Karnataka logo

Karnataka Tourism
GO UP
Image Alt

ಕರ್ನಾಟಕದಲ್ಲಿ ಚಳಿಗಾಲದಲ್ಲಿ ಭೇಟಿ ನೀಡಬೇಕಾದ ಸ್ಥಳಗಳು

separator
  /  ಬ್ಲಾಗ್   /  ಕರ್ನಾಟಕದಲ್ಲಿ ಚಳಿಗಾಲದಲ್ಲಿ ಭೇಟಿ ನೀಡಬೇಕಾದ ಸ್ಥಳಗಳು

ಕರ್ನಾಟಕದಲ್ಲಿ ಚಳಿಗಾಲದಲ್ಲಿ ಭೇಟಿ ನೀಡಬೇಕಾದ ಸ್ಥಳಗಳು

ನಮ್ಮ ನಾಡು ಕರುನಾಡು ಅದ್ಭುತವಾದ ಪ್ರಕೃತಿ ತಾಣಗಳು, ಅರಣ್ಯಗಳು, ಕಡಲತೀರಗಳು, ಗಿರಿಧಾಮಗಳು, ಐತಿಹಾಸಿಕ ತಾಣಗಳು, ದೇವಸ್ಥಾನಗಳನ್ನು ತನ್ನ ಉಡಿಯಲ್ಲಿ ಇರಿಸಿಕೊಂಡಿದೆ. ಹೀಗಾಗಿ ನಮ್ಮ ಕರ್ನಾಟಕ ರಾಜ್ಯಕ್ಕೆ ಎಲ್ಲ ರಾಜ್ಯದ ಪ್ರವಾಸಿಗರು ಭೇಟಿ ನೀಡಲು ಬಯಸುತ್ತಾರೆ. ನಮ್ಮ ರಾಜ್ಯವೂ ಎಲ್ಲ ಪ್ರವಾಸಿಗರಿಗೆ ಅತ್ಯುತ್ತಮವಾದ ಎಲ್ಲವನ್ನೂ ಹೊಂದಿದೆ. ನೀವು ಕರ್ನಾಟಕ ರಾಜ್ಯದಲ್ಲಿ ನಿಮ್ಮ ರಜಾದಿನಗಳನ್ನು ಅತ್ಯುತ್ತಮವಾಗಿ ಆನಂದಿಸಬಹುದು ಮತ್ತು ನಿಮ್ಮ ಹೊಸ ವರ್ಷದ ಆಚರಣೆಗಳನ್ನು ಸಂಭ್ರಮದಿಂದ ಆಚರಿಸಬಹುದು.

ಬೆಂಗಳೂರು

Cubbon Park Bangalore

ಬೆಂಗಳೂರಿನ ಕಬ್ಬನ್ ಪಾರ್ಕ್

ಪಬ್‌ಗಳು ಮತ್ತು ಮೈಕ್ರೋ ಬ್ರೂವರೀಸ್‌ಗೆ ಹೆಸರುವಾಸಿಯಾಗಿರುವ ಮೆಟ್ರೋ ಕಾಸ್ಮೋಪಾಲಿಟನ್ ನಗರವು ದೇಶದಲ್ಲಿ ಕೆಲವು ಅತ್ಯುತ್ತಮ ಪಾರ್ಟಿಗಳು ಮತ್ತು ರಾತ್ರಿಜೀವನವನ್ನು ಒದಗಿಸುತ್ತದೆ. ಎಮ್ ಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿನ ಹೊಸ ವರ್ಷದ ಆಚರಣೆಯ ಸಂಭ್ರಮಗಳು ಎಲ್ಲ ವಯೋಮಾನದವರನ್ನು ಆಕರ್ಷಿಸುತ್ತವೆ. ಈ ಸಮಯದಲ್ಲಿ ಇಲ್ಲಿನ ಬೀದಿಗಳನ್ನು ವಿವಿಧ ಬಣ್ಣಗಳ ಲೈಟ್ ಗಳಿಂದ ಡಿಕೋರೇಟ್ ಮಾಡುತ್ತಾರೆ. ಈ ಸಮಯದಲ್ಲಿ ಇಲ್ಲಿನ ಬೀದಿಗಳು ಅದ್ಭುತವಾಗಿ ಸುಂದರವಾಗಿ ಕಂಗೊಳಿಸುತ್ತವೆ. ಎಲ್ಲೆಲ್ಲಿಯೂ ಪಾರ್ಟಿ ವೈಬ್‍ಗಳೇ, ಸಂಭ್ರಮಗಳೇ ಕಂಡು ಬರುತ್ತಿರುತ್ತದೆ.

