Karnataka logo

Karnataka Tourism
GO UP
Shiva Temple

ಕರ್ನಾಟಕದಲ್ಲಿ ಶಿವ ದೇವಾಲಯಗಳು

separator
  /  ಬ್ಲಾಗ್   /  ಕರ್ನಾಟಕದಲ್ಲಿ ಶಿವ ದೇವಾಲಯಗಳು
Pattadakal

ಕರ್ನಾಟಕದಲ್ಲಿ ಶಿವ ದೇವಾಲಯಗಳು

ಭಾರತದಲ್ಲಿ ಶಿವ ದೇವರನ್ನು  ಸರ್ವೋಚ್ಚ ಶಕ್ತಿ ಎಂದು ಪರಿಗಣಿಸಲಾಗುತ್ತದೆ .ಭಾರತದಲ್ಲಿ ಸಾವಿರಾರು ದೊಡ್ಡ ಮತ್ತು ಚಿಕ್ಕ ಶಿವ ದೇವಾಲಯಗಳಿವೆ, ಅವುಗಳಲ್ಲಿ ಕೆಲವು ಶತಮಾನಗಳಷ್ಟು ಹಳೆಯದಾಗಿವೆ. ಕರ್ನಾಟಕವೂ ಶಿವ ದೇವಾಲಯಗಳ ನಾಡಾಗಿದ್ದು ಬಹು ಶಿವ ದೇವಾಲಯಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿ ಅಂತಹ ಕೆಲವು ದೇವಸ್ಥಾನಗಳ ಪಟ್ಟಿಯನ್ನು ನೀಡಲಾಗಿದೆ.

ಕರ್ನಾಟಕದಲ್ಲಿ ಮುರ್ಡೇಶ್ವರ ದೇವಸ್ಥಾನ, ಭಟ್ಕಳ, ಮಂಜುನಾಥ ದೇವಸ್ಥಾನ, ಧರ್ಮಸ್ಥಳ, ವಿರೂಪಾಕ್ಷ ದೇವಸ್ಥಾನ, ಹಂಪಿ, ಕೋಟಿಲಿಂಗೇಶ್ವರ ದೇವಸ್ಥಾನ, ಕೋಲಾರ, ಹೊಯ್ಸಳೇಶ್ವರ ದೇವಸ್ಥಾನ, ಹಳೇಬೀಡು, ಓಂಕಾರೇಶ್ವರ ದೇವಸ್ಥಾನ, ನಂಜುಂಡೇಶ್ವರ ದೇವಸ್ಥಾನ, ಮತ್ತು ಇನ್ನೂ ಅನೇಕ ಜನಪ್ರಿಯ ಶಿವ ದೇವಾಲಯಗಳಿವೆ.

ಪುರಾತನ ಕಾಲದಿಂದಲೂ ಜನರಿಗೆ ನಂಬಿಕೆಯಿರುವ ಕರ್ನಾಟಕದ ಕೆಲವು ಶಿವ ದೇವಾಲಯಗಳನ್ನು ನಿಮಗಾಗಿ  ಇಲ್ಲಿ ಪಟ್ಟಿ ಮಾಡಲಾಗಿದೆ.

