Karnataka logo

Karnataka Tourism
GO UP
Karnataka Tourism

ಪ್ರವಾಸೋದ್ಯಮ ಪ್ರಚಾರ

separator
  /  ಪ್ರವಾಸೋದ್ಯಮ ಪ್ರಚಾರ

ಡಿಸೆಂಬರ್ 2021

ವೈಭವದ ಕ್ರಿಸ್ಮಸ್ ಆಚರಣೆ

ಕ್ರಿಸ್ಮಸ್ ಹಬ್ಬವು ಮಹತ್ವಪೂರ್ಣ ಹಬ್ಬಗಳಲ್ಲಿ ಒಂದಾಗಿದೆ. ವರ್ಣರಂಜಿತ ಅಲಂಕಾರಗಳು, ಆನಂದದಾಯಕ ಪರಿಸರ ಮತ್ತು ಸಾಕಷ್ಟು ಸಿಹಿತಿಂಡಿಗಳಿಂದ, ಕ್ರಿಸ್ಮಸ್ ನಿಜವಾಗಿಯೂ ದೇಶದ ಅತ್ಯಂತ ರೋಮಾಂಚಕ ಹಬ್ಬಗಳಲ್ಲಿ ಒಂದಾಗಿದೆ. ಕ್ರಿಶ್ಚಿಯನ್ ಧರ್ಮದಲ್ಲಿ ದೇವರ ಮಗನೆಂದು ನಂಬಲಾದ ಯೇಸುಕ್ರಿಸ್ತನ ಜನ್ಮದಿನದ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.ಮತ್ತಷ್ಟು ಓದು

ಅಂತರಾಷ್ಟ್ರೀಯ ಚಿರತೆ ದಿನ 2021

ಚೀತಾವು ಭೂಮಿಯ ಮೇಲಿನ ಅತ್ಯಂತ ವೇಗದ ಸಸ್ತನಿ ಎಂದು ನಮಗೆ ತಿಳಿದಿದೆ. ಇದು ಅತ್ಯಂತ ವೇಗವಾಗಿ ಓಡುತ್ತದೆ. ಚಿರತೆ ತನ್ನ ಪೂರ್ಣ ವೇಗದಲ್ಲಿ ಓಡಿದಾಗ, ಅದರ ಪಾದಗಳು ಕೇವಲ 6-7 ಮೀಟರ್‌ಗೆ ಒಮ್ಮೆ ಮಾತ್ರ ನೆಲವನ್ನು ಸ್ಪರ್ಶಿಸುತ್ತವೆ ಎಂದು ಹೇಳಲಾಗುತ್ತದೆ. ಚಿರತೆಗಳು ಪ್ರಪಂಚದ ವನ್ಯಜೀವಿಗಳ ಅತ್ಯಂತ ಮಹತ್ವದ ಭಾಗಗಳಲ್ಲಿ ಒಂದಾಗಿದ್ದರೂ ಸಹ ಈಗ ಅಳಿವಿನ ಅಂಚಿನಲ್ಲಿವೆ.ಮತ್ತಷ್ಟು ಓದು

ನವೆಂಬರ್ 2021

ವಿಶ್ವ ಮೀನುಗಾರಿಕೆ ದಿನ 2021

ವಾರ್ಷಿಕವಾಗಿ ನವೆಂಬರ್ 21 ರಂದು ವಿಶ್ವ ಮೀನುಗಾರಿಕಾ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನದ ಹಿಂದಿನ ಮುಖ್ಯ ಉದ್ದೇಶವೆಂದರೆ ವಿಶ್ವದ ಮೀನುಗಾರಿಕೆಯ ಸಮರ್ಥನೀಯ ದಾಸ್ತಾನುಗಳ ಮಹತ್ವವನ್ನು ಎತ್ತಿ ತೋರಿಸುವುದು. ಆರೋಗ್ಯಕರ ಸಾಗರಗಳ ಅವಶ್ಯಕತೆ, ಪರಿಸರ ವ್ಯವಸ್ಥೆ ಮತ್ತು ಸುತ್ತಮುತ್ತಲಿನ ಸಮತೋಲನದಂತಹ ಇತರ ಸಂಬಂಧಿತ ಅಂಶಗಳ ಮೇಲೆ ಈ ಆಚರಣೆಯು ಕೇಂದ್ರೀಕರಿಸುತ್ತದೆ. ವಿಶ್ವ ಮೀನುಗಾರಿಕಾ ದಿನವು ಮೀನುಗಾರ ಸಮುದಾಯಗಳಿಗೆ ಮಹತ್ವದ ದಿನವಾಗಿದೆ.ಮತ್ತಷ್ಟು ಓದು