ಅನೇಕ ಸ್ಟಾರ್ ಹೋಟೆಲ್‌ಗಳು, ಪಬ್‌ಗಳು ಮತ್ತು ಡಿಸ್ಕೋಥೆಕ್‌ಗಳು ಹೊಸ ವರ್ಷದ ಆಚರಣೆಗಳಿಗಾಗಿ ವಸತಿ ಸೌಕರ್ಯಗಳೊಂದಿಗೆ ಮತ್ತು ಇಲ್ಲದೆಯೇ ಆಕರ್ಷಕ ಪ್ಯಾಕೇಜ್‌ಗಳನ್ನು ನೀಡುತ್ತವೆ. ಆಕ್ಷನ್-ಪ್ಯಾಕ್ಡ್ ಹೊಸ ವರ್ಷದ ಆಚರಣೆಯನ್ನು ಹೊಂದಲು ಬಯಸಿದರೆ ಇವುಗಳು ಉತ್ತಮ ಆಯ್ಕೆಯಾಗಿದೆ. ಕಬ್ಬನ್ ಪಾರ್ಕ್‌ನ ಮಂಜು ಮತ್ತು ತಣ್ಣನೆಯ ಮುಂಜಾನೆ ಅಥವಾ ಬೆಂಗಳೂರಿನ ನಂದಿ ಹಿಲ್ಸ್‌ಗೆ ಹೋಗುವುದು ಖಂಡಿತವಾಗಿಯೂ ನಿಮಗೆ ಚಳಿಗಾಲದ ಅದ್ಭುತ ಅನುಭವನ್ನು ನೀಡುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಬೆಂಗಳೂರು ಕುರಿತು