ಮಲ್ಲಿಕಾರ್ಜುನ ದೇವಾಲಯ, ಪಟ್ಟದಕಲ್ಲು

ಮಲ್ಲಿಕಾರ್ಜುನ ದೇವಾಲಯ, ಪಟ್ಟದಕಲ್ಲು

ಈ ಮೂಲತಃ ತ್ರೈಲೋಕೇಶ್ವರ ಮಹಾ ಶೈಲ ಪ್ರಸಾದ ಎಂದು ಕರೆಯಲ್ಪಡುವ ಈ ಭವ್ಯವಾದ ಮಲ್ಲಿಕಾರ್ಜುನ ದೇವಾಲಯವು ವಾಸ್ತುಶಿಲ್ಪದ ದೃಷ್ಟಿಯಿಂದ ಬಹುತೇಕ ವಿರೂಪಾಕ್ಷ ದೇವಾಲಯದ ಅವಳಿಯಾಗಿದೆ. ಪಟ್ಟದಕಲ್ ಪ್ರದೇಶದಲ್ಲಿರುವ ಈ ದೇವಾಲಯವನ್ನು ರಾಣಿ ತ್ರೈಲೋಕ್ಯ ಮಹಾದೇವಿಯು ಕ್ರಿ.ಶ.740 ರಲ್ಲಿ ನಿರ್ಮಿಸಿದಳು. ಈ ಶಿವ ದೇವಾಲಯವನ್ನು ಈಗ ಭಾರತೀಯ ಪುರಾತತ್ವ ಇಲಾಖೆಯು ನಿರ್ವಹಿಸುತ್ತಿದೆ ಮತ್ತು ಈ ದೇವಾಲಯವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಅಡಿಯಲ್ಲಿ ಪಟ್ಟಿಮಾಡಲಾಗಿದೆ. ಇದು ಶಿವನ ದೇವಾಲಯವಾಗಿದ್ದರೂ, ಒಳಗಿನ ಗೋಡೆಗಳು ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಚಿತ್ರಿಸುತ್ತದೆ. ಮಲ್ಲಿಕಾರ್ಜುನ ದೇವಾಲಯವು ವಾಸ್ತುಶಿಲ್ಪದ ಅದ್ಭುತಗಳ ಸಾರಾಂಶವಾಗಿದ್ದು ಅದ್ಭುತ ಮಾಂತ್ರಿಕತೆಯನ್ನು ಪ್ರತಿಬಿಂಬಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಧುಕೇಶ್ವರ ದೇವಾಲಯ, ಬನವಾಸಿ

ಮಧುಕೇಶ್ವರ ದೇವಾಲಯ,ಬನವಾಸಿ

ಭಾರತದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾದ ಬನವಾಸಿಯಲ್ಲಿರುವ, ಕರ್ನಾಟಕದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾದ ಈ ಶಿವ ದೇವಾಲಯವು ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇದು ಅತ್ಯಂತ ಜನಪ್ರಿಯ ದೇವಾಲಯವಾಗಿದೆ. ಇದು ಕರ್ನಾಟಕದಲ್ಲಿ ವಿಶೇಷವಾಗಿ ಮಹಾ ಶಿವರಾತ್ರಿ ಹಬ್ಬದ ಸಮಯದಲ್ಲಿ ಭೇಟಿ ನೀಡಲೇಬೇಕಾದ ದೇವಾಲಯಗಳಲ್ಲಿ ಒಂದಾಗಿದೆ. ಶಿವನನ್ನು ಪೂಜಿಸುವ ಜನರು ಈ ದೇವಾಲಯಕ್ಕೆ ತಪ್ಪದೇ ಆಗಮಿಸುತ್ತಾರೆ, ಈ ಶಿವ ದೇವಾಲಯದಲ್ಲಿ ನಂದಿ  ಪ್ರತಿಮೆಯೂ ಇದೆ. 7 ಅಡಿ ಎತ್ತರದ ಏಕಶಿಲೆಯ ನಂದಿಯನ್ನು ಅದರ ಎಡಗಣ್ಣು ಶಿವನನ್ನು ಮತ್ತು ಬಲಗಣ್ಣು ಪಾರ್ವತಿ ದೇವಿಯ ಕಡೆಗೆ ನೋಡುತ್ತಿರುವಂತೆ ತೋರುವ ರೀತಿಯಲ್ಲಿ ನೆಲೆಗೊಂಡಿದೆ.  ಜನರನ್ನು ಬೆರಗುಗೊಳಿಸುವ ಮತ್ತೊಂದು ವಿಶಿಷ್ಟ ಆಕರ್ಷಣೆಯೆಂದರೆ ಲಂಬವಾಗಿ ಕತ್ತರಿಸಿದ ಗಣೇಶನ ವಿಗ್ರಹ. ಈ ಕಲ್ಲಿನ ವಿಗ್ರಹದ ಇನ್ನರ್ಧ ಭಾಗ ವಾರಣಾಸಿಯಲ್ಲಿದೆ ಎಂದು ನಂಬಲಾಗಿದೆ.

