Karnataka logo

Karnataka Tourism
GO UP
Vijayanagara District

ಕರ್ನಾಟಕದ ಹೊಸ ಸೇರ್ಪಡೆ, ವಿಜಯನಗರ, 31 ನೇ ಜಿಲ್ಲೆ

separator
  /  ಕರ್ನಾಟಕದ ಹೊಸ ಸೇರ್ಪಡೆ, ವಿಜಯನಗರ, 31 ನೇ ಜಿಲ್ಲೆ

ಕರ್ನಾಟಕವು 2021 ಫೆಬ್ರವರಿ 8 ರಂದು ತನ್ನ ಹೊಸ ಜಿಲ್ಲೆಯನ್ನು ಪಡೆದುಕೊಂಡಿತು ಹಾಗೂ ಇದನ್ನು ವಿಜಯನಗರ ಎಂದು ಕರೆಯಲಾಗುತ್ತದೆ.ಈ ಹೊಸ ಜಿಲ್ಲೆಯ ಹುಟ್ಟಿಗೆ ಸಂಬಂಧಿಸಿದಂತೆ ಕಳೆದ ವರ್ಷ ಹಲವಾರು ಸಭೆಗಳು ನಡೆದವು ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಯಿತು.  ಈ ಹಿಂದೆ ವಿಜಯನಗರವು ಬಳ್ಳಾರಿ ಜಿಲ್ಲೆಯ ಒಂದು ಭಾಗವಾಗಿತ್ತು ಆದರೆ ವಿಜಯನಗರವನ್ನು ಬೇರ್ಪಡಿಸಿದ ನಂತರ  ಕರ್ನಾಟಕದ 31 ನೇ ಜಿಲ್ಲೆಯ ರೂಪದಲ್ಲಿ ತನ್ನದೇ ಆದ ಅಸ್ತಿತ್ವದೊಂದಿಗೆ  ಹೊರಹೊಮ್ಮಿದೆ. ಈ   ಹೊಚ್ಚ ಹೊಸ ಜಿಲ್ಲೆಯ   ಪ್ರಧಾನ ಕಾರ್ಯ ಸ್ಥಳ  ಹೊಸಪೇಟೆಯಾಗಿದೆ.

ವಿಜಯನಗರವನ್ನು ಕುಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಕೊಟ್ಟೂರು, ಹರಪನಹಳ್ಳಿ ಮತ್ತು ಹೂವಿನ ಹಡಗಲಿ ಎಂಬ ಆರು ತಾಲ್ಲೂಕುಗಳಾಗಿ ವಿಂಗಡಿಸಲಾಗಿದೆ. ಹಿಂದೆ ಬಳ್ಳಾರಿ ಜಿಲ್ಲೆಯ ಭಾಗವಾಗಿದ್ದ ವಿಶ್ವಪ್ರಸಿದ್ಧ UNESCO ತಾಣವಾದ ಹಂಪಿ ಈಗ ವಿಜಯನಗರಕ್ಕೆ ಸೇರುತ್ತದೆ.  ಮೂಲಸೌಕರ್ಯ ಅಭಿವೃದ್ಧಿ ಸಚಿವ ಸಚಿವ ಶ್ರೀ ಆನಂದ್ ಸಿಂಗ್, ವಕ್ಫ್ ಮತ್ತು ಹಾಜ್ ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಹಾ ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ ಮತ್ತು ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಸ್ಥಾಪಿಸಲು ಅವರು ಸಹ ಅಪಾರ ಪ್ರಯತ್ನವನ್ನು ಮಾಡಿದ್ದಾರೆ.

ಈ ವಿಭಜನೆಯ ಯೋಜನೆಗೆ ನವೆಂಬರ್ 2020 ಸಾಕ್ಷಿಯಾಗಿದೆ. ತೀರ್ಮಾನಕ್ಕೆ ಬರುವ ಮೊದಲು ಹಲವಾರು ಅನುಕೂಲಗಳನ್ನು ಪರಿಗಣಿಸಲಾಗಿತ್ತು. ಅಂತಿಮವಾಗಿ, ಈ ಯೋಜನೆಯನ್ನು 2021 ರ ಫೆಬ್ರವರಿ 8 ರಂದು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲಾಯಿತು. ವಿಜಯನಗರದ ಹೊಸ ಜಿಲ್ಲೆಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಪ್ರಯತ್ನಗಳು ನಡೆಯುತ್ತಿವೆ. ಹೊಸದಾಗಿ ಬೇರ್ಪಟ್ಟ ಈ ಭೂಮಿ ಇಡೀ ಕರ್ನಾಟಕ ರಾಜ್ಯದ ಪ್ರಗತಿಗೆ ಹೆಚ್ಚಿನ ಸಾಮರ್ಥ್ಯವನ್ನು ತೋರಿಸುತ್ತದೆ. ಶ್ರೀ ಆನಂದ್ ಸಿಂಗ್ ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳು ವಿಜಯನಗರವನ್ನು ಬಳ್ಳಾರಿಯಂತೆ ಆಧುನಿಕ ಮತ್ತು ಉಪಯುಕ್ತವಾಗಿಸಲು  ಶ್ರಮಪಟ್ಟು ಕೆಲಸ ಮಾಡುತ್ತಿದ್ದಾರೆ.