Karnataka logo

Karnataka Tourism
GO UP
Image Alt

ಬ್ಲಾಗ್

separator
  /  ಬ್ಲಾಗ್

ಸ್ಕಂದಗಿರಿ

ಕಾಳಾವರ ದುರ್ಗ ಎಂದೂ ಕರೆಯಲ್ಪಡುವ ಸ್ಕಂದಗಿರಿ ಬೆಟ್ಟಗಳು ತಮ್ಮ ಸುಂದರವಾದ ಸೂರ್ಯೋದಯ ಮತ್ತು ಸೂರ್ಯಾಸ್ತದ ವೀಕ್ಷಣೆಗಳಿಗೆ ಹೆಸರುವಾಸಿಯಾಗಿದ್ದು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇಲ್ಲಿ 18 ನೇ ಶತಮಾನದ ಟಿಪ್ಪು ಸುಲ್ತಾನ್ ಕೋಟೆಯ ಅವಶೇಷಗಳನ್ನು ಮೇಲ್ಭಾಗದಲ್ಲಿ ಕಾಣಬಹುದು. ನೀವು ತೇಲುವ ಮೋಡಗಳ ಮೇಲೆ ಮಂತ್ರಮುಗ್ಧಗೊಳಿಸುವ ಸೂರ್ಯೋದಯಕ್ಕಾಗಿ ಟ್ರೆಕ್ಕಿಂಗ್ ಮಾಡಬಹುದು ಅಥವಾ ಹಗಲಿನಲ್ಲಿಯೂ ಟ್ರೆಕ್ಕಿಂಗ್ ಮಾಡಿ ಮೋಡಿಗೊಳಿಸುವ ಸೂರ್ಯಾಸ್ತವನ್ನು ವೀಕ್ಷಿಸಬಹುದು.

ಕರ್ನಾಟಕದ ಏಳು ಅದ್ಭುತಗಳು

ಕರ್ನಾಟಕದ ಏಳು ಅದ್ಭುತಗಳ ಪಟ್ಟಿಯು ಈಗ ಅಧಿಕೃತವಾಗಿ ಅನಾವರಣಗೊಂಡಿದೆ. ಮಾಧ್ಯಮ ದೈತ್ಯ ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡ ಪ್ರಭ ಮತ್ತು ಕರ್ನಾಟಕ ಪ್ರವಾಸೋದ್ಯಮದ ಈ ಉಪಕ್ರಮವು ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಸಾರಿಗೆ ಅಭಿವೃದ್ಧಿ ನಿಗಮ ಮತ್ತು ಜಂಗಲ್ ಲಾಡ್ಜ್‌ಗಳು ಮತ್ತು ರೆಸಾರ್ಟ್‌ಗಳಿಂದ ಬೆಂಬಲಿತವಾಗಿದೆ. ಕರ್ನಾಟಕದ ಏಳು ಅದ್ಭುತಗಳನ್ನು ಆಯ್ಕೆ ಮಾಡುವುದು ಒಂದೇ ಸವಾಲೇ ಆಗಿತ್ತು. ಏಕೆಂದರೆ ಕರ್ನಾಟಕದಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಕ, ಐತಿಹಾಸಿಕ, ನೈಸರ್ಗಿಕ ಸ್ಥಳಗಳಿವೆ.

ಬೈಲಕುಪ್ಪೆಯ ಪ್ರವಾಸ

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನಲ್ಲಿ ಬೈಲುಕುಪ್ಪೆ ಮೈಸೂರಿನಿಂದ ಕೇವಲ 80 ಕಿ.ಮೀ ದೂರದಲ್ಲಿದ್ದು ಹಲವಾರು ಟಿಬೆಟಿಯನ್ ವಸಾಹತುಗಳಿಗೆ ನೆಲೆಯಾಗಿದೆ. ಬೈಲಕುಪ್ಪೆ ವಿಶ್ವದಲ್ಲಿ ಧರ್ಮಶಾಲಾ ನಂತರ ಎರಡನೇ ಅತಿದೊಡ್ಡ ಟಿಬೆಟಿಯನ್ ವಸಾಹತು ಆಗಿದೆ. ಈ ಟಿಬೆಟಿಯನ್ ವಸಾಹತುಗಳನ್ನು 1961 ಮತ್ತು 1969 ರಲ್ಲಿ ಸ್ಥಾಪಿಸಲಾಯಿತು ಮತ್ತು ಈಗ ಇವುಗಳು ಪೂರ್ಣ ಪ್ರಮಾಣದ ಟೌನ್‌ಶಿಪ್‌ಗಳಾಗಿವೆ.

ರಮಣೀಯ ಹೊನ್ನಾವರ

ಹೊನ್ನಾವರದ ಒಂದು ಕಡೆ ಅರಬ್ಬೀ ಸಮುದ್ರ ಇದ್ದರೆ , ಇನ್ನೊಂದು ಕಡೆ ಪಶ್ಚಿಮ ಘಟ್ಟಗಳು ಇವೆ. ಉತ್ತರ ಕನ್ನಡದ ಸುಂದರವಾದ ಈ ಚಿಕ್ಕ ಪಟ್ಟಣವು ಪ್ರಕೃತಿಯ ಅದ್ಭುತ ಕೊಡುಗೆ ಆಗಿದೆ. ನೀವು ಹೊನ್ನಾವರವನ್ನು ಬೆಂಗಳೂರು, ಮಂಗಳೂರು, ಗೋವಾ ಮತ್ತು ಶಿವಮೊಗ್ಗದಿಂದ ಸುಲಭವಾಗಿ ತಲುಪಬಹುದು.

ಕರ್ನಾಟಕದಲ್ಲಿ ಸಂಬ್ರಮದ ಕ್ರಿಸಮಸ್‍ ಆಚರಣೆಯ ಸ್ಥಳಗಳು

ಮತ್ತೆ ಕ್ರಿಸಮಸ್ ಬಂದಿದೆ! ಕ್ರಿಸಮಸ್ ಹಬ್ಬವೆಂದರೇ ಎಲ್ಲೆಲ್ಲಿಯೂ ಸಡಗರವೇ. ಬೀದಿಬೀದಿಗಳು ಸಂತೋಷ ಮತ್ತು ಸಂಭ್ರಮದಿಂದ ಕೂಡಿರುತ್ತದೆ ಈ ಸಂದರ್ಭದಲ್ಲಿ ಇಡೀ ಜಗತ್ತೆ ರಜೆಯ ಮೂಡ್‌ನಲ್ಲಿದ್ದು ಜನರು ಸುಂದರ ಸ್ಥಳಗಳಿಗೆ ಪ್ರಯಾಣಿಸಲು, ಪ್ರೀತಿಪಾತ್ರರನ್ನು ಭೇಟಿ ಮಾಡಲು ಮತ್ತು ಸ್ವಾಗತಿಸಲು ಅಥವಾ ನಗರದ ಗಡಿಬಿಡಿಯಿಂದ ತಪ್ಪಿಸಿಕೊಳ್ಳಲು ಕಾಯುತ್ತಿರುತ್ತಾರೆ.

ಕರ್ನಾಟಕದಲ್ಲಿ ಚಳಿಗಾಲದಲ್ಲಿ ಭೇಟಿ ನೀಡಬೇಕಾದ ಸ್ಥಳಗಳು

ನಮ್ಮ ನಾಡು ಕರುನಾಡು ಅದ್ಭುತವಾದ ಪ್ರಕೃತಿ ತಾಣಗಳು, ಅರಣ್ಯಗಳು, ಕಡಲತೀರಗಳು, ಗಿರಿಧಾಮಗಳು, ಐತಿಹಾಸಿಕ ತಾಣಗಳು, ದೇವಸ್ಥಾನಗಳನ್ನು ತನ್ನ ಉಡಿಯಲ್ಲಿ ಇರಿಸಿಕೊಂಡಿದೆ. ಹೀಗಾಗಿ ನಮ್ಮ ಕರ್ನಾಟಕ ರಾಜ್ಯಕ್ಕೆ ಎಲ್ಲ ರಾಜ್ಯದ ಪ್ರವಾಸಿಗರು ಭೇಟಿ ನೀಡಲು ಬಯಸುತ್ತಾರೆ. ನಮ್ಮ ರಾಜ್ಯವೂ ಎಲ್ಲ ಪ್ರವಾಸಿಗರಿಗೆ ಅತ್ಯುತ್ತಮವಾದ ಎಲ್ಲವನ್ನೂ ಹೊಂದಿದೆ.

ಹಂಪಿಯಲ್ಲಿ ನೋಡಬಹುದಾದ ಸ್ಥಳಗಳು

ವಿರೂಪಾಕ್ಷ ದೇವಾಲಯ, ಅಪ್ರತಿಮವಾದ ಕಲ್ಲಿನ ರಥ ಮತ್ತು ವಿಜಯನಗರ ಸಾಮ್ರಾಜ್ಯದ ಅವಶೇಷಗಳಿಗೆ ಹೆಸರುವಾಸಿಯಾಗಿರುವ ಐತಿಹಾಸಿಕ ನಗರ ಹಂಪಿಯಲ್ಲಿ ಪ್ರವಾಸಿಗರು ಹಲವಾರು ಸ್ಥಳಗಳನ್ನು ನೋಡಬಹುದು. ಹಂಪಿಯು ಪ್ರಾಯೋಗಿಕ ಮತ್ತು ನಿಧಾನಗತಿಯ ಪ್ರಯಾಣ ಮಾಡುತ್ತ ಸ್ಥಳ ವೀಕ್ಷಣೆಯಲ್ಲಿ ಮುಳುಗಿ ಹೋಗಬಹುದಾದ ಸ್ಥಳವಾಗಿದೆ. ಒರಟಾದ ಮತ್ತು ಭವ್ಯವಾದ ಬಂಡೆಯ ಭೂದೃಶ್ಯದಲ್ಲಿ ನೆಲೆಗೊಂಡಿರುವ ಈ ಪಟ್ಟಣ ಒಂದು ಕಾಲದಲ್ಲಿ ಪ್ರಬಲವಾದ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈ ಸ್ಥಳದಲ್ಲಿರುವ ಅವಶೇಷಗಳು ಆ ಕಾಲದ ರಾಜಮನೆತನದ ಭವ್ಯತೆಯನ್ನು ನೆನಪಿಸುತ್ತವೆ.

ಗೋಕರ್ಣದಲ್ಲಿ ನೋಡಬಹುದಾದ ಸ್ಥಳಗಳು

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ವಿಶಿಷ್ಟ ಮತ್ತು ಪ್ರಶಾಂತ ಪಟ್ಟಣವಾದ ಗೋಕರ್ಣವು ಬೆನ್ನಿಗೆ ಬ್ಯಾಗ್‌ ಹೊತ್ತು ತಿರುಗುವ ಪ್ರಯಾಣಿಕರಿಗೆ ಸ್ವರ್ಗವಾಗಿತ್ತು. ಆದರೆ ಈಗ ಬದಲಾಗಿದೆ. ಸಮುದ್ರ ದಂಡೆಯಲ್ಲಿನ ಸ್ಥಳಾನ್ವೇಷಣೆಯಿಂದ ಹಿಡಿದು ಪ್ರಾಚೀನ ದೇವಾಲಯಕ್ಕೆ ಭೇಟಿ ನೀಡುವವರೆಗೆ ಹಲವಾರು ಚಟುವಟಿಕೆಗಳನ್ನು ಹೊಂದಿರುವ ಗೋಕರ್ಣ ಪಟ್ಟಣವು ಇನ್ನೂ ಆನೇಕ ವಿಷಯಗಳನ್ನು ಒಳಗೊಂಡಿದೆ.

ಕರ್ನಾಟಕದ ಟಾಪ್ 5 ಪರ್ವತಗಳು

ನಮ್ಮ ಗಂಧದ ನಾಡು ಕರ್ನಾಟಕವು ಪ್ರವಾಸಿಗರಿಗೆ ಬೇಕಾದ ಎಲ್ಲವನ್ನು ಹೊಂದಿದೆ. ಸಂಸ್ಕೃತಿ, ಪರಂಪರೆ, ಇತಿಹಾಸ, ಸಾಹಸ, ವನ್ಯಜೀವಿ ಮತ್ತು ನೈಸರ್ಗಿಕ ಸಮೃದ್ಧಿಯಿಂದ ಸಮೃದ್ಧವಾಗಿರುವ ಕರ್ನಾಟಕ ರಾಜ್ಯವು ಕೆಲವು ಅತ್ಯುತ್ತಮ ಪರ್ವತಗಳು ಮತ್ತು ಶಿಖರಗಳಿಗೆ ನೆಲೆಯಾಗಿದೆ. ಈ ಸುಂದರ ಬೆಟ್ಟಗಳು ಪ್ರಕೃತಿ ಪ್ರೇಮಿಗಳು, ಛಾಯಾಗ್ರಾಹಕರು, ಸಾಹಸ ಪ್ರಿಯರು ಮತ್ತು ವನ್ಯಜೀವಿ ಉತ್ಸಾಹಿಗಳಿಗೆ ಅತ್ಯುತ್ತಮ ತಾಣವಾಗಿವೆ.