ಮೈಸೂರು

Mysore

ಮೈಸೂರು

ಕರ್ನಾಟಕದ ಸಾಂಸ್ಕೃತಿಕ ನಗರವಾದ ಮೈಸೂರು ಎಲ್ಲಾ ವಯೋಮಾನದ ಪ್ರಯಾಣಿಕರನ್ನು ಆಕರ್ಷಿಸುವಲ್ಲಿ ಎಂದಿಗೂ ವಿಫಲವಾಗುವುದಿಲ್ಲ. ಶಾಂತ ಮತ್ತು ಆಕರ್ಷಕ ಪರಂಪರೆಯ ಈ ನಗರವು ಯಾವಾಗಲೂ ಎಲ್ಲಾ ವಿಭಾಗಗಳ ಪ್ರಯಾಣಿಕರನ್ನು ಸ್ವಾಗತಿಸುತ್ತದೆ. ಈ ಭವ್ಯವಾದ ಮೈಸೂರು ಅರಮನೆ ಮತ್ತು ಚಾಮುಂಡಿ ಬೆಟ್ಟಗಳ ಜೊತೆಗೆ, ಮೃಗಾಲಯ, ಸೋಮನಾಥಪುರ, ಗೊಮ್ಮಟಗಿರಿ, ಗೋಲ್ಡನ್ ಟೆಂಪಲ್, ಬೃಂದಾವನ ಗಾರ್ಡನ್ಸ್, ಮೇಲುಕೋಟೆ ದೇವಸ್ಥಾನ, ರೈಲ್ ಮ್ಯೂಸಿಯಂ, ಮತ್ತು ಇನ್ನೂ ಅನೇಕ ಆರ್ಟ್ ಗ್ಯಾಲರಿಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ಹೊಂದಿದೆ. ನೀವು ಮೈಸೂರಿಗೆ ಭೇಟಿ ನೀಡಿದಾಗ ಶ್ರೀಗಂಧದ ಮರದ ವಸ್ತುಗಳು, ರೇಷ್ಮೆ ಸೀರೆಗಳು ಮತ್ತು ಕೈಯಿಂದ ಮಾಡಿದ ಕಲಾಕೃತಿಗಳಂತಹ ಕೆಲವು ಅತ್ಯುತ್ತಮ ಸ್ಮಾರಕಗಳನ್ನು ಮನೆಗೆ ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ಕರ್ನಾಟಕದಲ್ಲಿ ಚಳಿಗಾಲದ ರಜಾದಿನಗಳನ್ನು ಶಾಂತವಾಗಿ ಮತ್ತು ನಿಮ್ಮ ಯೋಗಕ್ಷೇಮಕ್ಕಾಗಿ ಕಳೆಯಲು ನೀವು ಬಯಸಿದರೆ ಸಂಪೂರ್ಣ ಸ್ವಾಸ್ಥ್ಯಕ್ಕಾಗಿ ಮೈಸೂರಿನ ಅತ್ಯುತ್ತಮ ಯೋಗ ಶಿಬಿರಗಳಲ್ಲಿ ನೀವು ಪಾಲ್ಗೊಳ್ಳಿ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಮೈಸೂರು

ಕೂರ್ಗ

Coorg

ಕೂರ್ಗ

ದಕ್ಷಿಣ ಭಾರತದ ಅತಿ ಹೆಚ್ಚು ಬೇಡಿಕೆಯಿರುವ ಮತ್ತು ಅತ್ಯುತ್ತಮ ಗಿರಿಧಾಮಗಳಲ್ಲಿ ಒಂದಾದ ಕೂರ್ಗ್ ಕಾಫಿ ಎಸ್ಟೇಟ್‌ಗಳ ಮಧ್ಯೆ ನೆಮ್ಮದಿಯಿಂದ ಸಮಯ ಕಳೆಯಿರಿ. ಕಾಫಿಯ ಸುವಾಸನೆ, ಪಕ್ಷಿಗಳ ಸುಮಧುರ ಚಿಲಿಪಿಲಿ, ಮಂಜಿನ ಬೆಟ್ಟಗಳು, ಸಾಂಪ್ರದಾಯಿಕ ಕೂರ್ಗಿ ಪಾಕಪದ್ಧತಿ ಮತ್ತು ಸುಂದರವಾದ ಕಣಿವೆಗಳು ಚಳಿಗಾಲದಲ್ಲಿ ಕೂರ್ಗ್‌ಗೆ ನಿಮ್ಮ ಭೇಟಿಯನ್ನು ಸುಂದರವಾಗಿಸುತ್ತವೆ. ಕೊಡವರ ನಾಡು ಕೂರ್ಗ್ ಗೆ ಅದರ ದೇವಾಲಯಗಳು, ಮಠಗಳು, ಕಾಫಿ ಎಸ್ಟೇಟ್‌ಗಳು, ವನ್ಯಜೀವಿಗಳು, ಹವಾಮಾನ ಮತ್ತು ಪರ್ವತದ ಅದ್ಭುತ ನೋಟಗಳಿಗಾಗಿ ಭೇಟಿ ನೀಡಬೇಕು. ಬೆಂಗಳೂರಿನಿಂದ ಕೇವಲ 250 ಕಿ.ಮೀ ದೂರದಲ್ಲಿರುವ ಇದು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಶಿಯಿಂದ, ತೊರೆ, ಝರಿ, ನದಿಗಳಿಂದ ಕೂಡಿದೆ.