ತಲುಪುವುದು ಹೇಗೆ?

ಈ ದೇವಸ್ಥಾನವನ್ನು ರಸ್ತೆಯ ಮೂಲಕ ತಲುಪುವುದು ಉತ್ತಮ ಆಯ್ಕೆ ಆಗಿದೆ. ಇದಕ್ಕೆ ಹತ್ತಿರದ ರೈಲು ನಿಲ್ದಾಣ ಎಂದರೆ ಶಿವಮೊಗ್ಗ, ಇದು 112 ಕಿಮೀ ದೂರದಲ್ಲಿದೆ ಮತ್ತು ಇದಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಮಂಗಳೂರು ಸುಮಾರು 250 ಕಿಮೀ ದೂರದಲ್ಲಿದೆ. ಇಲ್ಲಿಗೆ ಕರ್ನಾಟಕದ ಪ್ರಮುಖ ನಗರಗಳಿಂದ ಸಾರಿಗೆ ಬಸ್ಸುಗಳು, ಖಾಸಗಿ ಬಸ್ಸುಗಳು ಮತ್ತು ಟ್ಯಾಕ್ಸಿ ಸೌಲಭ್ಯಗಳಿವೆ

ನನ್ನೇಶ್ವರ ದೇವಸ್ಥಾನ, ಲಕ್ಕುಂಡಿ, ಗದಗ

ನನ್ನೇಶ್ವರ ದೇವಸ್ಥಾನ, ಲಕ್ಕುಂಡಿ, ಗದಗ

ನನ್ನೇಶ್ವರ ದೇವಾಲಯವು ವಾಸ್ತುಶಿಲ್ಪದ ಅದ್ಭುತವಾಗಿದೆ, ಗದಗ ಜಿಲ್ಲೆಯ ಈ 11 ನೇ ಶತಮಾನದ ಶಿವ ದೇವಾಲಯವು ಲಕ್ಕುಂಡಿ ಗ್ರಾಮದಲ್ಲಿದೆ. ಚಾಲುಕ್ಯ ಶೈಲಿಯ ವಾಸ್ತುಶಿಲ್ಪದ, ದೇವಾಲಯವು ಈಗ ಭಾರತೀಯ ಪುರಾತತ್ವ ಸಮೀಕ್ಷೆಯಿಂದ ರಕ್ಷಿಸಲ್ಪಟ್ಟಿದ್ದು ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಹೊಂದಿದೆ.

ತಲುಪುವುದು ಹೇಗೆ?

ಈ ದೇವಾಲಯವು ರಸ್ತೆ ಸಾರಿಗೆ, ವಿಮಾನ ಸಾರಿಗೆ ಮತ್ತು ರೈಲಿನ ಸಾರಿಗೆ  ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಹುಬ್ಬಳ್ಳಿ ಸುಮಾರು 75 ಕಿಮೀ ದೂರದಲ್ಲಿದೆ. ಇದು ಹತ್ತಿರದಲ್ಲಿರುವ  ವಿಮಾನ ನಿಲ್ದಾಣವಾಗಿದೆ ಮತ್ತು ಇದು ಗದಗ ಜಂಕ್ಷನ್ ಹತ್ತಿರದಲ್ಲಿದ್ದು ದೇವಸ್ಥಾನದಿಂದ 25 ಕಿಮೀ ದೂರದಲ್ಲಿದೆ.

