Select Language
Search
Destination
Category
Select Category
Select Destination
In and around
From
Kilometers
Accommodation
Select
Travel guide
Select
  • Heritage
  • Beach
  • Nature
  • Wild
  • Spirituality
  • Adventure
  • Cities
ಕರ್ನಾಟಕದಲ್ಲಿ ಬಂಡವಾಳ ಹೂಡಿ
ಕಳೆದ ಹಲವು ವರ್ಷಗಳಲ್ಲಿ ಕರ್ನಾಟಕವು ಪ್ರಖರ ಪ್ರವಾಸಿತಾಣವಾಗಿ ಹೊರಹೊಮ್ಮಿದೆ. 300 ಕಿ.ಮೀ.ಗಳಷ್ಟು ನೀಳವಾದ ಕಡಲ ಕಿನಾರೆ, ಹಲವು ಚರಿತ್ರಾರ್ಹ ಪಾರಂಪರಿಕಾ ತಾಣಗಳು, ನಿತ್ಯಹರಿದ್ವರ್ಣ ಕಾಡುಗಳು ಮತ್ತು ವೈವಿಧ್ಯ ವನ್ಯಜೀವಸಂಕುಲ, ಪ್ರಶಾಂತ ಗಿರಿಧಾಮಗಳು ಹಾಗೂ ನಾಗಲೋಟದಲ್ಲಿ ಅಭಿವೃದ್ಧಿಯಾಗುತ್ತಿರುವ ಮಹಾನಗರಿ ಬೆಂಗಳೂರು - ಇವೆಲ್ಲವೂ ರಾಜ್ಯ ಪ್ರವಾಸೋದ್ಯಮದ ಸಮೃದ್ಧಿಯ ಪ್ರತೀಕ. ಇದರಿಂದಾಗಿಯೇ ಕರ್ನಾಟಕವು ವರ್ಷವಿಡೀ ದೇಶೀ ಹಾಗೂ ವಿದೇಶಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ರಾಜ್ಯದ ಅತ್ಯಂತ ಆಕರ್ಷಣೀಯ ತಾಣಗಳಲ್ಲೊಂದಾದ ಕೊಡಗು ಭಾರತದ ಅಚ್ಚುಮೆಚ್ಚಿನ ತಾಣವಾಗಿ ಹೊರಹೊಮ್ಮಿರುವುದರಿಂದ ಪ್ರತಿಷ್ಠಿತ ಸಂಸ್ಥೆಯ ಪ್ರಶಸ್ತಿಯೊಂದನ್ನು ಮುಡಿಗೇರಿಸಿಕೊಂಡಿದೆ. ಈ ಪ್ರಶಸ್ತಿಯು ಕಾಂಡೆನಾಸ್ಟ್ ಪ್ರವಾಸಿ ಪತ್ರಿಕೆಯಿಂದ ಪ್ರತಿಷ್ಠಾಪಿಸಲ್ಪಡಲಾಗಿದ್ದು ಅದರ ಓದುಗರು ಕೊಡಗನ್ನು ಈ ಪ್ರಶಸ್ತಿಗಾಗಿ ಆಯ್ಕೆ ಮಾಡಿದ್ದಾರೆ. ನವದೆಹಲಿಯಲ್ಲಿ ನಡೆದ ಕಾಂಡೆನಾಸ್ಟ್ ಓದುಗರ ಪ್ರವಾಸಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಹೆಮ್ಮಯ ಘೋಷಣೆ ಹೊರಬಂದಿದೆ. ಕರ್ನಾಟಕ ಪ್ರವಾಸೋದ್ಯಮದಲ್ಲಿ ಬಂಡವಾಳ ಹೂಡಲು ಈ ಭರವಸೆಯ ಸುಸಂದರ್ಭವೇ ಸಕಾಲ.

ಬಂಡವಾಳ ಹೂಡಿಕೆ ಸಂಬಂಧಿತ ವಿಚಾರಣೆಗಳಿಗಾಗಿ ಯೋಜನಾ ಮೇಲ್ವಿಚಾರಣಾ ವಿಭಾಗವನ್ನು ದೂರವಾಣಿ ಸಂಖ್ಯೆ 91 80 2235 2424ರಲ್ಲಿ ಸಂಪರ್ಕಿಸಿ ಪ್ರವಾಸೋದ್ಯಮದ ಜಂಟಿ ಆಯುಕ್ತರೊಂದಿಗೆ ಸಮಾಲೋಚಿಸಬಹುದು. ಪರ್ಯಾಯವಾಗಿ, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಅಧ್ಯಕ್ಷರನ್ನು ದೂರವಾಣಿ ಸಂಖ್ಯೆ 91 80 2235 2525 ಅಥವಾ ಈಮೇಲ್ director@karnatakatourism.org ಮುಖೇನವೂ ಸಂಪರ್ಕಿಸಬಹುದು.


ShareThis Copy and Paste