ಸಕಲೇಶಪುರದಲ್ಲಿ ನೋಡಬೇಕಾದ ಸ್ಥಳಗಳು

ಪಶ್ಚಿಮ ಘಟ್ಟಗಳ ಸುಂದರ ಮತ್ತು ಹಚ್ಚ ಹಸಿರಿನ ಕಣಿವೆಗಳಲ್ಲಿ ನೆಲೆಸಿರುವ ಸಕಲೇಶಪುರವು ಹಾಸನ ಜಿಲ್ಲೆಯಲ್ಲಿದೆ ಮಲೆನಾಡು ಪ್ರದೇಶದ ಅಡಿಯಲ್ಲಿದೆ.ಸಕಲೇಶಪುರವು ಕರ್ನಾಟಕದಲ್ಲಿ ಹೆಚ್ಚು ಬೇಡಿಕೆಯಿರುವ ವಾರಾಂತ್ಯದ ತಾಣಗಳಲ್ಲಿ ಒಂದಾಗಿದ್ದು, ಇಲ್ಲಿ ನೋಡಲು ಹಲವು ಆಸಕ್ತಿದಾಯಕ ಸ್ಥಳಗಳಿವೆ. ಇಲ್ಲಿ ನೀವು ಅತಿಸುಂದರ ಭೂದೃಶ್ಯಗಳು, ಕಾಫಿ ಮತ್ತು ಮಸಾಲೆ ತೋಟಗಳು, ಆಕರ್ಷಕವಾದ ಜಲಪಾತಗಳು, ಟ್ರೆಕ್ಕಿಂಗ್ ಹಾದಿಗಳು ಮತ್ತು ಕೆಲವು ಪ್ರಾಚೀನ ದೇವಾಲಯಗಳನ್ನು ನೋಡಬಹುದು.

ಬೆಳಗಾಂವಿ – ಒಂದು ಅವಲೋಕನ

ಸಹ್ಯಾದ್ರಿ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿರುವ ಬೆಳಗಾವಿಯು ಅನೇಕ ನೈಸರ್ಗಿಕ ಅದ್ಭುತಗಳಿಗೆ ನೆಲೆಯಾಗಿದೆ. ಉತ್ತರ ಕರ್ನಾಟಕದ ಐತಿಹಾಸಿಕ ಪಟ್ಟಣವಾಗಿರುವ ಬೆಳಗಾವಿಯನ್ನು ಹಿಂದೆ ಬೆಳಗಾಮ್ ಎಂದು ಕರೆಯಲಾಗುತ್ತಿತ್ತು, ಇದು ಮಲೆನಾಡು ಪ್ರದೇಶದಲ್ಲಿದ್ದು ವರ್ಷವಿಡೀ ಹಚ್ಚ ಹಸಿರಿನಿಂದ ಕೂಡಿರುತ್ತದೆ. ಬೆಳಗಾವಿಯು ಅನೇಕ ಐತಿಹಾಸಿಕ ಸ್ಥಳಗಳು ಮತ್ತು ದೇವಾಲಯಗಳಿಗೆ ನೆಲೆಯಾಗಿದೆ.

ಧಾರವಾಡದಲ್ಲಿ ನೋಡಬೇಕಾದ ಆಕರ್ಷಣೀಯ ಸ್ಥಳಗಳು

ಸಾಂಸ್ಕೃತಿಕ,ಪಾರಂಪಾರಿಕ, ಶೈಕ್ಷಣಿಕ ಮತ್ತು ಐತಿಹಾಸಿಕ ಪ್ರಸಿದ್ಧವಾಗಿರುವ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ ಪ್ರವಾಸಿಗರಿಗೆ ಬೇಕಾದ ಎಲ್ಲವನ್ನೂ ಹೊಂದಿದೆ. ಧಾರವಾಡವು ಚಾಲುಕ್ಯರು, ಬಹಮನಿ ಸುಲ್ತಾನರು, ವಿಜಯನಗರ ಸಾಮ್ರಾಜ್ಯ, ಆದಿಲ್ ಶಾಹಿಗಳು, ಮೊಘಲರು, ಶಿವಾಜಿ ಮಹಾರಾಜರು, ಪೇಶ್ವೆ ಬಾಲಾಜಿ ರಾವ್, ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರಿಂದ ಆಳಲ್ಪಟ್ಟಿತ್ತು. ಧಾರವಾಡವು ಶೈಕ್ಷಣಿಕ ಮತ್ತು ಕೃಷಿ ವಿಜ್ಞಾನಗಳ ಕೇಂದ್ರವಾಗಿರುವುದರಿಂದ ಇಲ್ಲಿ ನೀವು ಅನೇಕ ಕಲಿಕಾ ಕೇಂದ್ರಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ನೋಡಬಹುದು. ಇಲ್ಲಿಗೆ ಅನೇಕ ಪ್ರಯಾಣಿಕರು, ಇತಿಹಾಸಕಾರರು ಮತ್ತು ಸಂಶೋಧಕರು ಭೇಟಿ ನೀಡುತ್ತಾರೆ.

ರಾಮನಗರದ ಪ್ರೇಕ್ಷಣೀಯ ಸ್ಥಳಗಳು

ನೀವು ಬೆಂಗಳೂರಿನಿಂದ ಮೈಸೂರು ಅಥವಾ ಮಡಿಕೇರಿ ಕಡೆಗೆ ಪ್ರಯಾಣಿಸುವಾಗ ರಾಮನಗರಕ್ಕೆ ಬರಲೇ ಬೇಕು. ರಾಮನಗರವು ಹಲವು ಆಕರ್ಷಣೆಗಳನ್ನು ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ.
ರೇಷ್ಮೆ ಸೀರೆಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುವ ಏಷ್ಯಾ ಮತ್ತು ಭಾರತದಲ್ಲಿ ರೇಷ್ಮೆ ಕೋಕೂನ್‌ಗಳ ಅತಿದೊಡ್ಡ ಮಾರುಕಟ್ಟೆಯಾಗಿ ಪ್ರಸಿದ್ಧವಾಗಿರುವ ರಾಮನಗರವು ‘ಸಿಲ್ಕ್ ಸಿಟಿ’ ಎಂದೂ ಜನಪ್ರಿಯವಾಗಿದೆ.

ವಿಜಯಪುರದಲ್ಲಿ ನೋಡಲೇಬೇಕಾದ ಸ್ಥಳಗಳು

50 ಮಸೀದಿಗಳು, 20ಕ್ಕೂ ಹೆಚ್ಚು ಸಮಾಧಿಗಳು, ಕೆಲವು ಅರಮನೆಗಳು ಮತ್ತು ಅವಶೇಷಗಳನ್ನು ಹೊಂದಿರುವ ವಿಜಯಪುರವು, ರಾಜ್ಯದ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಐತಿಹಾಸಿಕ ಪಟ್ಟಣಗಳಲ್ಲಿ ಒಂದಾಗಿದೆ. ಹಿಂದೆ ಬಿಜಾಪುರ ಎಂದು ಕರೆಯಲ್ಪಡುತ್ತಿದ್ದ ವಿಜಯಪುರ, ಕರ್ನಾಟಕದ ಉತ್ತರ ಭಾಗದಲ್ಲಿದ್ದು, ಮಹಾರಾಷ್ಟ್ರದ ಸಾಂಗ್ಲಿ ಮತ್ತು ಸೋಲಾಪುರ ಪಟ್ಟಣಗಳಿಗೆ ಹತ್ತಿರದಲ್ಲಿದೆ. ನಿಸ್ಸಂದೇಹವಾಗಿ ವಿಜಯಪುರವು ನೋಡಲು ಆಸಕ್ತಿದಾಯಕವಾದ ಅನೇಕ ಸ್ಥಳಗಳನ್ನು ಹೊಂದಿದೆ.

ಚಿಕ್ಕಮಗಳೂರಿನಲ್ಲಿ ನೋಡಬೇಕಾದ ಪ್ರಮುಖ ಸ್ಥಳಗಳು

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ, ಪ್ರಶಾಂತ ಮತ್ತು ಸುಂದರವಾದ ಗಿರಿಧಾಮಗಳಲ್ಲಿ ಚಿಕ್ಕಮಗಳೂರು ಒಂದಾಗಿದೆ. ‘ಕರ್ನಾಟಕದ ಕಾಫಿ ನಾಡು’ ಎಂದೂ ಕರೆಯಲ್ಪಡುವ ಚಿಕ್ಕಮಗಳೂರಿನಲ್ಲಿ ನೋಡಲು ಸಾಕಷ್ಟು ಪ್ರಸಿದ್ಧ ಪ್ರದೇಶಗಳಿವೆ. ಪ್ರಾಚೀನ ದೇವಾಲಯಗಳು, ಜಲಪಾತಗಳು, ಹಸಿರು ಕಾಫಿ ತೋಟಗಳು, ಚಾರಣ ಪ್ರದೇಶಗಳು ಅಭಯಾರಣ್ಯಗಳು, ವನ್ಯಜೀವಿ ಪ್ರದೇಶಗಳು ಸೇರಿದಂತೆ ಚಿಕ್ಕಮಗಳೂರು ಎಲ್ಲವನ್ನು ಹೊಂದಿದೆ. ಚಿಕ್ಕಮಗಳೂರಿನಲ್ಲಿ ನೋಡಲು ಸಾಕಷ್ಟು ಸ್ಥಳಗಳಿವೆ.

ತುಮಕೂರಿನಲ್ಲಿ ನೀವು ಭೇಟಿ ಮಾಡಬಹುದಾದ ಸ್ಥಳಗಳು

ನೀವು ತುಮಕೂರಿನಲ್ಲಿ ಎತ್ತರದ ಬೆಟ್ಟಗಳು, ಚಾರಣ ಪ್ರದೇಶಗಳು, ಭವ್ಯವಾದ ಕೋಟೆಗಳು ಮತ್ತು ಪ್ರಾಚೀನ ದೇವಾಲಯಗಳನ್ನು ನೋಡಬಹುದು. ಬೆಂಗಳೂರಿನಿಂದ ಇಲ್ಲಿಗೆ ವಾರಾಂತ್ಯದ ರಜೆಯನ್ನು ಕಳೆಯಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಬರುತ್ತಾರೆ. ತುಮಕೂರು ಪ್ರವಾಸಿಗರು, ಪ್ರಕೃತಿ ಪ್ರೇಮಿಗಳು, ಯಾತ್ರಿಕರು, ಚಾರಣಿಗರು ಮತ್ತು ಸಾಹಸ ಪ್ರಿಯರಿಗೆ ಸಾಕಷ್ಟು ಆಕರ್ಷಕ ಸ್ಥಳಗಳನ್ನು ಹೊಂದಿದೆ. ತುಮಕೂರು ನಗರವು ಪ್ರಮುಖ ಶಿಕ್ಷಣ ಕೇಂದ್ರವು ಹೌದು.

ಬೆಂಗಳೂರಿನಲ್ಲಿರುವ ಪ್ರಸಿದ್ಧ ಕೆರೆಗಳು

ಬೆಂಗಳೂರಿನ ಕೆರೆಗಳು ಬೆಂಗಳೂರಿಗರ ಮತ್ತು ಬೆಂಗಳೂರಿಗೆ ಭೇಟಿ ನೀಡುವ ಎಲ್ಲರ ಆಕರ್ಷಣೆಯ ಸ್ಥಳವಾಗಿವೆ. ಇವುಗಳು ಫಿಟ್‌ನೆಸ್ ಪ್ರೀಕ್ಸ್, ಯೋಗ ಉತ್ಸಾಹಿಗಳು, ಓಟಗಾರರು ಮತ್ತು ಜಾಗಿಂಗ್ ಮಾಡುವವರಿಗೆ ಒನ್-ಸ್ಟಾಪ್ ಸ್ಥಳವಾಗಿದೆ ಮತ್ತು ಪ್ರಶಾಂತತೆಯಲ್ಲಿ ಸಮಯ ಕಳೆಯಲು ಬಯಸುವ ಜನರಿಗೆ ಇವುಗಳು ಸೂಕ್ತವಾದ ಸ್ಥಳವಾಗಿದೆ.

ಬೀದರ್‌ನಲ್ಲಿರುವ ಸ್ಮಾರಕಗಳು

ಬೀದರ್ ಐತಿಹಾಸಿಕ ನಗರ ಆಗಿದ್ದು ಇದನ್ನು ಸಾಮಾನ್ಯವಾಗಿ ‘ವಿಸ್ಪರಿಂಗ್ ಸ್ಮಾರಕಗಳ ನಗರ’ ಎಂದು ಕರೆಯಲಾಗುತ್ತದೆ ಮತ್ತು ವೈಭವಯುತ ಐತಿಹಾಸಿಕ ಗತಕಾಲದಿಂದ 60 ಕ್ಕೂ ಹೆಚ್ಚು ಸ್ಮಾರಕಗಳನ್ನು ಹೊಂದಿದೆ. ಕರ್ನಾಟಕದ ಕಿರೀಟ ಎಂದು ಕರೆಯಲ್ಪಡುವ ಬೀದರ್ ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿದೆ. ಬೀದರ್ ನಗರವನ್ನು ಚಾಲುಕ್ಯರು, ಕಾಕತೀಯರು, ತುಘಲಕ್‌ಗಳು, ರಾಷ್ಟ್ರಕೂಟರು, ಬಹಮನಿ ಶಾಹಿ ಮತ್ತು ಹೈದರಾಬಾದಿ ನಿಜಾಮರಂತಹ ಅನೇಕ ಆಡಳಿತಗಾರರು ಆಳಿದ್ದಾರೆ. ಬೀದರ್‌ನಲ್ಲಿರುವ ಸ್ಮಾರಕಗಳು ಜಿಲ್ಲೆಯ ಮತ್ತು ರಾಜ್ಯದ ಮಹತ್ವದ ಶ್ರೀಮಂತ ಇತಿಹಾಸವನ್ನು ವಿವರಿಸುತ್ತದೆ. ಬೀದರ್‌ನಲ್ಲಿರುವ ಸ್ಮಾರಕಗಳ ಅದ್ಭುತ ವಾಸ್ತುಶಿಲ್ಪವು ಹಿಂದೂ, ಟರ್ಕಿಶ್ ಮತ್ತು ಪರ್ಷಿಯನ್ ಶೈಲಿಗಳ ಆಸಕ್ತಿದಾಯಕ ಮಿಶ್ರಣವಾಗಿದೆ.

