Select Language
Search
Destination
Category
Select Category
Select Destination
In and around
From
Kilometers
Accommodation
Select
Travel guide
Select
  • Heritage
  • Beach
  • Nature
  • Wild
  • Spirituality
  • Adventure
  • Cities
Adventure
ವೈಟ್ ವಾಟರ್ ರಾಫ್ಟಿಂಗ್

ವೈಟ್ ವಾಟರ್ ರಾಫ್ಟಿಂಗ್ ನಿಮ್ಮ ನೆಚ್ಚಿನ ಸಾಹಸ ಚಟುವಟಿಕೆಯಾಗಿದ್ದರೆ, ಕರ್ನಾಟಕದ ಹಲವು ಸುಂದರ ತಾಣಗಳಲ್ಲಿ ಅದು ಲಭ್ಯವಿದೆ.

Beach
ಗೋಕರ್ಣ
ಪ್ರಶಾಂತವಾದ ಕಡಲಕಿನಾರೆಯ ಪಟ್ಟಣವಾದ ಗೋಕರ್ಣವು ವಿವಿಧ ಕಾರಣಗಳಿಂದಾಗಿ ಹಲವು ರೀತಿಯ ಪ್ರವಾಸಿಗರಿಗೆ ಅಚ್ಚುಮೆಚ್ಚು. ಮುಕ್ತವಾದ ಕಡಲಕಿನಾರೆಗಳು, ಗುಪ್ತವಾದ ಕೊಲ್ಲಿಗಳು, ನಾಯನಮನೋಹರ ಸೂರ್ಯಾಸ್ತಗಳು, ರುದ್ರರಾಮಣೀಯ ಕಮರಿಗಳು, ಆಕರ್ಷಕ ದೇವಾಲಯಗಳು ಹಾಗೂ ಸ್ಥಳೀಯ ಸಂಸ್ಕೃತಿ ಪರಂಪರೆಗಳು, ಗೋಕರ್ಣ ಪ್ರವಾಸಿಗರಿಗೆ ಕೊಡುವ ಭರಪೂರ ಆಯ್ಕೆಗಳು. ಕಡಲ ಒಡನಾಟ, ಸರ್ಫಿಂಗ್ ಮಾತ್ರವಲ್ಲ ತೆರೆಗಪ್ಪಳಿಸುವ ಅಲೆಗಳ ನಿನಾದ ನೀಡುವ ತನ್ಮಯತೆಯೂ ಅನನ್ಯ. ನಿಸರ್ಗವು ತನ್ನ ಕಲಾನಿಪುಣತೆಯನ್ನು ತೋರಿ ಸೃಷ್ಟಿಸಿದ ಓಂ ಬೀಚ್, ಅದೇ ನೈಪುಣ್ಯತೆಯೂ ಗೋಕರ್ಣದ ಐದು ಕಡಲಕಿನಾರೆಗಳನ್ನು ವಿಶಿಷ್ಟ ಕಮರಿಗಳಿಂದ ಒಂದನ್ನೊಂದು ಬೇರ್ಪಡಿಸಿದೆ. ಪ್ರವಾಸಿಗರು ಅಲೆಗಳ ಮೇಲೆ ತೇಲುತ್ತಾ ಕಡಲ ಗಾಳಿಗೆ ಮೈಸೋಕಿಸುತ್ತಾ ದೋಣಿಯಾನವನ್ನಾದರು ಆಯ್ದುಕೊಳ್ಳಬಹುದು ಅಥವಾ ಅರಬ್ಬೀಸಮುದ್ರ ದಂಡೆಯ ಮೃದುಮರಳ ಮೇಲೆ ಸಾಗುತ್ತಾ ನಯನಮನೋಹರವಾದ ಕುಂಡ್ಲೆ ಬೀಚ್, ಪ್ಯಾರಡೈಸ್ ಬೀಚ್, ಅರ್ಧಚಂದ್ರ ಬೀಚ್ ಮುಖಾಂತರ ಗೋಕರ್ಣ ಬೀಚನ್ನು ತಲುಪಬಹುದು.
Location
Mangalore - 210
Hubli - 147
Karwar - 58
Bangalore - 515
Wild
ಬಂಡೀಪುರ ರಾಷ್ಟ್ರೀಯ ಉದ್ಯಾನ