ದೇವಾಲಯ ಪ್ರವೇಶ ಸಮಯ: ಬೆಳಿಗ್ಗೆ 6:00 ರಿಂದ ಸಂಜೆ 6:00 ರವರೆಗೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾಡಿಮಹಾಬಲೇಶ್ವರ ದೇವಸ್ಥಾನ, ಗೋಕರ್ಣ

ಮಾಡಿಮಹಾಬಲೇಶ್ವರ ದೇವಸ್ಥಾನ, ಗೋಕರ್ಣ

ಸಾಮಾನ್ಯವಾಗಿ ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಗೋಕರ್ಣದ ಮಹಾಬಲೇಶ್ವರ ದೇವಾಲಯ ಮತ್ತು ಅದರ ಆತ್ಮಲಿಂಗವು ಕಾಶಿಯಷ್ಟೇ ಪವಿತ್ರವಾಗಿದೆ. 4 ನೇ ಶತಮಾನದಲ್ಲಿ, ಶಾಸ್ತ್ರೀಯ ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವು ಕನ್ನಡಿಗರಿಗೆ ಪ್ರಸಿದ್ಧ ಧಾರ್ಮಿಕ ತೀರ್ಥಯಾತ್ರೆಯಾಗಿದೆ. ಮಹಾಬಲೇಶ್ವರ ದೇವಾಲಯವು ಕರ್ನಾಟಕದ ಏಳು ಮುಕ್ತಿ ಸ್ಥಳಗಳಲ್ಲಿ ಒಂದಾಗಿದೆ.

ಇಲ್ಲಿ ಭಕ್ತರಿಗೆ ಗರ್ಭಗುಡಿಗೆ ಪ್ರವೇಶಿಸಲು, ಆತ್ಮಲಿಂಗವನ್ನು ಸ್ಪರ್ಶಿಸಲು ಮತ್ತು ತಮ್ಮ ಕೈಗಳಿಂದ ಅಭಿಷೇಕ ಅಥವಾ ನೈವೇದ್ಯವನ್ನು ಮಾಡಲು ಅವಕಾಶವಿದೆ. ದೇವಾಲಯವನ್ನು ಪ್ರವೇಶಿಸುವ ಮೊದಲು ಅರಬ್ಬೀ ಸಮುದ್ರದಲ್ಲಿ ಪವಿತ್ರ ಸ್ನಾನ ಮಾಡಬೇಕು.

ಕರ್ನಾಟಕದ ಐದು ಪ್ರಸಿದ್ಧ ದೇವಾಲಯಗಳಲ್ಲಿ  ಒಂದಾಗಿರುವ ಈ ದೇವಾಲಯದಲ್ಲಿ  ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ವಿಶೇಷ ರಥಯಾತ್ರೆಯನ್ನು ನಡೆಸಲಾಗುತ್ತದೆ. ಈ ಹಬ್ಬದಲ್ಲಿ ದೇಶಾದ್ಯಂತ ಜನರು ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ತಲುಪುವುದು ಹೇಗೆ?

ರಸ್ತೆ, ರೈಲು ಅಥವಾ ವಿಮಾನ ಸಾರಿಗೆಯ ಮೂಲಕ ಈ ದೇವಸ್ಥಾನವನ್ನು ತಲುಪಬಹುದು. ಭೌಗೋಳಿಕವಾಗಿ, ಈ ದೇವಾಲಯವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿದೆ, ಇದಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಗೋವಾದ ಪಣಜಿ. ದೇವಾಲಯದಿಂದ 6 ಕಿಮೀ ದೂರದಲ್ಲಿರುವ ಗೋಕರ್ಣ ರಸ್ತೆಯು ಹತ್ತಿರದ ರೈಲು ನಿಲ್ದಾಣವಾಗಿದೆ. ಮಂಗಳೂರು ಅಥವಾ ರಾಜ್ಯದ ಯಾವುದೇ ಭಾಗದಿಂದ ರಸ್ತೆ ಮೂಲಕ ತಲುಪಲು ಬಸ್ಸುಗಳು ಮತ್ತು ಇತರ ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆಯಬಹುದು.
ದೇವಾಲಯದ ಸಮಯ: ಬೆಳಗ್ಗೆ 6 ರಿಂದ ಮಧ್ಯಾಹ್ನ 12.30 & ಸಂಜೆ 5 – ರಾತ್ರಿ 8 ಗಂಟೆ ದೇವಸ್ಥಾನವು ಮಧ್ಯಾಹ್ನದ ಸಮಯದಲ್ಲಿ ತೆರೆದಿರುತ್ತದೆ ಆದರೆ ಜನರು ಆತ್ಮಲಿಂಗವನ್ನು ಸ್ಪರ್ಶಿಸಲು ಅನುಮತಿ ಇರುವುದಿಲ್ಲ.