ಬೆಂಗಳೂರಿನಿಂದ ದೀರ್ಘ ವಾರಾಂತ್ಯದ ವಿಹಾರಗಳು – 2022

ಆಗಸ್ಟ್ ನಂತರದ ಅವಧಿಯು ವರ್ಷದ ಅತ್ಯುತ್ತಮ ಸಮಯವಾಗಿದ್ದು ಈ ತಿಂಗಳಿನಿಂದ ಹಬ್ಬಗಳ ಸರಣೆ ಆರಂಭವಾಗಲಿದೆ. ಬರಲಿವೆ. ಈ ಹಬ್ಬಗಳ ರಜೆಯಲ್ಲಿ ಪ್ರವಾಸಿಗರು ವಾರಾಂತ್ಯದ ಪ್ರವಾಸಗಳನ್ನು ಆನಂದಿಸಬಹುದು. ಕರ್ನಾಟಕ ರಾಜ್ಯವು ಅನೇಕ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದ್ದು, ವಾರಾಂತ್ಯದಲ್ಲಿ ಯೋಜಿಸಬಹುದಾಗಿದೆ.

ಮಾನ್ಸೂನ್ ಸಮಯದಲ್ಲಿ ಕರ್ನಾಟಕದಲ್ಲಿ ಭೇಟಿ ನೀಡಬೇಕಾದ ಸ್ಥಳಗಳು

ನಮ್ಮ ಕರ್ನಾಟಕ ರಾಜ್ಯವು ತನ್ನ ಹಚ್ಚ ಹಸಿರು ಪ್ರಕೃತಿ, ಉಕ್ಕಿ ಹರಿಯುವ ಜಲಪಾತಗಳು, ಧುಮ್ಮಿಕ್ಕುವ , ಹರಿಯುವ ನದಿಗಳು, ಮಂಜು ಮುಸುಕಿದ ಬೆಟ್ಟಗಳು, ಬೀಚ್‌ಗಳು, ಕಾಡುಗಳು, ಜೀವ ವೈವಿಧ್ಯಗಳು ಮುಂತಾದವುಗಳಿಗಾಗಿ ಪ್ರಸಿದ್ಧವಾಗಿವೆ. ಮಾನ್ಸೂನ್ ಸಮಯದಲ್ಲಿ ಕರ್ನಾಟಕದಲ್ಲಿ ಕಡ್ಡಾಯವಾಗಿ ಭೇಟಿ ನೀಡಬೇಕಾದ ಸ್ಥಳಗಳಿವೆ. ಈಗ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗ ಎಲ್ಲರೂ ಪ್ರವಾಸದತ್ತ ಆಕರ್ಷಿತರಾಗುತ್ತಿದ್ದಾರೆ

ಅಂತರಾಷ್ಟ್ರೀಯ ಹುಲಿ ದಿನ

ಪ್ರತಿ ವರ್ಷ ಜುಲೈ 29 ಅನ್ನು ಅಂತರರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಿಸಲಾಗುತ್ತದೆ ಮತ್ತು ಈ ಸಂದರ್ಭದಲ್ಲಿ ಹುಲಿ ಸಂಬಂಧಿತ ಸಮಸ್ಯೆಗಳಿಗೆ ವೀಡಿಯೊಗಳು, ಇನ್ಫೋಗ್ರಾಫಿಕ್ಸ್ ಮತ್ತು ಲಿಂಕ್‌ಗಳನ್ನು ಹಂಚಿಕೊಳ್ಳುವ ಮೂಲಕ ಹುಲಿ ಸರಂಕ್ಷಣೆ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರನ್ನು ತೊಡಗಿಸಿಕೊಳ್ಳುವ ಮೂಲಕ ಜಾಗೃತಿ ಮತ್ತು ಬೆಂಬಲವನ್ನು ನೀಡಲಾಗುತ್ತದೆ. 2010 ರಲ್ಲಿ

ಸಕ್ರೆಬೈಲ್ ಆನೆ ಶಿಬಿರ

ಸಕ್ರೆಬೈಲ್ ಆನೆ ಶಿಬಿರವು ಅರಣ್ಯ ಶಿಬಿರವಾಗಿದ್ದು ಇದು ಶಿವಮೊಗ್ಗ ಕೇಂದ್ರ ಕಛೇರಿಯಿಂದ 14 ಕಿಮೀ ದೂರದಲ್ಲಿದೆ ತುಂಗಾ ನದಿಯ ದಡದಲ್ಲಿರುವ ಈ ಸಕ್ರೆಬೈಲ್ ಆನೆ ಶಿಬಿರವು ಕರ್ನಾಟಕ ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದೆ. ಈ ಶಿಬಿರವು ವನ್ಯಜೀವಿ ಉತ್ಸಾಹಿಗಳು ಮತ್ತು ಪ್ರವಾಸಿಗರನ್ನು ಮಾತ್ರವಲ್ಲದೆ ಆನೆಗಳ ಬಗ್ಗೆ ಅಧ್ಯಯನ ಮಾಡಲು ಬಯಸುವ ಉತ್ಸಾಹಿಗಳನ್ನು ಆಕರ್ಷಿಸುತ್ತದೆ.

ಕಬಿನಿ – ಅದ್ಭುತ ಭೂದೃಶ್ಯಗಳು ಮತ್ತು ವನ್ಯಜೀವಿಗಳ ನಾಡು

ಕಬಿನಿ ಎಂದರೆ ಎಲ್ಲ ವಯೋಮಾನದವರ ಪ್ರೀತಿಯ ತಾಣವಾಗಿದೆ. ಕಾಡಿನ ಮೌನ, ಪಕ್ಷಿಗಳ ಚಿಲಿಪಿಲಿ, ಕಬಿನಿ ನದಿಯ ಶಾಂತತೆ, ರೋಮಾಂಚನಗೊಳಿಸುವ ಸಫಾರಿಗಳು ಮತ್ತು ವನ್ಯಜೀವಿಗಳನ್ನು ನೋಡುವ ಉತ್ಸಾಹ, ಇವೆಲ್ಲವೂ ಕಬಿನಿಗೆ ಭೇಟಿ ನೀಡಲು ಮುಖ್ಯಕಾರಣಗಳಾಗುತ್ತವೆ.

ಶಿವಮೊಗ್ಗದಲ್ಲಿ ನೋಡಬಹುದಾದ ಸ್ಥಳಗಳು

ಶಿವಮೊಗ್ಗ ಜಿಲ್ಲೆಯು ಹಲವಾರು ಪ್ರವಾಸಿ ತಾಣಗಳನ್ನು ಹೊಂದಿದೆ. ಶಿವಮೊಗ್ಗ ಎಂದರೆ ‘ಶಿವ- ಮುಖ’ ಅಥವಾ ‘ಶಿವನ ಮುಖ’ ಎಂದು ನಂಬಲಾಗಿದೆ. ಶಿವಮೊಗ್ಗ ಜಿಲ್ಲೆ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸರಿಸುಮಾರು 300 ಕಿಮೀ ದೂರದಲ್ಲಿದೆ. ತುಂಗಾ ನದಿಯ ದಡದಲ್ಲಿರುವ ಶಿವಮೊಗ್ಗವನ್ನು ಸಾಮಾನ್ಯವಾಗಿ ‘ಮಲೆನಾಡಿಗೆ ಹೆಬ್ಬಾಗಿಲು’ ಎಂದು ಕರೆಯಲಾಗುತ್ತದೆ. ಇದು ಸುಂದರವಾದ ಪ್ರಕೃತಿ ದೃಶ್ಯಗಳು ಮತ್ತು ಆಕರ್ಷಣೀಯ ಪ್ರವಾಸಿತಾಣಗಳನ್ನು ಹೊಂದಿದ್ದು ತನ್ನ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಗೆ ಹೆಸರಾಗಿದೆ.

ಅಂತರಾಷ್ಟ್ರೀಯ ಯೋಗ ದಿನ

ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 21 ರಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ವೈಜ್ಞಾನಿಕವಾಗಿ, ಈ ದಿನವು ಅನೇಕ ದೇಶಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಈ ದಿನದಂದು ಸೂರ್ಯನು ಉತ್ತರದಿಂದ ದಕ್ಷಿಣಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಆಗ ಅದ್ಭುತ ಪರಿವರ್ತನೆ ಉಂಟಾಗುತ್ತದೆ.

ಕೆಳದಿ ರಾಮೇಶ್ವರ ದೇವಸ್ಥಾನ

ಕರ್ನಟಕ ರಾಜ್ಯವು ಎಲ್ಲ ರೀತಿಯ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಇಲ್ಲಿ ಅನ್ವೇಷಿಸಲು ಸಾಕಷ್ಟು ಪ್ರದೇಶಗಳಿವೆ. ಅಂತೆಯೇ ಶಿವಮೊಗ್ಗವು ತನ್ನ ಭವ್ಯವಾದ ಜೋಗ ಜಲಪಾತಕ್ಕೆ ಹೆಸರುವಾಸಿಯಾಗಿದ್ದರೂ, ಇಲ್ಲಿ ಪ್ರವಾಸಿಗರುಭೇಟಿ ನೀಡಲೇಬೇಕಾದ ಅನೇಕ ಪ್ರವಾಸಿ ಆಕರ್ಷಣೆಗಳಿವೆ. ಅಂತಹ ಒಂದು ಸ್ಥಳವೆಂದರೆ ಪ್ರಾಚೀನ ಕೆಳದಿ ರಾಮೇಶ್ವರ ದೇವಾಲಯ.

ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ಸ್ಥಳಗಳು

ಭಾರತ ದೇಶವು ಸ್ವಾತಂತ್ರ್ಯವನ್ನು ಪಡೆದು ಇಂದಿಗೂ ಎಪ್ಪತ್ತೈದು ವಸಂತಗಳು ಕಳೆದಿವೆ. ಈ ಅಮೋಘ ಸಂದರ್ಭವನ್ನು ಸ್ಮರಣೀಯವಾಗಿಸಲು ಭಾರತದ ಎಲ್ಲ ರಾಜ್ಯಗಳಲ್ಲಿ ಸ್ವಾತಂತ್ಯದ ಅಮೃತ ಮಹೋತ್ಸವ ಎಂಬ ಶೀರ್ಷಿಕೆ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕರ್ನಾಟಕವೂ ತನ್ನ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು :ಸ್ವಾತಂತ್ಯದ ಅಮೃತ ಮಹೋತ್ಸವದ ಅಡಿಯಲ್ಲಿ ನೆನೆಪಿಸಿಕೊಂಡು ಅನೇಕ ಕಾರ್ಯಕ್ರಮಗಳನ್ನು ಆಚರಿಸುತ್ತಿದೆ. ಇತರ ರಾಜ್ಯಗಳಂತೆ ಕರ್ನಾಟಕವೂ ಸ್ವಾತಂತ್ರ್ಯ ಹೋರಾಟದ ಧೈರ್ಯಶಾಲಿ ಕಥೆಗಳನ್ನು ಹೊಂದಿದೆ.

ಕರ್ನಾಟಕದಲ್ಲಿ ಸ್ಕೂಬಾ ಡ್ರೈವಿಂಗ್

ನೀವು ಸಾಹಸಿಯೇ? ನೀವು ಜಲ ಕ್ರೀಡೆಗಳು ಮತ್ತು ಜಲ ಚಟುವಟಿಕೆಗಳನ್ನು ಇಷ್ಟಪಡುತ್ತೀರಾ?
ಉತ್ತರ ಹೌದು ಎಂದಾದರೆ, ನೀವು ಸ್ಕೂಬಾ ಡೈವಿಂಗ್ ಅನ್ನು ಪ್ರಯತ್ನಿಸಬೇಕು. ಸ್ಕೂಬಾ ಡೈವಿಂಗ್ ಭಾರತದಲ್ಲಿ ಹೆಚ್ಚಿನ ವೇಗದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ. ನೀವು ಸ್ಕೂಬಾ ಡ್ರೈವಿಂಗ್ ಮೂಲಕ ನೀರೊಳಗಿನ ಹವಳದ ಬಂಡೆಗಳು, ಸಸ್ಯ ಮತ್ತು ಪ್ರಾಣಿಗಳು, ವರ್ಣರಂಜಿತ ಮೀನುಗಳು, ಸಮುದ್ರ ಆಮೆಗಳು, ಗ್ರೇಟ್ ಬರ್ರಾಕುಡಾಸ್, ಬಿಳಿ ಮತ್ತು ಕಪ್ಪು ತುದಿ ಶಾರ್ಕ್‌ಗಳು, ಸ್ಟಿಂಗ್ರೇಗಳು ಮತ್ತು ನೀರಿನ ಜಗತ್ತಿನಲ್ಲಿ ಇನ್ನೂ ಹೆಚ್ಚಿನವುಗಳ ಆಕರ್ಷಕ ಜೀವನವನ್ನು ಅನ್ವೇಷಿಸಬಹುದು.

