Select Language
Search
Destination
Category
Select Category
Select Destination
In and around
From
Kilometers
Accommodation
Select
Travel guide
Select
  • Heritage
  • Beach
  • Nature
  • Wild
  • Spirituality
  • Adventure
  • Cities
ವಾಣಿಜ್ಯ
ಪ್ರವಾಸೋದ್ಯಮ ಇಲಾಖೆಯು ಕರ್ನಾಟಕ ಪ್ರವಾಸೋದ್ಯಮವನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸುವ ನಿಟ್ಟಿನಲ್ಲಿ 2018-19ರ ಸಾಲಿನಲ್ಲಿ ನಡೆಯಲಿರುವ ರಾಷ್ಚ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಮೇಳಗಳಲ್ಲಿ ಭಾಗವಹಿಸಲು ಸಿದ್ಧತೆ ನಡೆಸಿದೆ. ಇದಕ್ಕಾಗಿ, ಪ್ರವಾಸೋದ್ಯಮ ಇಲಾಖೆಯು ಉದ್ಯಮದ ಆಸಕ್ತರನ್ನು ಈ ಮೇಳಗಳಲ್ಲಿ ಇಲಾಖೆಯ ಸಹಭಾಗಿಗಳಾಗಿ ಭಾಗವಹಿಸಲು ಆಹ್ವಾನಿಸುತ್ತಿದೆ.

ಹೊಸ ಪ್ರಸಾಸಿ ತಾಣಗಳ ಸೃಷ್ಟಿ, ಪ್ರವಾಸಿತಾಣಗಳ ಅಭಿವೃದ್ಧಿ ಹಾಗೂ ವ್ಯಾಪಾರಾಭಿವೃದ್ಧಿಯ ದೃಷ್ಠಿಯಿಂದ ಸರಕಾರವು ಉದ್ಯಮದ ಹಲವು ದಿಗ್ಗಜರೊಂದಿಗೆ ಕೈಜೋಡಿಸುತ್ತಿರುವುದು, ಸರಕಾರಿ-ಖಾಸಗಿ ಸಹಭಾಗಿತ್ವಕ್ಕೆ ಇಲಾಖೆಯು ನೀಡುತ್ತಿರುವ ಆಧ್ಯತೆಯನ್ನು ತೋರಿಸುತ್ತದೆ.

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಮೇಳಗಳಲ್ಲಿ ಭಾಗವಹಿಸಲು ಅನುಕ್ರಮವಾಗಿ ರೂ. 5000 ಹಾಗೂ ರೂ. 40,000ಗಳ ಡಿ.ಡಿ.ಯನ್ನು ಅಧ್ಯಕ್ಷರು, ಪ್ರವಾಸೋದ್ಯಮ ಇಲಾಖೆ ಇವರ ಹೆಸರಿಗೆ ಪಡೆದು ನಿಮ್ಮ ಸಹಭಾಗಿತ್ವವನ್ನು ಖಚಿತಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ ರೂಪಾ, ಉಪಾಧ್ಯಕ್ಷರು ಅಥವಾ ಶ್ರೀ ಅಶೋಕ್ ರವರನ್ನು ದೂರವಾಣಿ ಸಂಖ್ಯೆ 080-22352828/ 2727ನಲ್ಲಿ ಸಂಪರ್ಕಿಸಬಹುದು.

ಈ ಸಹಭಾಗಿತ್ವದ ಅವಕಾಶವು ಸೀಮಿತವಾಗಿರುವುದರಿಂದ ಮೊದಲು ಪ್ರಸಾ್ತವನೆ ಸಲ್ಲಿಸಿದವರಿಗೆ ಮೊದಲ ಆಧ್ಯತೆಯ ಆಧಾರದ ಮೇಲೆ ನೋಂದಣಿಗೆ ಅವಕಾಶ ನೀಡಲಾಗುವುದು. ಪ್ರವಾಸೋದ್ಯಮ ಇಲಾಖೆಯು ಆಯ್ಕೆಗೊಂಡ ಎಲ್ಲಾ ಸಹಭಾಗಿಗಳಿಗೆ ಲಭ್ಯತೆಯನ್ನು ಗಮನದಲ್ಲಿರಿಸಿ, ಮೊದಲು ಬಂದವರಿಗೆ ಆಧ್ಯತೆಯ ಅನುಸಾರವಾಗಿ ಸಹಭಾಗಿತ್ವವನ್ನು ಊರ್ಜಿತಪಡಿಸಲಾಗುವುದು.

ರಾಷ್ಚ್ರೀಯ ವಾಣಿಜ್ಯ ಮೇಳಗಳು

ರಾಷ್ಟ್ರೀಯ ವಾಣಿಜ್ಯ ಮೇಳಗಳಲ್ಲಿ ಪಾಲ್ಗೊಳ್ಳಲು, ಅಧ್ಯಕ್ಷರು, ಪ್ರವಾಸೋದ್ಯಮ ಇಲಾಖೆ ಇವರ ಹೆಸರಿಗೆ ರೂ. 5000ದ ಡಿ.ಡಿ.ಯನ್ನು ಸಲ್ಲಿಸತಕ್ಕದ್ದು.