ತುಳುವೇಶ್ವರ ದೇವಸ್ಥಾನ, ಬಸ್ರೂರು, ಉಡುಪಿ

ತುಳುವೇಶ್ವರ ದೇವಸ್ಥಾನವು ಬಸ್ರೂರಿನ 24 ಮಹತ್ವದ ದೇವಾಲಯಗಳಲ್ಲಿ ಒಂದಾಗಿದೆ. ದೇವಾಲಯದ ಅವಶೇಷಗಳಷ್ಟೇ ಇದ್ದರೂ, ದೇವಾಲಯದಲ್ಲಿರುವ ಶಿವಲಿಂಗವು ಅದರ ಸುತ್ತಲೂ ಬೆಳೆದ ಮರಗಳಿಂದ ರಕ್ಷಿಸಲ್ಪಟ್ಟಿದೆ. ಈ ಮೂಲ ದೇವಾಲಯವು ಕ್ರಿ.ಶ 5 ರಿಂದ 6 ನೇ ಶತಮಾನದಷ್ಟು ಹಿಂದಿನದು ಎಂದು ನಂಬಲಾಗಿದೆ. ಸ್ಥಳೀಯರಿಗೆ ಈ  ದೇವಸ್ಥಾನದ ಮೇಲೆ ಅಪಾರ ನಂಬಿಕೆ ಇದೆ. ದೇವಸ್ಥಾನದ ಹೊರಗೆ ಚಿಕ್ಕ ನಂದಿ ಇದೆ.

ಈ ಶಿವಲಿಂಗವು ಹಳೆಯ ಮರದ ಬೇರುಗಳಿಂದ ಸುತ್ತುವರೆದಿದ್ದು ಇದು  ಲಿಂಗಕ್ಕೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ಇದು ನೈಜವಾಗಿ  ಅದ್ಭುತ ದೃಶ್ಯವಾಗಿದೆ.

ತಲುಪುವುದು ಹೇಗೆ?

ಈ ದೇವಸ್ಥಾನವನ್ನು ರಸ್ತೆ ಸಾರಿಗೆಯ  ಮೂಲಕ ತಲುಪಬಹುದು ಮತ್ತು ಬಸ್ರೂರ್ ಸುತ್ತಮುತ್ತಲಿನ ಪಟ್ಟಣಗಳು ಮತ್ತು ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಈ ಸ್ಥಳಕ್ಕೆ ಹತ್ತಿರದ ರೈಲು ನಿಲ್ದಾಣವೆಂದರೆ ಕುಂದಾಪುರ, ಇದು ಸುಮಾರು 2 ಕಿ.ಮೀ ದೂರದಲ್ಲಿದೆ. ಕುಂದಾಪುರ ನಿಲ್ದಾಣವು ಜನನಿಬಿಡ ನಿಲ್ದಾಣವಾಗಿದ್ದು ಕರ್ನಾಟಕದ ಇತರ ಭಾಗಗಳಿಂದ ಬರುವ ಪ್ರಮುಖ ರೈಲುಗಳು ಇಲ್ಲಿ ನಿಲ್ಲುತ್ತವೆ. ಇದಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಮಂಗಳೂರು ಸುಮಾರು 97 ಕಿ.ಮೀ ದೂರದಲ್ಲಿದೆ.