ಅರಣ್ಯಪ್ರದೇಶದ ಪ್ರವಾಸವು ಚೇತೋಹಾರಿಯಾದದ್ದು. ಉಲ್ಲಾಸಮಯವಾದ ವಾತಾವರಣವನ್ನು ಅನುಭವಿಸಲು ನಗರದ ಜಂಜಡಗಳಿಂದ ಹೊರಬನ್ನಿ. ನಿಸರ್ಗದ ಮಡಿಲಲ್ಲಿ ಗಜಸವಾರಿ ಮಾಡುತ್ತಾ ಕೆಲಸದ ಒತ್ತಡವನ್ನು ತಾತ್ಕಾಲೀಕವಾಗಿಯಾದರು ಬದಿಗಿಡಿ. ಹುಲಿಯ ಪಾದದ ಗುರುತನ್ನು ಹುಡುಕುತ್ತಾ ಅದರ ಜೀವನಶೈಲಿಯನ್ನು ಇನ್ನಷ್ಟು ಹತ್ತಿರದಿಂದ ನೋಡಿ. ಬಂಡೀಪುರ ರಾಷ್ಟ್ರೀಯ ಉದ್ಯಾನವು ನಿಮ್ಮ ಜೀವನಕ್ಕೆ ಹೊಸ ಆಯಾಮವೊಂದನ್ನು ನೀಡಲಿದೆ ಅಥವಾ ನಿಸರ್ಗದ ವಾಸ್ತವತೆಯನ್ನು ನಿಮ್ಮ ಅರಿವಿಗೆ ತುಂಬುತ್ತದೆ.


Location
Mysore - 90
Bangalore - 220
Nature
ಚಿಕ್ಕಮಗಳೂರು
ನೂರಾರು ವರ್ಷಗಳ ಹಿಂದೆ ಯೆಮೆನ್ ದೇಶದಿಂದ ಹೊರಟ ಸೂಫಿ ಸಂತ ಬಾಬಾ ಬುಡನ್ ರು ತಮ್ಮೊಂದಿಗೆ ಏಳು ಕಾಫಿ ಬೀಜವನ್ನು ತಂದಿದ್ದರು. ಅದನ್ನು ಬಿತ್ತಿ, ಅದು ಟಿಸಿಲೊಡೆಯುವುದಕ್ಕೆ ಹಸಿರ ಹೊದ್ದುಮಲಗಿದ ಚಿಕ್ಕಮಗಳೂರು ಸಾಕ್ಷಿಯಾಯಿತು. ಇದರಿಂದಾಗಿ, ಅಸಂಖ್ಯ ಭಾರತೀಯರು ತಮ್ಮ ಸುದಿನವನ್ನು ಕಾಫಿಯಿಂದಲೇ ಪ್ರಾರಂಭಿಸುವ ವಾಡಿಕೆಯಾಗಿದೆ. ಚಿಕ್ಕಮಗಳೂರು ಕಾಫಿಯನ್ನೇ ಒಡಲೊಳಗಿಟ್ಟುಕೊಂಡ ಹಸಿರು ಸ್ವರ್ಗ.
Location
Mangalore - 150
Hassan - 62
Bangalore - 235
Cities
ಬೆಂಗಳೂರು

ಬೆಂಗಳೂರು ದಕ್ಷಿಣಭಾರತದಲ್ಲೇ ಅತ್ಯಂತ ಕ್ರಿಯಾಶೀಲವಾದ ನಗರ. ಹಲವು ಸಂಸ್ಕೃತಿಗಳನ್ನು ಸ್ವಾಗತಿಸಿ, ಅವುಗಳನ್ನು ಪೋಷಿಸಿ ನವಬಹುಸಂಸ್ಕೃತಿಯನ್ನು ರೂಪಿಸಿದ ನಗರ. ಬೆಂಗಳೂರಿಗರು, ಅವರು ಬಂದದ್ದು ಎಲ್ಲಿಂದಲಾದರೂ ಆಗಲಿ, ತಾವು ಬೆಂಗಳೂರಿಗರು ಎನ್ನುವಲ್ಲಿ ಹೆಮ್ಮೆಪಡುತ್ತಾರೆ.