ಚಿಕ್ಕಮಗಳೂರು

Chikkamagalur

ಚಿಕ್ಕಮಗಳೂರು

ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯವನ್ನು ನೋಡಿಯೇ ಸವಿಯಬೇಕು. ಅಂಕುಡೊಂಕು ಕಮರಿಗಳ ಮೂಲಕ ಚಿಕ್ಕಮಗಳೂರಿಗೆ ಹೋಗುವ ರಸ್ತೆ ಅದ್ಭುತವಾಗಿದೆ. ಇಲ್ಲಿನ ಭವ್ಯವಾದ ಪರ್ವತಗಳು, ಮೋಡಿ ಮಾಡುವ ನೋಟಗಳು, ತೊರೆಗಳು ಮತ್ತು ಜಲಪಾತಗಳು, ಪಶ್ಚಿಮ ಘಟ್ಟಗಳ ದಟ್ಟವಾದ ಕಾಡುಗಳು, ನಿಮ್ಮ ಚಿಕ್ಕಮಗಳೂರಿನ ಪಯಣವನ್ನು ಸ್ಮರಣೀಯವಾಗಿಸುತ್ತದೆ. ದಕ್ಷಿಣ ಭಾರತದ ಜನಪ್ರಿಯ ಮತ್ತು ರಮಣೀಯ ತಾಣಗಳಲ್ಲಿ ಒಂದಾದ ಚಿಕ್ಕಮಗಳೂರು ಪಾದಯಾತ್ರಿಕರಿಗೆ ಮತ್ತು ಪ್ರಕೃತಿ ಪ್ರಿಯರ ಮತ್ತು ಛಾಯಾಗ್ರಾಹಕರ ಸ್ವರ್ಗವಾಗಿದೆ. ಇಲ್ಲಿನ ವನ್ಯಜೀವಿ ಧಾಮಗಳು, ಐಷಾರಾಮಿ ವಸತಿಗಳು, ಸಾಂಪ್ರದಾಯಿಕ ಹೋಂಸ್ಟೇಗಳು ಮತ್ತು ಮಲೆನಾಡು ಪಾಕಪದ್ಧತಿ, ಐಷಾರಾಮಿ ವಿಸ್ಟಾಡೋಮ್ ಕೋಚ್‌ನಲ್ಲಿ ಸವಾರಿ ಮತ್ತು ಪ್ರಾಚೀನ ದೇವಾಲಯಗಳು ಇವೆಲ್ಲವೂ ಚಳಿಗಾಲದಲ್ಲಿ ಚಿಕ್ಕಮಗಳೂರಿಗೆ ಭೇಟಿ ನೀಡಲು ಕೆಲವು ಉತ್ತಮ ಕಾರಣಗಳಾಗಿವೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಚಿಕ್ಕಮಗಳೂರು