ಕರ್ನಾಟಕದಲ್ಲಿ ದೀಪಾವಳಿಯ ಸಂಭ್ರಮದ ಆಚರಣೆ

ದೀಪಗಳ ಹಬ್ಬ, ಬೆಳಕಿನ ಹಬ್ಬ ದೀಪಾವಳಿ ನಿಜಕ್ಕೂ ದೇಶದ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ಪ್ರತಿ ವರ್ಷ ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಸಮೃದ್ಧಿ ಮತ್ತು ಸಂಪತ್ತನ್ನು ಸ್ವಾಗತಿಸಲು ಜನರು ತಮ್ಮ ಮನೆಗಳನ್ನು ಹೂವುಗಳು, ದೀಪಗಳು ಮತ್ತು ಆಕಾಶಬುಟ್ಟಿಗಳಿಂದ ಅಲಂಕರಿಸುತ್ತಾರೆ.ಮತ್ತಷ್ಟು ಓದು

ಕನ್ನಡ ರಾಜ್ಯೋತ್ಸವ

ಮೊದಲಿಗೆ ಕರ್ನಾಟಕ ರಾಜ್ಯವನ್ನು ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿತ್ತು . 1956 , ನವೆಂಬರ್ 1 ರಂದು ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳನ್ನು ಸೇರಿಸಿ ಕರ್ನಾಟಕ ರಾಜ್ಯವೆಂದು ಘೋಷಿಸಲಾಯಿತು. ಈ ದಿನವನ್ನು ಕನ್ನಡ ರಾಜ್ಯೋತ್ಸವ ದಿನವೆಂದು ಆಚರಿಸಲಾಗುತ್ತದೆ. ಇದನ್ನು ಕರ್ನಾಟಕ ಸಂಸ್ಥಾಪನಾ ದಿನ ಎಂತಲೂ ಕರೆಯುತ್ತಾರೆ.ಮತ್ತಷ್ಟು ಓದು

ಅಕ್ಟೋಬರ್ 2021

ಮೈಸೂರು ದಸರಾ -2021

ಮೈಸೂರು ದಸರಾ ಭಾರತದ ಅತ್ಯಂತ ಆಕರ್ಷಣೀಯವಾದ ಹಬ್ಬದ ಆಚರಣೆಗಳಲ್ಲಿ ಒಂದಾಗಿದೆ. ಇದನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ನವರಾತ್ರಿಯ ಸಮಯದಲ್ಲಿ 10 ದಿನಗಳ ಹಬ್ಬವನ್ನು ಆಚರಿಸಲಾಗುತ್ತದೆ. ಹತ್ತನೆಯ ದಿನ ವಿಜಯದಶಮಿಯಂದು ದಸರಾ ಹಬ್ಬ ಮುಕ್ತಾಯವಾಗುತ್ತದೆ. ಈ ಹಬ್ಬದ ಸಮಯದಲ್ಲಿ ಇಡೀ ಮೈಸೂರು ನಗರವು ಧಾರ್ಮಿಕ ವಾತಾವರಣ ಮತ್ತು ವರ್ಣರಂಜಿತ ಅಲಂಕಾರಗಳಲ್ಲಿ ಕಂಗೊಳಿಸುತ್ತದೆ. ಮತ್ತಷ್ಟು ಓದು

ವನ್ಯಜೀವಿ ಸಪ್ತಾಹ 2021

ಪ್ರಕೃತಿಯ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ವನ್ಯಜೀವಿಗಳ ಪಾತ್ರವು ನಿರ್ವಿವಾದವಾಗಿದೆ. ವನ್ಯಜೀವಿಗಳು ನಮ್ಮ ಭೂ ಜಗತ್ತಿನ ಪ್ರಮುಖ ಸಂಗತಿಗಳಾಗಿವೆ. ಅರಣ್ಯಕ್ಕೆ ನಾವು ಮಾಡುವ ಯಾವುದೇ ಹಾನಿಯು ಇಡೀ ಪರಿಸರ ವ್ಯವಸ್ಥೆಗೆ ಅಪಾಯವನ್ನು ತಂದೊಡ್ಡಬಹುದು ಆದ್ದರಿಂದ, ಸಸ್ಯ ಮತ್ತು ಪ್ರಾಣಿಗಳನ್ನು ಸಂರಕ್ಷಿಸುವುದು ಬಹಳ ಮುಖ್ಯವಾದ ಸಂಗತಿ ಆಗಿದೆ. ಮತ್ತಷ್ಟು ಓದು

ಕರ್ನಾಟಕದಲ್ಲಿ ಗಾಂಧಿ ಜಯಂತಿಯ ಆಚರಣೆ

ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಪ್ರತಿ ವರ್ಷ ಅಕ್ಟೋಬರ್ 2 ರಂದು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ಮುನ್ನಡೆಸಿದರು, ಇತರ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಹುರಿದುಂಬಿಸುತ್ತಾ ಅವರು ಹಲವಾರು ನಾಗರಿಕ ಹಕ್ಕು ಚಳುವಳಿಗಳನ್ನು ಆರಂಭಿಸಿದರು. ಮತ್ತಷ್ಟು ಓದು

