Select Language
Search
Destination
Category
Select Category
Select Destination
In and around
From
Kilometers
Accommodation
Select
Travel guide
Select
  • Heritage
  • Beach
  • Nature
  • Wild
  • Spirituality
  • Adventure
  • Cities
ಕರ್ನಾಟಕದ
ಕರ್ನಾಟಕವು ವಿವಿಧ ಸಂಸ್ಕೃತಿ, ಪಾಕಶಾಸ್ತ್ರ, ಅದ್ಭುತ ವನ್ಯಸಿರಿಗಳ ಸುಂದರ ನಾಡು. ಜಿಲ್ಲೆಯಿಂದ ಜಿಲ್ಲೆಗೆ ಬದಲಾಗುವ ತನ್ನ ಭೌಗೋಳಿಕ ರೂಪವೈಶಿಷ್ಟ್ಯದಂತೆ, ಜಿಲ್ಲೆಯಿಂದ ಜಿಲ್ಲೆಗೆ ಬದಲಾಗುವ ತನ್ನ ಸಾಂಸ್ಕೃತಿಕ ವೈಶಿಷ್ಟ್ಯಗಳು ಸರಾಗವಾಗಿ ಒಂದಕ್ಕೊಂದು ಮೇಳೈಸಿ ಕರ್ನಾಟಕವು ಒಂದು ಸುಸಂಸ್ಕೃತ ರಾಜ್ಯವಾಗಿ ರೂಪುಗೊಂಡಿದೆ. ಸಮಟ್ಟಾದ ಭೂಭಾಗವು ಮುಂದುವರೆದಂತೆ ಅನಿರೀಕ್ಷಿತವಾಗಿ ಎತ್ತರಕ್ಕೇರಿ ಮಂಜುಮುಸುಕುವ ಪರ್ವತವಾಗುವ ಪರಿ, ಮರುಕ್ಷಣದಲ್ಲೇ ಪರ್ವತದಿಂದ ಜಾರಿ ಭೋರ್ಗರೆದು ಹರಿವ ನದಿ ದೂರಾಗಿ ಮುಟ್ಟುವುದು ಹಲವು ಪರಂಪರಾಗತ ತಾಣಗಳನ್ನು. ಇಲ್ಲಿನ ನಗರಗಳೋ ಕಾಲದ ಕುಲುಮೆಯಲ್ಲಿ ಹಗಲಿರುಳು ಕಾದು ರೂಪುಗೊಂಡ ವಿಶ್ವದರ್ಜೆಯ ನಗರಗಳು, ಕೆಲವು ಅರಣ್ಯಗಳ ನೀರವತೆಯನ್ನು ಆಯ್ದುಕೊಂಡರೆ ಇನ್ನೂ ಹಲವು ಕರಾವಳಿಯ ಕಡಲಕಿನಾರೆಗಳನ್ನು ಕೈಚಾಚಿ ಅಪ್ಪಿಕೊಂಡಿದೆ. ಐತಿಹಾಸಿಕವಾಗಿ ಕರ್ನಾಟಕವು ಹಲವು ಶತಮಾನಗಳಿಂದ ಹಲವು ಪ್ರಬಲ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು. ಇದಕ್ಕೆ ರಾಜ್ಯದ ಭೌಗೋಳಿಕ ವಿಸ್ತೀರ್ಣವು ಒಂದು ಕಾರಣವಾಗಿದೆ. ಎಷ್ಟೆಂದರೇ 1,91,791 ಚದರ ಕಿ.ಮೀ.ಗಳು.

ShareThis Copy and Paste