ವಾಣಿಜ್ಯ ಮೇಳದ ಹೆಸರು ಸ್ಥಳ ಪ್ರಾಯಶಃ ತಿಂಗಳು - ವರ್ಷ ಪ್ರಾಯಶಃ ವಿಸ್ತೀರ್ಣ (ಸಹಭಾಗಿಗಳ ಸಂಖ್ಯೆಯ ಮೇಲೆ ಅವಲಂಭಿತ)
ಟಿ.ಟಿ.ಎಫ್. ಕೊಲ್ಕೊತ್ತಾ ಜುಲೈ 18 60-100 ಚ.ಮೀ.
ಟಿ.ಟಿ.ಎಫ್. ಹೈದರಾಬಾದ್ ಜುಲೈ 18 60-100 ಚ.ಮೀ.
ಐ.ಐ.ಟಿ.ಎಂ. ಚೆನ್ನೈ ಜುಲೈ 18 60-100 ಚ.ಮೀ.
ಐ.ಐ.ಟಿ.ಎಂ. ಬೆಂಗಳೂರು ಜುಲೈ 18 100-150 ಚ.ಮೀ.
ಟಿ.ಟಿ.ಎಫ್. ಅಹ್ಮದಾಬಾದ್ ಸೆಪ್ಟೆಂಬರ್ 18 60-100 ಚ.ಮೀ.
ಟಿ.ಟಿ.ಎಫ್. ಪುಣೆ ಸೆಪ್ಟೆಂಬರ್ 18 60-100 ಚ.ಮೀ.
ಐ.ಐ.ಟಿ.ಎಂ. ಕೊಚ್ಚಿ ಜನವರಿ 19 60-100 ಚ.ಮೀ.
ಟಿ.ಟಿ.ಎಫ್. - ಓ.ಟಿ.ಎಂ. ಮುಂಬಯಿ ಜನವರಿ 19 100-150 ಚ.ಮೀ.
ಎಸ್.ಎ.ಟಿ.ಟಿ.ಇ. ನವ ದೆಹಲಿ ಜನವರಿ 19 100-150 ಚ.ಮೀ.
ಹಾಲಿಡೇ ಎಕ್ಸ್ಪೋ ಕೊಯಮತ್ತೂರು ಫೆಬ್ರವರಿ 19 36-60 ಚ.ಮೀ.
ಟಿ.ಟಿ.ಎಫ್. ಬೆಂಗಳೂರು ಫೆಬ್ರವರಿ 19 100-150 ಚ.ಮೀ.
ಐ.ಟಿ.ಎಂ. ಗೋವಾ ಗೋವಾ ಮಾರ್ಚ್ 19 36-60 ಚ.ಮೀ.


ಅಂತರರಾಷ್ಟ್ರೀಯ ವಾಣಿಜ್ಯ ಮೇಳಗಳು

ಅಂತರರಾಷ್ಟ್ರೀಯ ವಾಣಿಜ್ಯ ಮೇಳಗಳಲ್ಲಿ ಪಾಲ್ಗೊಳ್ಳಲು, ಅಧ್ಯಕ್ಷರು, ಪ್ರವಾಸೋದ್ಯಮ ಇಲಾಖೆ ಇವರ ಹೆಸರಿಗೆ ರೂ. 40,000ದ ಡಿ.ಡಿ.ಯನ್ನು ಸಲ್ಲಿಸತಕ್ಕದ್ದು.

ವಾಣಿಜ್ಯ ಮೇಳದ ಹೆಸರು ಸ್ಥಳ ಪ್ರಾಯಶಃ ತಿಂಗಳು - ವರ್ಷ ಪ್ರಾಯಶಃ ವಿಸ್ತೀರ್ಣ (ಸಹಭಾಗಿಗಳ ಸಂಖ್ಯೆಯ ಮೇಲೆ ಅವಲಂಭಿತ)
ಅರೇಬಿಯನ್ ಟ್ರಾವಲ್ ಮಾರ್ಟ್ ದುಬಾಯಿ, ಯು.ಎ.ಇ. ಏಪ್ರಿಲ್ 18 60 ಚ.ಮೀ.
ಐ.ಎಫ್.ಟಿ.ಎಂ. ಟಾಪ್ ರೆಸಾ ಪ್ಯಾರೀಸ್, ಫ್ರಾನ್ಸ್ ಸೆಪ್ಟೆಂಬರ್ 18 46 ಚ.ಮೀ.
ವರ್ಲ್ಡ್ ಟ್ರಾವಲ್ ಮಾರ್ಕೆಟ್ ಲಂಡನ್, ಯು.ಕೆ. ನವೆಂಬರ್ 18 65 ಚ.ಮೀ.
ಫಿತೂರ್ ಮಾಡ್ರಿಡ್, ಸ್ಪೇಯ್ನ್ ಜನವರಿ 19 46 ಚ.ಮೀ.
ಐ.ಟಿ.ಬಿ. ಬರ್ಲಿನ್, ಜರ್ಮನಿ ಮಾರ್ಚ್ 19 60 ಚ.ಮೀ.

ShareThis Copy and Paste