ಸೆಪ್ಟೆಂಬರ್ 2021

ವಿಶ್ವ ಪ್ರವಾಸೋದ್ಯಮ ದಿನ 2021

ಇಂದು ಪ್ರವಾಸೋದ್ಯಮವು ಜಾಗತಿಕ ಆರ್ಥಿಕತೆ ಮತ್ತು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಬೆಳವಣಿಗೆಗೆ ತನ್ನದೇ ಅಭೂತಪೂರ್ವ ಕೊಡುಗೆ ನೀಡುವ ಅತ್ಯಂತ ಆಕರ್ಷಕ ಉದ್ಯಮ ವಲಯಗಳಲ್ಲಿ ಒಂದಾಗಿದೆ. ಮತ್ತಷ್ಟು ಓದು

ಗಣೇಶ ಚತುರ್ಥಿ

ಗಣೇಶ ಚತುರ್ಥಿ ಹಬ್ಬ ಹಿಂದುಗಳ ಒಂದು ಪ್ರಮುಖ ಹಬ್ಬ. ಭಾರತದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಇದು ಒಂದು. ಇದನ್ನು ಭಾರತದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬವನ್ನು ದೇವ ಗಣೇಶನ ಜನ್ಮ ದಿನದಂದು ಆಚರಿಸಲಾಗುತ್ತದೆ. ಮತ್ತಷ್ಟು ಓದು

ಆಗಸ್ಟ್ 2021

ಕರ್ನಾಟಕದಲ್ಲಿ ನೀಲಕುರಿಂಜಿ ಹೂವುಗಳು

ಗಣೇಶ ಚತುರ್ಥಿ ಹಬ್ಬ ಹಿಂದುಗಳ ಒಂದು ಪ್ರಮುಖ ಹಬ್ಬ. ಭಾರತದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಇದು ಒಂದು. ಇದನ್ನು ಭಾರತದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬವನ್ನು ದೇವ ಗಣೇಶನ ಜನ್ಮ ದಿನದಂದು ಆಚರಿಸಲಾಗುತ್ತದೆ. ಮತ್ತಷ್ಟು ಓದು

ಜನ್ಮಾಷ್ಟಮಿ

ಶ್ರೀಮಾನ್ ವಿಷ್ಣುವಿನ ಎಂಟನೇ ಅವತಾರವಾಗಿ ಶ್ರಾವಣ ಮಾಸದ ಎಂಟನೇ ದಿನ ಜನಿಸಿದ ಶ್ರೀಕೃಷ್ಣನ ಜನ್ಮ ದಿನವನ್ನು ಜನ್ಮಾಷ್ಟಮಿಯಾಗಿ ಭಾರತದಾದ್ಯಂತ ಆಚರಿಸಲಾಗುತ್ತದೆ. ಇದನ್ನು . ಸಾಮಾನ್ಯವಾಗಿ ಗೋಕುಲಾಷ್ಟಮಿ ಅಥವಾ ಕೃಷ್ಣ ಜನ್ಮಾಷ್ಟಮಿ ಎಂದು ಕರೆಯುತ್ತಾರೆ. ಈ ಹಿಂದೂ ಹಬ್ಬವು ಉತ್ತರ ಭಾರತದಲ್ಲಿ ಹೆಚ್ಚು ಪ್ರಾಧ್ಯಾನ್ಯತೆಯನ್ನು ಪಡೆದಿದೆ . ಮತ್ತಷ್ಟು ಓದು

ಗೌರಿ ಹಬ್ಬ

ಕರ್ನಾಟಕದಲ್ಲಿ ಆಚರಿಸುವ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಗೌರಿ ಹಬ್ಬವು ಒಂದು. ಈ ಗೌರಿ ಹಬ್ಬವನ್ನು ಗಣೇಶ ಚತುರ್ಥಿಗೆ ಒಂದು ದಿನ ಮುಂಚಿತವಾಗಿ ಆಚರಿಸಲಾಗುತ್ತದೆ, ಅಲ್ಲಿ ಗಣೇಶನ ತಾಯಿ ಮತ್ತು ಶಿವನ ಪತ್ನಿ ಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಗಂಗಾಧರನ ಪತ್ನಿ ಗೌರಿಯನ್ನು ಆದಿಯ ಅವತಾರವೆಂದು ಪರಿಗಣಿಸಲಾಗುತ್ತದೆ. ಈ ಮಾತೆಯು ಅತ್ಯಂತ ಶಕ್ತಿಶಾಲಿಯಾಗಿದ್ದಾಳೆ.ಮತ್ತಷ್ಟು ಓದು