಾತ

ಇರ್ಪು ಜಲಪಾತವು ಕೊಡಗು ಜಿಲ್ಲೆಯಲ್ಲಿದೆ, ಮತ್ತು ಇದರ ಪ್ರಾಚೀನ ಇತಿಹಾಸದಿಂದಾಗಿ ಇದು ಕರ್ನಾಟಕದ ಅತಿ ಹೆಚ್ಚು ಭೇಟಿ ನೀಡುವ ಜಲಪಾತಗಳಲ್ಲಿ ಒಂದಾಗಿದೆ. ಈ ಕಥೆಯು ರಾಮಾಯಣದ ಕಾಲಕ್ಕೆ ಹೋಗುತ್ತದೆ,  ರಾಮ ಮತ್ತು ಲಕ್ಷ್ಮಣ  ಬ್ರಹ್ಮಗಿರಿ ಬೆಟ್ಟಗಳನ್ನು ಹಾದುಹೋಗುತ್ತಿದ್ದಾಗ ಮತ್ತು ಲಕ್ಷ್ಮಣನು ನೀರಿಗಾಗಿ ಬೆಟ್ಟಗಳಿಗೆ ಬಾಣವನ್ನು ಹೊಡೆದಾಗ ನೀರು ಪರ್ವತಗಳಿಂದ ಹೊರಚಿಮ್ಮಿತು. ಅದಕ್ಕಾಗಿಯೇ ಇರ್ಪು ಜಲಪಾತವನ್ನು ‘ಲಕ್ಷ್ಮಣತೀರ್ಥ ಜಲಪಾತ’ ಎಂದೂ ಕರೆಯುತ್ತಾರೆ. ನೀವು ಅರಣ್ಯ ಇಲಾಖೆಯ ಅನುಮತಿಯೊಂದಿಗೆ ನಾರಿಮಲೆ ಅರಣ್ಯ ಶಿಬಿರದ ಮೂಲಕ ತ್ವರಿತ ಚಾರಣ ಮಾಡಬಹುದು ಮತ್ತು ರಮಣೀಯ ದೃಶ್ಯಗಳನ್ನು ಆನಂದಿಸಿ ಮತ್ತು ಶಿವನಿಗೆ ಅರ್ಪಿತವಾದ ಶ್ರೀ ರಾಮೇಶ್ವರ ದೇವಸ್ಥಾನವನ್ನು ನೋಡಬಹುದು. ದಂತಕಥೆಗಳ ಪ್ರಕಾರ ಇದು  ರಾಮನಿಂದಲೇ ಸ್ಥಾಪಿಸಲ್ಪಟ್ಟಿದೆ  ಎಂದು ನಂಬಲಾಗಿದೆ.

ಅಬ್ಬೆ ಜಲಪಾತ

ಜೆಸ್ಸಿ ಫಾಲ್ಸ್ ಎಂದೂ ಕರೆಯಲ್ಪಡುವ ಅಬ್ಬೆ ಫಾಲ್ಸ್ ಕೊಡಗಿನಲ್ಲಿ ಪ್ರವಾಸಿಗರ ಆಕರ್ಷಣೆಯಾಗಿದೆ. ಅಬ್ಬೆ ಜಲಪಾತವು ಅನೇಕ ಸಣ್ಣ ತೊರೆಗಳ ಮೂಲಕ ರೂಪುಗೊಳ್ಳುತ್ತದೆ, ಅದು ಕಲ್ಲಿನ ಇಳಿಜಾರುಗಳಿಗೆ ಇಳಿದು ಈ ದೊಡ್ಡ ಕಾಫಿ ತೋಟ ಮತ್ತು ಮಸಾಲೆ ತೋಟಗಳಿಗೆ ಪ್ರವೇಶಿಸುತ್ತದೆ. ಪರಿಸರ ಸ್ಪರ್ಶ ಮತ್ತು ನಿಮ್ಮ ಕೈಯಲ್ಲಿ ಹೊಸದಾಗಿ ತಯಾರಿಸಿದ(ಫ್ರೆಶ್ ಫಿಲ್ಟರ್) ಕಾಫಿಯೊಂದಿಗೆ ಪಿಕನಿಕ್ ಮಾಡಲು ಇದು ಪರಿಪೂರ್ಣ ತಾಣವಾಗಿದೆ. ಜಲಪಾತದ ಪ್ರವೇಶದ್ವಾರದವರೆಗೆ ನೀವು ಕಾರಿನಲ್ಲಿ ಹೋಗಬಹುದು ಮತ್ತು  10 ಮೀಟರ್ ನಡಿಗೆಯಲ್ಲಿ ಜಲಪಾತಕ್ಕೆ ಬರಬಹುದು.