ಹಂಪಿ

Hampi

ಹಂಪಿ

ನೀವು ಹಂಪಿಗೆ ಚಳಿಗಾಲದಲ್ಲಿ ಭೇಟಿ ನೀಡಬಹುದು. 25 ಕಿಲೋಮೀಟರ್‌ಗಳಷ್ಟು ಹರಡಿರುವ ಈ 14 ನೇ ಶತಮಾನದ ಪಟ್ಟಣವು 450 ಕ್ಕೂ ಹೆಚ್ಚು ಸ್ಮಾರಕಗಳನ್ನು ಒಳಗೊಂಡಿದೆ ಮತ್ತು ಹಂಪಿಯಲ್ಲಿ ನೋಡಲು ಮತ್ತು ಮಾಡಲು ಇನ್ನೂ ಬಹಳಷ್ಟು ಇದೆ. ವಿಜಯನಗರ ಸಾಮ್ರಾಜ್ಯದ ಇತಿಹಾಸವು ನಿಮ್ಮನ್ನು ಐತಿಹಾಸಿಕ ಯುಗಕ್ಕೆ ಕರೆದುಕೊಂಡು ಹೋಗುತ್ತದೆ. ಅಥವಾ ನೀವು ಇಲ್ಲಿ ರಾಕ್ ಕ್ಲೈಂಬಿಂಗ್, ಮತ್ತು ಬಂಡೆಯ ಜಿಗಿತದಂತಹ ಸಾಹಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು, ಹಿಪ್ಪಿ ದ್ವೀಪಕ್ಕೆ ಭೇಟಿ ನೀಡಿ ಅಥವಾ ಕೊರಾಕಲ್ ದೋಣಿಯಲ್ಲಿ ಕಾವೇರಿ ನದಿಯಲ್ಲಿ ನೌಕಾಯಾನ ಮಾಡಿ, ಹಂಪಿ ನಿಮಗಾಗಿ ಎಲ್ಲವನ್ನೂ ಹೊಂದಿದೆ. ನೀವು ಕರ್ನಾಟಕದ ಐತಿಹಾಸಿಕ ವೈಭವವನ್ನು ನೋಡಬೇಕಾದರೆ ಹಂಪಿಗೆ ಭೇಟಿ ನೀಡಲೇ ಬೇಕು.

ಗೋಕರ್ಣ

Gokarna


ಗೋಕರ್ಣ ಬೀಚ್

ನೀವು ಬೆಟ್ಟಗಳ ಟ್ರೆಕ್ಕಿಂಗಗಳನ್ನು ಇಷ್ಟಪಡುವುದಿಲ್ಲವೇ? ನಿಮಗೆ ಬೀಚಗಳ ರಮಣೀಯ ದೃಶ್ಯಗಳು ಇಷ್ಟವೇ? ಹಾಗಾದರೆ ಗೋಕರ್ಣ ನಿಮಗೆ ಹೇಳಿ ಮಾಡಿಸಿದ ಸ್ಥಳ. ನೀವು ಬೀಚ್‍ಗಳನ್ನು ಆನಂದಿಸಲು ಗೋಕರ್ಣಕ್ಕೆ ಬರಲೇ ಬೇಕು. ಇಲ್ಲಿನ ರಮ್ಯ ಮನೋಹರ ಬೀಚ್‍ಗಳು ನಿಮ್ಮನ್ನು ಮಂತ್ರಮುಗ್ಧಗೊಳಿಸಿ, ನಿಮ್ಮ ರಜಾದಿನವನ್ನು ಸ್ಮರಣೀಯಗೊಳಿಸುತ್ತವೆ. ನಿಮ್ಮ ಹೊಸ ವರ್ಷದ ಆರಂಭಕ್ಕೆ ಇದು ಹೇಳಿ ಮಾಡಿಸಿದ ಸ್ಥಳ. ಇಲ್ಲಿನ ಪುರಾತನ ದೇವಾಲಯಗಳು, ಬೀಚ್‍ಗಳು, ಪಾರ್ಟಿ ವೈಬ್‍ಗಳು..ಹೀಗೆ ಎಲ್ಲವನ್ನೂ ನೀವು ಇಲ್ಲಿ ಪಡೆಯಬಹುದು.

ಕಡಲತೀರಗಳು ಅಥವಾ ಪರ್ವತಗಳು, ದೇವಾಲಯಗಳು ಅಥವಾ ಸಾಹಸ, ಪರಂಪರೆ ಅಥವಾ ಸಂಸ್ಕೃತಿ, ಹೀಗೆ ಕರ್ನಾಟಕವು ಚಳಿಗಾಲಕ್ಕೆ ಮತ್ತು ಹೊಸ ವರ್ಷವನ್ನು ಸ್ವಾಗತಿಸಲು ಪರಿಪೂರ್ಣ ತಾಣವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಗೋಕರ್ಣ