ಬೆಂಗಳೂರಿನಲ್ಲಿ ಹೆರಿಟೇಜ್ ಟೂರ್

ಬೆಂಗಳೂರು ನಗರವು ಕಳೆದ 2 ದಶಕಗಳಲ್ಲಿ ಐಟಿ ಕ್ಷೇತ್ರ ಮತ್ತು ಮೂಲಸೌಕರ್ಯದಲ್ಲಿ ಅದರ ಅಭಿವೃದ್ಧಿಗಾಗಿ ಭಾರತದ ಸಿಲಿಕಾನ್ ಸಿಟಿ ಎಂದು ಜನಪ್ರಿಯವಾಗಿದೆ. ಆದಾಗ್ಯೂ ಹೆಚ್ಚಿನ ಅಂತರರಾಷ್ಟ್ರೀಯ ಬ್ರಾಂಡ್‌ಗಳ ಉಪಸ್ಥಿತಿಯೊಂದಿಗೆ ಆಧುನಿಕ ಐಷಾರಾಮಿ ನಗರವು ತನ್ನ ಪರಂಪರೆಯ ಹೊಳಪನ್ನು ಕಳೆದುಕೊಂಡಿಲ್ಲ.

ಕರ್ನಾಟಕದ ಕೋಟೆಗಳು

ಕರ್ನಾಟಕವನ್ನು ಮೌರ್ಯ, ಹೊಯ್ಸಳ, ವಿಜಯನಗರ ,ಚಾಲುಕ್ಯ, ಕದಂಬ, ರಾಷ್ಟ್ರಕೂಟರು, ಗಂಗರು ಸೇರಿದಂತೆ ಮುಂತಾದ ರಾಜವಂಶಗಳು ಆಳಿವೆ. ಈ ಎಲ್ಲಾ ಸಾಮ್ರಾಜ್ಯಗಳು ತಮ್ಮ ಶ್ರೀಮಂತ ಪರಂಪರೆ ಮತ್ತು ಇತಿಹಾಸವನ್ನು ಬಿಟ್ಟು ಹೋಗಿವೆ. ಐತಿಹಾಸಿಕ ದೇವಾಲಯಗಳು, ಸ್ಮಾರಕಗಳು, ಅರಮನೆಗಳು ಮತ್ತು ಕೋಟೆಗಳು ಈ ವೀರ ಪರಂಪರೆಯ ಸಾವಿರಾರು ಕಥೆಗಳನ್ನು ಹೇಳುತ್ತವೆ.

ಕರ್ನಾಟಕದಲ್ಲಿ ಜಲಕ್ರೀಡೆಗಳು

‘ಒಂದು ರಾಜ್ಯ ಹಲವು ಪ್ರಪಂಚಗಳು’, ಕರ್ನಾಟಕ ಪ್ರವಾಸೋದ್ಯಮದ ಟ್ಯಾಗ್ ಲೈನ್ ಎಲ್ಲವನ್ನೂ ಹೇಳುತ್ತದೆ. ಕರ್ನಾಟಕದ ಇತರ ಪ್ರವಾಸಿ ಆಕರ್ಷಣೆಗಳಂತೆ, ಜಲ ಕ್ರೀಡೆಗಳು ಮತ್ತು ಸಾಹಸವು ಸಹ ಎಲ್ಲಾ ವಯೋಮಾನದವರಿಂದ ಹೆಚ್ಚು ಬೇಡಿಕೆಯಿರುವ ಚಟುವಟಿಕೆಯಾಗಿದೆ. 300 ಕಿಮೀ ಕರಾವಳಿ, ನದಿಗಳು ಮತ್ತು ಹಿನ್ನೀರಿನ ಪ್ರದೇಶವನ್ನು ಹೊಂದಿರುವ ಕರ್ನಾಟಕವು ಜಲಕ್ರೀಡೆ ಚಟುವಟಿಕೆಗಳಿಗೆ ಸುಸಜ್ಜಿತವಾದ ರಾಜ್ಯವಾಗಿದೆ.

ಮೈಸೂರಿನಲ್ಲಿರುವ ಪ್ರಸಿದ್ಧ ದೇವಾಲಯಗಳು

ಮೈಸೂರು ನಗರವು ತನ್ನ ಪರಂಪರೆ, ಸಂಸ್ಕೃತಿ, ದೇವಾಲಯಗಳು ಮತ್ತು ವೈಭವಕ್ಕಾಗಿ ಪ್ರಸಿದ್ಧವಾಗಿದ್ದು ಕರ್ನಾಟಕದಲ್ಲಿ ಹೆಚ್ಚು ಜನರು ಭೇಟಿ ನೀಡುವ ನಗರಗಳಲ್ಲಿ ಒಂದಾಗಿದೆ. ಮೈಸೂರು ನಗರವು ದೇವಾಲಯಗಳು ಮತ್ತು ಇತರ ಪ್ರಸಿದ್ಧ ಸ್ಥಳಗಳನ್ನು ಹೊಂದಿದ್ದು ಇದು ಹಲವು ವರ್ಷಗಳಿಂದ ಟಿಪ್ಪು ಸುಲ್ತಾನನ ತವರು ಸಹ ಆಗಿತ್ತು

ಮಂಗಳೂರಿನ ಪ್ರಸಿದ್ಧ ದೇವಸ್ಥಾನಗಳು

ಕಡಲತೀರಗಳು ಮತ್ತು ಕರಾವಳಿ ಆಹಾರಕ್ಕಾಗಿ ಜನಪ್ರಿಯವಾಗಿ ಹೆಸರುವಾಸಿಯಾದ ಮಂಗಳೂರು ಅನೇಕ ಪಾರಂಪರಿಕ ದೇವಾಲಯಗಳಿಗೆ ನೆಲೆಯಾಗಿದೆ. ಕರ್ನಾಟಕದ ಮುಖ್ಯ ಬಂದರು ನಗರವಾದ ಮಂಗಳೂರಿಗೆ ಹಿಂದೂ ದೇವತೆ ಮಂಗಳಾದೇವಿಯ ಹೆಸರನ್ನು ಇಡಲಾಗಿದೆ.

ಕರಾವಳಿ ಕರ್ನಾಟಕದ ಪಾಕಪದ್ಧತಿ ಸವಿಯಿರಿ

ಭಾರತವು ತನ್ನ ವಿಭಿನ್ನ ಪಾಕಶಾಲೆಯ ಕಲೆಗಳಿಗೆ ಹೆಸರುವಾಸಿಯಾಗಿದೆ, ಇದು ಆಧುನಿಕ ಅಡುಗೆ ಅಥವಾ ಸಾಂಪ್ರದಾಯಿಕ ಪಾಕವಿಧಾನಗಳಾಗಿರಬಹುದು. ನೀವು ಭಾರತದಲ್ಲಿ ಪ್ರತಿ 100 ಕಿ.ಮೀ.ಗೆ ರುಚಿ ಮತ್ತು ಸಾಂಪ್ರದಾಯಿಕ ಭಕ್ಷ್ಯಗಳನ್ನು ತಯಾರಿಸುವ ವಿಧಾನದಲ್ಲಿ ಬದಲಾವಣೆಯನ್ನು ಕಾಣಬಹುದು.

ಕರ್ನಾಟಕದಲ್ಲಿ ಸೈಕಲ್ ಟೂರ್

ಕರ್ನಾಟಕವು ಅತ್ಯುತ್ತಮ ಭೂದೃಶ್ಯಗಳು ಮತ್ತು ತೀರಗಳಿಂದ ಆಶೀರ್ವದಿಸಲ್ಪಟ್ಟಿದ್ದು ಇದು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇತ್ತೀಚೆಗೆ ಕರ್ನಾಟಕದಲ್ಲಿ ಸೈಕಲ್ ಟೂರ್‌ಗಳು ಅತ್ಯಂತ ಜನಪ್ರಿಯವಾಗುತ್ತಿವೆ. ಈ ಸೈಕಲ್ ಪ್ರವಾಸಗಳು ಖಂಡಿತವಾಗಿಯೂ ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ .

ಕರ್ನಾಟಕದಲ್ಲಿ ಬೇಸಿಗೆ ರಜೆಯಲ್ಲಿ ಭೇಟಿ ನೀಡಬೇಕಾದ ಸ್ಥಳಗಳು

ಈಗಾಗಲೇ ಮಕ್ಕಳ ಬೇಸಿಗೆಯ ರಜೆಗಳು ಆರಂಭವಾಗಿದೆ. ಬಹಳಷ್ಟು ಪೋಷಕರು ಈಗಾಗಲೇ ರಜೆಯ ದಿನಗಳನ್ನು ಯೋಜಿಸಲು ಆರಂಭಿಸಿದ್ದಾರೆ. ನಿಮಗೆ ಕರ್ನಾಟಕದಲ್ಲಿ ಬೇಸಿಗೆಯ ಸಮಯದಲ್ಲಿ ವೀಕ್ಷಿಸಲು ಸಾಕಷ್ಟು ಸ್ಥಳಗಳಿವೆ. ನೀವು ಬೇಸಿಗೆಯ ಸಮಯದಲ್ಲಿ ಮೈಸೂರು, ಬೆಂಗಳೂರು,ಕೂರ್ಗ ಸೇರಿದಂತೆ ಹಲವು ಜನಪ್ರಿಯ ತಾಣಗಳಿಗೆ ಭೇಟಿ ನೀಡಬಹುದು. ನೀವು ಕಡಲ ತೀರಗಳನ್ನು ಪ್ರೀತಿಸುತ್ತಿದ್ದರೇ ಗೋಕರ್ಣಕ್ಕೆ ಭೇಟಿ ನೀಡಬಹುದು.

ಮಹಿಳಾ ಪ್ರಯಾಣಿಕರಿಗೆ ಕರ್ನಾಟಕದಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳು

ಕೇವಲ ಹುಡುಗರೇಕೆ ಪ್ರವಾಸದ ವಿನೋದವನ್ನು ಅನುಭವಿಸಬೇಕು. ಮಹಿಳೆಯರೇನು ಯಾರಿಗೇನು ಕಮ್ಮಿ ಇಲ್ಲ. ಈಗ ಸಾಕಷ್ಟು ಮಹಿಳೆಯರು ಒಬ್ಬಂಟಿಯಾಗಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ನೀವು ಕೂಡ ಪ್ರವಾಸ ಕೈಗೊಳ್ಳಿ. ಮತ್ತು ಅಪರಿಮಿತ ಆನಂದವನ್ನು ಅನುಭವಿಸಿ.

ಕರ್ನಾಟಕದ ಕಾಡುಗಳಲ್ಲಿ ಪಕ್ಷಿಗಳು

ನಮ್ಮ ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿ ಪ್ರಪಂಚದಾದ್ಯಂತದ ಪ್ರವಾಸಿಗರು, ಪ್ರಯಾಣಿಕರು ಮತ್ತು ಸಂಶೋಧಕರನ್ನು ಆಹ್ವಾನಿಸುತ್ತದೆ ಅಂತೆಯೇ ನಮ್ಮ ಕರ್ನಾಟಕದ ಕಾಡುಗಳು, ವನ್ಯಜೀವಿಗಳು, ಪಕ್ಷಿಗಳು ಮತ್ತು ನೈಸರ್ಗಿಕ ಆವಾಸಸ್ಥಾನವು ಎಲ್ಲಾ ರೀತಿಯ ಪ್ರಯಾಣಿಕರನ್ನು ಆಕರ್ಷಿಸುತ್ತವೆ.

ಕರ್ನಾಟಕದಲ್ಲಿ ವನ್ಯಜೀವಿಧಾಮಗಳು

‘ಒಂದು ರಾಜ್ಯ ಹಲವು ಪ್ರಪಂಚಗಳು’ ಎಂಬಂತೆ. ಈ ಅರಣ್ಯ ಪ್ರಪಂಚವು ಎಲ್ಲಾ ವಯೋಮಾನದವರನ್ನು ಆಕರ್ಷಿಸುವ ವಿಷಯವಾಗಿದೆ. ಪ್ರವಾಸಿಗರು, ಛಾಯಾಗ್ರಾಹಕರು, ಪ್ರಕೃತಿ ಮತ್ತು ವನ್ಯಜೀವಿ ಪ್ರೇಮಿಗಳು ಅರಣ್ಯದ ಅಚ್ಚ ಹಸಿರಿನಲ್ಲಿ ತಿರುಗಾಡುವ ಯಾವುದೇ ಅವಕಾಶಗಳನ್ನು ಬಿಡುವುದಿಲ್ಲ. ಕರ್ನಾಟಕವು ಹಲವಾರು ವನ್ಯಜೀವಿ ಮತ್ತು ಪಕ್ಷಿಧಾಮಗಳಿಗೆ ನೆಲೆಯಾಗಿದ್ದು ಜಂಗಲ್ ಸಫಾರಿಯು ಪ್ರತಿಯೊಬ್ಬ ಪ್ರಯಾಣಿಕರು ಹಂಬಲಿಸುವ ವಿಷಯವಾಗಿದೆ.