ಹೆಬ್ಬೆ ಜಲಪಾತ

ಭದ್ರಾ ವನ್ಯಜೀವಿ ಅಭಯಾರಣ್ಯ ಮತ್ತು ಹುಲಿ ಮೀಸಲು ಪ್ರದೇಶದ ಒಳಗೆ ಹೆಬ್ಬೆ ಜಲಪಾತವಿದೆ. ಇದು ಹುಲಿ ಮೀಸಲು ಪ್ರದೇಶದಲ್ಲಿ ನೀವು ಸ್ವಲ್ಪ ದೂರ ಅಡ್ಡಾಡಬಹುದಾದ ಮತ್ತು ಅವುಗಳನ್ನು ನೋಡಬಹುದಾದ ಸ್ಥಳವಾಗಿದೆ ಮತ್ತು ಜಲಪಾತದಿಂದ ರಚಿಸಲಾದ ಸಣ್ಣ ಕೊಳದಲ್ಲಿ ಆಟವಾಡಬಹುದು ಮತ್ತು ಅದರೊಳಗೆ ರೋಗನಿರೋಧಕ ಶಕ್ತಿಗಳಿವೆ ಎಂದು ನಂಬಲಾಗುವುದರಿಂದ ಅದರಲ್ಲಿ ಸ್ನಾನವನ್ನು ಮಾಡಬಹುದು. ಜಲಪಾತವು ಎರಡು ಹಂತಗಳಾಗಿ ಕೆಳಗಿಳಿಯುತ್ತದೆ, ದೊಡ್ಡ ಹೆಬ್ಬೆ (ದೊಡ್ಡ ಜಲಪಾತ) ಮತ್ತು ಚಿಕ್ಕ ಹೆಬ್ಬೆ (ಸಣ್ಣ ಜಲಪಾತ). ಹೆಬ್ಬೆ ಜಲಪಾತವನ್ನು ತಲುಪಲು, ನೀವು ಪಾರ್ಕಿಂಗ್ ಸ್ಥಳದಿಂದ 2 ಕಿ.ಮೀ ದೂರದ ಸಣ್ಣ ಚಾರಣವನ್ನು ಮಾಡಬೇಕಾಗುತ್ತದೆ.

ಶಿವನಸಮುದ್ರ ಜಲಪಾತ

ಬೆಂಗಳೂರಿನಿಂದ ವಾರಾಂತ್ಯಕ್ಕೆ ಹೋಗಲು ಶಾಂತವಾದ ಸ್ಥಳವೆಂದರೆ ಶಿವನಸಮುದ್ರ ಜಲಪಾತ. ಜಲಪಾತವು ಎರಡು ತೊರೆಗಳಾಗಿ ವಿಭಜನೆಯಾಗುತ್ತದೆ, ಮತ್ತು ಅವು ಒಂದೇ ಸ್ಥಳದಿಂದ ಬರುತ್ತವೆ ಆದರೆ ಬೇರೆ ಬೇರೆ ದಿಕ್ಕುಗಳಿಂದ ಧುಮುಕಿ, ಅವಳಿ ಜಲಪಾತಗಳಂತೆ ಗೋಚರಿಸುತ್ತವೆ, ಒಂದನ್ನು ಗಗನ ಚುಕ್ಕಿ ಎಂದು ಕರೆಯಲಾಗುತ್ತದೆ ಮತ್ತು ಇನ್ನೊಂದನ್ನು ಭರ ಚುಕ್ಕಿ ಎಂದು ಕರೆಯಲಾಗುತ್ತದೆ. ಒಂದು ಜಲಪಾತವನ್ನು ನೋಡುವುದು ಸಾಕಷ್ಟು ಹಿತಕರವಾಗಿರುತ್ತದೆ ಆದರೆ ಎರಡು ಜಲಪಾತಗಳು ಒಟ್ಟಿಗೆ ಬರುವುದನ್ನು ನೋಡುವುದು ಜೀವಮಾನದ ನೋಟವಾಗಿದೆ. ನೀವು ಇದನ್ನು  ಯಾವುದೇ ಕಾರಣಕ್ಕೂ ನೋಡಲು ಮರೆಯಬೇಡಿ .

ಉಂಚಳ್ಳಿ ಜಲಪಾತ

ಲಶಿಂಗ್ಟನ್ ಜಲಪಾತ ಎಂದೂ ಕರೆಯಲ್ಪಡುವ ಉಂಚಳ್ಳಿ ಜಲಪಾತವು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿ ಇದೆ. ಈ ಜಲಪಾತವು 380 ಅಡಿ ಇದೆ ಮತ್ತು ದಟ್ಟ ಕಾಡುಗಳಿಂದ ಆವೃತವಾಗಿದೆ. ಇದು ಅಘಾನಶಿನಿ ನದಿಯ ಒಂದು ಭಾಗವಾಗಿದ್ದು, ಅದರ ಸುತ್ತ ಯಾವುದೇ ಅಣೆಕಟ್ಟುಗಳು ಅಥವಾ ಕೈಗಾರಿಕೆಗಳಿಲ್ಲದ ಭಾರತದ ಏಕೈಕ ನದಿಯಾಗಿದೆ. ನೀವು ಉತ್ಸಾಹಿ ಪ್ರಯಾಣಿಕರಾಗಿದ್ದರೆ, ಸಾಹಸ ಮತ್ತು ಪ್ರಕೃತಿಯ ಅಸಾಧಾರಣ ನೋಟಗಳಿಂದ ತುಂಬಿದ ಜಲಪಾತಕ್ಕೆ ಅರ್ಧ ಘಂಟೆಯ ಚಾರಣವಾಗಿದೆ.