Location
Mangalore - 381
Trivandrum - 761
Mumbai - 1033
Hyderabad - 566
Goa - 570
Chennai - 334
Spirituality
ಶ್ರವಣಬೆಳಗೊಳ

ಶ್ರವಣಬೆಳಗೊಳ, ಸ್ವತಃ ಧ್ಯಾನವೇ ಮೂರ್ತಿವೆತ್ತಂತಿರುವ 58.8 ಅಡಿಗಳ ಬಾಹುಬಲಿಯ ಏಕಶಿಲಾ ವಿಗ್ರಹದ ಸ್ವಸ್ಥಾನ. ವಿಂಧ್ಯಗಿರಿ ಪರ್ವತದ ಮೇಲಿರುವ ಏಷ್ಯಾಖಂಡದ ಅತ್ಯಂತ ಎತ್ತರವಾದ ಏಕಶಿಲಾ ವಿಗ್ರಹಕ್ಕೆ 600 ಮೆಟ್ಟಿಲುಗಳ ಪಯಣ. ಶ್ರವಣಬೆಳಗೊಳವು ಜೈನ ಪರಂಪರೆಯ ತವರೂರು, ಭಕ್ತಾದಿಗಳನ್ನು ಹಾಗೂ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಕರ್ನಾಟಕದ ತೀರ್ಥಯಾತ್ರಾ ಸ್ವರ್ಣ ತ್ರಿಕೋನ - ಬೇಲೂರು, ಹಳೇಬೀಡು, ಶ್ರವಣಬೆಳಗೋಳಗಳು ಯಾತ್ರಾರ್ಥಿಗಳಿಗೆ ವಿಶಿಷ್ಟವಾದ ಅನುಭೂತಿಯನ್ನು ನೀಡುತ್ತದೆ. ಭಕ್ತಾದಿಗಳನ್ನು ದೂರದರ್ಶನ ಅಥವಾ ಇತರ ಮಾಧ್ಯಮಗಳಿಂದ ಸೆಳೆಯುವ ಪ್ರಯತ್ನ ಮಾಡುತ್ತಿರುವ ಯುಗದಲ್ಲಿ, ಕಲಾನೈಪುಣ್ಯತೆ ಹಾಗೂ ಕಾರ್ಯನೈಪುಣ್ಯತೆಗಳ ಫಲವಾದ ದೇವಾಲಯಗಳು ಶತಮಾನಗಳಿಂದ ಭಕ್ತಾದಿಗಳನ್ನೂ ಪ್ರವಾಸಿಗಳನ್ನೂ ಎಡೆಬಿಡದೇ ಆಕರ್ಷಿಸುತ್ತಲೇ ಇದೆ.

Location
Mysore - 88
Belur - 93
Hassan - 52
Bangalore - 148
Heritage
ಬಾದಾಮಿ

ಚಾಳುಕ್ಯರ ಬೃಹತ್ ಸಾಮ್ರಾಜ್ಯದ ರಾಜಧಾನಿ ವಿಸ್ತೀರ್ಣದಲ್ಲಿ ಸಂಕುಚಿತಗೊಂಡಿದ್ದರೂ ಕರ್ನಾಟಕದ ಗತವೈಭವದಲ್ಲಿ ತನ್ನದೇ ಘನತೆಯನ್ನು ಉಳಿಸಿಕೊಂಡಿದೆ. ಪ್ರಸಿದ್ಧ ಗವಿದೇವಾಲಯ, ಎರಡು ಬೃಹತ್ ಪರ್ವತಗಳಿಂದ ಆವೃತ್ತವಾದ ಪ್ರಶಾಂತ ಆಗಸ್ತ್ಯ ಸರೋವರ, ದೃಷ್ಟಿ ಹರಿಸಿದಲೆಲ್ಲ ಹರಡಿದ ಕೆಮ್ಮಣ್ಣು, ಅದಕ್ಕೆ ತೋರಣವಿಟ್ಟಂತಿರುವ ಹಸಿರು, ಕಂದು ಬಣ್ಣದ ಬಂಡೆಗಳ ಸಾಲು, ಎಲ್ಲವೂ ನಿಮ್ಮ ಸ್ಮೃತಿಪಟಲದಲ್ಲಿ ಎಂದೆಂದೂ ಮಾಸದ ಬಣ್ಣದ ಚಿತ್ತಾರವನ್ನೇ ಸೃಷ್ಟಿಸುತ್ತದೆ.

Location
Bijapur - 150
Hubli - 110
Aihole - 44
Bangalore - 480