ಕರ್ನಾಟಕದಲ್ಲಿ ಶಿವ ದೇವಾಲಯಗಳು

ಭಾರತದಲ್ಲಿ ಶಿವ ದೇವರನ್ನು ಸರ್ವೋಚ್ಚ ಶಕ್ತಿ ಎಂದು ಪರಿಗಣಿಸಲಾಗುತ್ತದೆ .ಭಾರತದಲ್ಲಿ ಸಾವಿರಾರು ದೊಡ್ಡ ಮತ್ತು ಚಿಕ್ಕ ಶಿವ ದೇವಾಲಯಗಳಿವೆ, ಅವುಗಳಲ್ಲಿ ಕೆಲವು ಶತಮಾನಗಳಷ್ಟು ಹಳೆಯದಾಗಿವೆ.

ಆವತಿ ಬೆಟ್ಟ ಕೆರೆ – ಬೆಂಗಳೂರಿನ ಬಳಿ ಒಂದು ದಿನದ ಪ್ರವಾಸ

ಬೆಂಗಳೂರಿನ ಜನರು ಯಾವಾಗಲೂ ಪ್ರತಿ ವಾರಾಂತ್ಯ ನಗರದ ಜಂಜಾಟದಿಂದ ದೂರವಿರಲು ಒಂದು ಸ್ಥಳದ ಹುಡುಕಾಟ ನಡೆಸುತ್ತಾರೆ ಎಂದು ನಮಗೆ ಗೊತ್ತು.

ಕರ್ನಾಟಕದಲ್ಲಿ ವಿಜ್ಞಾನ ವಸ್ತುಸಂಗ್ರಹಾಲಯಗಳು

ಹೆಮ್ಮೆಯ ಭಾರತೀಯರಾಗಿ, ನಾವು ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುತ್ತೇವೆ. ಈ ದಿನ ಜಗತ್ಪ್ರಸಿದ್ಧ ವಿಜ್ಞಾನಿ ಡಾ ಸಿ ವಿ ರಾಮನ್ ರ ಹುಟ್ಟುಹಬ್ಬದ ದಿನವಾಗಿದೆ. ಅವರು ತಮ್ಮ ರಾಮನ್ ಎಫೆಕ್ಟ್ ಗಾಗಿ 1930 ರಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಮೊದಲ ಏಷ್ಯನ್ ಆಗಿ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ.

ಕೋಟಿಲಿಂಗೇಶ್ವರ ದೇವಾಲಯ

ನಾವು ನಿಧಾನ ಮತ್ತು ಹೆಚ್ಚು ಅರ್ಥಪೂರ್ಣ ಪ್ರಯಾಣದತ್ತ ಸಾಗುತ್ತಿರುವಾಗ, ದೀರ್ಘಾವಧಿಗಿಂತ ಒಂದು ವರ್ಷದಲ್ಲಿ ಹೆಚ್ಚು ಸಣ್ಣ ಪ್ರವಾಸಗಳನ್ನು ಕೈಗೊಳ್ಳುವುದು ಹೆಚ್ಚು ಅರ್ಥಪೂರ್ಣವಾಗಿದೆ. ಬೆಂಗಳೂರಿಗರು ತಮ್ಮ ಬಿಡುವಿಲ್ಲದ ಕೆಲಸದ ವೇಳಾಪಟ್ಟಿಯ ನಡುವೆ ಅವರು ನಿರ್ವಹಿಸಬಹುದಾದ ಸಣ್ಣ ವಾರಾಂತ್ಯದ ವಿಹಾರಗಳನ್ನು ಯಾವಾಗಲೂ ಹುಡುಕುತ್ತಿರುತ್ತಾರೆ.

ಈ ಪ್ರೇಮಿಗಳ ದಿನದಂದು ಕರ್ನಾಟಕವನ್ನು ಅನ್ವೇಷಿಸಿ

ನೋಡುನೋಡುತ್ತಿದ್ದಂತೆ ಪ್ರೇಮಿಗಳ ದಿನ ಬಂದೇ ಬಿಟ್ಟಿದೆ. ಪ್ರೇಮಿಗಳು ಈ ವ್ಯಾಲಂಟೈನ್ ಡೇ ದಿನದಂದು ಎಲ್ಲಿಗೆ ಹೋಗಬೇಕು ? ಹೇಗೆ ಈ ದಿನವನ್ನು ಆಚರಿಸಬೇಕು? ಎಂದು ಯೋಚಿಸುತ್ತಿದ್ದಾರೆ. ಕರ್ನಾಟಕವು ಜೋಡಿಗಳಿಗೆ, ಪ್ರೇಮಿಗಳಿಗೆ ಬೇಕಾದ ಎಲ್ಲವನ್ನು ಹೊಂದಿದೆ.

ಬೆಂಗಳೂರು ಹತ್ತಿರದಲ್ಲಿರುವ ಟ್ರೆಕ್ಕಿಂಗ್ ಪ್ರದೇಶಗಳು

ಟ್ರೆಕ್ಕಿಂಗ್ ಮಾರ್ಗಗಳ ವಿಷಯದಲ್ಲಿ ಕರ್ನಾಟಕವು ದೇಶದ ಶ್ರೀಮಂತ ರಾಜ್ಯಗಳಲ್ಲಿ ಒಂದಾಗಿದೆ. ಬೆಂಗಳೂರು ಸುಲಭವಾದ ಮತ್ತು ಕಷ್ಟಕರವಾದ ಚಾರಣಗಳಿಂದ ಮತ್ತು ಸುತ್ತಮುತ್ತ ಹಲವಾರು ಟ್ರೆಕ್ಕಿಂಗ್ ಆಯ್ಕೆಗಳನ್ನು ನೀಡುತ್ತದೆ. ಈ ಚಾರಣಗಳನ್ನು ರಸ್ತೆಯ ಮೂಲಕ ಪ್ರವೇಶಿಸಬಹುದು ಮತ್ತು ಆರಂಭಿಕರಿಗಾಗಿ ಮಾಡಬಹುದಾಗಿದೆ.

ನಾಗರಹೊಳೆ –ರೋಮಾಂಚಕಾರಿ ಸಫಾರಿ

ನೀವು ನಿಮ್ಮ ವಾರಾಂತ್ಯದ ರಜೆಯ ಕುರಿತು ಯೋಚಿಸುತ್ತಿರುವಿರಾ? ಬೆಂಗಳೂರು, ಮೈಸೂರು, ಮಂಡ್ಯ ಅಥವಾ ಕೂರ್ಗ್‌ಗೆ ಹತ್ತಿರ ಇರುವ ಪ್ರದೇಶಗಳ ಕುರಿತು ಯೋಚಿಸುತ್ತಿರುವಿರಾ? ಹಾಗಾದರೆ ನಿಮಗೆ ಉತ್ತಮವಾದ ವಾರಾಂತ್ಯದ ಪ್ರದೇಶವೆಂದರೇ ಕಬಿನಿ ಅಥವಾ ನಾಗರಹೊಳೆ . ನಾಗರಹೊಳೆಗೆ ಪ್ರತಿ ಬಾರಿಯು ನಿಮಗೆ ಹೊಸದಂತೆ ಕಾಣುತ್ತದೆ. ನಾಗರಹೊಳೆ ಅಥವಾ ಕಬಿನಿಯಲ್ಲಿ ನೀವು ಪ್ರತಿ ಬಾರಿಯೂ ಹೊಸದನ್ನು ಅನುಭವಿಸುತ್ತೀರಿ.

ರಾಷ್ಟ್ರೀಯ ಪ್ರವಾಸೋದ್ಯಮ ದಿನ – ಸ್ವಾತಂತ್ರ್ಯದ ಕಥೆ

ಕಳೆದ ವರ್ಷದಿಂದ ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಥೀಮ್, ‘ನಮ್ಮ ದೇಶವನ್ನು ನೋಡಿ’ ಅನ್ನು ಮುಂದುವರೆಸುತ್ತಾ, ಈ ವರ್ಷವೂ ನಾವು ಅದೇ ಥೀಮ್ ಆಚರಿಸಿದ್ದೇವೆ. 2022 ರಲ್ಲಿ, ರಾಷ್ಟ್ರವು “ಸ್ವಾತಂತ್ರ್ಯದ ಅಮೃತ್ ಮಹೋತ್ಸವ”ದ ಅಡಿಯಲ್ಲಿ ‘ಗ್ರಾಮೀಣ ಮತ್ತು ಸಮುದಾಯ ಕೇಂದ್ರಿತ ಪ್ರವಾಸೋದ್ಯಮ’ ಎಂಬ ವಿಷಯದೊಂದಿಗೆ ‘ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ.

ಹೊನ್ನೆಮರಡು-ಸಾಹಸಮಯ ಚಟುವಟಿಕೆಗಳಲ್ಲಿ ಮಿಂದೇಳಿ

ನೀವು ಮತ್ತು ನಿಮ್ಮ ಇಡೀ ಕುಟುಂಬ, ಹುಡುಗರು ಮತ್ತು ಹುಡುಗಿಯರು, ಪ್ರಕೃತಿ ಪ್ರೇಮಿಗಳು ಮತ್ತು ಸಾಹಸ ಉತ್ಸಾಹಿಗಳು ಸಂಪೂರ್ಣ ಪ್ಯಾಕೇಜ್ ಇರುವ ಸಾಹಸಮಯ ವಾರಾಂತ್ಯದ ವಿಹಾರಕ್ಕಾಗಿ ಹುಡುಕುತ್ತಿರುವಿರಾ? ಹಾಗಾದರೇ ನೀವು ಸಾಹಸದ ಜೊತೆಗೆ ನೆಮ್ಮದಿಯತ್ತ ಹೊರಡಿ. ಈ ಕುರಿತು ನಾವು ನಿಮಗೆ ಎಲ್ಲ ವಿವರಗಳನ್ನು ನೀಡುತ್ತೇವೆ. ಹೊನ್ನೆ ಮರಡು ನಿಮ್ಮ ಸಾಹಸಮಯ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ.

ಕರ್ನಾಟಕದಲ್ಲಿ ಮಕರ ಸಂಕ್ರಾಂತಿ

ಭಾರತವು ಹೊಸ ಆರಂಭದೊಂದಿಗೆ ಕ್ಯಾಲೆಂಡರ್ ಹೊಸ ವರ್ಷವನ್ನು ಆಚರಿಸುತ್ತದೆ ಏಕೆಂದರೆ ಇದು ಸುಗ್ಗಿಯ ಕಾಲವಾಗಿದೆ. ಉತ್ತರ ಭಾರತದಲ್ಲಿ ಚಳಿಗಾಲವು ಉತ್ತುಂಗದಲ್ಲಿದ್ದಾಗ, ಹಬ್ಬಗಳ ಸುಗಂಧ ಮತ್ತು ಕಂಪನವು ಮುಗಿದ ಹಾಗೆ.

ಡಿಸೆಂಬರ್ನಲ್ಲಿ ಕರ್ನಾಟಕದಲ್ಲಿ ಭೇಟಿ ನೀಡಬೇಕಾದ ಸ್ಥಳಗಳು

ನಮ್ಮ ಕರ್ನಾಟಕವು ವರ್ಷಪೂರ್ತಿ ಸುಂದರವಾಗಿ ಕಂಗೊಳಿಸುತ್ತದೆ, ಆದರೆ ಕರ್ನಾಟಕದಲ್ಲಿ ಡಿಸೆಂಬರ್ ತಿಂಗಳು ತನ್ನೊಂದಿಗೆ ಪೌರಾಣಿಕ ಆಕರ್ಷಣೆಯನ್ನು ತರುತ್ತದೆ. ನೀವು ಈ ಸುಂದರ ಅನುಭವಗಳನ್ನು ನಿಮ್ಮದಾಗಿಸಿಕೊಳ್ಳಬೇಕು.

ಕರಾವಳಿ ಕರ್ನಾಟಕದ ಪ್ರವಾಸಿ ಸ್ಥಳಗಳು

ಕರಾವಳಿ ಕರ್ನಾಟಕವು ಮರಳಿನ ಕಡಲತೀರಗಳು, ಹಚ್ಚ ಹಸಿರು ಪ್ರಕೃತಿ, ಉತ್ಸಾಹಭರಿತ ಸಂಸ್ಕೃತಿ, ಭವ್ಯವಾದ ದೇವಾಲಯಗಳು ಮತ್ತು ರುಚಿಕರವಾದ ತಿನಿಸುಗಳಿಗೆ ಹೆಸರುವಾಸಿ ಆಗಿದೆ. ದೈನಂದಿನ ಜೀವನದ ಜಂಜಾಟದಿಂದ ಹೊರಬರಲು ವಿಶ್ರಾಂತಿಗಾಗಿ ನೀವು ಪ್ರವಾಸಿ ಸ್ಥಳಗಳನ್ನು ಹುಡುಕಾಡುತ್ತಿದ್ದರೇ ಕರಾವಳಿ ಕರ್ನಾಟಕದ ಪಟ್ಟಣಗಳು ನಿಮಗೆ ಹೇಳಿ ಮಾಡಿಸಿದ ಸ್ಥಳಗಳಾಗಿವೆ.

ರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣವು ಕರ್ನಾಟಕದ ಪ್ರಮುಖ ಸ್ಥಳಗಳಲ್ಲಿ ಒಂದು. ಕಾವೇರಿ ನದಿಯ ದ್ವೀಪವಾದ ಶ್ರೀರಂಗಪಟ್ಟಣದಲ್ಲಿರುವ ರಂಗನಾಥಸ್ವಾಮಿ ದೇವಾಲಯವು ದೇಶದ ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಹೆಸರುವಾಸಿ ಆಗಿದೆ. ಇದು ವಿಷ್ಣುವಿನ ಅವತಾರವಾದ ರಂಗನಾಥನಿಗೆ ಸಮರ್ಪಿತವಾಗಿದೆ. ಇದು ದಕ್ಷಿಣ ಭಾರತದಲ್ಲಿ ಪಂಚರಂಗ ಕ್ಷೇತ್ರ (ವಿಷ್ಣುಗೆ ಅರ್ಪಿತವಾದ ಐದು ಪ್ರಮುಖ ದೇವಾಲಯಗಳು) ಎಂದು ಪರಿಗಣಿಸಲಾಗಿದೆ. ಪ್ರಧಾನ ದೇವತೆಯನ್ನು ಆದಿ ರಂಗ ಎಂದು ಕರೆಯಲಾಗುತ್ತದೆ ಏಕೆಂದರೆ ಇದು ಮೇಲ್ದಂಡೆಯ ಮೊದಲ ದೇವಾಲಯವಾಗಿದೆ.

ಕ್ರಿಸ್‌ಮಸ್‌ ಹಬ್ಬದ ಆಚರಣೆ

ಇಡೀ ಪ್ರಪಂಚವು ಯೇಸುಕ್ರಿಸ್ತನ ಜನ್ಮದಿನವನ್ನು ಪ್ರತಿ ವರ್ಷ, ಡಿಸೆಂಬರ್ 25 ರಂದು ಕ್ರಿಸ್ಮಸ್ ಎಂದು ಆಚರಿಸುತ್ತದೆ. ಕ್ರಿಶ್ಚಿಯನ್ ಧರ್ಮದ ಪ್ರಕಾರ, ಯೇಸು ಕ್ರೈಸ್ತರನ್ನು “ದೇವರ ಮಗ” ಎಂದು ನಂಬಲಾಗಿದೆ . ಹೀಗಾಗಿ ಯೇಸುವಿನ ಜನ್ಮದಿನವು ನಮಗೆಲ್ಲರಿಗೂ ದೇವರ ಅನಂತ ಆಶೀರ್ವಾದಗಳ ಸ್ಮರಣೆಯಾಗಿದೆ. ಕ್ರಿಸ್ಮಸ್ ಹಬ್ಬವು ಭಗವಂತನು ನಮ್ಮ ಮೇಲೆ ತನ್ನ ಪ್ರೀತಿಯನ್ನು ತೋರಿಸುವ ಸಮಯದ ಸಂಕೇತವಾಗಿದೆ.

ಮೈಸೂರು ಮೃಗಾಲಯದಲ್ಲಿ ನನ್ನ ಸುಂದರ ಅನುಭವ

ಸಾಂಸ್ಕೃತಿಗ ನಗರಿ ಮೈಸೂರು ನಿಸ್ಸಂದೇಹವಾಗಿ ಭೇಟಿ ನೀಡಲು ಅದ್ಭುತವಾದ ಸ್ಥಳಗಳ ಭಂಡಾರವಾಗಿದ್ದು, ಉತ್ತಮ ಅನುಭವಗಳನ್ನು ನೀಡುತ್ತದೆ. ಇಲ್ಲಿ ವಿವಿಧ ರೀತಿಯ ಪ್ರವಾಸಿಗರನ್ನು ಸೆಳೆಯುವ ಹಲವಾರು ಪ್ರವಾಸಿ ಆಕರ್ಷಣೆಗಳಿವೆ, ಮೈಸೂರು ಮೃಗಾಲಯವು ಪ್ರತಿಯೊಬ್ಬರೂ ಇಷ್ಟಪಡುವ ಸ್ಥಳಗಳಲ್ಲಿ ಒಂದಾಗಿದ್ದು ದೂರದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ವರ್ಷ, ನನ್ನ ಸ್ನೇಹಿತರ ಗುಂಪಿನೊಂದಿಗೆ ಈ ಆಕರ್ಷಕ ಮೃಗಾಲಯಕ್ಕೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತು. ನಮ್ಮ ಪ್ರವಾಸದ ಎರಡನೇ ದಿನ ಬೆಳಿಗ್ಗೆ 11.30 ರ ಸುಮಾರಿಗೆ ನಾವು ಮೃಗಾಲಯವನ್ನು ತಲುಪಿದೆವು.

ಜೆಎಲ್‌ಆರ್‌ ಐಷಾರಾಮಿ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್‌

ಸುಂದರ ಕರ್ನಾಟಕ ರಾಜ್ಯವು ಭಾರತದಲ್ಲಿನ ಒಂದು ಸಂತೋಷಕರ ತಾಣವಾಗಿದ್ದು, ನೀವು ಅನ್ವೇಷಿಸಲು ಇಷ್ಟಪಡಬಹುದಾದ ಪ್ರಬಲ ಆಕರ್ಷಕ ಸ್ಥಳಗಳನ್ನು ಹೊಂದಿದೆ. ಐಷಾರಾಮಿ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್‌ನ ಸಂಪ್ರದಾಯ ಮತ್ತು ಶೈಲಿಯ ಸಮೃದ್ಧ ಮಿಶ್ರಣವು ಪ್ರಯಾಣಿಕರ ಒಟ್ಟಾರೆ ಸುಂದರ ಅನುಭವವನ್ನು ಹೆಚ್ಚಿಸುತ್ತದೆ.

ಕನ್ನಡ ರಾಜ್ಯೋತ್ಸವ – ಕರ್ನಾಟಕ ಸಂಸ್ಥಾಪನಾ ದಿನ

ಪ್ರತಿವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಈ ದಿನದಂದು ನಮ್ಮ ರಾಜ್ಯವನ್ನು ರಚಿಸಲಾಯಿತು. ಹೀಗಾಗಿ, ಇದನ್ನು ಕರ್ನಾಟಕ ಸಂಸ್ಥಾಪನಾ ದಿನ ಎಂದೂ ಕರೆಯಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಟ್ಟಿಗೆ ಸೇರಿಸಿ ಕರ್ನಾಟಕವನ್ನು ರೂಪಿಸಿದ ದಿನ ಇದಾಗಿದೆ. ನವೆಂಬರ್ 1 ಕರ್ನಾಟಕದಲ್ಲಿ ಸಾರ್ವಜನಿಕ ರಜಾದಿನವಾಗಿದೆ.

ಕರ್ನಾಟಕದಲ್ಲಿ ದೀಪಾವಳಿ ಆಚರಿಸಲು ಉತ್ತಮ ಸ್ಥಳಗಳು

ದೀಪಾವಳಿ ಹಬ್ಬವು ಎಲ್ಲರಿಗೂ ಸಂಭ್ರಮದ ಹಬ್ಬವಾಗಿದೆ. ದೀಪಗಳ ಹಬ್ಬ ದೀಪಾವಳಿಯನ್ನು ದೇಶದ ವಿವಿಧ ಭಾಗಗಳಲ್ಲಿ ಅತ್ಯಂತ ಸಂಭ್ರಮ ಮತ್ತು ವೈಭವದಿಂದ ಆಚರಿಸಲಾಗುತ್ತದೆ. ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಗೌರವಿಸುವ ಈ ಹಬ್ಬವು ನಿಸ್ಸಂದೇಹವಾಗಿ ಅತ್ಯಂತ ಜನಪ್ರಿಯವಾಗಿದೆ. ವಿವಿಧ ರಾಜ್ಯಗಳು ತಮ್ಮದೇ ಆದ ರೀತಿಯಲ್ಲಿ ದೀಪಾವಳಿಯನ್ನು ಆಚರಿಸುತ್ತದೆ.

ಬೆಂಗಳೂರಿನಿಂದ ಚಿಕ್ಕಮಗಳೂರುವರೆಗೂ ಒಂದು ರೋಡ್ ಟ್ರಿಪ್

ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ನೆಲೆಗೊಂಡಿರುವ ಚಿಕ್ಕಮಗಳೂರು, ನಿಮ್ಮ ಮನಸ್ಸು, ದೇಹ ಮತ್ತು ಆತ್ಮವು ಪ್ರಕೃತಿಯ ಮಡಿಲಿನಲ್ಲಿ ಸಮತೋಲನವನ್ನು ಕಂಡುಕೊಳ್ಳಲು ಒಂದು ಸೂಕ್ತವಾದ ತಾಣವಾಗಿದೆ. ಬೆಂಗಳೂರಿನ ಬಿಡುವಿಲ್ಲದ ಜೀವನದಿಂದ ವಿರಾಮ ತೆಗೆದುಕೊಳ್ಳಲು ನೀವು ಬಯಸಿದರೆ ಕೇವಲ 250 ಕಿಮೀ ದೂರದಲ್ಲಿರುವ ಚಿಕ್ಕಮಗಳೂರಿನ ಮಧ್ಯಮ ತಂಪಾದ ವಾತಾವರಣ ನಿಮಗೆ ವಿಶ್ರಾಂತಿ ತೆಗೆದುಕೊಳ್ಳಲು ಸೂಕ್ತವಾದ ಸ್ಥಳವಾಗಿದೆ.

ಮೈಸೂರು ದಸರಾದ ವರ್ಣರಂಜಿತ ಕಾರ್ಯಕ್ರಮಗಳು

ಮೈಸೂರು ದಸರಾ ಎಷ್ಟೊಂದು ಸುಂದರ! ಮೈಸೂರು ದಸರಾ ಹಬ್ಬದ ಸಮಯದಲ್ಲಿ ಕರ್ನಾಟಕದ ಭವ್ಯತೆಯನ್ನು ನಾವು ಸಂಪೂರ್ಣವಾಗಿ ಕಾಣಬಹುದು. ಈ 10 ದಿನಗಳ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಮತ್ತು ಇದು ಪ್ರಪಂಚಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಮೈಸೂರಿನಲ್ಲಿ ನೀವು ಭೇಟಿ ನೀಡಲೇಬೇಕಾದ ಸ್ಥಳಗಳು

ಯೋಗವು ಕೇವಲ ದೈಹಿಕ ಆರೋಗ್ಯದ ಬಗ್ಗೆ ಅಲ್ಲ, ಆದರೆ ಇದು ಒಂದು ಜೀವನ ಮಾರ್ಗವಾಗಿದೆ. ಇದು ಆರೋಗ್ಯಕರ ಮನಸ್ಸು, ಆರೋಗ್ಯಕರ ದೇಹ ಮತ್ತು ಜಾಗೃತ ಆತ್ಮದ ಕಡೆಗೆ ಗುರಿ ಹೊಂದಿದೆ. ಯೋಗ ಎಂಬ ಪದವನ್ನು ‘ಯುಜಾ’ ದಿಂದ ಅನುವಾದಿಸಲಾಗಿದೆ, ಇದರರ್ಥ ಒಂದಾಗುವುದು ಅಥವಾ ಸೇರುವುದು. ಇದು ದೇಹ, ಆತ್ಮ ಮತ್ತು ಮನಸ್ಸನ್ನು ಒಂದುಗೂಡಿಸುವುದು ಎಂದಾಗಿದೆ.

ಬೆಂಗಳೂರಿನಲ್ಲಿ ಉದ್ಯಾನವನಗಳು

ಬೆಂಗಳೂರಿನಲ್ಲಿ ಉದ್ಯಾನವನಗಳು: ನಮ್ಮ ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯುತ್ತಾರೆ . ಇದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ನಿಮಗೆ ಗೊತ್ತೇ?

ಪಶ್ಚಿಮ ಘಟ್ಟ ಪ್ರದೇಶದ ಆಕರ್ಷಕ ಸ್ಥಳಗಳು

ಪಶ್ಚಿಮ ಘಟ್ಟಗಳು ಅಥವಾ ಸಹ್ಯಾದ್ರಿ ಪರ್ವತ ಶ್ರೇಣಿಗಳು ಇವು ಗಿರಿಧಾಮಗಳು, ಜೀವವೈವಿಧ್ಯಗಳು, ಜಲಪಾತಗಳು, ನದಿಗಳು, ಕಾನನಗಳು, ಸುಂದರ ಪಟ್ಟಣಗಳು, ಸ್ಮಾರಕಗಳು, ದೇವಾಲಯಗಳು ಎಲ್ಲವುಗಳಿಗೆ ನೆಲೆಯಾಗಿದೆ. ಪಶ್ಚಿಮ ಘಟ್ಟಗಳು ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ವಿಸ್ತಾರವಾಗಿ ಹರಡಿಕೊಂಡಿವೆ. ಒಮ್ಮೆಯಾದರೂ ಅದ್ಭುತ ಜೀವಮಾನದ ಅನುಭವಕ್ಕಾಗಿ ಪಶ್ಚಿಮ ಘಟ್ಟ ಪ್ರದೇಶಗಳಿಗೆ ಪ್ರವಾಸಿಗರು ಭೇಟಿ ನೀಡಲೇ ಬೇಕು. ಪ್ರವಾಸಿಗರಿಗೆ ಅನುಕೂಲವಾಗಲೆಂದು ಪಶ್ಚಿಮ ಘಟ್ಟದ ಕೆಲವು ಆಕರ್ಷಕ ಸ್ಥಳಗಳ ಕುರಿತು ವಿವರಣೆಯನ್ನು ಕೆಳಗೆ ನೀಡಲಾಗಿದೆ.