ಸಾತೋಡಿ ಜಲಪಾತ

ಸಾತೋಡಿ  ಜಲಪಾತವು ಉತ್ತರ ಕನ್ನಡ ಜಿಲ್ಲೆಯ ಯೆಲ್ಲಾಪುರ ದಿಂದ ಸುಮಾರು 32 ಕಿ.ಮೀ ದೂರದಲ್ಲಿದೆ. ಇದು ಕಲ್ಲಿನ ಗುಹೆಗಳು ಮತ್ತು ದಟ್ಟವಾದ ಕಾಡುಗಳಿಂದ ಆವೃತವಾದ ಸಣ್ಣ ಜಲಪಾತವಾಗಿದ್ದು, ಚಲನಚಿತ್ರದ ಒಂದು ನೇರ ದೃಶ್ಯದಂತೆ ಕಾಣುತ್ತದೆ. ನೀವು ಶಾಂತಿಯುತ ಮತ್ತು ಪ್ರಾಕೃತಿಕ ಸ್ಥಳವನ್ನು ಹುಡುಕುತ್ತಿದ್ದರೆ ಇನ್ನು ಹುಡುಕುವ ಅಗತ್ಯವಿಲ್ಲ.

ಕಲ್ಹತ್ತಗಿರಿ ಜಲಪಾತ

ಕೆಮ್ಮಣ್ಣುಗುಂಡಿಯಿಂದ 10 ಕಿ.ಮೀ ದೂರದಲ್ಲಿರುವ  ಕಲ್ಹತ್ತಿ ಜಲಪಾತವು ಪ್ರಕೃತಿಯ ಅತ್ಯುತ್ತಮ ಭಾವಚಿತ್ರದಂತೆ, ಜೀವಂತವಾಗಿರುವ ಮತ್ತು ಉಸಿರಾಡುವ ಸ್ಥಳವಾಗಿದೆ. ಚಂದ್ರದ್ರೋಣ ಬೆಟ್ಟದಿಂದ 400 ಅಡಿ ಎತ್ತರದಿಂದ ಬೀಳುವ ಜರಿಗಳು ವೀರಭದ್ರೇಶ್ವರ ದೇವಸ್ಥಾನದ ಬಳಿ ಇಳಿಯುತ್ತವೆ. ನೀವು ಪ್ರಕೃತಿ ಪ್ರೇಮಿಯಾಗಿದ್ದರೆ, ಇದು ನಿಮ್ಮ ಸ್ಥಳವಾಗಿದೆ, ಏಕೆಂದರೆ ಇದು ಪ್ರಕೃತಿಯ ಸೌಂದರ್ಯದಿಂದ ತುಂಬಿದ್ದು ಸಾಕಷ್ಟು ಸಸ್ಯಗಳು ಮತ್ತು ಪ್ರಾಣಿಗಳಿಂದ ಕೂಡಿದೆ .

ಗೋಕಾಕ್ ಜಲಪಾತ

ಗೋಕಾಕ ಜಲಪಾತವು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನಲ್ಲಿದೆ.  ಇದು 171 ಅಡಿ ಎತ್ತರದಿಂದ ಮರಳುಗಲ್ಲಿನ ಬಂಡೆಯ ಮೂಲಕ ಬೀಳುತ್ತದೆ. ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾಗುವುದರಿಂದ ಗೋಕಾಕ್ ಜಲಪಾತದ ಸೌಂದರ್ಯವು ಮಳೆಗಾಲದಲ್ಲಿ ಹೊರಬರುತ್ತದೆ. ನೀವು ನದಿಗೆ ಅಡ್ಡಲಾಗಿ ಕಟ್ಟಿರುವ ತೂಗು ಸೇತುವೆಗೆ ಭೇಟಿ ನೀಡಬಹುದು ಮತ್ತು ಇದು ಎತ್ತರದಲ್ಲಿ ಕಟ್ಟಲ್ಪಟ್ಟಿರುವುದರಿಂದ, ಅಲ್ಲಿಂದಲೂ ಈ ಸೊಗಸಾದ ಜಲಪಾತದ ವೀಕ್ಷಣೆಗಳನ್ನು ನೀವು ಮಾಡಬಹುದು.