ಕರ್ನಾಟಕದಲ್ಲಿ ಸಂಭ್ರಮದ ಗಣೇಶ ಚತುರ್ಥಿಯ ಆಚರಣೆ

ಗಣೇಶ ಹಬ್ಬವೆಂದರೇ ಎಲ್ಲರಿಗೂ ಎಲ್ಲಿಲ್ಲದ ಉತ್ಸಾಹ ಮತ್ತು ಸಂಭ್ರಮ. ಕರ್ನಾಟಕ ರಾಜ್ಯವು ತನ್ನ ಗಣೇಶ ಹಬ್ಬದ ಸಂಭ್ರಮದ ಆಚರಣೆಗೆ ಪ್ರಸಿದ್ಧವಾಗಿದೆ. ಗಣೇಶ ಚತುರ್ಥಿ ಎಂದರೇ ಈ ದಿನ ಗಣೇಶನು ಆನೆಯ ಶಿರದೊಂದಿಗೆ ಪುನರುತ್ಥಾನಗೊಂಡ ದಿನವಾಗಿದೆ. ಶಿವ ಮತ್ತು ಉಮೆಯರ ಮಗನಾದ ಗಣೇಶನು ಬುದ್ಧಿವಂತಿಕೆ, ಜ್ಞಾನ ಮತ್ತು ಅದೃಷ್ಟದ ದೇವರಾಗಿದ್ದಾನೆ ಮತ್ತು ವಿಘ್ನ ನಿವಾರಕನಾಗಿದ್ದಾನೆ. “ಶುಭ ಮತ್ತು ಲಾಭ” ದ ಧ್ಯೇಯದೊಂದಿಗೆ ಎಲ್ಲ ಭಕ್ತರ ಮನೆಮನೆಗೂ ಸಮೃದ್ಧಿ,ಸುಖ ಸಂಪತ್ತನ್ನು ಕರುಣಿಸುತ್ತಾನೆ. ಈ ಹಬ್ಬವನ್ನು ದೇಶದ ಹಲವೆಡೆ ಆಚರಿಸಿದರೂ ಸಹ ಕರ್ನಾಟಕದಲ್ಲಿ ಗಣೇಶ ಹಬ್ಬದ ಆಚರಣೆ ತನ್ನದೇ ಆದ ವಿಶಿಷ್ಟ ಆಕರ್ಷಣೆ ಮತ್ತು ವೈಭವಗಳನ್ನು ಹೊಂದಿದೆ.

ಅಂತರರಾಷ್ಟ್ರೀಯ ಯೋಗ ದಿನ

ಯೋಗವು ಕೇವಲ ದೈಹಿಕ ಆರೋಗ್ಯದ ಬಗ್ಗೆ ಅಲ್ಲ, ಆದರೆ ಇದು ಒಂದು ಜೀವನ ಮಾರ್ಗವಾಗಿದೆ. ಇದು ಆರೋಗ್ಯಕರ ಮನಸ್ಸು, ಆರೋಗ್ಯಕರ ದೇಹ ಮತ್ತು ಜಾಗೃತ ಆತ್ಮದ ಕಡೆಗೆ ಗುರಿ ಹೊಂದಿದೆ. ಯೋಗ ಎಂಬ ಪದವನ್ನು ‘ಯುಜಾ’ ದಿಂದ ಅನುವಾದಿಸಲಾಗಿದೆ, ಇದರರ್ಥ ಒಂದಾಗುವುದು ಅಥವಾ ಸೇರುವುದು. ಇದು ದೇಹ, ಆತ್ಮ ಮತ್ತು ಮನಸ್ಸನ್ನು ಒಂದುಗೂಡಿಸುವುದು ಎಂದಾಗಿದೆ.

ವಿಶ್ವ ಸಂಗೀತ ದಿನ

ಸಂಗೀತವು ಪ್ರತಿ ಹೃದಯವನ್ನು ಮುಟ್ಟುವ ಕಲೆಯ ಒಂದು ರೂಪವಾಗಿದೆ. ಇಬ್ಬರು ವ್ಯಕ್ತಿಗಳು, ಎರಡು ಸಮುದಾಯಗಳು, ಎರಡು ದೇಶಗಳನ್ನು ಧ್ವನಿಗಿಂತ ಉತ್ತಮವಾಗಿ ಯಾವುದೂ ಸಂಪರ್ಕಿಸಲು ಸಾಧ್ಯವಿಲ್ಲ. ಸಂಗೀತವು ಭಾಷೆ ಮತ್ತು ಸಂಸ್ಕೃತಿಯನ್ನು ಮೀರಿದ್ದು ಎಂದು ಸರಿಯಾಗಿ ಹೇಳಲಾಗಿದೆ. ಈ ಅದ್ಬುತ ಕಲೆ ಮತ್ತು ಅದರ ಶಕ್ತಿಗಳನ್ನು ಆಚರಿಸಲು, ವಿಶ್ವ ಸಂಗೀತ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.

ಕರ್ನಾಟಕದ ಟಾಪ್ 10 ಕಡಲತೀರಗಳು

ಕರ್ನಾಟಕವು ಅದ್ಭುತ ದೃಶ್ಯ ಸೌಂದರ್ಯ ಮತ್ತು ಸುಂದರವಾದ ನೋಟಗಳ ನೆಲವಾಗಿದೆ. ಇದು ಅತ್ಯಂತ ಅದ್ಭುತವಾದ ಮತ್ತು ವಿಶಾಲವಾದ ಕಡಲತೀರಗಳನ್ನು ಹೊಂದಿದೆ. ಈ ಕಡಲತೀರಗಳು ಮೈ ರೋಮಾಂಚನಗೊಳಿಸುತ್ತವೆ. ಅರೇಬಿಯನ್ ಸಮುದ್ರದ ಉದ್ದಕ್ಕೂ ಇರುವ ಈ ಸೊಗಸಾದ ಕರಾವಳಿಗಳು ಅತ್ಯಂತ ಸುಂದರವಾದವು ಮತ್ತು ಅದರ ಹೊಳೆಯುವ ನೀರು ಮತ್ತು ಮಿನುಗುವ ಮರಳಿನ ಕಡಲತೀರಗಳಿಂದ ಆಕರ್ಷಕವಾಗಿವೆ.

ಸುಲಾ ದ್ರಾಕ್ಷಿತೋಟಗಳಿಗೆ ವೈನ್ ಪ್ರವಾಸ

ಚನ್ನಪಟ್ಟಣದಲ್ಲಿರುವ ಸುಲ ವೈನ್ಯಾರ್ಡ್ಸ್ ಮತ್ತು ಪ್ರವಾಸಿಗರು ಆಗಾಗ್ಗೆ ಭೇಟಿ ನೀಡುವ ಒಂದು ಸುಂದರವಾದ ಸ್ಥಳವಾಗಿದೆ. ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಸುಲ ಹಲವಾರು ಬಗೆಯ ಆರೊಮ್ಯಾಟಿಕ್ ಮತ್ತು ಸ್ವಾದಿಷ್ಟ ವೈನ್ ತಯಾರಿಸುತ್ತಾರೆ. ಇದು ಪ್ರವಾಸಿಗರಿಗೆ ವೈನ್ ಪ್ರವಾಸೋದ್ಯಮ, ವೈನ್ ತಯಾರಿಕೆ ಮತ್ತು ರುಚಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಉತ್ತಮ ಅವಕಾಶವನ್ನು ನೀಡುತ್ತದೆ. ಕರ್ನಾಟಕದ ಡೊಮೈನ್ ಸುಲ ಎಂದು ಮರುನಾಮಕರಣಗೊಂಡಿರುವ ಸುಲ ವೈನ್ಯಾರ್ಡ್ಸ್ ಪ್ರಮೇಯವು ಚನ್ನಪಟ್ಟಣದ ದೊಡ್ಡ ಭಾಗವನ್ನು ಒಳಗೊಂಡಿದೆ ಮತ್ತು ಆಕರ್ಷಕ ಪ್ರವಾಸಿ ತಾಣವಾಗಿದೆ. ವೈನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ಪ್ರವಾಸಿಗರು ಈ ದ್ರಾಕ್ಷಿತೋಟಕ್ಕೆ ಭೇಟಿ ನೀಡಲೆಬೇಕು. ರುಚಿಯು ತಂಡದ ಇಡೀ ಆವರಣ ಮಾರ್ಗದರ್ಶಿ ಪ್ರವಾಸವನ್ನು ಒದಗಿಸುತ್ತದೆ ಮತ್ತು ಅತ್ಯಂತ ಸ್ನೇಹಪರವಾಗಿದೆ.

ಬೆಂಗಳೂರನ್ನು ಎಕ್ಸ್‌ಪ್ಲೋರಿಂಗ್ | ಸಿಲಿಕಾನ್ ಸಿಟಿ

ಬೆಂಗಳೂರು ನಗರವನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತದೆ, ಇದು ಐಟಿ ಹಬ್ ಆಗಿದೆ, ಇದು ಉತ್ತಮ ದೇಶೀಯ ಮತ್ತು ಅಂತರರಾಷ್ಟ್ರೀಯ ತಂತ್ರಜ್ಞಾನ ಕಂಪನಿಗಳನ್ನು ಆಕರ್ಷಿಸುತ್ತದೆ. ಬೆಂಗಳೂರು ಸುಧಾರಿತ ತಂತ್ರಜ್ಞಾನ ಮತ್ತು ಉದ್ಯಮಶೀಲತೆ ಭೂಮಿಯಾಗಿ ಮಾರ್ಪಟ್ಟಿದೆ. ಈ ಕಂಪನಿಗಳನ್ನು ಸುತ್ತುವರೆದಿರುವ ಇಂಡಸ್ಟ್ರಿಗಳು ಬಿಲಿಯನ್ ಡಾಲರ್ಗಳನ್ನು ಉತ್ಪಾದಿಸುತ್ತದೆ.

ಸಕಲೇಶಪುರದ ಕ್ಯಾಂಪ್ಸೈಟ್ನಲ್ಲಿ ವಶಪಡಿಸಿಕೊಳ್ಳುವ ಅನುಭವ

ನೀವು ಅವಕಾಶಗಳನ್ನು ಹುಡುಕುತ್ತಿದ್ದರೆ, ಕರ್ನಾಟಕದ ಮೋಡಿಗೆ ಸ್ಪರ್ಶಿಸುವ ಕ್ಯಾಂಪಿಂಗ್ ಪ್ರವಾಸವು ಅತ್ಯುತ್ತಮ ಉಪಾಯವಾಗಿದೆ. ನೀವು ಕ್ಯಾಂಪರ್ವಾನ್ ಅನ್ನು ನೇಮಿಸಿಕೊಳ್ಳಲು ಪ್ರಯತ್ನಿಸಿದರೆ ಅಥವಾ ಟೆಂಟ್ ಅನ್ನು ಪಿಚ್ ಮಾಡಲು ಆರಿಸಿಕೊಂಡರೂ, ಅವರು ನಿಮ್ಮನ್ನು ಆವರಿಸಿಕೊಳ್ಳುತ್ತದೆ!

ಕರ್ನಾಟಕದಲ್ಲಿ ಉಗಾಡಿ ಅನುಭವಿಸಲು ಉತ್ತಮ ಸ್ಥಳಗಳು

ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಪವಿತ್ರವಾದ ಹಬ್ಬಗಳಲ್ಲಿ ಒಂದಾದ ಯುಗಾದಿ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ‘ಉಗಾದಿ’ ಅಥವಾ ‘ಯುಗಾದಿ’ ಅನ್ನು ‘ಹೊಸ ಆರಂಭ’ ಎಂದು ಅನುವಾದಿಸಲಾಗುತ್ತದೆ ಮತ್ತು ಹಿಂದೂ ಚಂದ್ರನ ಕ್ಯಾಲೆಂಡರ್ಗೆ ಸಂಬಂಧಿಸಿದಂತೆ ಚೈತ್ರದ ಮೊದಲ ದಿನದಂದು ಆಚರಿಸಲಾಗುತ್ತದೆ.

ಕರ್ನಾಟಕದಲ್ಲಿ ಹೋಳಿ ಆಚರಿಸಲು ಅತ್ಯುತ್ತಮ ಸ್ಥಳಗಳು

ಬಣ್ಣಗಳ ಹಬ್ಬವಾದ ಹೋಳಿ ಭಾರತದಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಹೋಳಿ ಒಂದು ಜನಪ್ರಿಯ ಪ್ರಾಚೀನ ಹಿಂದೂ ಹಬ್ಬವಾಗಿದೆ, ಇದನ್ನು “ಪ್ರೀತಿಯ ಉತ್ಸವ”, “ಬಣ್ಣಗಳ ಹಬ್ಬ” ಮತ್ತು “ವಸಂತ ಹಬ್ಬ” ಎಂದೂ ಕರೆಯುತ್ತಾರೆ. ಬಣ್ಣಗಳ ಹಬ್ಬವು ಶುಭ ಸಂದರ್ಭದಲ್ಲಿ ಆನಂದಿಸಬಹುದಾದ ಸಿಹಿತಿಂಡಿಗಳ ಜೊತೆಗೆ ಸಂತೋಷ ಮತ್ತು ಶಕ್ತಿಯನ್ನು ತರುತ್ತದೆ. ಕೆಲವು ಸ್ಥಳಗಳು ಹೂವುಗಳನ್ನು ಬಳಸುತ್ತವೆ, ಇತರರು ಒಣ ಬಣ್ಣಗಳು ಅಥವಾ ನೀರಿನಿಂದ ಆಡುತ್ತಾರೆ. ಕರ್ನಾಟಕದಲ್ಲಿ ಹೋಳಿಯನ್ನು ವಿಭಿನ್ನ ಸಂಪ್ರದಾಯಗಳಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸುವುದನ್ನು ನೋಡಬಹುದು . ಹೋಳಿ ಆಚರಿಸಲು ನೀವು ಭೇಟಿ ನೀಡಬೇಕಾದ ಸ್ಥಳಗಳ ಪಟ್ಟಿ ಇಲ್ಲಿದೆ:

ಭೀಮೇಶ್ವರಿ ನೇಚರ್ ಕ್ಯಾಂಪ್‌ನಲ್ಲಿ ನನ್ನ ಅನುಭವ

ಭೀಮೇಶ್ವರಿ ಪ್ರಕೃತಿ ಮತ್ತು ಸಾಹಸ ಶಿಬಿರವು ಪ್ರಕೃತಿ ಪ್ರಿಯರಿಗೆ ಭವ್ಯವಾದ ಸ್ಥಳವಾಗಿದೆ. ಕರ್ನಾಟಕದ ಸುಂದರವಾದ ಕಾಡುಗಳಲ್ಲಿ ಸಿಕ್ಕಿಕೊಂಡಿರುವ ಇದು ಸಾಹಸಿಗರಿಗೆ ಸಂಪೂರ್ಣ ಸ್ವರ್ಗವಾಗಿದೆ. ಕಾವೇರಿ ನದಿಗೆ ಬಹಳ ಹತ್ತಿರದಲ್ಲಿರುವ ಶಿಬಿರವು ಪ್ರಕೃತಿಗೆ ಹತ್ತಿರವಾಗಲು ಬಯಸುವ ಜನರಿಗೆ ಸೊಗಸಾದ ಅನುಭವವನ್ನು ನೀಡುತ್ತದೆ.

ದೇವಬಾಗ್ ಬೀಚ್ ರೆಸಾರ್ಟ್

ದೇವ್‌ಬಾಗ್ ಕರ್ನಾಟಕದ ಸುಂದರವಾದ ಕರಾವಳಿ ಸ್ಥಳವಾಗಿದೆ. ಈ ಪ್ರದೇಶದ ಸಮುದ್ರದ ಮುಂಭಾಗವು ಪ್ರಶಾಂತವಾಗಿದೆ ಮತ್ತು ಸುಂದರವಾಗಿದೆ, ಪ್ರವಾಸಿಗರ ಏಕಾಂತತೆಯನ್ನು ಗೌರವಿಸುತ್ತದೆ ಮತ್ತು ಈ ಬೀಚ್ ಮೋಡಿಮಾಡುವಂತಿದೆ. ದೇವ್‌ಬಾಗ್ ಕರ್ನಾಟಕದ ಬಿಡುವಿಲ್ಲದ ನಗರ ಜೀವನದಿಂದ ತ್ವರಿತ ಮತ್ತು ಸ್ವಲ್ಪ ಮಟ್ಟದ ಬಿಡುವನ್ನು ನೀಡುತ್ತದೆ.

ವೈಟ್ ಪರ್ಲ್ ಕ್ರೂಸ್ ಅನುಭವ

ಪ್ರಕೃತಿಯ ಹಲವಾರು ರಹಸ್ಯಗಳನ್ನು ಮತ್ತು ವಿಸ್ಮಯಗಳನ್ನು ಅನ್ವೇಷಿಸುವುದು ಪ್ರಯಾಣಿಕರು ಕೈಗೊಳ್ಳಲು ಇಷ್ಟಪಡುವ ಆಕರ್ಷಕ ಕಾರ್ಯವಾಗಿದೆ. ನದೀಮುಖಗಳು, ಸರೋವರಗಳು ಮತ್ತು ವಿಲಕ್ಷಣ ಸಸ್ಯ ಮತ್ತು ಪ್ರಾಣಿಗಳ ಸಂಪೂರ್ಣ ಪರಿಸರ ವ್ಯವಸ್ಥೆಗಳನ್ನು ಕಂಡುಹಿಡಿಯುವುದು ಒಂದು ರೋಮಾಂಚನಕಾರಿ ಸಾಹಸ ಮಾತ್ರವಲ್ಲದೆ ಬಹಳ ವಿಶಿಷ್ಟ ಅನುಭವವನ್ನು ಕೊಡುತ್ತದೆ.

ಯಾನ ಗುಹೆಗಳಿಗೆ ಪ್ರವಾಸ

ಯಾಣ ಗುಹೆಗಳು ಪ್ರಕೃತಿಯ ಅತ್ಯುತ್ತಮ ಸೃಷ್ಟಿಗಳಲ್ಲಿ ಒಂದಾಗಿದೆ, ಇದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕುಮ್ಟಾದಲ್ಲಿದೆ, ಈ ಗುಹೆ ಆಕರ್ಷಕ ಮತ್ತು ನಿಗೂಡವಾಗಿದೆ. ಕಡುಗಪ್ಪು ಬಣ್ಣದಲ್ಲಿರುವ ಈ ಗುಹೆ ಕಾರ್ಸ್ಟ್ ಸುಣ್ಣದ ಕಲ್ಲುಗಳಿಂದ ರೂಪುಗೊಂಡಿದೆ, ಇದು ಅದರ ವಿಶಿಷ್ಟ ರಚನೆ ಮತ್ತು ವಿನ್ಯಾಸದ ಸ್ವರೂಪಕ್ಕೆ ಹೆಸರುವಾಸಿಯಾಗಿದೆ.

ಉಡುಪಿಯ ಹೌಸ್ ಬೋಟ್ ಅನುಭವ

ಉಡುಪಿಯು, ಭಾರತದ ಕರ್ನಾಟಕ ರಾಜ್ಯದಲ್ಲಿದೆ,ಇದು ಸುಂದರವಾದ ದೃಶ್ಯಗಳು ಮತ್ತು ಶ್ರೀಮಂತ ವನ್ಯಜೀವಿಗಳಿಗೆ ಜನಪ್ರಿಯವಾಗಿದೆ; ಆದಾಗ್ಯೂ, ಪಾಂಚಜನ್ಯ ನೌಕಾಯಾನ ವಿಹಾರ ನೀಡುವ ಅಸಾಧಾರಣವಾದ ಅನುಭವದ ಬಗ್ಗೆ ಅನೇಕ ಜನರಿಗೆ ಇನ್ನು ತಿಳಿದಿಲ್ಲ.

ಶರಾವತಿ ಸಾಹಸ ಶಿಬಿರದಲ್ಲಿ ನನ್ನ ಅನುಭವ

ಶರಾವತಿ ಅಡ್ವೆಂಚರ್ ಕ್ಯಾಂಪ್ ಭವ್ಯವಾದ ಪರ್ವತಗಳು ಮತ್ತು ಪ್ರಶಾಂತ ಕಾಡುಗಳ ನಡುವೆ ಇದೆ. ಪ್ರವಾಸಿಗರು ಹಲವಾರು ಜಾತಿಯ ಸಸ್ಯಗಳು ಮತ್ತು ಪ್ರಾಣಿಗಳನ್ನು, ಕಾಡು ಜೀವಿಗಳನ್ನು ತಮ್ಮ ನೈಸರ್ಗಿಕ ಆವಾಸಸ್ಥಾನದಲ್ಲಿ ವೀಕ್ಷಿಸಬಹುದು ಮತ್ತು ಕಾಡಿನ ಪರಿಸರವನ್ನು ವೀಕ್ಷಿಸಬಹುದು ಮತ್ತು ಈ ಕಾರಣದಿಂದ ಈ ಲಾಡ್ಜ್‌ನಿಂದ ಪ್ರಕೃತಿ ಎಷ್ಟು ಅದ್ಭುತವಾಗಿದೆ ಎಂದು ನೋಡುವುದು ಕಷ್ಟವೇನಲ್ಲ.

ಕರ್ನಾಟಕದಲ್ಲಿ ಭೇಟಿಮಾಡಲೇಬೇಕಾದ ಸ್ಮಾರಕಗಳು

ಕರ್ನಾಟಕವು ಭಾರತದ 2ನೇ ಅತಿ ಹೆಚ್ಚು ಪ್ರಮಾಣೀಕೃತ ಸ್ಥಳಗಳನ್ನು ಹೊಂದಿದೆ,752 ಪ್ರಸಿದ್ದವಾದ ಸ್ಥಳಗಳನ್ನು ಹೊರತುಪಡಿಸಿ ಸರ್ಕಾರಿ ನಿರ್ದೇಶನಾಲಯ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ರಕ್ಷಣೆ ನೀಡಿದೆ, ಇನ್ನೂ 25 ಸಾವಿರ ತಾಣಗಳು ಪ್ರಮಾಣೀಕರಿಸ ಬೇಕಾಗಿದೆ

ಭೇಟಿ ನೀಡಲು ಅತ್ಯುತ್ತಮ ಗಿರಿಧಾಮಗಳು

ಇಡೀ ಭಾರತದಲ್ಲಿ ಭೇಟಿ ನೀಡಲು ಸೊಗಸಾದ ಬೇರೆ ಬೇರೆ ಸ್ಥಳಗಳನ್ನು ಹೊಂದಿದೆ, ಎಲ್ಲ ರಾಜ್ಯಗಳಂತೆ ಕರ್ನಾಟಕವು ಈ ರೀತಿಯ ಸೊಗಸಾದ ಸ್ಥಳಗಳನ್ನು ಹೊಂದಿರುವುದರಲ್ಲಿ ಒಂದಾಗಿದೆ.

ಕಾರವಾರದಲ್ಲಿ ಮಾಡಬಹುದಾದ ಚಟುವಟಿಕೆಗಳು

ಕಾರವಾರ ಎಂಬುದು ಕಾಳಿ ನದಿ ಮತ್ತು ಅರಬ್ಬೀ ಸಮುದ್ರದ ಸಂಗಮದ ಬಳಿ ಇರುವ ಒಂದು ಸಣ್ಣ ಪಟ್ಟಣ. ಮೋಹಕವಾದ ಸುಂದರ ಸೌಂದರ್ಯಕ್ಕೆ ಹೆಸರುವಾಸಿಯಾದ ಕಾರವಾರ ಗೋವಾದಿಂದ 50 ಕಿಲೋಮೀಟರ್ ದೂರದಲ್ಲಿದೆ ಮತ್ತು ನಿಧಾನವಾಗಿ ಮನ್ನಣೆ ಪಡೆಯುತ್ತಿದೆ.

ಕರ್ನಾಟಕದಲ್ಲಿ ಭೇಟಿ ಮಾಡಲೇಬೆಕಾದ ಜಲಪಾತಗಳು

ಕರ್ನಾಟಕವು ಪಾರಂಪರಿಕ ತಾಣಗಳು, ಗಿರಿಧಾಮಗಳು ಮತ್ತು ಭವ್ಯವಾದ ಜಲಪಾತಗಳಿಗೆ ಹೆಸರುವಾಸಿಯಾಗಿದೆ. ಇದು ಪ್ರಸಿದ್ಧ ಮೈಸೂರಿನ ರೇಷ್ಮೆ ಮತ್ತು ಶ್ರೀಗಂಧದ ಮರಗಳಾಗಿರಬಹುದು ಅಥವಾ ಹಂಪಿಯ ಅವಶೇಷಗಳನ್ನು ಅರಿತು ಕೊಳ್ಳುವುದಾಗಿರಬಹುದು ಅಥವಾ ಸುಂದರವಾದ ಜಲಪಾತಗಳಿರಬಹುದು. ಹೀಗೆ ಇದು ಅದ್ಭುತವಾದ ಸ್ಥಳಗಳಿಂದ ತುಂಬಿದ ರಾಜ್ಯವಾಗಿದೆ.

ದಾಂಡೇಲಿ ಮೊಸಳೆ ಉದ್ಯಾನವನ

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಗೊಂಡಿರುವ ಸುಂದರವಾದ ಹಸಿರು ಪಟ್ಟಣ, ದಾಂಡೇಲಿಯು ಪಶ್ಚಿಮ ಘಟ್ಟದ ​​ಪ್ರಮುಖ ವನ್ಯಜೀವಿ ತಾಣಗಳಲ್ಲಿ ಒಂದಾಗಿದೆ.